Tulsi Vivah 2026: ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ಪೂಜೆಯನ್ನು ಅಥವಾ ತುಳಸಿ ವಿವಾಹವನ್ನು ಆಚರಿಸಲಾಗುತ್ತದೆ. ಈ ಶುಭ ದಿನದಂದು ತುಳಸಿ ಮಾತೆ ಮತ್ತು ಭಗವಾನ್ ವಿಷ್ಣುವಿನ ಸ್ವರೂಪವೆಂದು ಪರಿಗಣಿಸಲಾಗುವ ಸಾಲಿಗ್ರಾಮ ಶಿಲೆಯ ನಡುವೆ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಲಾಗುತ್ತದೆ. ಈ ವರ್ಷ ಈ ದಿನ ಯಾವಾಗ ಬರುತ್ತೆ ತಿಳಿಯಿರಿ.

ತುಳಸಿ ಪೂಜೆ 2026: ಯಾವಾಗ ಆಚರಣೆ?

ಪ್ರತಿ ವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ದೇವಿ ಮತ್ತು ಭಗವಾನ್ ವಿಷ್ಣುವಿನ ಸ್ವರೂಪವಾದ ಸಾಲಿಗ್ರಾಮ ಶಿಲೆಯ ಪೂಜೆವನ್ನು ನೆರವೇರಿಸಲಾಗುತ್ತದೆ. ಈ ಧಾರ್ಮಿಕ ಆಚರಣೆಯನ್ನು ತುಳಸಿ ಪೂಜೆ ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ತುಳಸಿ ಪೂಜೆಗೆ ವಿಶೇಷ ಮಹತ್ವವಿದೆ. ದೇಶಾದ್ಯಂತ ಭಕ್ತರು ಮನೆಗಳಲ್ಲಿ ಹಾಗೂ ದೇವಸ್ಥಾನಗಳಲ್ಲಿ ಮದುವೆಯ ಸಂಭ್ರಮದಂತೆ ತುಳಸಿ ಪೂಜೆಯನ್ನು ಆಚರಿಸುತ್ತಾರೆ. ಈ ದಿನ ಅನೇಕರು ಉಪವಾಸ ವ್ರತವನ್ನೂ ಆಚರಿಸುತ್ತಾರೆ. ವಿಶೇಷವಾಗಿ ಬ್ರಜ್ ಪ್ರದೇಶದಲ್ಲಿ ತುಳಸಿ ಪೂಜೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.

ತುಳಸಿ ಪೂಜೆ 2026 ದಿನಾಂಕ ಯಾವಾಗ?

ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯಂದು ತುಳಸಿ ಪೂಜೆ ಆಚರಿಸಲಾಗುತ್ತದೆ. 2026ರಲ್ಲಿ ದ್ವಾದಶಿ ತಿಥಿಯು ನವೆಂಬರ್ 21ರ ಬೆಳಗ್ಗೆ 6:31ಕ್ಕೆ ಆರಂಭವಾಗಲಿದ್ದು, ನವೆಂಬರ್ 22ರ ಬೆಳಗ್ಗೆ 4:56ಕ್ಕೆ ಮುಕ್ತಾಯವಾಗಲಿದೆ. ಉದಯ ತಿಥಿಗೆ ಹೆಚ್ಚಿನ ಮಹತ್ವ ನೀಡುವ ಹಿನ್ನೆಲೆಯಲ್ಲಿ ನವೆಂಬರ್ 21, 2026ರ ಶನಿವಾರದಂದು ತುಳಸಿ ಪೂಜೆಯನ್ನು ಆಚರಿಸಲಾಗುತ್ತದೆ. ಈ ದಿನ ಭಕ್ತರು ಉಪವಾಸ ವ್ರತ ಆಚರಿಸುವುದರ ಜೊತೆಗೆ ತುಳಸಿ ಗಿಡ ಮತ್ತು ಸಾಲಿಗ್ರಾಮ ಶಿಲೆಯ ಪೂಜೆದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.

ತುಳಸಿ ಪೂಜೆ 2026 ಶುಭ ಮುಹೂರ್ತ

ತುಳಸಿ ಪೂಯಂದು ವಿವಾಹ ಮತ್ತು ವಿವಾಹದ ಆಚರಣೆಗಳನ್ನು ನೆರವೇರಿಸಲು ಪ್ರದೋಷ ಕಾಲ ಅತ್ಯಂತ ಶುಭ ಸಮಯವೆಂದು ಪರಿಗಣಿಸಲಾಗುತ್ತದೆ. 2026ರ ತುಳಸಿ ಪೂಜೆಯ ಪ್ರಮುಖ ಶುಭ ಮುಹೂರ್ತಗಳ ವಿವರ ಇಲ್ಲಿದೆ.

  • ಪ್ರದೋಷ ಕಾಲ: ಸಂಜೆ 5:25ರಿಂದ 7:49ರವರೆಗೆ.
  • ಬ್ರಹ್ಮ ಮುಹೂರ್ತ: ಬೆಳಗ್ಗೆ 4:40ರಿಂದ 5:30ರವರೆಗೆ.
  • ಅಭಿಜಿತ್ ಮುಹೂರ್ತ: ಮಧ್ಯಾಹ್ನ 11:42ರಿಂದ 12:28ರವರೆಗೆ.
  • ಗೋಧೂಳಿ ಮುಹೂರ್ತ: ಸಂಜೆ 5:25ರಿಂದ 6:13ರವರೆಗೆ.

ಈ ಶುಭ ಸಮಯದಲ್ಲಿ ತುಳಸಿ ಮಾತೆಗೆ ಮತ್ತು ಸಾಲಿಗ್ರಾಮ ಶಿಲೆಗೆ ಪೂಜೆ ಸಲ್ಲಿಸಿ ವಿವಾಹದ ವಿಧಿವಿಧಾನಗಳನ್ನು ನೆರವೇರಿಸಬಹುದು.

ತುಳಸಿ ಪೂಜಾ ವಿಧಾನ ಹೇಗೆ?

  • ಮೊದಲು ಮನೆಯ ಅಂಗಳ, ತುಳಸಿ ಕಟ್ಟೆ ಅಥವಾ ವೃಂದಾವನವನ್ನು ಥವಾ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ. ಅಲ್ಲಿ ಒಂದು ಮಣೆಯನ್ನು ಇರಿಸಿ ಅದರ ಮೇಲೆ ಸಣ್ಣದೊಂದು ತುಳಸಿ ಗಿಡವನ್ನು ಪ್ರತಿಷ್ಠಾಪಿಸಿ.
  • ತುಳಸಿ ಗಿಡದ ಸುತ್ತಲೂ ಮಂಟಪವನ್ನು ನಿರ್ಮಿಸಿ. ಸಾಧ್ಯವಾದರೆ ಹೂವುಗಳು ಮತ್ತು ತಳಿರು ತೋರಣಗಳಿಂದ ಅಲಂಕರಿಸಿ.
  • ತುಳಸಿ ಗಿಡದ ಪಕ್ಕದಲ್ಲಿ ಭಗವಾನ್ ವಿಷ್ಣುವಿನ ಸ್ವರೂಪವಾದ ಸಾಲಿಗ್ರಾಮ ಶಿಲೆಯನ್ನು ಪ್ರತಿಷ್ಠಾಪಿಸಿ. ಸಾಲಿಗ್ರಾಮ ಶಿಲೆ ಇಲ್ಲದಿದ್ದರೆ ವಿಷ್ಣುವಿನ ವಿಗ್ರಹ ಅಥವಾ ಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಬಹುದು.
  • ತುಳಸಿ ಮಾತೆ ಮತ್ತು ಸಾಲಿಗ್ರಾಮ ಶಿಲೆಗೆ ಅರಿಶಿನ, ಕುಂಕುಮ, ಚಂದನ, ಹೂವು ಮತ್ತು ಹಣ್ಣುಗಳನ್ನು ಅರ್ಪಿಸಿ ಪೂಜೆ ಮಾಡಿ.
  • ದೀಪ ಮತ್ತು ಧೂಪವನ್ನು ಬೆಳಗಿಸಿ ಪೂಜಿಸಿ, ವಿವಾಹ ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ. ಈ ಸಂದರ್ಭದಲ್ಲಿ ಮಂಗಳಗೀತೆಗಳನ್ನು ಹಾಡಬಹುದು.
  • ಕೊನೆಯಲ್ಲಿ ತುಳಸಿ ಮಾತೆ ಮತ್ತು ಭಗವಾನ್ ವಿಷ್ಣುವಿಗೆ ಆರತಿ ಮಾಡಿ ಪೂಜೆಯನ್ನು ಸಂಪನ್ನಗೊಳಿಸಿ.
  • ಹೀಗೆ ಭಕ್ತಿಯಿಂದ ತುಳಸಿ ಪೂಜೆವನ್ನು ಆಚರಿಸುವ ಮೂಲಕ ದೇವರ ಆಶೀರ್ವಾದ ಪಡೆಯಬಹುದು.