ತೆಂಗಿನಕಾಯಿ ಈ ರೀತಿ ಪೂಜಿಸಿದ್ರೆ ನಿಮ್ಮ ಅದೃಷ್ಟ ಬದಲಾಗುತ್ತೆ!
ಸನಾತನ ಸಂಪ್ರದಾಯದಲ್ಲಿ, ಯಾವುದೇ ದೇವರನ್ನು ಪೂಜಿಸುವಾಗ ಅಥವಾ ಯಾವುದೇ ಶುಭ ಕಾರ್ಯವನ್ನು ಮಾಡುವಾಗ ತೆಂಗಿನಕಾಯಿಯನ್ನು ಖಂಡಿತವಾಗಿಯೂ ಒಂದಲ್ಲ ಒಂದು ರೂಪದಲ್ಲಿ ಬಳಸಲಾಗುತ್ತೆ. ಹಿಂದೂ ಧರ್ಮದಲ್ಲಿ ತೆಂಗಿನಕಾಯಿಯನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ತೆಂಗಿನಕಾಯಿಯು ತ್ರಿದೇವನ ವಾಸಸ್ಥಾನ ಎಂದು ನಂಬಲಾಗಿದೆ.
ತೆಂಗಿನಕಾಯಿಯ(Coconut) ಅನೇಕ ಉಪಯೋಗಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿದೆ, ಇದನ್ನು ಮಾಡುವ ಮೂಲಕ ವ್ಯಕ್ತಿಯ ಎಲ್ಲಾ ದುಃಖಗಳನ್ನು ನಿವಾರಿಸಬಹುದು ಮತ್ತು ಬಯಕೆಗಳು ಬೇಗನೆ ಈಡೇರುತ್ತವೆ ಎಂಬ ನಂಬಿಕೆ ಇದೆ. ಗ್ರಹಗಳ ದೋಷಗಳನ್ನು ನಿವಾರಿಸಲು ಮತ್ತು ಅವುಗಳಿಂದ ಒಳ್ಳೆಯದನ್ನು ಪಡೆಯಲು ಮತ್ತು ತೆಂಗಿನಕಾಯಿಯ ಮೂಲಕ ಜೀವನಕ್ಕೆ ಸಂಬಂಧಿಸಿದ ಬಯಕೆಗಳನ್ನು ಪೂರೈಸಲು ಪರಿಪೂರ್ಣ ಮಾರ್ಗವನ್ನು ತಿಳಿದುಕೊಳ್ಳೋಣ-
ಹಣದ(Money) ಸಮಸ್ಯೆ ಪರಿಹಾರ: ತೆಂಗಿನಕಾಯಿಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗಿದೆ. ಸಂಪತ್ತಿನ ದೇವಿಯ ಅನುಗ್ರಹವನ್ನು ವಿಶೇಷವಾಗಿ ಪೂಜೆಯಲ್ಲಿ ಬಳಸಿದಾಗ ಪಡೆಯಲಾಗುತ್ತೆ. ನೀವು ಆರ್ಥಿಕ ಸಮಸ್ಯೆಯಿಂದ ಹೆಣಗಾಡುತ್ತಿದ್ದರೆ, ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮತ್ತು ಅದನ್ನು ಯಾರೂ ನೋಡದ ಸ್ಥಳದಲ್ಲಿ ಇರಿಸಿ. ತೆಂಗಿನಕಾಯಿಗೆ ಸಂಬಂಧಿಸಿದ ಈ ಪರಿಹಾರ ಮಾಡೋದರಿಂದ, ತಾಯಿ ಲಕ್ಷ್ಮಿಯ ಅನುಗ್ರಹ ನಿಮ್ಮ ಮೇಲಿರುತ್ತದೆ.
ಶ್ರೀಫಲದ ಪರಿಹಾರದಿಂದ ಶನಿ ದೋಷವನ್ನು(Shani Dosha) ತೆಗೆದುಹಾಕಲಾಗುತ್ತೆ: ಜಾತಕದಲ್ಲಿ ಶನಿ ದೋಷವಿದ್ದರೆ ಮತ್ತು ಶನಿಯ ದುಷ್ಪರಿಣಾಮಗಳಿಂದ ನೀವು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೆ, ನೀವು ಶನಿವಾರ ದೇವಾಲಯಕ್ಕೆ ಹೋಗಿ ನೀರಿರೋ ತೆಂಗಿನಕಾಯಿಯನ್ನು ನದಿಗೆ ಅರ್ಪಿಸಬೇಕು. ತೆಂಗಿನಕಾಯಿಯ ಈ ಪರಿಹಾರ ಮಾಡೋದರಿಂದ, ಶನಿ ದೋಷ ನಿವಾರಣೆಯಾಗುತ್ತೆ ಎಂದು ನಂಬಲಾಗಿದೆ.
ತೆಂಗಿನಕಾಯಿಯಿಂದ ರಾಹು-ಕೇತುವಿನ ಸಮಸ್ಯೆಗಳು ನಿವಾರಣೆಯಾಗುತ್ತವೆ: ತೆಂಗಿನಕಾಯಿ ಪರಿಹಾರದಿಂದ, ಶನಿಯ ನೋವನ್ನು ನಿವಾರಿಸೋದು ಮಾತ್ರವಲ್ಲದೆ, ರಾಹುವಿನ ಅಡೆತಡೆ ಮತ್ತು ಕೇತುವಿನ ತೊಂದರೆಯನ್ನು ಸಹ ನಿವಾರಿಸಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಣ ತೆಂಗಿನಕಾಯಿಯಲ್ಲಿ ಸಕ್ಕರೆಯನ್ನು ತುಂಬಿಸಿ ಅದನ್ನು ಯಾರು ನೋಡದ ಸ್ಥಳದಲ್ಲಿ ನೆಲವನ್ನು ಅಗೆದು ಇಡಬೇಕು. ಆ ಮೂಲಕ, ರಾಹು-ಕೇತುವಿನ ಕಷ್ಟಗಳು ದೂರವಾಗುತ್ತವೆ. ಆ ತೆಂಗಿನಕಾಯಿಯನ್ನು ಇರುವೆ(Ant) ಮತ್ತು ಇತರ ಜೀವಿಗಳು ನಾಶಪಡಿಸಿದ ತಕ್ಷಣ, ನಿಮ್ಮ ರಾಹು-ಕೇತುವಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.
ಕಾಳಸರ್ಪ ದೋಷ (Kaalasarpa dosha) ತೊಡೆದುಹಾಕಲು: ಕಾಳಸರ್ಪ ದೋಷದಿಂದಾಗಿ ಜಾತಕದಲ್ಲಿ ಪ್ರಮುಖ ಸಮಸ್ಯೆ ಇದ್ದರೆ ಅಥವಾ ನೀವು ಆಗಾಗ್ಗೆ ಮಾಡಿದ ಕೆಲಸ ಹಾಳಾಗುತ್ತಿದ್ದರೆ, ಇದನ್ನು ತಪ್ಪಿಸಲು, ನೀವು ಮಂಗಳವಾರ ಒಂದು ಬಾರಿ ತೆಂಗಿನಕಾಯಿಗೆ ಸಂಬಂಧಿಸಿದ ಜ್ಯೋತಿಷ್ಯ ಪರಿಹಾರಗಳನ್ನು ಪ್ರಯತ್ನಿಸಬೇಕು. ಮಂಗಳವಾರ, ನೀರಿರೋ ತೆಂಗಿನಕಾಯಿ, ಸ್ವಲ್ಪ ಕಪ್ಪು ಎಳ್ಳು, ಸ್ವಲ್ಪ ಉದ್ದಿನ ಬೇಳೆ ಮತ್ತು ಕಬ್ಬಿಣದ ಮೊಳೆಯನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ನದಿ ಅಥವಾ ಸಮುದ್ರಕ್ಕೆ ಎಸೆದು ಕಾಳಸರ್ಪ ದೋಷಕ್ಕೆ ಸಂಬಂಧಿಸಿದ ಬಿಕ್ಕಟ್ಟನ್ನು ತೆಗೆದುಹಾಕುತ್ತೆ ಎಂದು ನಂಬಲಾಗಿದೆ.
ವ್ಯವಹಾರದಲ್ಲಿ ಯಶಸ್ಸನ್ನು (Success) ಪಡೆಯುವ ಮಾರ್ಗ: ಗುರುವಾರ, ಲಕ್ಷ್ಮಿ ದೇವಿ ಮತ್ತು ಭಗವಾನ್ ವಿಷ್ಣುವನ್ನು ಪೂಜಿಸಿ ಮತ್ತು ಲಕ್ಷ್ಮಿ ನಾರಾಯಣ ಮಂತ್ರವನ್ನು ಪಠಿಸಿ. ಪೂಜೆಯ ನಂತರ, ತೆಂಗಿನಕಾಯಿ ಮತ್ತು ಬಿಳಿ ಸಿಹಿತಿಂಡಿಯನ್ನು ಹಳದಿ ಬಟ್ಟೆಯಲ್ಲಿ ನೀರಿನೊಂದಿಗೆ ಇರಿಸಿ ಮತ್ತು ದೇವಾಲಯಕ್ಕೆ ಹೋಗಿ ವಿಷ್ಣುವಿಗೆ ಅರ್ಪಿಸಿ. ಭಗವಾನ್ ವಿಷ್ಣುವಿನ ಕೃಪೆಯಿಂದ, ನಿಮ್ಮ ವ್ಯವಹಾರದಲ್ಲಿನ ನಷ್ಟವು ನಿವಾರಣೆಯಾಗುತ್ತೆ.
ಕೆಟ್ಟ ದೃಷ್ಟಿಯನ್ನು(Evil eye) ತೊಡೆದುಹಾಕೋದು ಹೇಗೆ?: ಮಗುವಿಗೆ ಕೆಟ್ಟ ದೃಷ್ಟಿ ಇದ್ದರೆ, ಅದನ್ನು ತೆಗೆದುಹಾಕಲು, ತೆಂಗಿನಕಾಯಿಯನ್ನು ಮಗುವಿನ ತಲೆಯಿಂದ ಪಾದದವರೆಗೆ 11 ಬಾರಿ ನೀವಾಳಿಸಿ ನಂತರ ಅದನ್ನು ಯಾರಿಲ್ಲದ ಸ್ಥಳದಲ್ಲಿ ಸುಟ್ಟುಹಾಕಿ. ಅದರ ನಂತರ, ಸುಟ್ಟ ತೆಂಗಿನಕಾಯಿಯನ್ನು ನೀರಿನಲ್ಲಿ ಹರಿಯಲು ಬಿಡಿ. ಇದನ್ನು ಮಾಡೋದರಿಂದ, ಕೆಟ್ಟ ದೃಷ್ಟಿಯ ಜೊತೆಗೆ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕಲಾಗುತ್ತೆ ಮತ್ತು ಧನಾತ್ಮಕ ಶಕ್ತಿಯು ಜೀವನದಲ್ಲಿ ಬರಲು ಬರಲು ಪ್ರಾರಂಭಿಸುತ್ತೆ.
ರೋಗ(Disease) ಮತ್ತು ಬಿಕ್ಕಟ್ಟನ್ನು ನಿವಾರಿಸುವ ಮಾರ್ಗ: ನಿಮ್ಮನ್ನು ಕಾಡುವ ರೋಗವಿದ್ದರೆ ಅಥವಾ ಹಠಾತ್ ಬಿಕ್ಕಟ್ಟಿದ್ದರೆ, ಮಂಗಳವಾರ ಅಥವಾ ಶನಿವಾರ ನೀರಿರೋ ತೆಂಗಿನಕಾಯಿಯನ್ನು ನಿಮ್ಮ ಮೇಲೆ 21 ಬಾರಿ ನೀವಾಳಿಸಿ ಮತ್ತು ಅದನ್ನು ಧಾರ್ಮಿಕ ಸ್ಥಳದ ಬೆಂಕಿಯಲ್ಲಿ ಹಾಕಿ. ನೀವು ನಿಮ್ಮನ್ನು ಮತ್ತು ನಿಮ್ಮ ಇಡೀ ಕುಟುಂಬವನ್ನು ನೀವಾಳಿಸಿ ಹೊಡೆದರೆ, ಅದು ಇನ್ನೂ ಉತ್ತಮವಾಗಿರುತ್ತೆ. ಇದರೊಂದಿಗೆ, ಹನುಮಂತನಿಗೆ ಪ್ರಾರ್ಥಿಸಿ ಹನುಮಾನ್ ಚಾಲೀಸಾ ಪಠಿಸಿ. ಇದನ್ನು ಮಾಡೋದರಿಂದ, ಎಲ್ಲಾ ರೋಗಗಳು ಮತ್ತು ಸಮಸ್ಯೆಗಳು ಕೊನೆಗೊಳ್ಳುತ್ತವೆ.