ಕರ್ಕಾಟಕ, ಸಿಂಹ ರಾಶಿಯ ವೃತ್ತಿ ಯಶಸ್ಸಿಗೆ Astrological remedies

ಕರ್ಕಾಟಕ ಮತ್ತು ಸಿಂಹ ರಾಶಿಯವರು ಈ ಜ್ಯೋತಿಷ್ಯ ಪರಿಹಾರವನ್ನು ಮಾಡುವುದರಿಂದ ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಬಹುದಾಗಿದೆ.

Astrology Remedy for career success for Cancer and Leo zodiac sign skr

ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ದಕ್ಕಿತೆಂದರೆ ವ್ಯಕ್ತಿಯ ಬದುಕಿನ ಬಹುತೇಕ ಸಮಸ್ಯೆಗಳು ಪರಿಹಾರ ಕಾಣುತ್ತವೆ. ಆದರೆ, ಯಶಸ್ಸು ಎಲ್ಲರಿಗೂ ಸುಲಭವಲ್ಲ, ಅದಕ್ಕೆ ಹಲವಾರು ಅಡೆತಡೆಗಳು ಎದುರಾಗುತ್ತಲೇ ಇರುತ್ತವೆ. ಇಂಥ ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರುವುದು ಜ್ಯೋತಿಷ್ಯ ಪರಿಹಾರ ಮಾರ್ಗಗಳು. ರಾಶಿಚಕ್ರದ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, ಜಾತಕದಲ್ಲಿ ಆಳುವ ಗ್ರಹಗಳು ಬಲಶಾಲಿಯಾಗುತ್ತವೆ. ಇದರಿಂದ ಸ್ಥಳೀಯರಿಗೆ ಅನೇಕ ಅನುಕೂಲಗಳು ದೊರೆಯುತ್ತವೆ.

ರಾಶಿಚಕ್ರದ ಪ್ರಕಾರ ಜ್ಯೋತಿಷ್ಯ ಪರಿಹಾರಗಳು(Astro remedies)
ಜ್ಯೋತಿಷ್ಯದಲ್ಲಿ ಸ್ಥಳೀಯರ ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಯಶಸ್ಸನ್ನು ತಂದುಕೊಡುವ ಅನೇಕ ಪರಿಹಾರಗಳನ್ನು ಉಲ್ಲೇಖಿಸಲಾಗಿದೆ. ವೃತ್ತಿ ಯಶಸ್ಸಿನ ವಿಷಯಕ್ಕೆ ಬಂದಾಗ ಕರ್ಕಾಟಕ ಮತ್ತು ಸಿಂಹ ರಾಶಿಯವರಿಗೆ ಯಾವ ಪರಿಹಾರಗಳು ತುಂಬಾ ಪ್ರಯೋಜನಕಾರಿ ಎಂದು ನಾವು ತಿಳಿದುಕೊಳ್ಳೋಣ.

ಕರ್ಕಾಟಕ ಮತ್ತು ಸಿಂಹ ರಾಶಿ(Cancer and Leo zodiacs)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಕ ರಾಶಿಯ ಅಧಿಪತಿ ಚಂದ್ರ. ಮತ್ತೊಂದೆಡೆ, ಸಿಂಹ ರಾಶಿಯ ಅಧಿಪತಿಯನ್ನು ಸೂರ್ಯ ಗ್ರಹ ಎಂದು ಪರಿಗಣಿಸಲಾಗುತ್ತದೆ. ಕರ್ಕಾಟಕ ರಾಶಿಯವರ ಜಾತಕದಲ್ಲಿ ಚಂದ್ರನು ದುರ್ಬಲ ಸ್ಥಾನದಲ್ಲಿದ್ದರೆ ಮತ್ತು ಸಿಂಹ ರಾಶಿಯ ಜಾತಕದಲ್ಲಿ ಸೂರ್ಯನು ದುರ್ಬಲ ಸ್ಥಾನದಲ್ಲಿದ್ದರೆ, ಅವರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮತ್ತೊಂದೆಡೆ, ಅವರ ರಾಶಿಚಕ್ರದ ಗ್ರಹಗಳು ಅವರ ಜಾತಕದಲ್ಲಿ ಉನ್ನತ ಮನೆಯಲ್ಲಿ ಅಥವಾ ಬಲವಾದ ಸ್ಥಾನದಲ್ಲಿ ಇರುವ ವ್ಯಕ್ತಿ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ.

ವೇದಗಳಲ್ಲಿದೆ ಯಶಸ್ಸಿನ ಗುಟ್ಟು.. ನೀವೂ ಗೆಲ್ಬೇಕಾ? ಈ 12 ಸೂತ್ರಗಳನ್ನು ಅಳವಡಿಸಿಕೊಳ್ಳಿ..

ಜಾತಕದಲ್ಲಿ ಸೂರ್ಯ ಗ್ರಹದ ಮಹತ್ವ(Significance of Sun in horoscope)
ವೈದಿಕ ಜ್ಯೋತಿಷ್ಯದಲ್ಲಿ, ಸೂರ್ಯನನ್ನು ಆತ್ಮದ ಅಂಶವೆಂದು ಪರಿಗಣಿಸಲಾಗುತ್ತದೆ. ಸೂರ್ಯನು ಇತರ ಗ್ರಹಗಳಂತೆ ಹಿಮ್ಮೆಟ್ಟುವುದಿಲ್ಲ. ಮತ್ತು ಸೂರ್ಯನು ಜಾತಕದಲ್ಲಿ ತಂದೆಯನ್ನು ಪ್ರತಿನಿಧಿಸುತ್ತಾನೆ. ಸಿಂಹ ರಾಶಿಯವರಿಗೆ ಸೂರ್ಯನು ಆಳುವ ಗ್ರಹ. ಜಾತಕದಲ್ಲಿ ಸೂರ್ಯನು ಮಂಗಳಕರ ಸ್ಥಳದಲ್ಲಿದ್ದಾಗ, ವ್ಯಕ್ತಿಯು ಅನೇಕ ಪ್ರಯೋಜನಗಳನ್ನು ಹೊಂದುತ್ತಾನೆ.

ಜಾತಕದಲ್ಲಿ ಚಂದ್ರನ ಪ್ರಾಮುಖ್ಯತೆ(Significance of Moon in horoscope)
ಜ್ಯೋತಿಷ್ಯದ ಒಂಬತ್ತು ಗ್ರಹಗಳಲ್ಲಿ, ಚಂದ್ರನು ಸೂರ್ಯನ ನಂತರ ಎರಡನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾನೆ. ಚಂದ್ರನು ಸುಖ-ಶಾಂತಿ, ಆಸ್ತಿ-ಸಂಪತ್ತು ಮತ್ತು ತಾಯಿ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ಚಂದ್ರನ ಸಾಗಣೆಯ ಅವಧಿಯು ಚಿಕ್ಕದಾಗಿದೆ. ಚಂದ್ರ ಗ್ರಹವನ್ನು ಸ್ತ್ರೀ ಗ್ರಹ ಎಂದೂ ಕರೆಯುತ್ತಾರೆ. ಜಾತಕದಲ್ಲಿ ಚಂದ್ರನ ದೋಷವಿದ್ದರೆ ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕರ್ಕಾಟಕ ರಾಶಿಯ ಆಡಳಿತ ಗ್ರಹ ಚಂದ್ರ.

ಚಂದ್ರ ಪರಿಹಾರ(Moon remedies)
ಜ್ಯೋತಿಷ್ಯದಲ್ಲಿ, ಚಂದ್ರ ಗ್ರಹದ ಶಾಂತಿಗಾಗಿ ಅನೇಕ ಪರಿಹಾರಗಳನ್ನು ನೀಡಲಾಗಿದೆ. ಈ ಕ್ರಮಗಳನ್ನು ಮಾಡುವುದರಿಂದ ಜಾತಕದಲ್ಲಿನ ಚಂದ್ರ ದೋಷ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ.ಕರ್ಕಾಟಕ ರಾಶಿಯವರು ಜಾತಕದಲ್ಲಿ ಚಂದ್ರಬಲಕ್ಕಾಗಿ -

ಸೂರ್ಯ ಪರಿಹಾರ(Sun Remedies)
ಸಿಂಹ ರಾಶಿಯವರು ಜಾತಕದಲ್ಲಿ ಸೂರ್ಯನನ್ನು ಬಲಗೊಳಿಸಲು ಸೂರ್ಯನನ್ನು ಬಲಪಡಿಸುವ ಪರಿಹಾರ ಕೈಗೊಳ್ಳಬೇಕು.

  • ಸೂರ್ಯ ದೇವರನ್ನು ಆರಾಧಿಸಿ.
  • ಭಾನುವಾರ ಉಪವಾಸವಿರಲಿ.
  • ಭಾನುವಾರ ಕೆಂಪು ಬಣ್ಣದ ವಸ್ತುಗಳನ್ನು ದಾನ ಮಾಡಿ.
  • ಮುಂಜಾನೆ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ.
  • ಆದಿತ್ಯ ಹೃದಯ ಶ್ಲೋಕ ಪಠಿಸಿ.

    ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
Latest Videos
Follow Us:
Download App:
  • android
  • ios