Asianet Suvarna News Asianet Suvarna News

ಮಕರ ರಾಶಿಯವರು ಲವ್ವಲ್ಲಿ ಬಿದ್ದರೆ ಈ ಪ್ರಾಬ್ಲಂ ಗ್ಯಾರಂಟಿ, ನಿಮ್ ರಾಶಿ ಲವ್‌ ಲೈಫ್‌ ಹೇಗಿದೆ?

ಕಳೆದ ಮೂರು ದಿನಗಳಿಂದ ಜಿನು ಜಿನುಗೋ ಮಳೆ ಹನಿ. ದೂರವಿರುವ ಪ್ರೇಮಿಗಳಿಗೆ ವಿರಹ. ಹತ್ತಿರವಿರುವವರಿಗೆ ಸ್ವರ್ಗ. ಇನ್ನೇನು ಕೆಲವೇ ದಿನಗಳಲ್ಲಿ ನ್ಯೂ ಇಯರೂ ಬಂತು. ಹೊಸ ವರ್ಷ ಲವ್ವಲ್ಲಿ ಬಿದ್ದೋರು ಎದ್ದೇಳ್ತಾರ? ಹೇಗಿದೆ ನಿಮ್ಮ ರಾಶಿಯ ಲವ್ ಭವಿಷ್ಯ?

Love horoscope of 4 zodiac
Author
First Published Dec 12, 2022, 12:35 PM IST

ಧನು ರಾಶಿ (Scorpio)
ಧನು ರಾಶಿಯವರು ಈ ವರ್ಷ ತಮ್ಮ ಸಂಬಂಧದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ನೀವು ಅನೇಕ ಅಡೆತಡೆಗಳನ್ನು ಅನುಭವಿಸಬಹುದು. 2023ರ ಆರಂಭದಲ್ಲಿ ರಾಹು ಐದನೇ ಮನೆಯಲ್ಲಿರುತ್ತಾನೆ. ಈ ಸಂದರ್ಭದಲ್ಲಿ, ನೀವು ನಿಮ್ಮ ಪ್ರಿಯತಮೆಗಾಗಿ ಬಹಳಷ್ಟು ಕೆಲಸ ಮಾಡಬೇಕಾದೀತು. ನಿಮ್ಮ ಪ್ರೀತಿಗೆ ಸಂಪೂರ್ಣವಾಗಿ ಬದ್ಧರಾಗಿರಬೇಕಾದ್ದಂತೂ ಅಗತ್ಯ. ಶನಿಯು ಜಾತಕನ ಐದನೇ ಮನೆಯನ್ನು ಜನವರಿ 17, 2023ರಂದು ಮೂರನೇ ಮನೆಯಿಂದ ನೋಡುತ್ತಾನೆ. ಆಗ ರೊಮ್ಯಾನ್ಸ್‌ನಲ್ಲಿ ಒತ್ತಡ ಹೆಚ್ಚುತ್ತದೆ. ಈ ಅವಧಿಯಲ್ಲಿ ಸಂಗಾತಿಗಳೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದುವ ಸಾಧ್ಯತೆಯಿದೆ. ಗುರು, ಮತ್ತು ಅದಕ್ಕೂ ಮೊದಲು, ಸೂರ್ಯನು ನಿಮ್ಮ ಐದನೇ ಮನೆಯಲ್ಲಿ 22 ಏಪ್ರಿಲ್ 2023ರಂದು ಸಾಗುತ್ತಾನೆ. ಇದರ ಪರಿಣಾಮವಾಗಿ ಐದನೇ ಮನೆಯಲ್ಲಿ ಸೂರ್ಯ-ಗುರು-ರಾಹು ಸಂಯೋಗವಾಗುತ್ತದೆ. ನಿಮ್ಮ ಸಂಬಂಧವು ಇದರ ಪರಿಣಾಮಗಳನ್ನು ಅನುಭವಿಸಬಹುದು. ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ಘರ್ಷಣೆಗಳು ಉಲ್ಬಣಗೊಳ್ಳಬಹುದು. ಅಕ್ಟೋಬರ್ ವರೆಗೆ ನೀವು ಈ ಪರಿಸ್ಥಿತಿಯಲ್ಲಿರುವ ಸಾಧ್ಯತೆಯಿದೆ. ರಾಹು ಐದನೇ ಮನೆಯಿಂದ ನಿರ್ಗಮಿಸಿದಾಗ, ಗುರುವಿನ ಅನುಗ್ರಹ ನಿಮ್ಮ ಸಂಬಂಧದ ಮೇಲೆ ಬೀಳುತ್ತದೆ ಮತ್ತು ನೀವು ಹೆಚ್ಚಿನ ಪ್ರೇಮ ಕಾಣುತ್ತೀರಿ. 

ಮಕರ ರಾಶಿ (Sagittarius)
ಮಕರ ರಾಶಿಯವರು ವರ್ಷದ ಆರಂಭದಲ್ಲಿ ತಮ್ಮ ಲವ್‌ ಲೈಫ್‌ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಏಕೆಂದರೆ ಮಂಗಳವು ಐದನೇ ಮನೆಯಲ್ಲಿದೆ. ಇಂತಹ ಸಂದರ್ಭದಲ್ಲಿ, ನಿಮ್ಮ ಸಂಗಾತಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ನೀವು ಶ್ರಮಿಸದಿದ್ದರೆ, ಅವರು ನಿಮ್ಮೊಂದಿಗೆ ಕೋಪಗೊಳ್ಳಬಹುದು. ಸಂಬಂಧದ ಬಿರುಕಿಗೆ ಕಾರಣವಾಗಬಹುದು. ಪರಿಣಾಮವಾಗಿ ಜಾಗರೂಕರಾಗಿರುವುದು ಅತ್ಯಗತ್ಯ. ನಿಮ್ಮ ಸಂಬಂಧವು ಫೆಬ್ರವರಿ 2023ರಿಂದ ಮೇ 2023ರವರೆಗೆ ಅದ್ಭುತವಾಗಿರುತ್ತದೆ. ನಿಮ್ಮ ಸಂಬಂಧದ ನಿಕಟತೆ ಮತ್ತು ಅನ್ಯೋನ್ಯತೆ ಬೆಳೆಯುತ್ತದೆ. ನೀವಿಬ್ಬರೂ ಒಟ್ಟಿಗೆ ಭವಿಷ್ಯದ ಯೋಜನೆಗಳನ್ನು ಮಾಡಬಹುದು. ಸಾಕಷ್ಟು ಆಪ್ತರಾಗಿರಬಹುದು. ಜನವರಿಯಿಂದ ಜುಲೈವರೆಗೆ ನೀವು ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ಉದ್ವಿಗ್ನತೆಗಳು ಅಪಾಯಕಾರಿ ಮಟ್ಟಕ್ಕೆ ಏರಬಹುದು. ಇದು ಸಂಬಂಧದಲ್ಲಿ ಬಿರುಕಿಗೆ ಕಾರಣವಾಗಬಹುದು. ಜೂನ್ ಮತ್ತು ಆಗಸ್ಟ್ ಮತ್ತು ಅಕ್ಟೋಬರ್ ನಡುವೆ ನೀವು ಭಾವಿ ಸಂಗಾತಿಯ ಜತೆಗೆ ಹೆಚ್ಚಿನ ರೊಮ್ಯಾನ್ಸ್‌ ಮಾಡುವ ಸಂಭವನೀಯತೆ ಇದೆ. ಅವಿವಾಹಿತರಾಗಿರುವವರಿಗೆ ಈ ವರ್ಷ ತಮ್ಮ ಆತ್ಮಸಂಗಾತಿಗಳನ್ನು ಹುಡುಕುವ ಉತ್ತಮ ಅವಕಾಶವಿದೆ.

ಕರ್ಕಾಟಕ, ಸಿಂಹ ರಾಶಿಯ ವೃತ್ತಿ ಯಶಸ್ಸಿಗೆ Astrological remedies

ಕುಂಭ ರಾಶಿ (Capricorn)
ಪ್ರೇಮ ಹಾಗೂ ರೊಮ್ಯಾನ್ಸ್‌ ವಿಷಯದಲ್ಲಿ ಕುಂಭ ರಾಶಿಯವರಿಗೆ ಈ ವರ್ಷದ ಆರಂಭವು ಉತ್ತಮವಾಗಿರುತ್ತದೆ. ಸೂರ್ಯ (Sun) ಮತ್ತು ಬುಧರು ಐದನೇ ಮನೆಯ ಮೇಲೆ ಪ್ರಭಾವ ಬೀರುತ್ತಾರೆ. ಇದು ನಿಮ್ಮ ಸಂಬಂಧದಲ್ಲಿ ಅತ್ಯುತ್ತಮ ಸಂವಹನಕ್ಕೆ (Good Communication) ಕಾರಣವಾಗುತ್ತದೆ. ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ನೀವು ಸಾಕಷ್ಟು ಸಂತೋಷಪಡುತ್ತೀರಿ. ಆದರೆ ಮಾರ್ಚ್ 13, 2023ರಂದು ಮಂಗಳನು ಐದನೇ ಮನೆಗೆ ಸಾಗಿದಾಗ, ನಿಮ್ಮ ಸಂಬಂಧದಲ್ಲಿ ತೀವ್ರ ಸಮಸ್ಯೆಗಳು ಉಂಟಾಗಬಹುದು. ಈ ಸಂದರ್ಭದಲ್ಲಿ ನಿಮ್ಮ ಪ್ರಿಯತಮೆಯೊಂದಿಗೆ ಚರ್ಚೆ ಅಥವಾ ಸಂಘರ್ಷದ ಅಪಾಯವೂ ಇದೆ. ಅಂತಹ ಸಮಸ್ಯೆಗಳುಂಟಾದಾಗ ಅವುಗಳನ್ನು ಪರಿಹರಿಸಲು ನೀವು ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಇಲ್ಲದಿದ್ದರೆ, ನಿಮ್ಮ ಸಂಬಂಧವು ಹಾನಿಗೊಳಗಾಗಬಹುದು.

ನಂತರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರೇಮ ಹದವಾಗಿರುತ್ತದೆ. ಮೇ 2023ರಲ್ಲಿ ನಿಮ್ಮ ಪ್ರೀತಿಯ ಜೀವನದಲ್ಲಿ ಸಂತೋಷವನ್ನು ಹೊರತುಪಡಿಸಿ ಬೇರೇನೂ ಇರುವುದಿಲ್ಲ. ಜುಲೈ ಮತ್ತು ಆಗಸ್ಟ್ ನಡುವೆ ಮದುವೆಯ ಪ್ರಸ್ತಾಪ ಮಾಡಬಹುದು. ಸೆಪ್ಟೆಂಬರ್ 2023ರ ಆರಂಭದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ನೀವು ಹೊಸ ಜಾಗಗಳಿಗೆ ಪ್ರವಾಸ ಹೋಗಿ ಪ್ರಣಯದ ಉತ್ಕರ್ಷವನ್ನು ಅನುಭವಿಸಬಹುದು.

ಮೀನ ರಾಶಿ
ಮೀನ ರಾಶಿಯವರು ಈಗ ತಮ್ಮ ಪ್ರೇಮ ವ್ಯವಹಾರಗಳಲ್ಲಿ ಹೆಚ್ಚು ಸಕಾರಾತ್ಮಕ ಫಲಿತಾಂಶಗಳನ್ನು ಹೊಂದಿರುತ್ತಾರೆ. ಐದನೇ ಮನೆಯ ಮೇಲೆ ಶನಿ ಮತ್ತು ಶುಕ್ರನ ಸಂಯೋಜಿತ ಪ್ರಭಾವದಿಂದಾಗಿ ನೀವು ಈ ವರ್ಷ ನಿಮ್ಮ ಸಂಗಾತಿಯಿಂದ ದೂರವಿರಬಹುದು. ಆದರೆ ಪರಸ್ಪರರಲ್ಲಿ ನಂಬಿಕೆ ಬೆಳೆಯುತ್ತದೆ. ಭವಿಷ್ಯದಲ್ಲಿ ನಿಮ್ಮ ಸಂಬಂಧವನ್ನು(Relation) ಮುನ್ನಡೆಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಏಪ್ರಿಲ್ 22, 2023ರಂದು ನಿಮ್ಮ ಚಂದ್ರನ ಚಿಹ್ನೆಯಲ್ಲಿ ನೆಲೆಸಿರುವ ಗುರುವು ನಿಮ್ಮ ಐದನೇ ಮತ್ತು ಒಂಬತ್ತನೇ ಮನೆಗಳನ್ನು ನೋಡುತ್ತಾನೆ. ಅಂತಹ ಸಂದರ್ಭದಲ್ಲಿ, ನೀವು ನಿಜವಾಗಿಯೂ ಯಾರನ್ನಾದರೂ ಮದುವೆಯಾಗಲು (Marriage) ಬಯಸಿದರೆ, ಇದು ನಿಮಗೆ ಪ್ರಪೋಸ್‌ (Propose) ಮಾಡಲು ಅತ್ಯುತ್ತಮ ಕ್ಷಣ.

ಈ ಸಮಯದ ನಂತರ, ನಿಮ್ಮ ಪರಿಸ್ಥಿತಿಗಳು (Situation) ಬದಲಾಗಬಹುದು ಮತ್ತು ನಿಮ್ಮ ಸಂಬಂಧದಲ್ಲಿ ತುಸು ಸಂಘರ್ಷ ಸಂಭವಿಸಬಹುದು. ಮಂಗಳ ಗ್ರಹವು ಮೇ 10, 2023ರಿಂದ ಜುಲೈ 1, 2023ರವರೆಗೆ ಐದನೇ ಮನೆಯಲ್ಲಿರುತ್ತಾನೆ. ಅಂತಹ ಸಂದರ್ಭದಲ್ಲಿ, ಮಂಗಳವು ದುರ್ಬಲವಾದ ಚಿಹ್ನೆಯಲ್ಲಿ ಇರುವುದರಿಂದ ನೀವು ತೀವ್ರ ಎಚ್ಚರಿಕೆ ವಹಿಸಬೇಕು. ಇದು ಪ್ರೇಮ(Love)ದಲ್ಲಿ ಪ್ರತ್ಯೇಕತೆಯ ಸನ್ನಿವೇಶವನ್ನು ಉಂಟುಮಾಡಬಹುದು. ಸಂಬಂಧದಲ್ಲಿ ಜಗಳ, ಭಿನ್ನಾಭಿಪ್ರಾಯಗಳುಂಟಾಗುವ ಅಪಾಯವಿದೆ,. ಆದ್ದರಿಂದ ಎಚ್ಚರಿಕೆಯಿಂದಿರಿ. ನಿಮ್ಮ ಪ್ರೇಮ ಜೀವನ ಆಗಸ್ಟ್ 2023ರಲ್ಲಿ ಮತ್ತೆ ಸಂತೋಷದಿಂದ ಕೂಡಿರುತ್ತದೆ. ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ತುಸು ಸಮಸ್ಯೆಗಳು ಉಂಟಾಗಬಹುದು. ಡಿಸೆಂಬರ್‌ನಲ್ಲಿ ಹೆಚ್ಚು ಪ್ರಣಯವನ್ನು ಕಾಣುತ್ತೀರಿ.

ವೇದಗಳಲ್ಲಿದೆ ಯಶಸ್ಸಿನ ಗುಟ್ಟು.. ನೀವೂ ಗೆಲ್ಬೇಕಾ? ಈ 12 ಸೂತ್ರಗಳನ್ನು ಅಳವಡಿಸಿಕೊಳ್ಳಿ..

Follow Us:
Download App:
  • android
  • ios