Asianet Suvarna News Asianet Suvarna News

New Year 2023 Astrology: ಹೊಸ ವರ್ಷಕ್ಕೆ ನಿಮ್ಮ ಅದೃಷ್ಟ ಬದಲಿಸಲಿದೆ ಈ ಸಂಖ್ಯೆ

ಪ್ರತಿ ರಾಶಿಯವರಿಗೂ ಅದೃಷ್ಟ ಸಂಖ್ಯೆಯಿರುತ್ತದೆ. ಪ್ರತಿ ಕಾರ್ಯದಲ್ಲಿ ಅದೃಷ್ಟ ಸಂಖ್ಯೆ ಬಳಸಿದ್ರೆ ಪ್ರಯೋಜನ ಹೆಚ್ಚು. ಜಾತಕ, ವ್ಯಕ್ತಿತ್ವ ಮತ್ತು ಭಾವನೆಗಳ ಜೊತೆ ಸಂಖ್ಯೆ ನಿಕಟ ಸಂಬಂಧ ಹೊಂದಿರುತ್ತವೆ. ಹೊಸ ವರ್ಷದಲ್ಲಿ ರಾಶಿಗೆ ತಕ್ಕಂತೆ ಸಂಖ್ಯೆ ಬಳಸಿದ್ರೆ ಒಳ್ಳೆಯದು. 
 

Lucky Numbers For All Zodiac Signs In The Year
Author
First Published Nov 29, 2022, 5:55 PM IST

ಪ್ರತಿ ದಿನ ರಾಶಿ ಭವಿಷ್ಯವನ್ನು ನೋಡಿಕೊಂಡು ಅದರಂತೆ ನಡೆಯುವವರಿದ್ದಾರೆ. ಇನ್ನು ಕೆಲವರು ಶುಭ ದಿನವನ್ನು ನಂಬುತ್ತಾರೆ. ಮತ್ತೆ ಕೆಲವರು ಅದೃಷ್ಟ ಸಂಖ್ಯೆಯನ್ನು ನಂಬುತ್ತಾರೆ. ಅದೃಷ್ಟ ಸಂಖ್ಯೆಯ ದಿನಾಂಕದಂದು ಅಥವಾ ಅದೃಷ್ಟ ಸಂಖ್ಯೆಗೆ ತಕ್ಕಂತೆ ಕೆಲಸ ಮಾಡ್ತಾರೆ. ಈ ಅದೃಷ್ಟ ಸಂಖ್ಯೆಗಳು ನಿಮಗೆ ರಕ್ಷಕವಾಗಿ ಕೆಲಸ ಮಾಡುತ್ತದೆ. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗಲು ಅದೃಷ್ಟ ಸಂಖ್ಯೆಯನ್ನು ನಂಬಬೇಕೆಂದು ಸಂಖ್ಯಾಶಾಸ್ತ್ರಜ್ಞರು ಹೇಳ್ತಾರೆ.  ಈ ಅದೃಷ್ಟ ಸಂಖ್ಯೆಗಳು ಧ್ಯಯನ, ಕೆಲಸ ಮತ್ತು ಪ್ರೀತಿ ಜೀವನದಲ್ಲಿ ಗೆಲುವು ಸಾಧಿಸಲು ಸಹಾಯ ಮಾಡುತ್ತದೆ. ಹೊಸ ವರ್ಷದಲ್ಲಿ ಯಾವ ರಾಶಿಗೆ ಯಾವ ಸಂಖ್ಯೆ ಅದೃಷ್ಟ ತರುತ್ತದೆ ಎಂಬುದನ್ನು ಸಂಖ್ಯಾಶಾಸ್ತ್ರಜ್ಞರು ಹೇಳಿದ್ದಾರೆ. 

ಮೇಷ ರಾಶಿ : ಮೇಷ ರಾಶಿಗೆ ಅದೃಷ್ಟ (Good Luck) ಸಂಖ್ಯೆ 7 ಮತ್ತು 9. ಬೆಸ ಸಂಖ್ಯೆಗಳು ಮೇಷ ರಾಶಿಯವರಿಗೆ ಅದೃಷ್ಟ ತರುತ್ತದೆ.  ಸಮ (Even) ಸಂಖ್ಯೆಗಳು ಇವರಿಗೆ ಅದೃಷ್ಟ ತರುವುದಿಲ್ಲ. ಯಶಸ್ವಿಯಾಗಲು ಮತ್ತು ಬಲಶಾಲಿಯಾಗಲು ಮೇಷ ರಾಶಿಯವರು 7 ಮತ್ತು 9 ಸಂಖ್ಯೆ ಬಳಸಬೇಕು. 

ವೃಷಭ ರಾಶಿ : ವೃಷಭ ರಾಶಿಯವರಿಗೆ ಅದೃಷ್ಟದ ಸಂಖ್ಯೆ 6. ಈ ಆರನೇ ಸಂಖ್ಯೆಯು ಚೀನೀ (Chinese) ಸಂಸ್ಕೃತಿಯಲ್ಲಿ ಇತರ ಮಂಗಳಕರ ಅರ್ಥಗಳನ್ನು ಹೊಂದಿದೆ. ಈ ಸಂಖ್ಯೆ, ಜನರ ತೃಪ್ತಿ ಮತ್ತು ನೆಮ್ಮದಿಗೆ ಕಾರಣವಾಗುತ್ತದೆ.   

ಮಿಥುನ ರಾಶಿ : ಮಿಥುನ ರಾಶಿಯವರ ಅದೃಷ್ಟ ಸಂಖ್ಯೆ 5. ಈ ಸಂಖ್ಯೆ ಗೌರವ, ಯಶಸ್ಸು, ಸಂಪತ್ತು ಮತ್ತು ಶಕ್ತಿಯೊಂದಿಗೆ ಸಂಬಂಧಿಸಿದೆ. ಮಿಥುನ ರಾಶಿಯವರಿಗೆ ಈ ಸಂಖ್ಯೆ ವೃತ್ತಿಜೀವನ (Career) ದಲ್ಲಿ ಮುನ್ನಡೆಯಲು, ಶಿಕ್ಷಣವನ್ನು ಪಡೆಯಲು ನೆರವಾಗುತ್ತದೆ.   

ಕರ್ಕ ರಾಶಿ : ಕರ್ಕ ರಾಶಿಯವರ ಅದೃಷ್ಟ ಸಂಖ್ಯೆ  2 ಮತ್ತು 6. ಇದು  ತುಂಬಾ ಪ್ರಯೋಜನಕಾರಿಯಾಗಿದೆ.   

ಸಿಂಹ ರಾಶಿ : 2023ರಲ್ಲಿ ಸಿಂಹ ರಾಶಿಯವರ ಅದೃಷ್ಟದ ಸಂಖ್ಯೆ 7 ಆಗಿರುತ್ತದೆ. ಸಿಂಹ ಬೆಂಕಿಯನ್ನು ಪ್ರತಿನಿಧಿಸುತ್ತದೆ.  2023 ರಲ್ಲಿ ಸಿಂಹ ರಾಶಿಯವರಿಗೆ ಸಂಖ್ಯೆ 7 ಹೆಚ್ಚು ಪ್ರಯೋಜನ ನೀಡಲಿದೆ. ಈ ರಾಶಿಯವರಿಗೆ ಚೈತನ್ಯ ನೀಡಲಿದೆ.   

ಕನ್ಯಾ ರಾಶಿ :  ಕನ್ಯಾ ರಾಶಿಯವರ ಅದೃಷ್ಟ ಸಂಖ್ಯೆ 1, 6 ಮತ್ತು 7.  ಈ ಸಂಖ್ಯೆ ಒಂದು ಶಾಂತ ಮತ್ತು ಸ್ಥಿರತೆಯನ್ನು ಪ್ರತಿನಿಧಿಸುತ್ತದೆ.  ಕನ್ಯಾ ರಾಶಿಯವರಿಗೆ ಈ ಸಂಖ್ಯೆಗಳು ಹೊಸ ವರ್ಷ ಶುಭ ಫಲ ನೀಡಲಿದೆ.

ತುಲಾ ರಾಶಿ : ತುಲಾ ರಾಶಿಯವರ ಅದೃಷ್ಟ ಸಂಖ್ಯೆ 8 ಮತ್ತು 10. ಇದು ತುಲಾ ರಾಶಿಯವರ ಗೊಂದಲಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ. ನಿರ್ಧಾರ ತೆಗೆದುಕೊಳ್ಳುವ ವೇಗವನ್ನು ಹೆಚ್ಚಿಸುತ್ತದೆ. ಸಂಖ್ಯೆ 8 ಸಮತೋಲನ, ಸಂಪತ್ತು, ಯಶಸ್ಸು ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ.  

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರ ಅದೃಷ್ಟ ಸಂಖ್ಯೆ 1 ಮತ್ತು 3. ಗ್ರಹದ ಅತ್ಯಂತ ಶಾಂತ ಚಿಹ್ನೆ  ವೃಶ್ಚಿಕ ರಾಶಿಯಾಗಿದೆ.  ಜೀವನದಲ್ಲಿ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. 

ಧನು ರಾಶಿ : ಧನು ರಾಶಿಯವರ ಅದೃಷ್ಟ ಸಂಖ್ಯೆ 3. 2023ರಲ್ಲಿ ಧನು ರಾಶಿ ಶೌರ್ಯ, ಗಮನ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ.   

ಮಕರ ರಾಶಿ : ಮಕರ ರಾಶಿಯ ಅದೃಷ್ಟ ಸಂಖ್ಯೆಗಳು 3, 4 ಮತ್ತು 9. ಈ ಮೂರು ಸಂಖ್ಯೆಗಳು ಮಕರ ರಾಶಿಯವರಿಗೆ ಬಲ ನೀಡಲಿದೆ.  ಸಂಖ್ಯೆ 3 ಬುದ್ಧಿವಂತಿಕೆ ಮತ್ತು ಶೌರ್ಯಕ್ಕೆ ಹೆಸರುವಾಸಿಯಾಗಿದೆ. 4 ಮತ್ತು 9 ಸಂಖ್ಯೆಗಳು ಸಾಮರಸ್ಯವನ್ನು ಪ್ರತಿನಿಧಿಸುತ್ತವೆ. ಸಂಖ್ಯೆ 9 ಸಹ ಶಾಶ್ವತತೆ, ದೀರ್ಘಾಯುಷ್ಯವನ್ನು ಪ್ರತಿನಿಧಿಸುತ್ತದೆ.  

ಕರ್ಪೂರವನ್ನು ಈ ರೀತಿ ಬಳಸಿದ್ರೆ, ಜೀವನ ಬದಲಾಗುತ್ತೆ ನೋಡಿ!

ಕುಂಭ ರಾಶಿ : ಕುಂಭ ರಾಶಿಯವರಿಗೆ 22 ಅದೃಷ್ಟ ಸಂಖ್ಯೆಯಾಗಿದೆ.  ಎರಡು ಅಂಕಿಯ ಸಂಖ್ಯೆ ಕುಂಭ ರಾಶಿಯವರಿಗೆ ಅದೃಷ್ಟ ತರಲಿದೆ. ಈ ಸಂಖ್ಯೆಯು ಎರಡು ಪ್ರತ್ಯೇಕ ಜೀವನವನ್ನು ನಡೆಸಲು ನಿಮಗೆ ಸಲಹೆ ನೀಡುತ್ತದೆ. ಒಂದು ಸಮಾಜಕ್ಕಾಗಿ ಮತ್ತು ಇನ್ನೊಂದು ನಿಮ್ಮ ಕುಟುಂಬಕ್ಕೆ.   

Astrology Tips: ಈ ರಾಶಿಯವರು ಅಪ್ಪಿತಪ್ಪಿಯೂ ಕೆಂಪು ತಿಲಕ ಹಚ್ಬೇಡಿ

ಮೀನ ರಾಶಿ : 2023ರಲ್ಲಿ ಮೀನ ರಾಶಿಯವರ ಅದೃಷ್ಟ ಸಂಖ್ಯೆ 0 ಮತ್ತು 9. ಈ ಸಂಖ್ಯೆಯನ್ನು ಮೀನ ರಾಶಿಯವರು ಹೆಚ್ಚು ಬಳಸಬೇಕು. ಈ ಅದೃಷ್ಟ ಸಂಖ್ಯೆಗಳು ಮೀನ ರಾಶಿಯವರಿಗೆ ಪ್ರಯೋಜನವನ್ನು ನೀಡುತ್ತದೆ. ಸಂತೋಷದಿಂದ ಬದುಕಲು ಅನುವು ಮಾಡಿಕೊಡುತ್ತದೆ. 

Follow Us:
Download App:
  • android
  • ios