30 ವರ್ಷದ ಬಳಿಕ ಮಾಘ ಅಮವಾಸ್ಯೆಯಂದು ಅದ್ಭುತ ಯೋಗ, ಈ ದಿನ ನೀವೇನು ಮಾಡಬೇಕು?

ಈ ಬಾರಿಯ ಮೌನಿ ಅಮಾವಾಸ್ಯೆ ಅಥವಾ ಮಾಘ ಅಮಾವಾಸ್ಯೆಯು ಜನವರಿ 21, 2023 ರಂದು ಬರುತ್ತದೆ. ಈ ದಿನ ಬಹಳ ವಿಶೇಷ ಯೋಗವೊಂದು ರಚನೆಯಾಗುತ್ತಿದೆ. ಜೊತೆಗೆ, ಈ ಅಮವಾಸ್ಯೆಯಂದು ಮೌನ ವ್ರತ ಆಚರಿಸಿದರೆ ಬಯಸಿದ್ದು ದೊರೆಯುತ್ತದೆ.

Magha Amavasya 2023 date significance puja vidhi skr

ದೀಪಾವಳಿ ಹಾಗೂ ಪಿತೃ ಪಕ್ಷದ ಅಮವಾಸ್ಯೆ ಹೊರತುಪಡಿಸಿದರೆ, ಸಾಮಾನ್ಯವಾಗಿ ಅಮವಾಸ್ಯೆಯನ್ನು ಅಶುಭವೆಂದೇ ಪರಿಗಣಿಸಲಾಗುತ್ತದೆ. ಆದರೂ, ಇದೊಂದು ಬಹಳ ಪ್ರಮುಖ ದಿನವಾಗಿದೆ. ಏಕೆಂದರೆ, ಅಮವಾಸ್ಯೆಗಳು ಕೆಲ ಕೆಲಸಗಳಿಗೆ ಒಳ್ಳೆಯದೇ. ತಿಂಗಳ ಅತಿ ಕಪ್ಪು ದಿನವಾದರೂ, ಅಮವಾಸ್ಯೆಯನ್ನು ವರ್ಷದ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಸಮಯವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಭಾರತದಾದ್ಯಂತ ಭಕ್ತರು ಈ ದಿನದಂದು ಅನೇಕ ಪ್ರಮುಖ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಆಚರಿಸುತ್ತಾರೆ.

ಅಮವಾಸ್ಯೆ ಮುಹೂರ್ತ
ಅಮವಾಸ್ಯೆಯು ತಿಂಗಳಿಗೊಮ್ಮೆ ಸಂಭವಿಸುತ್ತದೆ, ಒಂದು ವರ್ಷದಲ್ಲಿ 12 ಚಂದ್ರನಿಲ್ಲದ ದಿನಗಳು ಬೀಳುತ್ತವೆ. ಇದು ಶುಕ್ಲ ಪಕ್ಷದ ಆರಂಭವನ್ನು ಅಥವಾ ಚಂದ್ರನ ತಿಂಗಳ ಪ್ರಕಾಶಮಾನವಾದ ಹದಿನೈದು ದಿನಗಳನ್ನು ಸೂಚಿಸುತ್ತದೆ.

ಈ ಬಾರಿಯ ಮೌನಿ ಅಮಾವಾಸ್ಯೆ ಅಥವಾ ಮಾಘ ಅಮಾವಾಸ್ಯೆಯು ಜನವರಿ 21, 2023ರಂದು ಬರುತ್ತದೆ. ಜ್ಯೋತಿಷ್ಯ ಮತ್ತು ಪಂಚಾಂಗದ ಪ್ರಕಾರ, ಅಮವಾಸ್ಯೆ ತಿಥಿಯು ಜನವರಿ 21, 2023 ರಂದು ಬೆಳಿಗ್ಗೆ 6.19 ರಿಂದ ಪ್ರಾರಂಭವಾಗಿ ಮರುದಿನ ಜನವರಿ 22, 2023 ರಂದು ಮಧ್ಯಾಹ್ನ 2.25 ಕ್ಕೆ ಕೊನೆಗೊಳ್ಳುತ್ತದೆ.

Budh Margi 2023: ಜ.18ರಿಂದ 3 ರಾಶಿಗಳಿಗೆ ಶುರುವಾಗಲಿದೆ ಲಾಭದ ದಿನಗಳು..

ಮಾಘ ಅಮವಾಸ್ಯೆ ಮಹತ್ವ
ಮಾಘ ಅಮಾವಾಸ್ಯೆಯ ಮಹತ್ವವನ್ನು ಸನಾತನ ಧರ್ಮದಲ್ಲಿ ಹೇಳಲಾಗಿದೆ. ಈ ಅಮಾವಾಸ್ಯೆಯಂದು ಸ್ನಾನ ಮತ್ತು ದಾನ ಮಾಡುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ನಂಬಲಾಗಿದೆ. ಈ ಬಾರಿ ಮೌನಿ/ಮಾಘ ಅಮವಾಸ್ಯೆ 21 ಜನವರಿ 2023ರಂದು ಬರುತ್ತದೆ. ಇದು ಮೌನವ್ರತವನ್ನು ಆಚರಿಸುವ ದಿನ, ಆದ್ದರಿಂದ ಇದನ್ನು ಮೌನಿ ಅಮವಾಸ್ಯೆ ಎಂದೂ ಕರೆಯುತ್ತಾರೆ. ಮೌನಿ ವ್ರತ ಎಂದರೆ ವ್ರತವನ್ನು ಆಚರಿಸುವ ವ್ಯಕ್ತಿ ಒಂದೇ ಒಂದು ಮಾತನ್ನೂ ಈ ದಿನ ಆಡಬಾರದು. ಇದು ಉಪವಾಸದ ಅತ್ಯಂತ ಕಷ್ಟಕರವಾದ ರೂಪವಾಗಿದೆ. ಇದು ನಿಮ್ಮ ಆತ್ಮದೊಂದಿಗೆ ಸಂಪರ್ಕ ಸಾಧಿಸುವ ದಿನವಾಗಿದೆ.

ಮಾತನಾಡುವಂತಿಲ್ಲ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಮಾಘ ಅಮಾವಾಸ್ಯೆಯಂದು 30 ವರ್ಷಗಳ ನಂತರ ಅದ್ಭುತ ಕಾಕತಾಳೀಯ ನಡೆಯುತ್ತಿದೆ. ಈ ಬಾರಿ ಮಾಘ ಅಮಾವಾಸ್ಯೆಯಂದು ಖಪ್ಪರ ಯೋಗ ರೂಪುಗೊಳ್ಳುತ್ತಿದೆ. ಈ ಯೋಗವನ್ನು ಧಾರ್ಮಿಕ ಕಾರ್ಯಗಳಿಗೆ ಮತ್ತು ಜಾತಕದಲ್ಲಿ ಶನಿಯ ಮಂಗಳಕರ ಪರಿಣಾಮಕ್ಕಾಗಿ ತೆಗೆದುಕೊಳ್ಳುವ ಕ್ರಮಗಳಿಗೆ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಏಕೆಂದರೆ, ಮೌನಿ ಅಮವಾಸ್ಯೆಯ ನಾಲ್ಕು ದಿನಗಳ ಮೊದಲು ಅಂದರೆ ಜನವರಿ 17, 2023ರಂದು ಶನಿದೇವನು ತನ್ನ ರಾಶಿಯನ್ನು ಬದಲಾಯಿಸುತ್ತಿದ್ದಾನೆ. ಇದರಿಂದ ಶನಿದೇವನು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಮತ್ತೊಂದೆಡೆ, ಮಕರ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರನ ಸಂಯೋಜನೆ ತ್ರಿಕೋನದ ಸ್ಥಾನವು ಖಪ್ಪರ ಯೋಗವನ್ನು ಉಂಟು ಮಾಡುತ್ತದೆ. ಈ ಬಾರಿ ಶನಿದೇವನು 30 ವರ್ಷಗಳ ನಂತರ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ, ಇಂತಹ ಪರಿಸ್ಥಿತಿಯಲ್ಲಿ ಮೌನಿ ಅಮಾವಾಸ್ಯೆಯಂದು ಶನಿದೇವನ ರಾಶಿ ಬದಲಾವಣೆಯು ಅನೇಕ ರಾಶಿಗಳ ಜನರಿಗೆ ಅನುಕೂಲಕರವಾಗಿರುತ್ತದೆ.

ಬೆಳ್‌ಬೆಳ್ಗೆ ಈ ರೀತಿ ಗೋಸುಂಬೆ ಕಾಣಿಸಿಕೊಂಡ್ರೆ ಹಣ ಕೈಗೆ ಬರುತ್ತಂತ ಅರ್ಥ!

ಮೌನಿ ಅಮಾವಾಸ್ಯೆ 2023 ಪೂಜಾ ವಿಧಿ
ಮೌನಿ ಅಮವಾಸ್ಯೆಯಂದು ಬ್ರಹ್ಮ ಮುಹೂರ್ತದಲ್ಲಿ ಏಳಿರಿ.
ಮೌನವಾಗಿರಿ, ಯಾವುದೇ ಪವಿತ್ರ ನದಿಯಲ್ಲಿ ಸ್ನಾನ ಮಾಡಿ.
ಸ್ನಾನದ ನಂತರ, ವಿಷ್ಣುವನ್ನು ಪೂಜಿಸಿ ಮತ್ತು ಉಪವಾಸದ ಪ್ರತಿಜ್ಞೆ ಮಾಡಿ.
ಮೌನಿ ಅಮವಾಸ್ಯೆಯಂದು ತುಳಸಿಯನ್ನು 108 ಬಾರಿ ಪ್ರದಕ್ಷಿಣೆ ಮಾಡಿ.
ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡಿ ಮತ್ತು ದಾನ ಮಾಡಿ.

Latest Videos
Follow Us:
Download App:
  • android
  • ios