Asianet Suvarna News Asianet Suvarna News

Magh Masa 2023: ಈ ಮಾಸದಲ್ಲಿಯೇ ಬರಲಿದೆ ಶಿವರಾತ್ರಿ, ವಸಂತ ಪಂಚಮಿ

ಮಾಘ ಮಾಸವು ಸಾಂಪ್ರದಾಯಿಕ ಹಿಂದೂ ಕನ್ನಡ ಕ್ಯಾಲೆಂಡರ್‌ನಲ್ಲಿ ಹನ್ನೊಂದನೇ ತಿಂಗಳು. ಇದು ಯಾವಾಗಿನಿಂದ ಆರಂಭವಾಗುತ್ತದೆ? ಈ ಮಾಸದ ಪ್ರಮುಖ ವ್ರತಾಚರಣೆಗಳೇನು? ಎಲ್ಲ ವಿವರಗಳೂ ಇಲ್ಲಿವೆ.

Magh Masa 2023 in Karnataka and major festivals and vrats skr
Author
First Published Jan 17, 2023, 3:52 PM IST

ಮಾಘ ಮಾಸವು ಸಾಂಪ್ರದಾಯಿಕ ಹಿಂದೂ ಕನ್ನಡ ಕ್ಯಾಲೆಂಡರ್‌ನಲ್ಲಿ ಹನ್ನೊಂದನೇ ತಿಂಗಳು. ಮಹಾ ವಿಷ್ಣುವಿಗೆ ಅತ್ಯಂತ ಪ್ರಿಯವಾದ ಮಾಸ. ಜೊತೆಗೆ, ಶಿವರಾತ್ರಿಯೂ ಬರುವುದರಿಂದ ಹರಿಹರರ ಸ್ಮರಣೆಗೆ ಉತ್ತಮ ಮಾಸವಾಗಿದೆ. ಆರೋಗ್ಯ ವೃದ್ಧಿ ಮತ್ತು ಪುಣ್ಯ ಸಂಪಾದನೆಗೆ ಪ್ರಶಸ್ತ ಮಾಸ ಇದಾಗಿದೆ. ಈ ಮಾಸದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡುವುದರಿಂದ ಸರ್ವ ಪಾಪಗಳು ನಿವಾರಣೆಯಾಗುತ್ತವೆ ಎಂದು ನಾರದ ಪುರಾಣದಲ್ಲಿ ತಿಳಿಸಲಾಗಿದೆ.

ಕರ್ನಾಟಕದ ಪಂಚಾಂಗದಂತೆ ಮಾಘ ಮಾಸ 2023(Magh maas 2023) ಜನವರಿ 22ರಂದು ಪ್ರಾರಂಭವಾಗಿ ಫೆಬ್ರವರಿ 20 ರಂದು ಕೊನೆಗೊಳ್ಳುತ್ತದೆ. ಮರಾಠಿ, ಗುಜರಾತಿ ಮತ್ತು ತೆಲುಗು ಕ್ಯಾಲೆಂಡರ್‌ನಲ್ಲಿ ಮಾಘ ತಿಂಗಳು ಕನ್ನಡ ಕ್ಯಾಲೆಂಡರ್ ಅನ್ನು ಹೋಲುತ್ತದೆ. ಉತ್ತರ ಭಾರತದ ಕ್ಯಾಲೆಂಡರ್‌ಗಳಲ್ಲಿ ಮಾಘ ಮಾಸವು ಜನವರಿ 7, 2023 ರಂದು ಪ್ರಾರಂಭವಾಗಿ ಮತ್ತು ಫೆಬ್ರವರಿ 5, 2023ರಂದು ಕೊನೆಗೊಳ್ಳುತ್ತದೆ. ಮಾಘ ಮಾಸದ ಮುಕ್ತಾಯವಾದ ಬಳಿಕ ಫಲ್ಗುಣಿ ಮಾಸ ಆರಂಭವಾಗುತ್ತದೆ.

ಮಾಘ ಮಾಸದ ಆಚರಣೆಗಳು
ವಸಂತ್ ಪಂಚಮಿ, ರಥ ಸಪ್ತಮಿ ಮತ್ತು ಶಿವರಾತ್ರಿಯನ್ನು ಈ ತಿಂಗಳಲ್ಲಿ ಆಚರಿಸಲಾಗುತ್ತದೆ.
ಕನ್ನಡ ಮಾಘ ಮಾಸದಲ್ಲಿ ಶಿವ ಪ್ರದೋಷ ಉಪವಾಸದ ದಿನಾಂಕಗಳು:
ಪ್ರದೋಷ - ಫೆಬ್ರವರಿ 2
ಪ್ರದೋಷ - ಫೆಬ್ರವರಿ 18
ಮಾಘ ಮಾಸ 2023 ರಲ್ಲಿ ಗಣೇಶನಿಗೆ ಸಮರ್ಪಿಸಲಾದ ಸಂಕಷ್ಟಹರ ಚತುರ್ಥಿ ವ್ರತವು ಫೆಬ್ರವರಿ 9, 2023ರಂದು ಬರುತ್ತದೆ. ಅಂದು ಚಂದ್ರೋದಯವು ರಾತ್ರಿ 9:06 ಗಂಟೆಗೆ ಆಗಲಿದೆ.

Tumakuru: ಮಳೆ - ಬೆಳೆಯ ಭವಿಷ್ಯ ತಿಳಿಸುವ ಮೊಲ!

ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ
ಮಾಘ ಮಾಸ 2023ರ ಶುಕ್ಲ ಪಕ್ಷ ಅಂದರೆ ಚಂದ್ರ ಕಾಂತಿ ಹೆಚ್ಚಿಸಿಕೊಳ್ಳುವ ಸಮಯವು ಜನವರಿ 22ರಿಂದ ಫೆಬ್ರವರಿ 5, 2023 ರವರೆಗೆ ಇರಲಿದೆ.
ಮಾಘ ತಿಂಗಳು 2023 ಕೃಷ್ಣ ಪಕ್ಷ (ಚಂದ್ರನ ಕ್ಷೀಣಿಸುತ್ತಿರುವ ಹಂತ)ವು ಫೆಬ್ರವರಿ 6ರಿಂದ ಫೆಬ್ರವರಿ 20, 2023 ರವರೆಗೆ ಇರುತ್ತದೆ.

ಕನ್ನಡ ಮಾಘ ಮಾಸದಲ್ಲಿ ಏಕಾದಶಿ ಉಪವಾಸದ ದಿನಾಂಕಗಳು
ಜಯ ಏಕಾದಶಿ - ಫೆಬ್ರವರಿ 1
ವಿಜಯ ಏಕಾದಶಿ - ಫೆಬ್ರವರಿ 17

ಕನ್ನಡ ಮಾಘ ಮಾಸದಲ್ಲಿ ಪೂರ್ಣಿಮಾ
ಮಾಘ ಪೂರ್ಣಿಮಾ ಅಥವಾ ಹುಣ್ಣಿಮೆಯ ದಿನ ಫೆಬ್ರವರಿ 5, 2023ರಂದು.
ಫೆಬ್ರವರಿ 4ರಂದು ರಾತ್ರಿ 9:30ರಿಂದ ಫೆಬ್ರವರಿ 5ರಂದು ರಾತ್ರಿ 11:58ರವರೆಗೆ ಪೂರ್ಣಿಮಾ ತಿಥಿ.

Budh Margi 2023: ಜ.18ರಿಂದ 3 ರಾಶಿಗಳಿಗೆ ಶುರುವಾಗಲಿದೆ ಲಾಭದ ದಿನಗಳು..

ಅಮವಾಸ್ಯೆ
ಮಾಘ ಮಾಸದ ಚಂದ್ರನಿಲ್ಲದ ದಿನವು ಫೆಬ್ರವರಿ 20, 2023ರಂದು ಇರುತ್ತದೆ.
ಫೆಬ್ರವರಿ 20 ರಂದು ಸಂಜೆ 4:19ಕ್ಕೆ ಅಮವಾಸ್ಯೆ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 21ರಂದು ಮಧ್ಯಾಹ್ನ 12:36ಕ್ಕೆ ಕೊನೆಗೊಳ್ಳುತ್ತದೆ.

ಕನ್ನಡ ಮಾಘ ಮಾಸದ ಪ್ರಮುಖ ಹಬ್ಬಗಳು ಮತ್ತು ಶುಭ ದಿನಾಂಕಗಳು:
ವಸಂತ ಪಂಚಮಿ ಮತ್ತು ಶ್ರೀ ಪಂಚಮಿ - ಜನವರಿ 26
ರಥ ಸಪ್ತಮಿ - ಜನವರಿ 27
ಭೀಷ್ಮ ಅಷ್ಟಮಿ - ಜನವರಿ 27
ಭೀಷ್ಮ ದ್ವಾದಶಿ - ಫೆಬ್ರವರಿ 2
ಸೀತಾ ಜಯಂತಿ - ಫೆಬ್ರವರಿ 14
ಶಿವರಾತ್ರಿ - ಫೆಬ್ರವರಿ 18

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios