Asianet Suvarna News Asianet Suvarna News

Hindu Religion: ಲೋಕ ಕಲ್ಯಾಣಕ್ಕಾಗಿ ವಿಷ್ಣು ತಾಳಿದ್ದ ಈ ಎಲ್ಲ ರೂಪ

ವಿಷ್ಣುವಿನ ಬಗ್ಗೆ ಅನೇಕ ಕಥೆಗಳನ್ನು ನಾವು ಕೇಳ್ತೇವೆ. ಬ್ರಹ್ಮಾಂಡವನ್ನು ರಕ್ಷಿಸಲು ವಿಷ್ಣು ಅನೇಕ ಬಾರಿ ವಿವಿಧ ಅವತಾರಗಳನ್ನು ತಾಳಿದ್ದ. ಭಗವಂತ ವಿಷ್ಣು ತನ್ನ ಬುದ್ಧಿವಂತಿಕೆಯಿಂದ ಮಾತ್ರವಲ್ಲ ಅನೇಕ ಬಾರಿ ಮೋಸ ಮಾಡಿಯೂ ಲೋಕ ರಕ್ಷಿಸಿದ್ದಾನೆ. 
 

Lord Vishnu Story
Author
First Published Jan 12, 2023, 4:57 PM IST

ಸೃಷ್ಟಿಯ ಒಳಿತು, ಕೆಡುಕಿಗಾಗಿ ದೇವ ದೇವತೆಯರು, ರಾಕ್ಷಸರು ಭಿನ್ನ ಅವತಾರಗಳನ್ನು, ಲೀಲೆಗಳನ್ನು ಎತ್ತಿದ್ದು ನಮಗೆಲ್ಲ ತಿಳಿದೆ ಇದೆ. ಸುರರನ್ನು ಮೋಸಗೊಳಿಸಲು ಅಸುರರು, ಅಸುರರನ್ನು ಮೋಸಗೊಳಿಸಲು ಸುರರು ಹೀಗೆ ಒಬ್ಬರಿಗೊಬ್ಬರು ಅನೇಕ ತಂತ್ರಗಳನ್ನು, ಮೋಸಗಳನ್ನು ಮಾಡಿದ ಕಥೆಗಳನ್ನು ನಾವು ಪುರಾಣದಲ್ಲಿ ಕೇಳಿದ್ದೇವೆ. ಎಲ್ಲ ದೇವಾನು ದೇವತೆಯರ ಹಾಗೆ ವಿಷ್ಣು ಕೂಡ ಅನೇಕ ರೀತಿಯ ಅವತಾರಗಳನ್ನು ಎತ್ತಿ ರಾಕ್ಷಸರ ಸಂಹಾರ ಮಾಡಿದ್ದಾನೆ. ನಿಮಗೆ ತಿಳಿಯದ ವಿಷ್ಣುವಿನ ಅಂತಹ ಕೆಲವು ರೋಚಕ ವಿಷಯಗಳು ಇಲ್ಲಿವೆ.

ನಾರದ (Narada) ರನ್ನು ವಾನರನನ್ನಾಗಿ ಮಾಡಿದ ವಿಷ್ಣು (Vishnu) : ಒಮ್ಮೆ ಬೃಹ್ಮ ಋಷಿ ನಾರದರಿಗೆ ತಾನು ಸಂಸಾರ ಸಾಗರದ ಮೋಹಗಳನ್ನೆಲ್ಲ ಮೆಟ್ಟಿ ನಿಂತಿದ್ದೇನೆ ಎನ್ನುವ ಅಹಂಕಾರ (Ego) ಬಂದಿತ್ತು. ನಾರದರ ಈ ಅಹಂಕಾರವನ್ನು ಇಳಿಸಲು ವಿಷ್ಣುವು ನಾರದರನ್ನು ವಾನರನನ್ನಾಗಿ ಮಾಡಿದ್ದ. ನಾರದರು ವಿಷ್ಣುವಿನ ಬಳಿ ಬಂದು ನನಗೆ ನಿಮ್ಮದೇ ರೀತಿಯ ಸುಂದರ (Beautiful) ರೂಪವನ್ನು ಕೊಡಿ ಎಂದು ವರ ಕೇಳಿದ. ವಿಷ್ಣುವಿಗೆ ಇನ್ನೊಂದು ಹೆಸರು ಹರಿ. ಹರಿ ಎನ್ನುವ ಶಬ್ದಕ್ಕೆ ವಿಷ್ಣು ಮತ್ತು ವಾನರ ಎಂಬ ಎರಡು ಅರ್ಥವಿದೆ. ಹಾಗಾಗಿ ನಾರದರು ಹರಿಯ ರೂಪವನ್ನು ಕೇಳಿದಾಗ ವಿಷ್ಣುವು ನಾರದರಿಗೆ ಕಪಿಯ ಅಂದರೆ ವಾನರ ರೂಪ ನೀಡಿದ್ದ. ವಿಷ್ಣುವಿನ ಈ ತಂತ್ರಕ್ಕೆ ಕೋಪಗೊಂಡ ನಾರದರು ವಿಷ್ಣುವಿಗೆ ಪತ್ನಿವಿಯೋಗದ ಶಾಪ ನೀಡಿದ್ದರು. ಹಾಗಾಗಿಯೇ ವಿಷ್ಣು ಮುಂದೆ ರಾಮನ ಅವತಾರ ತಾಳಿದ ಎಂದು ಹೇಳಲಾಗುತ್ತದೆ.

ದೀರ್ಘಾಯುಷ್ಯಕ್ಕಾಗಿ ಮಹಾತ್ಮ ವಿದುರನ ಈ ಸಲಹೆಗಳನ್ನು ಅನುಸರಿಸಿ!

ಸ್ತ್ರೀ ರೂಪ ಧರಿಸಿದ್ದ ವಿಷ್ಣು : ಭಸ್ಮಾಸುರನೆಂಬ ರಾಕ್ಷಸ ತನ್ನ ಕಠೋರ ತಪಸ್ಸಿನಿಂದ ಶಿವನನ್ನು ಪ್ರಸನ್ನಗೊಳಿಸಿದ. ಭಸ್ಮಾಸುರ ಶಿವನ ಬಳಿ ತಾನು ಯಾರ ತಲೆಯ ಮೇಲೆ ಕೈ ಇಡುತ್ತೇನೆಯೋ ಅವರು ತಕ್ಷಣವೇ ಭಸ್ಮವಾಗಬೇಕು ಎಂಬ ವರವನ್ನು ಕೇಳಿದ. ಶಿವ ಭಸ್ಮಾಸುರನ ಇಚ್ಛೆಯಂತೆಯೇ ಅವನಿಗೆ ವರ ಕೊಟ್ಟ. ಆದರೆ ಭಸ್ಮಾಸುರ ತನ್ನ ನೀಚ ಬುದ್ಧಿಯನ್ನು ತೋರಿಸಿ ಶಿವನ ತಲೆಯ ಮೇಲೆ ತನ್ನ ಕೈ ಇಡುವ ಪ್ರಯತ್ನ ಮಾಡಿದ. ಭಸ್ಮಾಸುರನ ಆರ್ಭಟಕ್ಕೆ ಹೆದರಿದ ಶಿವ, ವಿಷ್ಣುವಿನ ಬಳಿ ಬಂದು ಸಹಾಯ ಕೇಳಿದ. ಆಗ ವಿಷ್ಣುವು ಸುಂದರವಾದ ಹೆಣ್ಣಿನ ರೂಪ ತಾಳಿ ಭಸ್ಮಾಸುರನನ್ನು ತನ್ನ ಕಡೆ ಸೆಳೆದುಕೊಂಡು ಅವನು ನರ್ತಿಸುವಂತೆ ಮಾಡಿದ. ವಿಷ್ಣುವು ನರ್ತನ ಮಾಡುತ್ತ ಮಾಡುತ್ತ ಭಸ್ಮಾಸುರ ತನ್ನ ತಲೆಯ ಮೇಲೆ ತಾನೇ ಕೈ ಇಡುವಂತೆ ಮಾಡಿದ. ವಿಷ್ಣುವಿನ ಯೋಜನೆಯಂತೆ ಭಸ್ಮಾಸುರ ಅಲ್ಲಿಯೇ ಭಸ್ಮವಾದ.

ವೃಂದಾ ದೇವಿಗೆ ಮೋಸ : ಜಲಂಧರನ ಪತ್ನಿ ವೃಂದಾ ದೇವಿ. ಈಕೆ ವಿಷ್ಣುವಿನ ಭಕ್ತೆ ಮತ್ತು ಪತಿವ್ರತೆ. ಜಲಂಧರ ಒಬ್ಬ ರಾಕ್ಷಸ. ಈ ರಾಕ್ಷಸನ ಕಾಟ ತಾಳಲಾರದೆ ದೇವತೆಗಳು ಕಂಗಾಲಾಗಿದ್ದರು. ಪ್ರತಿ ಬಾರಿ ಜಲಂಧರನನ್ನು ವಧಿಸಲು ಹೋದಾಗಲೂ ವೃಂದಾ ದೇವಿಯ ವಿಷ್ಣು ಭಕ್ತಿ ಅವನನ್ನು ಕಾಪಾಡುತ್ತಿತ್ತು. ಜಲಂಧರನ ವಧೆ ಸಾಧ್ಯವಾಗದೇ ಇದ್ದಾಗ ದೇವತೆಗಳೆಲ್ಲರೂ ವಿಷ್ಣುವಿನ ಸಹಾಯ ಕೇಳಿದರು. ಆಗ ವಿಷ್ಣುವು ಜಲಂಧರನ ವೇಷದಲ್ಲಿ ವೃಂದಾ ದೇವಿಯೊಡನೆ ಪೂಜೆಗೆ ಕುಳಿತ. ಜಲಂಧರನ ಜಾಗದಲ್ಲಿ ವಿಷ್ಣುವು ಪೂಜೆಗೆ ಕುಳಿತ ಕಾರಣ ಜಲಂಧರನ ಶಕ್ತಿಯೆಲ್ಲ ಕಡಿಮೆಯಾಯಿತು. ನಂತರ ಶಿವನು ಜಲಂಧರನ ವಧೆ ಮಾಡಿದ.

ಅಸುರರಿಂದ ಅಮೃತವನ್ನು ರಕ್ಷಿಸಿದ : ಸಮುದ್ರ ಮಂಥನದ ಸಮಯದಲ್ಲಿ ಅಮೃತ ಉದ್ಭವಿಸಿದಾಗ ಅಸುರರು ಅಮೃತವನ್ನು ತೆಗೆದುಕೊಂಡಿದ್ದರು. ಆಗ ವಿಷ್ಣುವು ಮೋಹಿನಿ ರೂಪ ಧರಿಸಿ ದೇವತೆಗಳಿಗೆ ಅಮೃತವನ್ನು ನೀಡಿದ್ದ.

ಊಟದ ಪ್ಲೇಟ್‌ ಹೀಗಿದ್ದರೆ ಆರೋಗ್ಯ ಸಿದ್ಧಿ! ಜ್ಯೋತಿಷ್ಯ ಹೇಳೋದೇನು?

ಶುಕ್ರಾಚಾರ್ಯರಿಗೆ ಪಾಠ ಕಲಿಸಿದ ವಿಷ್ಣು : ವಾಮನ ಅವತಾರದಲ್ಲಿದ್ದ ವಿಷ್ಣುವು ಬಲಿರಾಜನ ಬಳಿ ಭೂಮಿಯನ್ನು ಕೇಳುವ ಸಮಯದಲ್ಲಿ ಶುಕ್ರಾಚಾರ್ಯರು ವಿಷ್ಣುವನ್ನು ಗುರುತಿಸಿ, ವಿಷ್ಣುವಿನ ಉದ್ದೇಶವನ್ನೂ ತಿಳಿದರು. ವಿಷ್ಣುವಿನ ಉದ್ದೇಶ ನೆರವೇರಬಾರದು, ಜಲಪಾತ್ರೆಯಿಂದ ನೀರು ಹೊರಬರಬಾರದೆಂದು ಶುಕ್ರಾಚಾರ್ಯರು ಬಲಿರಾಜನ ಜಲಪಾತ್ರೆಯಲ್ಲಿ ಅಡಗಿ ಕೂತರು. ಬಲಿರಾಜ ನೀರನ್ನು ಅರ್ಪಿಸಿ ದಾನ ಕೊಡಬೇಕಾದ ಸಂದರ್ಭದಲ್ಲಿ ನೀರು ಹೊರಬರಲಿಲ್ಲ. ಆಗ ವಿಷ್ಣುವು ಒಂದು ಹುಲ್ಲುಕಡ್ಡಿಯಿಂದ ಶುಕ್ರಾಚಾರ್ಯರ ಕಣ್ಣನ್ನು ತೆಗೆದ. ನಂತರ ಜಲಪಾತ್ರೆಯಿಂದ ನೀರು ಬಂತು. ಹೀಗೆ ಮಾಡಿದ ವಿಷ್ಣು ಬಲಿರಾಜನಿಂದ ಮೂರು ಲೋಕವನ್ನೂ ಪಡೆದ. 
 

Follow Us:
Download App:
  • android
  • ios