Asianet Suvarna News Asianet Suvarna News

Makar Sankranti: ಏಳೇಳು ಜನ್ಮದ ಪಾಪ ತೊಳೆಯಬೇಕಂದ್ರೆ ಇಲ್ಲಿ ಮುಳುಗೇಳಿ!

ಮಕರ ಸಂಕ್ರಾಂತಿ ಹಬ್ಬ ಹತ್ತಿರ ಬರ್ತಿದೆ. ಜನರ ತಯಾರಿ ಜೋರಾಗಿದೆ. ಈ ಹಬ್ಬದಲ್ಲಿ ಸ್ನಾನ ಹಾಗೂ ದಾನಕ್ಕೆ ಮಹತ್ವದ ಸ್ಥಾನವಿದೆ. ಈ ದಿನ ಕೆಲ ಪುಣ್ಯ ಸ್ಥಳಗಳಲ್ಲಿ ಸ್ನಾನ ಮಾಡಿದ್ರೆ ಪಾಪ ಕಳೆದುಕೊಳ್ಳಬಹುದು.
 

Makar Sankranti Famous Ganga Ghat
Author
First Published Jan 11, 2023, 3:41 PM IST

ಹಿಂದೂ ಧರ್ಮದಲ್ಲಿ ಎಲ್ಲ ಹಬ್ಬಗಳಿಗೂ ಅದರದೇ ಆದ ಮಹತ್ವದ ಸ್ಥಾನ ಮತ್ತು ಅರ್ಥವಿದೆ. ಎಲ್ಲ ಜಾತಿ ಪಂಥದವರು ಅವರದೇ ಆದ ಸಂಪ್ರದಾಯದಲ್ಲಿ ತಮ್ಮ ತಮ್ಮ ಹಬ್ಬಗಳನ್ನು ಆಚರಿಸುತ್ತಾರೆ. ಎಲ್ಲ ಹಬ್ಬದಂತೆಯೇ ಮಕರ ಸಂಕ್ರಾಂತಿ ಕೂಡ ಹಿಂದೂಗಳ ವಿಶೇಷ ಹಬ್ಬಗಳಲ್ಲಿ ಒಂದು. ಈ ದಿನದಂದು ಸೂರ್ಯ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಬೇರೆ ಬೇರೆ ರಾಜ್ಯದ ಜನರು ಮಕರ ಸಂಕ್ರಾಂತಿಯನ್ನು ವಿಭಿನ್ನ ಹೆಸರಿನಲ್ಲಿ ಮತ್ತು ವಿಭಿನ್ನ ಶೈಲಿಯಲ್ಲಿ ಆಚರಿಸುತ್ತಾರೆ. 

ಮಕರ ಸಂಕ್ರಾಂತಿ (Sankranti)ಯನ್ನು ಈಶಾನ್ಯದಲ್ಲಿ ಖಿಚಡಿ, ಗುಜರಾತಿನಲ್ಲಿ ಉತ್ತರಾಯಣ ಮತ್ತು ದಕ್ಷಿಣ ಭಾರತದಲ್ಲಿ ಪೊಂಗಲ್ ಹೆಸರಿನಲ್ಲಿ ಕರೆಯಲಾಗುತ್ತದೆ. ಹಿಂದೂ (Hindu) ಧರ್ಮದ ಪ್ರಕಾರ ಮಕರ ಸಂಕ್ರಾಂತಿಯ ದಿನದಂದು ಗಂಗಾ (Ganga) ಸ್ನಾನಕ್ಕೆ ಬಹಳ ಮಹತ್ವವಿದೆ. ಸಂಕ್ರಾಂತಿಯ ದಿನದಂದು ಗಂಗಾಸ್ನಾನ ಮಾಡಿದರೆ ಏಳು ಜನ್ಮದ ಪಾಪ ಕಳೆಯುತ್ತೆ ಎಂಬ ನಂಬಿಕೆ ಇದೆ. ಹಲವು ಭಕ್ತರು ಮಕರ ಸಂಕ್ರಾಂತಿ ದಿನದಂದು ಗಂಗಾ ನದಿಯಲ್ಲಿ ಸ್ನಾನ ಮಾಡಿ ದಾನಾದಿ ಪುಣ್ಯ ಕಾರ್ಯಗಳನ್ನು ಮಾಡುತ್ತಾರೆ. ಹಾಗಾಗಿಯೇ ಸಂಕ್ರಾಂತಿಯ ದಿನ ಎಲ್ಲ ಗಂಗಾ ಘಾಟ್ ನಲ್ಲಿಯೂ  ಜನದಟ್ಟಣಿ ಇರುತ್ತದೆ. ಪುಣ್ಯ ಪಡೆಯಲು ನೀವು ಯಾವ ಜಾಗದಲ್ಲಿ ಸ್ನಾನ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ಮಕರ ಸಂಕ್ರಾಂತಿ ದಿನ ಇಲ್ಲಿ ಸ್ನಾನ ಮಾಡಿ : 
ಗಂಗಾ ಸಾಗರ :
ಗಂಗಾ ಸಾಗರ ಪಶ್ಚಿಮ ಬಂಗಾಳದಲ್ಲಿ ಪವಿತ್ರ ಸ್ಥಳವಾಗಿದೆ. ಮಕರ ಸಂಕ್ರಾಂತಿಯಂದು ಗಂಗಾ ಸಾಗರದಲ್ಲಿ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಇಲ್ಲಿ ಗಂಗಾ ನದಿ ಮತ್ತು ಸಾಗರ ಸಂಧಿಸುವುದರಿಂದ ಈ ಸ್ಥಳಕ್ಕೆ ಗಂಗಾ ಸಾಗರ ಎಂಬ ಹೆಸರಿದೆ. ಸಂಕ್ರಾಂತಿಯಂದು ಇಲ್ಲಿ ಸ್ನಾನ ಮಾಡುವವರಿಗೆ ಹತ್ತು ಅಶ್ವಮೇಧ ಯಾಗ ಮಾಡಿದ ಹಾಗೂ ಒಂದು ಸಾವಿರ ಗೋದಾನ ಮಾಡಿದಷ್ಟು ಫಲ ಸಿಗುತ್ತಂತೆ ಎಂಬ ನಂಬಿಕೆಯಿದೆ. 

MAKAR SANKRANTI 2023: ಸೂರ್ಯ- ಶನಿಯ ಸಂಕ್ರಾಂತಿ ಕತೆ.. ಈ ಕತೆ ಕೇಳಿದ್ರೆ ಶನಿದೋಷ ಪರಿಹಾರ!

ತ್ರಿವೇಣಿ ಸಂಗಮ (ಪ್ರಯಾಗರಾಜ) : ಪ್ರಯಾಗರಾಜದ ಸಂಗಮ ಅತ್ಯಂತ ಪವಿತ್ರ ಮತ್ತು ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ಮಕರ ಸಂಕ್ರಾಂತಿಯಂದು ಪ್ರಯಾಗರಾಜ ಸಂಗಮದಲ್ಲಿ ರಾಜಯೋಗ ಸ್ನಾನವನ್ನು ಆಯೋಜಿಸುತ್ತಾರೆ. ಸಂಕ್ರಾಂತಿಯಂದು ಇಲ್ಲಿ ಸ್ನಾನ ಮಾಡಿದರೆ ಕಷ್ಟಗಳೆಲ್ಲ ಕಳೆದು ಸುಖ ಸಂಪತ್ತು ಸಿಗುತ್ತದೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಕೂಡುವ ಸ್ಥಳವಾದ್ದರಿಂದ ಇದನ್ನು ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ.  

ಹರಿದ್ವಾರದಲ್ಲಿ ಸ್ನಾನ : ಹರಿದ್ವಾರ ಪವಿತ್ರ ತೀರ್ಥ ಸ್ಥಳಗಳಲ್ಲಿ ಒಂದಾಗಿದೆ. ಸಂಕ್ರಾಂತಿಯಂದು ಅನೇಕ ಜನರು ಹರಿದ್ವಾರದಲ್ಲಿ ಗಂಗಾಸ್ನಾನ ಮಾಡುತ್ತಾರೆ. ಹರಿದ್ವಾರದಲ್ಲಿ ಅನೇಕ ಘಾಟ್ ಗಳಿದ್ದರೂ ಹರ ಕಿ ಪೊಡಿ, ವಿಷ್ಣು ಘಾಟ್ ಬಹಳ ಪ್ರಸಿದ್ಧ ಘಾಟ್ ಆಗಿದೆ. ಪ್ರತಿ ವರ್ಷವೂ ಮಕರ ಸಂಕ್ರಾಂತಿಯಂದು ಇಲ್ಲಿ ಮೇಳ ನಡೆಯುತ್ತದೆ. ಭಕ್ತಾದಿಗಳು ಗಂಗಾಸ್ನಾನ ಮಾಡಿ ತಮ್ಮ ಪಾಪಗಳನ್ನು ತೊಳೆದುಕೊಳ್ಳುತ್ತಾರೆ.

ಇಲ್ಲಿ ಪುಣ್ಯ ಸ್ನಾನ ಮಾಡಿದರೆ ಸಾವಿರ ಗೋ ದಾನ ಮಾಡಿದಷ್ಟು ಪುಣ್ಯ ಬರುತ್ತೆ

ಪುಣ್ಯ ಕ್ಷೇತ್ರ ಕಾಶಿಯಲ್ಲಿ ಸ್ನಾನ (Holy Bath) : ಪ್ರಪಂಚದ ಅತ್ಯಂತ ಹಳೆಯ ಮತ್ತು ಇಂದಿಗೂ ಜನವಸತಿಯಿಂದ ಕೂಡಿಕೊಂಡಿರುವ ನಗರಗಳ ಪೈಕಿ ಕಾಶಿ ಕೂಡ ಒಂದು. ಹಿಂದೂಗಳಿಗೆ ಇದು ಅತ್ಯಂತ ಪವಿತ್ರ ಸ್ಥಳ. ಮಹಾದೇವ ಶಿವನ ಜ್ಯೋತಿರ್ಲಿಂಗ ಇರುವ ಕಾಶಿ ಎಲ್ಲರಿಗೂ ಚಿರಪರಿಚಿತ. ಮಹಾಸ್ಮಶಾನ ಎಂಬ ಹೆಸರಿನಿಂದಲೇ ಕರೆಸಿಕೊಳ್ಳುವ ಕಾಶಿಯಲ್ಲಿ ಮಣಿಕರ್ಣಿಕಾ ಘಾಟ್, ಹರಿಶ್ಚಂದ್ರ ಘಾಟ್ ಕೂಡ ಬಹಳ ಪ್ರಸಿದ್ಧಿ ಹೊಂದಿದೆ. ಕೋಟ್ಯಂತರ ಜನರು ಇಲ್ಲಿ ಗಂಗಾಸ್ನಾನ ಮಾಡಿ ಕಾಶಿ ವಿಶ್ವನಾಥನ ದರ್ಶನ ಮಾಡುತ್ತಾರೆ. ಮಕರ ಸಂಕ್ರಾಂತಿಯಂದು ಕೂಡ ಇಲ್ಲಿ ಜನಸಾಗರ ಹರಿದುಬರುತ್ತೆ. ಅಂದಿನ ದಿನ ಇಲ್ಲಿ ಖಿಚಡಿ ಮಹೋತ್ಸವ ಕೂಡ ನಡೆಯುತ್ತದೆ.
 

Follow Us:
Download App:
  • android
  • ios