Astrology Tips: ಈ ರಾಶಿಯವರು ಅಪ್ಪಿತಪ್ಪಿಯೂ ಕೆಂಪು ತಿಲಕ ಹಚ್ಬೇಡಿ
ಹಿಂದೂ ಶಾಸ್ತ್ರದಲ್ಲಿ ಜೀವನಕ್ಕೆ ಬೇಕಾದ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಗ್ರಹ, ರಾಶಿ ಹಾಗೂ ಬಣ್ಣದ ಬಗ್ಗೆಯೂ ವಿವರಿಸಲಾಗಿದೆ. ಎಲ್ಲ ರಾಶಿಯವರು ಎಲ್ಲ ಬಣ್ಣ ಬಳಸುವಂತಿಲ್ಲ. ಬಣ್ಣದ ತಿಲಕ ಇಡುವಾಗ್ಲೂ ನಾವು ರಾಶಿ, ಗ್ರಹಗಳ ಬಗ್ಗೆ ತಿಳಿಯಬೇಕಾದ ಅಗತ್ಯವಿದೆ.
ಹಿಂದೂ ಧರ್ಮದಲ್ಲಿ ಹಣೆಯ ಮೇಲೆ ತಿಲಕ ಇಡುವುದನ್ನು ಮಂಗಳಕರವೆಂದು ಭಾವಿಸಲಾಗಿದೆ. ಹಣೆಯ ಮೇಲೆ ತಿಲಕ ಹಚ್ಚುವುದ್ರಿಂದ ಧನಾತ್ಮಕತೆ ಹೆಚ್ಚಾಗುತ್ತದೆ. ಅಲ್ಲದೆ ಜಾತಕದಲ್ಲಿರುವ ಉಗ್ರ ಗ್ರಹಗಳು ಶಾಂತವಾಗಿತ್ತವೆ ಎಂದು ನಂಬಲಾಗಿದೆ. ಹಿಂದೂ ಧರ್ಮದಲ್ಲಿ ಕೆಂಪು ತಿಲಕವನ್ನು ಮಾತ್ರವಲ್ಲದೆ ಗಂಧದ ತಿಲಕ, ಅರಿಶಿನದ ತಿಲಕ ಇಡುವುದನ್ನು ಶುಭವೆಂದು ಪರಿಗಣಿಸಲಾಗಿದೆ. ಕೆಂಪು ತಿಲಕವನ್ನು ಸಾಮಾನ್ಯವಾಗಿ ಶುಭ ಸಂದರ್ಭಗಳಲ್ಲಿ, ವಿಶೇಷ ಹಬ್ಬಗಳಲ್ಲಿ ಹಚ್ಚಿಕೊಳ್ಳಲಾಗುತ್ತದೆ.
ಕೆಂಪು (Red) ತಿಲಕ (Tilaka) ಹಚ್ಚುವುದರಿಂದ ವ್ಯಕ್ತಿತ್ವದಲ್ಲಿ ಸಾತ್ವಿಕತೆ ಪ್ರತಿಫಲಿಸುತ್ತದೆ. ಕೆಂಪು ಮಂಗಳಕರ ಹೌದು. ಹಾಗಂತ ಎಲ್ಲರಿಗೂ ಎಲ್ಲ ಬಣ್ಣ (Color), ತಿಲಕ ಆಗಿ ಬರುವುದಿಲ್ಲ. ಅದ್ರಿಂದ ಕೆಲ ತೊಂದರೆ ಎದುರಾಗುತ್ತದೆ. ಹಿಂದೂ ಶಾಸ್ತ್ರಗಳಲ್ಲಿ ತಿಲಕವನ್ನು ಯಾರು, ಎಲ್ಲಿ ಇಡಬೇಕು ಎಂಬುದನ್ನು ಹೇಳಿದ್ದಾರೆ. ಹಾಗೆಯೇ ಕೆಂಪು ತಿಲಕವನ್ನು ಯಾರು ಇಡಬಾರದು ಹಾಗೂ ಯಾಕೆ ಇಡಬಾರದು ಎಂಬುದನ್ನು ಕೂಡ ಹೇಳಿದ್ದಾರೆ.
ಯಾರು ಕೆಂಪು ತಿಲಕ ಹಚ್ಚಬಾರದು ಗೊತ್ತಾ?: ನಮ್ಮ ಜೀವನದಲ್ಲಿ ಬಣ್ಣಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಗ್ರಹಗಳೊಂದಿಗೆ ಬಣ್ಣಗಳ ಸಂಬಂಧವನ್ನು ಜ್ಯೋತಿಷ್ಯ (Astrology) ದಲ್ಲಿ ಹೇಳಲಾಗಿದೆ. ರಾಶಿ ಮತ್ತು ಗ್ರಹಗಳ ಚಲನೆಯ ಮೇಲೆ ನಮ್ಮ ಜೀವನದ ಸಂತೋಷ ಮತ್ತು ದುಃಖವನ್ನು ನಾವು ಅನುಭವಿಸುತ್ತೇವೆ. ಇದೇ ರೀತಿ ಗ್ರಹಗಳಿಗೆ ಸಂಬಂಧಿಸಿದ ಬಣ್ಣಗಳು ಸಹ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತವೆ.
ಶನಿಗೆ ಇಷ್ಟವಾಗೋದಿಲ್ಲ ಕೆಂಪು ಬಣ್ಣ: ಶನಿ ಹೆಸರು ಕೇಳಿದ್ರೆ ಭಯವಾಗುತ್ತದೆ. ಶನಿ ಕೆಂಡಕಾರಿದ್ರೆ ಆಪತ್ತು ನಿಶ್ಚಿತ. ಶನಿ ನೀಡುವ ಸಮಸ್ಯೆಯಿಂದ ಹೊರ ಬರುವುದು ಸುಲಭವಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಮತ್ತು ಮಂಗಳ ಗ್ರಹಗಳು ಶತ್ರಗಳು ಎನ್ನಲಾಗುತ್ತದೆ. ಶನಿ ಕಪ್ಪು ಬಣ್ಣವನ್ನು ಪ್ರೀತಿಸುತ್ತಾನೆ. ಶನಿಗೆ ಕೆಂಪು ಬಣ್ಣ ಇಷ್ಟವಿಲ್ಲ. ಕೆಂಪು ಬಣ್ಣವು ಮಂಗಳನ ಬಣ್ಣವಾಗಿದೆ. ಮಕರ ಮತ್ತು ಕುಂಭ ರಾಶಿಯ ಒಡೆಯ ಶನಿಯಾಗಿರುತ್ತಾನೆ. ಶನಿ ಅದಿಪತಿಯಾಗಿರುವ ಕುಂಭ ಹಾಗೂ ಮಕರ ರಾಶಿಯವರಿಗೆ ಕೆಂಪು ಬಣ್ಣ ಶುಭವಲ್ಲ. ಈ ರಾಶಿಯವರು ಎಂದೂ ಕೆಂಪು ಬಣ್ಣದ ತಿಲಕವನ್ನು ಹಚ್ಚಿಕೊಳ್ಳಬಾರದು. ಶನಿಯ ಕೋಪದಿಂದ ರಕ್ಷಿಸಿಕೊಳ್ಳಬೇಕು ಎನ್ನುವವರು ಯಾವುದೇ ಕಾರಣಕ್ಕೂ ಕೆಂಪು ತಿಲಕವನ್ನು ಹಚ್ಚಬೇಡಿ.
ಪ್ರೇಮಿಗೆ ಗಿಫ್ಟ್ ಕೊಟ್ಟು ಇಂಪ್ರೆಸ್ ಮಾಡೋದ್ರಲ್ಲಿ ಈ ರಾಶಿಯವರು ಎತ್ತಿದ ಕೈ!
ಈ ರಾಶಿಗೆ ಆಗಿ ಬರಲ್ಲ ಕೆಂಪು ತಿಲಕ: ಜ್ಯೋತಿಷ್ಯದ ಪ್ರಕಾರ, ಕೆಂಪು ಬಣ್ಣ ಮಂಗಳ ಗ್ರಹಕ್ಕೆ ಸಂಬಂಧಿಸಿದೆ. ಕೆಂಪು ಬಣ್ಣವನ್ನು ಅತ್ಯಂತ ಶಕ್ತಿಶಾಲಿ ಬಣ್ಣವೆಂದು ಪರಿಗಣಿಸಲಾಗುತ್ತದೆ. ಮಂಗಳ ಗ್ರಹವನ್ನು ಧೈರ್ಯ ಮತ್ತು ಶಕ್ತಿಯ ಗ್ರಹವೆಂದು ನಂಬಲಾಗಿದೆ. ಹಾಗೆ ಮಂಗಳ ಗ್ರಹವನ್ನು ಕ್ರೂರ ಗ್ರಹವೆಂದೂ ಕರೆಯಲಾಗುತ್ತದೆ. ಮಂಗಳಕ್ಕೆ ಸಂಬಂಧಿಸಿದ ಕೆಂಪು ಬಣ್ಣ ಉತ್ಸಾಹ ಮತ್ತು ಕೋದ್ರವನ್ನು ತೋರಿಸುತ್ತದೆ. ಮಂಗಳ ಗ್ರಹ ಮೇಷ ಮತ್ತು ವೃಶ್ಚಿಕ ರಾಶಿಯ ಅದಿಪತಿಯಾಗಿದ್ದಾನೆ. ಮಂಗಳ ಗ್ರಹ ಈ ರಾಶಿ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಮಂಗಳನ ಬಣ್ಣ ಕೆಂಪು. ಹಾಗಾಗಿ ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ ಕೆಂಪು ಬಣ್ಣ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ರಾಶಿಯವರು ಕೆಂಪು ತಿಲಕವನ್ನು ಹಚ್ಚುವುದು ಒಳ್ಳೆಯದು.
VIVAH PANCHAMI REMEDIES: ಮದುವೆಗೆ ಅಡಚಣೆಗಳೇ ಮುಗಿಯುತ್ತಿಲ್ಲವೇ? ಈ ದಿನ ಈ ಕೆಲ್ಸ ಮಾಡಿ
ಆದ್ರೆ ಮೇಷ ಮತ್ತು ವೃಶ್ಚಿಕ ರಾಶಿಯವರ ಜಾತಕದಲ್ಲಿ ಮಂಗಳ ಗ್ರಹ ನೀಚ ಸ್ಥಾನದಲ್ಲಿದ್ದರೆ ಅಂಥವರ ಉತ್ಸಾಹ ಮತ್ತು ಕೋಪ ಹೆಚ್ಚುತ್ತದೆ. ಅಂತಹವರಿಗೆ ಕೆಂಪು ಬಣ್ಣ ಶುಭವಲ್ಲ. ಜಾತಕದಲ್ಲಿ ಮಂಗಳ ಯಾವ ಸ್ಥಾನದಲ್ಲಿದ್ದಾನೆ ಎಂಬುದು ಮಹತ್ವ ಪಡೆಯುತ್ತದೆ. ಮಂಗಳ ಗ್ರಹ ನೀಚ ಸ್ಥಾನದಲ್ಲಿದ್ದಾಗ ಕೆಂಪು ಬಣ್ಣ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಹಾಗಾಗಿ ಇವರು ಕೆಂಪು ಬಣ್ಣವನ್ನು ಬಳಸಬಾರದು. ಕೆಂಪು ಬಣ್ಣದ ತಿಲಕವನ್ನು ಇಡಬಾರದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ಮತ್ತು ವೃಶ್ಚಿಕ ರಾಶಿಯವರು ಈ ಸಂದರ್ಭಗಳಲ್ಲಿ ಕೆಂಪು ತಿಲಕವನ್ನು ಹಚ್ಚಿದ್ರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.