ವಿಜ್ಞಾನ ಹಾಗೂ ನಂಬಿಕೆ ಸಮಾಗಮವನ್ನು ಪುರಿ ಜಗನ್ನಾಥನ ಸನ್ನಿಧಾನದಲ್ಲಿ ನೋಡಲು ಸಾಧ್ಯವಿದೆ. ಪುರಿ ಜಗನ್ನಾಥ ರಥ ಯಾತ್ರೆ ಆರಂಭಕ್ಕೂ ಮುನ್ನ ವೈದ್ಯರ ತಂಡ ಪುರಿ ಜಗನ್ನಾಥನ ಆರೋಗ್ಯ ತಪಾಸಣೆ ಮಾಡಿದ್ದಾರೆ. ಏನಿದು ಸಂಪ್ರದಾಯ, ಯಾಕೆ ತಪಾಸಣೆ ಮಾಡುತ್ತಾರೆ.

ಪುರಿ (ಜು.16) ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಭಕ್ತರ ನಂಬಿಕೆ ಪ್ರಧಾನ. ಪುರಿ ಜಗನ್ನಾಥನ ಸನ್ನಿಧಾನದಲ್ಲಿ ಪ್ರತಿ ವರ್ಷ ರಥಯಾತ್ರೆಗೂ ಮುನ್ನ ವೈದ್ಯರ ತಂಡ ಜಗನ್ನಾಥನ ಆರೋಗ್ಯ ತಪಾಸಣೆ ಮಾಡಲಿದೆ. ವೈದ್ಯರ ತಂಡ ಗರ್ಭಗುಡಿಯೊಳಗೆ ಪ್ರವೇಶಿಸಿ ಜಗನ್ನಾಥನ ಆರೋಗ್ಯ ತಪಾಸಣೆ ಮಾಡಲಿದೆ. ಈ ಬಾರಿಯೂ ರಥಯಾತ್ರೆಗೂ ಮುನ್ನ ವೈದ್ಯರ ತಂಡ ಭಕ್ತಿಪೂರ್ವಗಿ ಪೂಜೆ ಸಲ್ಲಿಸಿ ಆರೋಗ್ಯ ತಪಾಸಣೆ ಮಾಡಿದೆ. ಇದೇ ವೇಳೆ ವೈದ್ಯರು ಪುರಿ ಜಗನ್ನಾಥ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಘೋಷಿಸಿದ್ದಾರೆ.

ಪುರಿ ಜಗನ್ನಾಥ ಮಂದಿರದೊಳಗಿರುವ ಮೂರ್ತಿಗಳು ಕೇವಲ ದೇವರ ಮೂರ್ತಿಗಳಲ್ಲ ಭಕ್ತರ ಪಾಲಿಗೆ ನಿಜವಾದ ಪುರಿ ಜಗನ್ನಾಥ . ಭಕ್ತರ ಕಷ್ಟಗಳನ್ನೇ ಕೇಳಿಸಿಕೊಂಡು ಪರಿಹಾರ ನೀಡುವ ಜೀವಂತ ಜಗನ್ನಾಥ. ಆದರೆ ಆರೋಗ್ಯ ತಪಾಸಣೆ ಹಿಂದೆ ವಿಶೇಷ ಕಾರಣವಿದೆ. ಅಪರೂಪ ಹಾಗೂ ವಿಶೇಷ ಈ ಭಕ್ತಿ ಹಾಗೂ ವಿಜ್ಞಾನ ಸಂಗಮದ ಹಿಂದೆ ಪುರಾಣತ ಕತೆಯೊಂದಿದೆ.

ಪುರಿ ಜಗನ್ನಾಥನ ಆರೋಗ್ಯ ತಪಾಸಣೆ ಹಿಂದಿನ ನಂಬಿಕೆ

ಪುರಿ ಜಗನ್ನಾಥನ ರಥ ಯಾತ್ರೆ ಇಂದಿನಿಂದ ಆರಂಭಗೊಂಡಿದೆ. ಜಗನ್ನಾಥನ ರಥಯಾತ್ರೆಗೂ 15 ದಿನ ಮೊದಲು ಸ್ನಾನ ಪೂರ್ಣಿಮಾ ನಡೆಯಲಿದೆ. ಜಗನ್ನಾಥ ಸ್ನಾನ ಪೂರ್ಣಿಣ ವಿಧಿವಿಧಾನದ ಬಳಿಕ ಜ್ವರ ಬರುತ್ತದೆ ಎಂಬುದು ಪುರಾಣದ ನಂಬಿಕೆ. ಜ್ವರದ ಕಾರಣ 15 ದಿನಗಳ ಕಾಲ ದರ್ಶನದಿಂದ ದೂರ ಉಳಿಯುತ್ತಾನೆ. 15 ದಿನಗಳ ಬಳಿಕ ವೈದ್ಯರು ಆರೋಗ್ಯವಾಗಿದ್ದರೆ ಎಂದ ಬಳಿಕವೇ ರಥ ಯಾತ್ರೆಗೆ ಚಾಲನೆ ಸಿಗಲಿದೆ. ಹೀಗೆ ಸ್ನಾನ ಪೂರ್ಣಿಮಾದ ಬಳಿಕ 15 ದಿನ ದರ್ಶನದಿಂದ ದೂರ ಉಳಿದಿದ್ದ ಪುರಿ ಜಗನ್ನಾಥನ ಆರೋಗ್ಯ ತಪಾಸಣೆಯನ್ನು ವೈದ್ಯರ ತಂಡ ಮಾಡಿದೆ. ವೈದ್ಯರು ಪುರಿ ಜಗನ್ನಾಥ ಆರೋಗ್ಯವಾಗಿದ್ದಾರೆ ಅನ್ನೋ ಅಧಿಕೃತ ಮಾಹಿತಿಯನ್ನು ಗಜಪತಿ ಮಹಾರಾಜರಿಗೆ ಅಧಿಕೃತವಾಗಿ ತಲುಪಿಸಲಾಗುತ್ತದೆ. ಬಳಿಕ ರಥಯಾತ್ರೆಗೆ ಚಾಲನೆ ನೀಡಲಾಗುತ್ತದೆ.

ಸ್ಟೆತಸ್ಕೋಪ್ ಹಿಡಿದು ದೇವರ ಎದೆಬಡಿತ ಪರೀಕ್ಷೆ

ಪುರಿ ಜಗನ್ನಾಥನ ಮಂದಿರದಲ್ಲಿ ಕೆಲ ಆಚರಣೆಗಳು ಅಚ್ಚರಿ ತರುವುದು ನಿಜ. ಈ ಪೈಕಿ ವೈದ್ಯರ ತಂಡ ಗರ್ಭಗುಡಿಯೊಳಗೆ ಬಂದು ಸ್ಟೆತಸ್ಕೋಪ್ ಹಿಡಿದು ದೇವರ ಎದೆಬಡಿತ ಪರೀಕ್ಷಿಸುತ್ತಾರೆ. ವೈದ್ಯರು ಪುರಿ ಜಗನ್ನಾಥ ಆರೋಗ್ಯವಾಗಿದ್ದಾನೆ ಎಂದ ಬಳಿಕವಷ್ಟೇ ಮುಂದಿನ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ವೈದ್ಯರು ಪುರಿ ಜಗನ್ನಾಥನ ಆರೋಗ್ಯ ತಪಾಸಣೆ ಮಾಡಿ ವರದಿ ನೀಡುತ್ತಿದ್ದಂತೆ ಭಕ್ತರು ಸಂಭ್ರಮಿಸಿದ್ದಾರೆ.ಟ

ಪುರಿ ಜಗನ್ನಾಥನನ್ನು ಕೇವಲ ದೇವರ ಮೂರ್ತಿ ಎಂದು ಭಕ್ತರು ಪರಿಗಣಿಸುವುದಿಲ್ಲ. ಆತನನ್ನು ಸಹೋದರನಂತೆ, ಮಾರ್ಗದರ್ಶಕನಂತೆ, ಮನೆಯ ಹಿರಿಯ ಸದಸ್ಯನಂತೆ ಕಾಣುತ್ತಾರೆ. ಅಷ್ಟೇ ಕಾಳತಿ ಪ್ರೀತಿ ತೋರುತ್ತಾರೆ.