ಇಂದಿನಿಂದ ಪುರಿ ಜಗನ್ನಾಥ ಉತ್ಸವ ಯಾತ್ರೆ ಆರಂಭ, ರಥ ಎಳೆಯುವ ನಿಯಮವೇನು? ಆಧ್ಯಾತ್ಮಿಕ ಮಹತ್ವ
ಧಾರ್ಮಿಕವಾಗಿ ಅತ್ಯಂತ ಮಹತ್ವದ ಹಾಗೂ ಐತಿಹಾಸಿ ಹಿನ್ನಲೆಯುಳ್ಳ ಪುರಿ ಜಗನ್ನಾಥ ರಥ ಯಾತ್ರೆ ಇಂದಿನಿಂತ ಆರಂಭಗೊಂಡಿದೆ. ರಥ ಯಾತ್ರೆ ಎಳೆಯಲು ಕೆಲ ನಿಯಮಗಳಿವೆ, ಭಾರತವೇ ಪಾಲ್ಗೊಳ್ಳುವ ಈ ರಥಯಾತ್ರೆ ವಿಶೇಷತೆ ಏನು?

ಪುರಿ ಜಗನ್ನಾಥನ ರಥ ಯಾತ್ರೆ ಆರಂಭ
ಪುರಿ ಜಗನ್ನಾಥ ರಥಾ ಯಾತ್ರೆ ಭಾರತದ ಅತ್ಯಂತ ಪವಿತ್ರ ಹಾಗೂ ಧಾರ್ಮಿಕ ಹಿನ್ನೆಲೆಯುಳ್ಳ ಉತ್ಸವವಾಗಿದೆ. ಜಗತ್ ಪ್ರಸಿದ್ಧ ಹಾಗೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ರಥ ಯಾತ್ರೆಗಳಲ್ಲಿ ಪುರಿ ಜಗನ್ನಾಥ ಉತ್ಸವ ಕೂಡ ಒಂದಾಗಿದೆ. ಇಂದು (ಜು.16) ಪುರಿ ಜಗನ್ನಾಥ ರಥ ಯಾತ್ರೆ ಆರಂಭಗೊಂಡಿದೆ. ಜುಲೈ 27ರ ವರೆಗೆ ರಥ ಯಾತ್ರೆ ನಡೆಯಲಿದೆ.
ಪುರಿ ಜಗನ್ನಾಥ ರಥ ಯಾತ್ರೆ ವೇಳಾಪಟ್ಟಿ
- ಜುಲೈ 16: ರಥ ಯಾತ್ರೆ
- ಜುಲೈ 20: ಹೇರಾ ಪಂಚಮಿ
- ಜುಲೈ 24: ಬಹುದ ಯಾತ್ರ (ಮರಳಿ ರಥಯಾತ್ರೆ)
- ಜುಲೈ 25: ಸುನಾ ಬೆಶಾ
- ಜುಲೈ 26: ಅಧರ ಪನಾ
- ಜುಲೈ 27: ನೀಲಾದ್ರಿ ಬಿಜೆ
ಪುರಿ ಜಗನ್ನಾಥನ ರಥ ಯಾತ್ರೆಯ ಪುರಾಣವೇನು?
ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಬಿದಿಗೆಯಂದು ಭಗವಾನ್ ಜಗನ್ನಾಥ ತನ್ನ ಸೋದರ ಬಲಭದ್ರ ಮತ್ತು ತಂಗಿ ಸುಭದ್ರೆಯೊಂದಿಗೆ ರಥವನ್ನೇರಿ ತೆರಳುತ್ತಾನೆ. ಜಗನ್ನಾಥ, ಗುಂಡಿಚಾ ದೇವಸ್ಥಾನದಲ್ಲಿರುವ ತನ್ನ ಸೋದರಸಂಬಂಧಿಯ ಮನೆಗೆ ಪ್ರಯಾಣ ಬೆಳೆಸುತ್ತಾನೆ. ಭಕ್ತಿ, ಜಾನಪದ ಕಲೆ ಮತ್ತು ಅಪಾರ ಜನಾಂಗೀಯ ನಂಬಿಕೆಗಳ ಸಮ್ಮಿಲನವಾಗಿದೆ.
ಮೂರು ರಥಗಳ ವಿಶೇಷತೆ ಏನು?
ಪುರಿ ಜಗನ್ನಾಥ ರಥದಲ್ಲಿ ಮೂರು ರಥಗಳಿವೆ. ಮೊದಲು ಬಲಭದ್ರನ ತಾಳಧ್ವಜ ರಥ, ಬಳಿ ತಂಗಿ ಸುಭದ್ರೆ. ದರ್ಪದಲನ ರಥ, ಹೊಗೂ ಭಗವನಾನ್ ಜಗನ್ನಾಥನ ನಂದಿಘೋಷ ರಥ ಸಾಗುತ್ತದೆ. ಪುರಿ ಜಗನ್ನಾಥನ ರಥ ಯಾತ್ರೆ ಫೋಟೋ ವಿಡಿಯೋಗಳಲ್ಲಿ ಮೂರು ರಥಗಳನ್ನು ಕಾಣಬಹುದು.
ರಥ ಎಳೆಯುವ ನೀತಿ ನಿಯಮಗಳೇನು?
ಈ ಮೂರು ಪವಿತ್ರ ರಥಗಳನ್ನು ಎಳೆಯಲು ಶಂಖಚೂಡ ಎಂದು ಕೆರುಯವ ವಿಶೇಷ ತಂಗಿನ ನಾರಿನ ದಪ್ಪ ಹಾಗೂ ಬಲಿಷ್ಠ ಹಗ್ಗಗಳನ್ನು ಬಳಸಲಾಗುತ್ತದೆ. ಈ ಹಗ್ಗವನ್ನು ಮುಟ್ಟುವುದೇ ಪುಣ್ಯದ ಕೆಲಸ ಎಂಬ ನಂಬಿಕೆ ಇದೆ. ಹಗ್ಗವನ್ನು ಹಿಡಿದು, ರಥ ಎಳೆಯುವುದು ಮಹಾ ಪುಣ್ಯದ ಕೆಲಸ ಎಂದು ಭಕ್ತರ ನಂಬಿಕೆ. ರಥ ಎಳೆಯುವಾಗ ಭಕ್ತರು ಪಾದರಕ್ಷಣೆ ಧರಿಸುವಂತಿಲ್ಲ. ಭಕ್ತಿ ಜಯಘೋಷಗಳನ್ನು ಮಾತ್ರ ಕೂಗಬೇಕು. ಬೇರೆ ಯಾವುದೇ ಜಯಘೋಷಗಳು, ವಾಕ್ಯಗಳು ಬಳಸುವಂತಿಲ್ಲ. ಅತ್ಯಂತ ಶಿಸ್ತಿನಿಂದ ರಥದ ಹಗ್ಗ ಎಳೆಯಬೇಕು. ಈ ವೇಳೆ ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತ ಮಂಡಳಿ ಸೂಚಿಸುವ ಮಾರ್ಗಸೂಚಿ ಪಾಲಿಸಬೇಕು.
ಜಗನ್ನಾಥನ ನೋಡಿದರೆ, ಹಗ್ಗ ಎಳೆದರೆ ಪಾಪಗಳಿಂದ ಮುಕ್ತಿ
ಪುರಿ ಜಗನ್ನಾಥನ ರಥ ಯಾತ್ರೆಯಲ್ಲಿ ಪಾಲ್ಗೊಳ್ಳುವುದು, ರಥ ಎಳೆಯುವುದು ಅತ್ಯಂತ ಪವಿತ್ರ. ಜಗನ್ನಾಥನನ್ನು ಕಣ್ತುಂಬ ದರ್ಶನ ಪಡೆದರೆ, ಆತನ ರಥನ ಹಗ್ಗವನ್ನು ಒಂದು ಕ್ಷಣ ಎಳೆದರೆ ಮಾನವು ಜನ್ಮ ಜನ್ಮಾಂತರಗಳ ಪಾಪಗಳಿಂದ ಮುಕ್ತಿ ಪಡೆಯುತ್ತಾನೆ ಎಂಬುದು ಕೋಟ್ಯಾಂತರ ಹಿಂದೂಗಳ ನಂಬಿಕೆಯಾಗಿದೆ.

