ಕೈಯಲ್ಲಿದ್ಯಾ ಶಂಖ, ತ್ರಿಶೂಲ, ಸ್ವಸ್ತಿಕ, ಈ ಚಿಹ್ನೆಗಳು ಹೇಳುವ ಅರ್ಥವೇನು?
ನಮ್ಮ ದೇಹದ ಪ್ರತಿಯೊಂದು ಭಾಗವೂ ನಮ್ಮ ಸ್ವಭಾವ ಹಾಗೂ ನಮ್ಮ ಭವಿಷ್ಯವನ್ನು ಹೇಳುತ್ತದೆ. ಒಬ್ಬ ವ್ಯಕ್ತಿ ಕೈ ನೋಡಿಯೇ ಆತನ ಜೀವನವನ್ನು ಹೇಳಬಹುದು. ಹಾಗೆಯೇ ಮಹಿಳೆಯ ಅಂಗೈನಲ್ಲಿ ಕೆಲ ಚಿಹ್ನೆಯಿದ್ರೆ ನೀವು ಆಕೆಯನ್ನು ಅದೃಷ್ಟವಂತೆ ಎಂದು ಆರಾಮವಾಗಿ ಕರೆಯಬಹುದು.
ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಪ್ರತಿಯೊಬ್ಬರೂ ಕುತೂಹಲದಲ್ಲಿರುತ್ತಾರೆ. ಜಾತಕ ತೋರಿಸಿ ಭವಿಷ್ಯ ತಿಳಿದುಕೊಳ್ಳುವವರು ಕೆಲವರಾದ್ರೆ ಮತ್ತೆ ಕೆಲವರು ಸಂಖ್ಯೆಗಳನ್ನು ನಂಬುತ್ತಾರೆ. ಮತ್ತೆ ಕೆಲವರು ಹಸ್ತ ರೇಖೆಯನ್ನು ನಂಬುತ್ತಾರೆ. ಹಣೆಯ ಮೇಲಿನ ಗೆರೆಗಳು ಮತ್ತು ಅಂಗೈಗಳ ಮೇಲಿನ ಗುರುತುಗಳು ನಿಮ್ಮ ಜೀವನಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳನ್ನು ಬಹಿರಂಗಪಡಿಸುತ್ತವೆ. ಅಂಗೈಯಲ್ಲಿರುವ ರೇಖೆಗಳು ಹಲವು ಗೌಪ್ಯ ಸಂಗತಿಯನ್ನು ಹೇಳುತ್ತವೆ. ಮಹಿಳೆಯರ ಅಂಗೈಯಲ್ಲಿರುವ ಕೆಲ ಗುರುತುಗಳು ತುಂಬಾ ಮಂಗಳಕರವಾಗಿರುತ್ತವೆ. ಮಹಿಳೆಗೆ ಅದ್ರಿಂದ ಉತ್ತಮ ಫಲ ಸಿಗುತ್ತದೆ. ನಾವಿಂದು ಮಹಿಳೆ ಅಂಗೈನಲ್ಲಿರುವ ಯಾವ ಚಿಹ್ನೆ ಮಂಗಳಕರವೆಂದು ನಿಮಗೆ ಹೇಳ್ತೆವೆ.
ಮಹಿಳೆ ಅಂಗೈ (Palms) ನಲ್ಲಿರುವ ಯಾವ ಗುರುತು ಶುಭ (Good Luck) :
ರಥ (Chariot) ಚಿಹ್ನೆ ಇದ್ರೆ ಏನು ಅರ್ಥ : ಮಹಿಳೆಯ ಅಂಗೈನಲ್ಲಿ ರಥದ ಚಿಹ್ನೆ ಇದ್ದರೆ ಆಕೆ ಜೀವನ ಐಷಾರಾಮಿಯಾಗಿರುತ್ತದೆ. ಯಾವುದೇ ರಾಜ (King) ನಿಗಿಂತ ಸುಖದಲ್ಲಿ ಆಕೆ ಜೀವನ ನಡೆಸುತ್ತಾಳೆ. ಎಂದಿಗೂ ಈ ಮಹಿಳೆಯರಿಗೆ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಎಲ್ಲ ಸೌಲಭ್ಯ ಸಿಗುತ್ತದೆ. ರಥದ ಚಿಹ್ನೆ ಹೊಂದಿರುವ ಮಹಿಳೆ ದಾಂಪತ್ಯ (Marriage) ಜೀವನದಲ್ಲಿ ಕೂಡ ಯಾವುದೇ ಸಮಸ್ಯೆ ಕಾಡುವುದಿಲ್ಲ.
ಇಷ್ಟೇ ಅಲ್ಲ ಹಸ್ತಮುದ್ರಿಕಾ (Palmistry) ಶಾಸ್ತ್ರದ ಪ್ರಕಾರ, ರಥದ ಮುದ್ರೆ ಹೊಂದಿರುವ ಮಹಿಳೆ ದೇವರನ್ನು ಹೆಚ್ಚು ನಂಬುತ್ತಾಳೆ. ಸದಾ ಖುಷಿಯಾಗಿರುವ ಅವರು ಯಾರಿಗೂ ನೋವುಂಟು ಮಾಡುವ ಮಾತನ್ನು ಆಡುವುದಿಲ್ಲ. ಅವರಿಗೆ ಜನರು ಆಕರ್ಷಿತರಾಗ್ತಾರೆ. ಇದ್ರಿಂದಾಗಿ ಅವರ ಖ್ಯಾತಿ ಆಕಾಶಕ್ಕೇರುತ್ತದೆ. ಮೃದು ನುಡಿಯ ಮಹಿಳೆ ಹಣವಿದೆ ಎನ್ನುವ ಕಾರಣಕ್ಕೆ ಎಂದೂ ಅಹಂಕಾರ ತೋರುವುದಿಲ್ಲ.
ತೆಂಗಿನಕಾಯಿ ಈ ರೀತಿ ಪೂಜಿಸಿದ್ರೆ ನಿಮ್ಮ ಅದೃಷ್ಟ ಬದಲಾಗುತ್ತೆ!
ತ್ರಿಶೂಲದ ಚಿಹ್ನೆಯಿದ್ರೆ ಶುಭ : ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಮಹಿಳೆಯ ಅಂಗೈಯಲ್ಲಿ ತ್ರಿಶೂಲದ ಗುರುತಿದ್ದರೆ ಬಹಳ ಒಳ್ಳೆಯದು. ಅದರಲ್ಲೂ ಶನಿ, ಸೂರ್ಯ ಮತ್ತು ಗುರು ಪರ್ವತದ ಮೇಲೆ ತ್ರಿಶೂಲದ ಗುರುತು ಇದ್ದರೆ ಅದನ್ನು ಮಂಗಳಕರವೆನ್ನಲಾಗುತ್ತದೆ. ಆಕೆ ತುಂಬಾ ಪ್ರಭಾವಶಾಲಿ ಮತ್ತು ಶ್ರೀಮಂತಳು ಎಂಬುದನ್ನು ಇದು ತೋರಿಸುತ್ತದೆ. ಜೀವನದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಯಾವ ಮಹಿಳೆ ಕೈನಲ್ಲಿ ತ್ರಿಶೂಲದ ಚಿಹ್ನೆಯಿದೆಯೋ ಆ ಮಹಿಳೆಗೆ ಭಗವಂತ ವಿಷ್ಣುವಿನ ಆಶೀರ್ವಾದ ಸದಾ ಇರುತ್ತದೆಯಂತೆ. ನಿಮ್ಮ ಕೈನಲ್ಲಿ ತ್ರಿಶೂಲದ ಚಿಹ್ನೆ ಇದ್ದರೆ ನಿಮಗೆ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುವುದು ನಿಶ್ಚಿತ ಎನ್ನುತ್ತದೆ ಹಸ್ತಮುದ್ರಿಕಾ ಶಾಸ್ತ್ರ.
ಸ್ವಸ್ತಿಕ ಚಿಹ್ನೆ ಇರುವ ಮಹಿಳೆ ಅದೃಷ್ಟವಂತೆ : ಯಾವ ಮಹಿಳೆ ಅಂಗೈನಲ್ಲಿ ಸ್ವಸ್ತಿಕ ಗುರುತು ಇರುತ್ತದೆಯೋ ಆಕೆ ಅದೃಷ್ಟವಂತೆ ಎನ್ನಬಹುದು. ಆಕೆ ತನ್ನ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಾಳೆ. ಈಕೆಗೂ ಹಣದ ಸಮಸ್ಯೆ ಕಾಡುವುದಿಲ್ಲ. ಪ್ರಗತಿಗಾಗಿ ಹೆಚ್ಚು ಶ್ರಮವಹಿಸುವ ಮಹಿಳೆ ಈಕೆ. ಈ ಮಹಿಳೆಯರು ಜೀವನದಲ್ಲಿ ಬಯಸಿದ್ದೆಲ್ಲ ಸಿಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಈ ಲಕ್ಷಣಗಳು ನಿಮ್ಮ ಮೇಷ ರಾಶಿಯ ಗೆಳೆಯನಲ್ಲಿದ್ದರೆ, ಆತ ನಿಮ್ಮ ಪ್ರೀತಿಯಲ್ಲಿದಾನೆ ಅಂತಲೇ ಅರ್ಥ!
ಶಂಖದ ಗುರುತಿದ್ರೆ ಲಕ್ಷ್ಮಿ ಒಲಿದಂತೆ : ಶಂಖದ ಗುರುತು ಸಾಮಾನ್ಯವಾಗಿ ಬೆರಳಿನ ಮೇಲೆ ಕಂಡು ಬರುತ್ತದೆ. ಕೆಲವರ ಪ್ರತಿ ಬೆರಳಿನ ಮೇಲೂ ಶಂಖದ ಗುರುತಿದ್ದರೆ, ಇನ್ನು ಕೆಲವರ ಕೆಲ ಬೆರಳಿನಲ್ಲಿ ಮಾತ್ರ ಶಂಖದ ಗುರುತು ಇರುತ್ತದೆ. ಮಹಿಳೆಯರ ಕೈಯಲ್ಲಿ ಶಂಖದ ಗುರುತಿದ್ದರೆ ಲಕ್ಷ್ಮಿ ಆಶೀರ್ವಾದವಿದೆ ಎಂದರ್ಥ. ಶಂಖದ ಗುರುತು ಅಂಗೈಯ ಮಧ್ಯದಲ್ಲಿದ್ದರೆ ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶುಕ್ರನ ಪರ್ವತದ ಮೇಲೆ ಶಂಖದ ಗುರುತಿದ್ದರೆ ಅದು ಕೂಡ ಮಂಗಳಕರವಾಗಿದೆ. ಇಂಥ ಮಹಿಳೆಯರಿಗೆ ಅದೃಷ್ಟದ ಬಾಗಿಲು ಸದಾ ತೆರೆದಿರುತ್ತದೆ. ಹೆಚ್ಚೆಚ್ಚು ಸಂಪಾದನೆ ಮಾಡುವ ಮಹಿಳೆಯರು ಖರ್ಚಿಗೆ ಹಿಂಜರಿಯುವುದಿಲ್ಲ.