Asianet Suvarna News Asianet Suvarna News

ಈ ಬಾರಿ ಸಂಪೂರ್ಣ ಬ್ಲಡ್ ಮೂನ್ ಚಂದ್ರಗ್ರಹಣ!

ಈ ವರ್ಷದ ಕೊನೆಯ ಚಂದ್ರಗ್ರಹಣ ನವೆಂಬರ್‌ನಲ್ಲಿದೆ. ಇದು ಯಾವಾಗಿದೆ, ನಿಮ್ಮ ಪ್ರದೇಶದಲ್ಲಿ ಗೋಚರಿಸುತ್ತದೆಯೇ, ಬರಿಗಣ್ಣಿನಲ್ಲಿ ನೋಡಬಹುದೇ, ಇದರ ವಿಶೇಷತೆಗಳೇನು ಎಲ್ಲವೂ ಇಲ್ಲಿವೆ..

Lunar Eclipse 2022 Date Time of last chandra grahan of this year skr
Author
First Published Oct 29, 2022, 9:28 AM IST

ಈಗಷ್ಟೇ ಸೂರ್ಯಗ್ರಹಣ ಮುಗಿದಿದೆ. ಅದಾಗಲೇ ಚಂದ್ರಗ್ರಹಣ ಹತ್ತಿರ ಬಂದಿದೆ. 2022ರ ಕೊನೆಯ ಹಾಗೂ ಸಂಪೂರ್ಣ ಚಂದ್ರಗ್ರಹಣವು ನವೆಂಬರ್‌ನಲ್ಲಿದೆ. ಇದರ ನಂತರ ಸುಮಾರು 3 ವರ್ಷಗಳ ಕಾಲ ಮತ್ತೊಂದು ಸಂಪೂರ್ಣ ಚಂದ್ರಗ್ರಹಣ ಕಾಣಲಾರಿರಿ. ಹಾಗಾಗಿ, ಈ ಬಾರಿಯ ಗ್ರಹಣ ನಿಮ್ಮ ಪ್ರದೇಶದಲ್ಲಿ ಗೋಚರಿಸುತ್ತದೆಯೇ, ಅದನ್ನು ನೋಡುವುದು ಹೇಗೆ, ಇದರ ವಿಶೇಷತೆಗಳೇನು ಎಲ್ಲವನ್ನೂ ತಿಳಿಯೋಣ.. 

ಈ ವರ್ಷದ ಕೊನೆಯ ಚಂದ್ರಗ್ರಹಣವು ನವೆಂಬರ್ 8, ಮಂಗಳವಾರದಂದು ಸಂಭವಿಸುತ್ತಿದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿರುತ್ತದೆ. ಇದರ ನಂತರ, ಮುಂದಿನ ಸಂಪೂರ್ಣ ಚಂದ್ರಗ್ರಹಣವು ಮೂರು ವರ್ಷಗಳ ಅಂತರದ ನಂತರ ಮಾರ್ಚ್ 14, 2025 ರಂದು ಸಂಭವಿಸುತ್ತದೆ. ಈ ನಡುವಿನ ಸಮಯದಲ್ಲಿ ಭಾಗಶಃ ಮತ್ತು ಪೆನಂಬ್ರಲ್ ಚಂದ್ರ ಗ್ರಹಣವು ನಡೆಯುತ್ತದೆ.

'ನವೆಂಬರ್ 8, 2022ರಂದು, ಚಂದ್ರನು ಭೂಮಿಯ ನೆರಳಿನಲ್ಲಿ ಹಾದುಹೋಗುತ್ತದೆ ಮತ್ತು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದು ಸುಮಾರು 3 ವರ್ಷಗಳ ಕೊನೆಯ ಸಂಪೂರ್ಣ ಚಂದ್ರಗ್ರಹಣವಾಗಿದೆ, ಆದ್ದರಿಂದ ಇದನ್ನು ಪರೀಕ್ಷಿಸಲು ಮರೆಯದಿರಿ. ಇದು ನಿಮ್ಮ ಪ್ರದೇಶದಲ್ಲಿ ಗೋಚರಿಸುತ್ತದೆ,' ಎಂದು ನಾಸಾ ಟ್ವೀಟ್ ಮಾಡಿದೆ. 

ಸಂಪೂರ್ಣ ಚಂದ್ರಗ್ರಹಣ ಎಂದರೇನು?
ಯಾವಾಗಲೂ ಚಂದ್ರ ಗ್ರಹಣವು ಹುಣ್ಣಿಮೆ(full moon day)ಯ ದಿನವೇ ಸಂಭವಿಸುವುದು. ಸೂರ್ಯ, ಭೂಮಿ ಮತ್ತು ಚಂದ್ರರು ನೇರ ರೇಖೆಯಲ್ಲಿ ಒಟ್ಟುಗೂಡಿದಾಗ ಸಂಪೂರ್ಣ ಚಂದ್ರಗ್ರಹಣ(Total lunar eclipse 2022) ಸಂಭವಿಸುತ್ತದೆ. ಈ ಸಮಯದಲ್ಲಿ ಸೂರ್ಯನ ಬೆಳಕು ನೇರವಾಗಿ ಚಂದ್ರನ ಮೇಲೆ ಬೀಳದೆ, ಭೂಮಿಯ ನೆರಳಾಗಿ ಚಂದ್ರನಲ್ಲಿ ಕಾಣುತ್ತದೆ. ಇದೇ ಚಂದ್ರಗ್ರಹಣವೆನ್ನುವುದು. 

Tulsi Vivah 2022: ವಿಷ್ಣು ತುಳಸಿ ವಿವಾಹಕ್ಕೆ ದಿನ ಸನ್ನಿಹಿತ, ಹೇಗೆ ನಡೆಸೋದು ಪೂಜೆ?

ಭಾರತದಲ್ಲಿ ಸಮಯ
ಸಂಪೂರ್ಣ ಚಂದ್ರಗ್ರಹಣ, 2022ರ ಕೊನೆಯ ಚಂದ್ರ ಗ್ರಹಣವು ನವೆಂಬರ್ 8ರಂದು ಸಂಭವಿಸುತ್ತದೆ. ಗ್ರಹಣವು ಸಂಜೆ 5:32ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸಂಜೆ 6:48ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣದ ಒಟ್ಟು ಅವಧಿಯು 45 ನಿಮಿಷಗಳು ಮತ್ತು 48 ಸೆಕೆಂಡುಗಳು.

ಚಂದ್ರಗ್ರಹಣ 2022 ಗೋಚರತೆ
'ಟೈಮ್ ಅಂಡ್ ಡೇಟ್' ವೆಬ್‌ಸೈಟ್ ಪ್ರಕಾರ, ಸಂಪೂರ್ಣ ಚಂದ್ರಗ್ರಹಣವು ಉತ್ತರ/ಪೂರ್ವ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಆರ್ಕ್ಟಿಕ್, ಅಂಟಾರ್ಟಿಕಾದ ಭಾಗಗಳಲ್ಲಿ ಗೋಚರಿಸುತ್ತದೆ. ಭಾರತದಲ್ಲಿ, ಇದು ಕೋಲ್ಕತ್ತಾ, ಸಿಲಿಗುರಿ, ಪಾಟ್ನಾ, ರಾಂಚಿ ಮತ್ತು ಗುವಾಹಟಿಯಲ್ಲಿ ಗೋಚರಿಸುತ್ತದೆ. ಆದಾಗ್ಯೂ, ಭಾಗಶಃ ಚಂದ್ರಗ್ರಹಣವು ನವದೆಹಲಿ ಮತ್ತು ಭಾರತದ ಇತರ ಭಾಗಗಳಲ್ಲಿ ಕಂಡುಬರುತ್ತದೆ. ಗ್ರಹಣದ ಹಂತಗಳು ಎಲ್ಲರಿಗೂ ಏಕಕಾಲದಲ್ಲಿ ಸಂಭವಿಸುತ್ತವೆ. ಆದರೆ ಎಲ್ಲರೂ ಪೂರ್ಣ ಗ್ರಹಣವನ್ನು ನೋಡಲಾಗುವುದಿಲ್ಲ. 

ಸೂತಕ ಅವಧಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಂದ್ರಗ್ರಹಣ ಸಂಭವಿಸಿದಾಗ, ಸೂತಕ ಅವಧಿಯು ನಿಖರವಾಗಿ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಸೂತಕ ಕಾಲದಲ್ಲಿ ಯಾವುದೇ ಶುಭ ಕಾರ್ಯ ನಡೆಯುವುದಿಲ್ಲ. ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ, ಆದ್ದರಿಂದ ಸೂತಕ ಅವಧಿಯು ಭಾರತದಲ್ಲಿ ಮಾನ್ಯವಾಗಿರುತ್ತದೆ.

ಕೋಳಿ ಅಂಕದ ಭವಿಷ್ಯ ಹೇಳುವ ಕುಕ್ಕುಟ ಪಂಚಾಂಗ!

ಮಾಡಬೇಕಾದದ್ದು ಮತ್ತು ಮಾಡಬಾರದ ಸಂಗತಿಗಳು
ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು. ಈ ಸಂದರ್ಭದಲ್ಲಿ ಸೂರ್ಯನು ನಿಮ್ಮ ಬೆನ್ನಿಗಿರುವುದರಿಂದ ಬರಿಗಣ್ಣಿನ ವೀಕ್ಷಣೆ ಅಪಾಯವೇನೂ ಇಲ್ಲ. ಹಾಗಿದ್ದೂ ದೂರದರ್ಶಕ, ಬೈನಾಕ್ಯುಲರ್ ಅಥವಾ ಕನ್ನಡಕವನ್ನು ಬಳಸುವುದು ಉತ್ತಮ.
ಗ್ರಹಣದ ಸಮಯದಲ್ಲಿ ತಿನ್ನುವುದು ಸೂಕ್ತವಲ್ಲ. ಇದಲ್ಲದೆ, ತುಳಸಿ ಎಲೆಗಳನ್ನು ಆಹಾರ ಭಕ್ಷ್ಯಗಳಲ್ಲಿ ಇಡಲು ಸಲಹೆ ನೀಡಲಾಗುತ್ತದೆ.
ಚಂದ್ರಗ್ರಹಣದ ಹಾನಿಕಾರಕ ಪರಿಣಾಮವನ್ನು ಕಡಿಮೆ ಮಾಡಲು ಮಂತ್ರಗಳನ್ನು ಪಠಿಸಿ ಮತ್ತು ದೇವರ ಹೆಸರನ್ನು ತೆಗೆದುಕೊಳ್ಳಿ.
ಚಂದ್ರಗ್ರಹಣದ ನಂತರ ಅನ್ನ, ವಸ್ತ್ರದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

Follow Us:
Download App:
  • android
  • ios