ಮಹಾ ಕುಂಭ ಮೇಳದ ಬಗ್ಗೆ ಅತಿ ಹೆಚ್ಚು ಸರ್ಚ್ ಮಾಡಿದ್ದು ಮುಸ್ಲಿಂ ರಾಷ್ಟ್ರಗಳು ! ಟಾಪ್ ಒಂದರಲ್ಲಿದೆ ಶತ್ರು ದೇಶ

ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭ ಮೇಳದ ಸಂಭ್ರಮ ಮೇಳೈಸಿದೆ. ಇಡೀ ವಿಶ್ವವೇ ಕುಂಭ ಮೇಳವನ್ನು ಕುತೂಹಲದಿಂದ ವೀಕ್ಷಣೆ ಮಾಡ್ತಿದೆ. ಅದ್ರಲ್ಲೂ ಮುಸ್ಲೀಂ ದೇಶಗಳ ಆಸಕ್ತಿ ಹೆಚ್ಚಿದೆ. 
 

Maha Kumbh Mela 2025pakistan tops google searches for mahakumbh roo

2025 ರ ಮಹಾ ಕುಂಭ ಮೇಳ (Maha Kumbh Mela 2025) ಕೇವಲ ಭಾರತೀಯ ಕಾರ್ಯಕ್ರಮವಾಗಿ ಉಳಿದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಾ ಕುಂಭ ಮೇಳ ಸುದ್ದಿ ಮಾಡ್ತಿದೆ. ವಿದೇಶಗಳಲ್ಲಿ ಸನಾತನ ಸಂಸ್ಕೃತಿ (Sanatan Culture) ಮತ್ತು ಭಾರತೀಯ ಸಂಪ್ರದಾಯಗಳ ಬಗ್ಗೆ ಚರ್ಚೆ ಹುಟ್ಟು ಹಾಕಿದೆ.  ಇಡೀ ವಿಶ್ವವೇ, ಮಹಾ ಕುಂಭ ಮೇಳವನ್ನು ಕುತೂಹಲದಿಂದ ವೀಕ್ಷಣೆ ಮಾಡ್ತಿದೆ. ಸನಾತನ ಧರ್ಮ ಮತ್ತು ಭಾರತೀಯ ಆಧ್ಯಾತ್ಮಿಕತೆ (Indian Spirituality)ಯ ಪ್ರಭಾವ ವೇಗವಾಗಿ ಬೆಳೆಯುತ್ತಿದೆ ಎಂಬುದಕ್ಕೆ ಇದು ಸಾಕ್ಷ್ಯ. 

2025 ರ ಮಹಾ ಕುಂಭ ಮೇಳಕ್ಕೆ ವಿಶ್ವದ ಮೂಲೆ ಮೂಲೆಯಿಂದ ಜನರು ಹರಿದು ಬರ್ತಿದ್ದಾರೆ. ಸೋಮವಾರ ಪ್ರಯಾಗ್‌ರಾಜ್‌ (Prayagraj)ನಲ್ಲಿ ಮಹಾ ಕುಂಭಮೇಳದ ಅದ್ಧೂರಿ ಉದ್ಘಾಟನೆ ನಡೆದಿದೆ. ಈ ಮಧ್ಯೆ ಮಹಾ ಕುಂಭ ಮೇಳದ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಯಾವ ದೇಶ ಮಹಾ ಕುಂಭ ಮೇಳದ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದೆ ಎಂಬ ಸಮೀಕ್ಷೆಗೆ ಉತ್ತರ ಸಿಕ್ಕಿದ್ದು, ಇದು ಎಲ್ಲರನ್ನು ಅಚ್ಚರಿಗೊಳಿಸಿದೆ. ಸನಾತನ, ಹಿಂದೂ ಸಂಸ್ಕೃತಿಯನ್ನು ಅತಿ ಹೆಚ್ಚು ಆಸಕ್ತಿಯಿಂದ ನೋಡ್ತಿರುವ ರಾಷ್ಟ್ರವೆಂದ್ರೆ ಪಾಕಿಸ್ತಾನ. ಅನೇಕ ಇಸ್ಲಾಮಿಕ್ ರಾಷ್ಟ್ರಗಳಲ್ಲೂ ಈ ಕಾರ್ಯಕ್ರಮದ ಬಗ್ಗೆ ಆಳವಾದ ಆಸಕ್ತಿ ಕಂಡುಬರುತ್ತಿದೆ.

Maha Kumbh 2025: ಪ್ರಯಾಗ್‌ರಾಜ್‌ ತೀರ್ಥಸ್ನಾನದ ವೇಳೆ ನದಿಯಲ್ಲೇ ಹೃದಯಾಘಾತ, ಎನ್‌ಸಿಪಿ ನಾಯಕ ನಿಧನ

ಗೂಗಲ್ ಟ್ರೆಂಡ್ಸ್ ಡೇಟಾ ಪ್ರಕಾರ, 2025 ರ ಮಹಾ ಕುಂಭ ಮೇಳದ ಬಗ್ಗೆ ಅತಿ ಹೆಚ್ಚು ಹುಡುಕಾಟ ನಡೆಸಿದ ದೇಶ ಪಾಕಿಸ್ತಾನ. ಭಾರತದ ನೆರೆಯ ಹಾಗೂ ಶತ್ರು ದೇಶವೆಂದೇ ಕರೆಯಲ್ಪಡುವ ಪಾಕಿಸ್ತಾನದ ಜನರು,  ಭವ್ಯ ಕಾರ್ಯಕ್ರಮ, ಅಲ್ಲಿನ ಜನಸಂಖ್ಯೆ ಸೇರಿದಂತೆ ಮಹಾ ಕುಂಭ ಮೇಳಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ಅಂಶಗಳ ಬಗ್ಗೆ ಆಳವಾದ ಆಸಕ್ತಿ ತೋರುತ್ತಿದ್ದಾರೆ. 

ಮೊದಲ ಸ್ಥಾನದಲ್ಲಿ ಪಾಕಿಸ್ತಾನವಿದ್ರೆ ನಂತರದ ನಾಲ್ಕೈದು ಸ್ಥಾನವನ್ನು ಮುಸ್ಲಿಂ ದೇಶಗಳು ಪಡೆದಿರೋದು ಮತ್ತಷ್ಟು ಅಚ್ಚರಿ ಹುಟ್ಟಿಸಿದೆ. ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಬಹ್ರೇನ್‌ನಂತಹ ಇಸ್ಲಾಮಿಕ್ ರಾಷ್ಟ್ರಗಳು ಮಹಾ ಕುಂಭ ಮೇಳದ ಬಗ್ಗೆ ತೀವ್ರ ಆಸಕ್ತಿ ತೋರುತ್ತಿವೆ. ನೇಪಾಳ, ಸಿಂಗಾಪುರ, ಆಸ್ಟ್ರೇಲಿಯಾ, ಕೆನಡಾ, ಐರ್ಲೆಂಡ್, ಬ್ರಿಟನ್, ಥೈಲ್ಯಾಂಡ್ ಮತ್ತು ಅಮೆರಿಕದಂತಹ ದೇಶಗಳ ಜನರು ಕೂಡ ಗೂಗಲ್ ನಲ್ಲಿ ಮಹಾ ಕುಂಭ ಮೇಳದ ಬಗ್ಗೆ ಮಾಹಿತಿ ಹುಡುಕುತ್ತಿದ್ದಾರೆ. 

ಮಹಾ ಕುಂಭಮೇಳದ ಕಡೆಗೆ ವಿದೇಶಿ ಭಕ್ತರ ಆಕರ್ಷಣೆ ವೇಗವಾಗಿ ಹೆಚ್ಚುತ್ತಿದೆ. ಬ್ರೆಜಿಲ್, ಜರ್ಮನಿ, ಜಪಾನ್, ಇಂಗ್ಲೆಂಡ್, ಅಮೆರಿಕ ಮತ್ತು ಸ್ಪೇನ್‌ನಂತಹ ದೇಶಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರಯಾಗ್‌ರಾಜ್ಗೆ ಹರಿದು ಬರ್ತಿದ್ದಾರೆ. ಸಂಗಮದಲ್ಲಿ ಸ್ನಾನ ಮಾಡುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಆನಂದಿಸುತ್ತಿದ್ದಾರೆ.

ಬಾಂಬೆ ಐಐಟಿಯಲ್ಲಿ ಏರೋಸ್ಪೇಸ್‌ ಇಂಜಿನಿಯರಿಂಗ್‌ ಮಾಡಿದ್ದ ವ್ಯಕ್ತಿ ಇಂದು ಮಹಾಸಾಧು!

ಪಾಕಿಸ್ತಾನ ಮತ್ತು ಇತರ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಮಹಾ ಕುಂಭ ಮೇಳದ ಬಗ್ಗೆ ಹೆಚ್ಚುತ್ತಿರುವ ಆಸಕ್ತಿ ನೋಡಿದ್ರೆ ಈ ಕಾರ್ಯಕ್ರಮ  ಧರ್ಮ, ಜಾತಿ ಮತ್ತು ದೇಶಗಳ ಗಡಿಗಳನ್ನು ಮೀರಿದೆ ಎಂಬುದು ಸ್ಪಷ್ಟವಾಗುತ್ತಿದೆ. 2025 ರ ಮಹಾ ಕುಂಭ ಮೇಳವು ಭಾರತದ ಹೆಮ್ಮೆಯಷ್ಟೇ ಅಲ್ಲ, ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಸಂದೇಶವನ್ನು ಪ್ರಪಂಚದಾದ್ಯಂತ ಹರಡಲು ಸಹಕಾರಿಯಾಗಿದೆ.

ಈ ಮಧ್ಯೆ 1974 ರಲ್ಲಿ ದಿವಂಗತ ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಬರೆದ ಪತ್ರವೊಂದು 4.32 ಕೋಟಿ ರೂಪಾಯಿಗೆ ಹರಾಜಾಗಿದೆ. ಇದರಲ್ಲಿ ಅವರು ಭಾರತದಲ್ಲಿ ಕುಂಭಮೇಳಕ್ಕೆ ಹೋಗುವ ಯೋಜನೆಯ ಬಗ್ಗೆ ಹೇಳಿದ್ದರು. ಏಪ್ರಿಲ್ ನಲ್ಲಿ ಭಾರತದಲ್ಲಿ ನಡೆಯುವ ಮಹಾ ಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಪ್ಲಾನ್ ಇದೆ ಎಂದು ಅವರು ಈ ಪತ್ರದಲ್ಲಿ ಬರೆದಿದ್ದರು.  

Latest Videos
Follow Us:
Download App:
  • android
  • ios