Asianet Suvarna News Asianet Suvarna News

ಊಟದ ಪ್ಲೇಟ್‌ ಹೀಗಿದ್ದರೆ ಆರೋಗ್ಯ ಸಿದ್ಧಿ! ಜ್ಯೋತಿಷ್ಯ ಹೇಳೋದೇನು?

ನಿಮ್ಮ ಜನ್ಮರಾಶಿ, ದೇಹಸ್ವಭಾವ, ಮನೆಯ ವಾಸ್ತು, ಎಲ್ಲವೂ ನಿಮ್ಮ ಊಟದ ಪ್ಲೇಟ್‌ ಹೇಗಿರಬೇಕು ಎಂಬುದನ್ನು ನಿರ್ಧರಿಸುತ್ತವೆ. ಹಾಗಾದರೆ ಆರೋಗ್ಯಕಾರಿ ಊಟದಲ್ಲಿ ಯಾವ್ಯಾವ ಪದಾರ್ಥ ಎಲ್ಲೆಲ್ಲಿ, ಹೇಗಿರಬೇಕು?

Food items for each Zodiac sign
Author
First Published Jan 12, 2023, 1:29 PM IST

ನಮ್ಮ ಜ್ಯೋತಿಷ್ಯ, ವಾಸ್ತು ಮತ್ತು ಆಯುರ್ವೇದದಲ್ಲಿ ಆಹಾರದ ಅನೇಕ ನಿಯಮಗಳನ್ನು ನೀಡಲಾಗಿದೆ. ಆ ನಿಯಮಗಳನ್ನು ಪಾಲಿಸದಿದ್ದರೆ ತೊಂದರೆಗೆ ಸಿಲುಕುತ್ತೇವೆ. ಆಹಾರವನ್ನು ಬಡಿಸಲು ಅದರದ್ದೇ ಆದ ನಿಯಮಗಳಿವೆ. ಸರಿಯಾದ ಕ್ರಮವನ್ನು ಫಾಲೋ ಮಾಡಿದರೆ ಲಾಭ ಖಂಡಿತವಾಗಿಯೂ ದೊರಕುತ್ತದೆ.

ಊಟದ ತಟ್ಟೆಯನ್ನು ಇಡುವ ಮುನ್ನ ನೆಲದ ಮೇಲೆ ನೀರಿನಿಂದ ವೃತ್ತವನ್ನು ಬರೆಯಲಾಗುತ್ತದೆ. ಮತ್ತು ಅದರ ಮೇಲೆ ಒಂದು ತಟ್ಟೆಯನ್ನು ಇರಿಸಲಾಗುತ್ತದೆ ಅಥವಾ ನೆಲದ ಮೇಲೆ ತಟ್ಟೆಯನ್ನು ಇರಿಸಲಾಗುತ್ತದೆ. ಇದು ಊಟದ ತಟ್ಟೆಗೆ ಅನಾರೋಗ್ಯಕಾರಿ ಕ್ರಿಮಿಗಳ ಪ್ರವೇಶವನ್ನು ತಡೆಯುತ್ತದೆ. ಕ್ರಿಮಿಗಳು ಬರುವುದು ದುಷ್ಟ ಶಕ್ತಿಗಳಿಂದ. ಇವುಗಳನ್ನು ತಡೆಯಲು ಆಚಮನ ಮಂತ್ರ ಗೊತ್ತಿದ್ದರೆ ಸೂಕ್ತ. ಇಲ್ಲದಿದ್ದರೂ ಪರವಾಗಿಲ್ಲ.

ಊಟದ ತಟ್ಟೆಯ ಮಧ್ಯದಲ್ಲಿ ಅನ್ನ, ಪುಲಾವ್, ಹಲ್ವಾ ಇತ್ಯಾದಿಗಳನ್ನು ಬಡಿಸಬೇಕು. ಯಾಕೆಂದರೆ ಅದು ಮುಖ್ಯ ಆಹಾರ. ತಟ್ಟೆಯ ಎಡಭಾಗದಲ್ಲಿ ಜಗಿಯಬಹುದಾದ (ಪಲ್ಯದಂಥ) ಆಹಾರ ಪದಾರ್ಥಗಳನ್ನು ಇರಿಸಿ. ತಟ್ಟೆಯ ಬಲಭಾಗದಲ್ಲಿ ತುಪ್ಪವನ್ನು ಹೊಂದಿರುವ ಪದಾರ್ಥವನ್ನು ಬಡಿಸಬೇಕು. ತಟ್ಟೆಯ ಮೇಲ್ಭಾಗದಲ್ಲಿ ಚಿಟಿಕೆ ಉಪ್ಪು ಇರಬೇಕು. ಅದು ಹೆಚ್ಚೂ ಇರಬಾರದು, ಕಡಿಮೆಯೂ ಇರಬಾರದು. ಉಪ್ಪಿನ ಎಡಕ್ಕೆ ನಿಂಬೆ, ಉಪ್ಪಿನಕಾಯಿ, ತೆಂಗಿನಕಾಯಿ ಚಟ್ನಿ, ಇತರ ಚಟ್ನಿಗಳನ್ನು ಬಡಿಸಿ. ಎಡಭಾಗದಲ್ಲಿ ಮಜ್ಜಿಗೆ, ಖೀರ್, ಉದ್ದಿನಬೇಳೆ, ತರಕಾರಿ, ಸಲಾಡ್ ಇತ್ಯಾದಿಗಳನ್ನು ಬಡಿಸಬಹುದು.

Hindu Marriage: ದೇವರ ಸ್ಥಾನದಲ್ಲಿರುವ ಅಕ್ಕಿಯನ್ನು ವಧು ಹಿಂದೆ ಚೆಲ್ಲೋದೇಕೆ?

ಪ್ಲೇಟ್‌ನಲ್ಲಿ ಎಂದಿಗೂ ಮೂರು ರೊಟ್ಟಿ, ಪರಾಠ ಅಥವಾ ಪೂರಿಗಳನ್ನು ಬಡಿಸಬೇಡಿ. ತಟ್ಟೆಯ ಬಲಭಾಗದಲ್ಲಿ ಒಂದು ಲೋಟ ನೀರನ್ನು ಕಡ್ಡಾಯವಾಗಿ ಇಡಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಆಹಾರದ ತಟ್ಟೆಯು ಹಿತ್ತಾಳೆ ಅಥವಾ ಬೆಳ್ಳಿಯದ್ದಾಗಿರಬೇಕು. ಸ್ಟೇನ್‌ಲೆಸ್‌ ಸ್ಟೀಲ್‌ ಅನಿವಾರ್ಯವಾದರೆ ಬಳಸಬಹುದು. ಇಲ್ಲದಿದ್ದರೆ ಬಾಳೆಲೆ, ಮುತ್ತುಗದ ಎಲೆಯಂಥ ಊಟಕ್ಕೆ ಯೋಗ್ಯವಾದ ಎಲೆಗಳ ಮೇಲೆ ಸೇವಿಸಿ. ಕುಡಿಯಲು ಬಳಸುವ ನೀರಿನ ಲೋಟವು ಗಾಜು ಅಥವಾ ತಾಮ್ರವಾಗಿರಬೇಕು.

ಆಹಾರವನ್ನು ತೆಗೆದುಕೊಳ್ಳುವ ಮೊದಲು, ಹಸು, ನಾಯಿ ಮತ್ತು ಕಾಗೆ ಅಥವಾ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಹೆಸರಿನಲ್ಲಿ ಊಟದ ಚಿಕ್ಕ ಮೂರು ಭಾಗಗಳನ್ನು ತೆಗೆದುಕೊಂಡು ತಟ್ಟೆಯಲ್ಲಿ ಪ್ರತ್ಯೇಕವಾಗಿ ಇಡಬೇಕು. ಹಾಗೆಯೇ ಕೈ ಮುಗಿದು ಅನ್ನಪೂರ್ಣೇಶ್ವರಿಯನ್ನು ನೆನೆದು ಆಹಾರವನ್ನು ಸೇವನೆ ಮಾಡಬೇಕು. ಪಾಯಸ ಅಥವಾ ಖೀರು ಇದ್ದರೆ ಮೊದಲು ಅದನ್ನು ಸೇವಿಸಬೇಕು. ಉಪಪಿನಕಾಯಿಯನ್ನು ಮೊದಲ ತುತ್ತಿನಲ್ಲಿ ಸೇವಿಸಬಾರದು. ಊಟದ ನಂತರ ಒಂದೆರಡು ಗುಟುಕು ನೀರು ಕುಡಿಯಬಹುದು, ಹೆಚ್ಚು ಕುಡಿಯಬಾರದು.

ಅಂಗಡಿಯಿಂದ ತಂದ ಇತರ ವಸ್ತುಗಳನ್ನು ಊಟದ ನಡುವೆ ಸೇವಿಸುವುದು ವಿಹಿತವಲ್ಲ. ಊಟ ಅತಿ ಬಿಸಿಯಾಗಿಯೂ, ಅತಿ ತಣ್ಣದಾಗಿಯೂ ಇರಕೂಡದು. ಮಧ್ಯಮ ಬಿಸಿಯ ಊಟ(Meal) ಆರೋಗ್ಯಕ್ಕೆ ಉತ್ತಮ.

ನಿಮಗೆ ಜ್ಯೋತಿಷ್ಯದ ಮೇಲೆ ನಂಬಿಕೆ ಇರಲಿ ಬಿಡಲಿ, ಇಂಥಾ ಕೆಲವು ಅಂಶಗಳನ್ನು ರೂಢಿಸಿಕೊಂಡರೆ ಅದರಿಂದ ಕಳೆದುಕೊಳ್ಳೋದು ಏನೂ ಇಲ್ಲ. ಬದಲಿಗೆ ನಮ್ಮ ಆರೋಗ್ಯ ವೃದ್ಧಿಸುತ್ತದೆ. ಮುಖ, ದೇಹದಲ್ಲಿ ಆರೋಗ್ಯವಂತ ಕಳೆ ಎದ್ದು ಕಾಣುತ್ತದೆ. ಈ ರೀತಿ ನಮ್ಮ ಊಟ ಉತ್ತಮ ರೀತಿಯಾಗಿದ್ದರೆ ನಿಮ್ಮ ದಿನಚರಿಯೂ ಚೆನ್ನಾಗಿರುತ್ತದೆ, ಮಾಡುವ ಕೆಲಸದ ಮೇಲೆ ಏಕಾಗ್ರತೆ(Concentration) ವೃದ್ಧಿಸುವುದು ಸಾಧ್ಯವಾಗುತ್ತದೆ. ಮನೆ ಮಂದಿಯೊಂದಿಗೆ ಬೆರೆಯುವುದು, ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸುವುದು ಸಾಧ್ಯವಾಗುತ್ತದೆ.

ನಮ್ಮ ಆಹಾರ ಪದ್ಧತಿ ಚೆನ್ನಾಗಿದ್ದರೆ ಬದುಕು(Life) ಚೆನ್ನಾಗಿರುತ್ತದೆ. ಆರೋಗ್ಯ ಚೆನ್ನಾಗಿದ್ದರೆ ಮನಸ್ಸು ದೇಹ ಚುರುಕಾಗುತ್ತದೆ. ಇದು ನಮ್ಮ ಬದುಕಿನ ಅಭಿವೃದ್ಧಿಗೆ(Development) ಪೂರಕ. ಬದುಕಿನಲ್ಲಿ ಏಳಿಗೆ ಹೊಂದುವುದು ಸಾಧ್ಯವಾಗುತ್ತದೆ. ಇಂಥಾ ವಿಧಾನವನ್ನು ಬದುಕಿನಲ್ಲಿ ಅಳವಡಿಸಿಕೊಂಡಷ್ಟು ಉತ್ತಮ.

ಜನವರಿಯಲ್ಲಿ ಹುಟ್ಟಿದವ್ರು ಉತ್ತಮ ಪ್ರೇಮಿಯಾಗಬಲ್ಲರು, ಕಾರಣ ಏನ್ ಗೊತ್ತಾ?

Follow Us:
Download App:
  • android
  • ios