Asianet Suvarna News Asianet Suvarna News

ಶ್ರಾವಣದಲ್ಲಿ 'ಶಮಿ ಗಿಡದ ಬಳಿ ದೀಪ' ಬೆಳಗಿಸಿ ಅದೃಷ್ಟ ಪಡೆಯಿರಿ..!

ಶ್ರಾವಣ ಮಾಸದಲ್ಲಿ ಶಮಿ ಎಲೆಗಳನ್ನು ಸಹ ಭಗವಾನ್ ಶಂಕರನಿಗೆ ಅರ್ಪಿಸಲಾಗುತ್ತದೆ. ಹಾಗೂ ಶಮಿ ಗಿಡದ ಬಳಿ ದೀಪ ಬೆಳಗಿಸುವುದರಿಂದ ಅದೃಷ್ಟ ಬರಲಿದೆ. ಈ ಕುರಿತು ಇಲ್ಲಿದೆ ಮಾಹಿತಿ.

Light a lamp near the shami plant in shravan month for good luck suh
Author
First Published Jul 6, 2023, 5:10 PM IST | Last Updated Jul 6, 2023, 5:10 PM IST

ಶ್ರಾವಣ ಮಾಸದಲ್ಲಿ ಶಮಿ ಎಲೆಗಳನ್ನು ಸಹ ಭಗವಾನ್ ಶಂಕರನಿಗೆ ಅರ್ಪಿಸಲಾಗುತ್ತದೆ. ಹಾಗೂ ಶಮಿ ಗಿಡದ ಬಳಿ ದೀಪ ಬೆಳಗಿಸುವುದರಿಂದ ಅದೃಷ್ಟ ಬರಲಿದೆ. ಈ ಕುರಿತು ಇಲ್ಲಿದೆ ಮಾಹಿತಿ.

ಭಗವಾನ್ ಭೋಲೆನಾಥನನ್ನು ಪೂಜಿಸಲು ಶ್ರಾವಣ ಮಾಸ (Shravan month) ವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಪವಿತ್ರ ತಿಂಗಳಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ, ಹಾಲಿನ ಅಭಿಷೇಕ, ರುದ್ರಾಭಿಷೇಕ ಮಾಡುವ ವಿಧಾನವನ್ನು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇದರ ಜೊತೆ ಶಮಿ ಗಿಡ (Shami plant) ದ ಮಹತ್ವ ಕೂಡ ವಿವರಿಸಲಾಗಿದೆ.

ಶಮಿ ಮರದ ಪ್ರಾಮುಖ್ಯತೆಯ ಬಗ್ಗೆ ಚರ್ಚೆಯನ್ನು ರಾಮಾಯಣ, ಮಹಾಭಾರತ  (Mahabharata) ಮತ್ತು ಪುರಾಣಗಳಲ್ಲಿ ಕಂಡುಬರುತ್ತದೆ. ಇದು ಭಗವಾನ್‌ ಶ್ರೀರಾಮನಿಗೂ ಮತ್ತು ಪಾಂಡವರಿಗೂ ಸಂಬಂಧಿಸಿದೆ. ಶಮಿ ಮರವನ್ನು ಕೆಲವು ವಿಶೇಷ ಯಜ್ಞಗಳಲ್ಲಿ ಬಳಸಲಾಗುತ್ತದೆ.

ಶ್ರಾವಣ ಮಾಸದಲ್ಲಿ ಶಮಿ ಗಿಡ (shami plant) ದ ಬಳಿ ದೀಪವನ್ನು ಹಚ್ಚುವುದರಿಂದ ಹಲವಾರು ಲಾಭಗಳನ್ನು ಪಡೆಯಬಹುದು. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.

ಶನಿದೇವನ ಆಶೀರ್ವಾದ ಸಿಗಲಿದೆ 

ಜ್ಯೋತಿಷ್ಯ ಶಾಸ್ತ್ರ (Astrology) ದ ಪ್ರಕಾರ ನಿಮ್ಮ ಮನೆಯಲ್ಲಿ ಶಮಿ ಸಸ್ಯವಿದ್ದರೆ, ಅದು ತುಂಬಾ ಅದೃಷ್ಟ  (good luck) ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂದು ಪರಿಗಣಿಸಲಾಗುತ್ತದೆ. ಶಮಿ ಸಸ್ಯವು ಶನಿ ದೇವರಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ನೀವು ನಿಯಮಿತವಾಗಿ ಶಮಿ ಸಸ್ಯದ ಬಳಿ ದೀಪವನ್ನು ಬೆಳಗಿಸಿದರೆ, ಶನಿಯು ಯಾವಾಗಲೂ ಪ್ರಸನ್ನನಾಗಿರುತ್ತಾನೆ ಮತ್ತು ನಿಮ್ಮ ಜೀವನದಲ್ಲಿ ಸಂತೋಷ (happiness) ವು ಉಳಿಯುತ್ತದೆ.

ಹಿಂದೂ ಧರ್ಮ (Hinduism) ದ ಧಾರ್ಮಿಕ ಗ್ರಂಥಗಳ ಪ್ರಕಾರ, ಶನಿ ಪ್ರಭಾವಕ್ಕೆ ಒಳಗಾದ ವ್ಯಕ್ತಿಯು ತನ್ನ ಮನೆಯಲ್ಲಿ ಶಮಿ ಮರವನ್ನು ನೆಟ್ಟು ಕಾಲಕಾಲಕ್ಕೆ ಪೂಜಿಸಬೇಕು.

ಶಿವನಿಗೆ ಶಮಿ ಎಲೆಗಳನ್ನು ಅರ್ಪಿಸಿ
 
ಶ್ರಾವಣ ಮಾಸದಲ್ಲಿ ಶಿವನಿಗೆ ಶಮಿ ಎಲೆಗಳನ್ನು ಅರ್ಪಿಸುವುದು ಎಂದರೆ ನೀವು ಶಿವನ ನಿಷ್ಠಾವಂತ ಭಕ್ತ (devotee) ಮತ್ತು ದುಷ್ಟ ಮತ್ತು ದುರಾದೃಷ್ಟದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಬಯಸುತ್ತೀರಿ ಎಂದರ್ಥ. ಇದರೊಂದಿಗೆ ಶಮಿ ಎಲೆಗಳನ್ನು ಶಂಕರ ದೇವರಿಗೆ ಅರ್ಪಿಸುವುದರಿಂದ ಅದೃಷ್ಟ ಮತ್ತು ಸಮೃದ್ಧಿ (Prosperity) ಯನ್ನು ತರುತ್ತದೆ.

ಅಧಿಕ ಮಾಸದಲ್ಲಿ ಅಳಿಯನೇ ಸಾಕ್ಷಾತ್ ನಾರಾಯಣ; ಈ ತಿಂಗಳ ಪ್ರಾಮುಖ್ಯತೆ ಏನು?

 

ಶಮಿ ಬಳಿ ದೀಪ ಹಚ್ಚುವುದರಿಂದ ಆಗುವ ಲಾಭಗಳು?

ಶಮಿ ವೃಕ್ಷದ ಬಳಿ ನಿತ್ಯವೂ ದೀಪ ಹಚ್ಚಿದರೆ ಸುಖ (happiness) , ಸಮೃದ್ಧಿ, ಸಂಪತ್ತು (Wealth)  ದೊರೆಯುತ್ತದೆ. ವಾಸ್ತು ದೋಷ  (Vastu Dosha) ನಿವಾರಣೆಯಾಗುತ್ತದೆ. ನಕಾರಾತ್ಮಕ ಶಕ್ತಿಯು ಕರಗುತ್ತದೆ ಮತ್ತು ಧನಾತ್ಮಕ ಶಕ್ತಿ (Positive energy) ಯು ಹರಿಯುತ್ತದೆ. ಅದಲ್ಲದೆ ಶಮಿ ಗಿಡದ ಬಳಿ ದೀಪವನ್ನು ಹಚ್ಚಿದರೆ ಅದೃಷ್ಟ ಬರುತ್ತದೆ.

ಕೇದಾರನಾಥ ದೇಗುಲದ ಮುಂದೆ ತಬ್ಬಿ ಪ್ರೊಪೋಸ್‌ ಮಾಡಿದ ಯುವತಿ: ಇನ್ಮುಂದೆ ಮೊಬೈಲ್‌ ಫೋನ್‌ ಬ್ಯಾನ್‌?

 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios