ಈ ರಾಶಿಯ ಹೆಣ್ಣು ಮಕ್ಕಳನ್ನು ಮದುವೆಯಾದ ಬಡವ ಸಹ ಸಿರಿವಂತನಾಗಬಹುದು!

'ನಾರಿ ಪುಣ್ಯ ಪುರುಷನ ಭಾಗ್ಯ' ಅಂತೊಂದು ಗಾದೆ ಇದೆ. ಅದರಲ್ಲಿಯೂ ಮನೆಯಲ್ಲಿ ಹಿಂದಿನ ಕಾಲದ ಅತ್ತೆ ಇದ್ದರಂತೂ ಹೆಣ್ಣು ಮಕ್ಕಳು ಪದೆ ಪದೇ ಈ ಡೈಲಾಗ್ ಕೇಳುವುದು ತಪ್ಪೋಲ್ಲ. ಅಷ್ಟಕ್ಕೂ ಇದು ಸಂಪೂರ್ಣ ಸತ್ಯವಲ್ಲದೇ ಹೋದರೂ, ಕೆಲವು ರಾಶಿಯವರನ್ನು ವರಿಸಿದರೆ, ಲಕ್ ಕೈ ಕೊಡೋದು ಕಡಿಮೆ. ಅಷ್ಟಕ್ಕೂ ಯಾವ ರಾಶಿಯವರು ಗಂಡನಿಗೆ ಅದೃಷ್ಟ ತರಬಲ್ಲರು?

Libra and Taurus could bring luck to parents and husband

ಕೆಲವರು ಹುಟ್ಟುತ್ತಲೇ ಬೆಳ್ಳಿ ಸ್ಪೂನ್ ಬಾಯಲ್ಲಿಟ್ಟುಕೊಂಡು ಹುಟ್ಟಿರುತ್ತಾರೆ. ಇನ್ನು ಕೆಲವರು ಹುಟ್ಟಿದ ಮೇಲೆ ಅಪ್ಪ-ಅಮ್ಮನಿಗೆ ಅದೃಷ್ಟ ತರುತ್ತಾರೆ. ಆ ಹೆಣ್ಣು ಮಕ್ಕಳು ಹುಟ್ಟಿದ ಕ್ಷಣದಿಂದ, ಮದುವೆಯಾಗಿ ಹೋಗುವವರೆಗೂ ಹುಟ್ಟಿದ ಮನೆಯಲ್ಲಿ ಆರ್ಥಿಕ ಸಂಕಟವೇ ಇರೋಲ್ಲ. ಅಷ್ಟೇ ಅಲ್ಲ, ಆಮೇಲೆ ಸೇರಿದ ಮನೆಯಲ್ಲಿಯೂ ಆ ಹಣ ಸೇರುತ್ತದೆ.  ಕೆಲವು ಹೆಣ್ಣು ಮಕ್ಕಳಂತೂ ಹುಟ್ಟಿದ ಮನೆಗೂ, ಸೇರಿದ ಗಂಡನೆ ಮನೆಯಲ್ಲಿ ಕೀರ್ತಿ ಪತಾಕೆ ಹಾರಿಸಿಬಿಡುತ್ತಾರೆ. ಕಾಲಿಟ್ಟಲ್ಲಿ ಅದೃಷ್ಟ ಅವರ ಕೈ ಹಿಡಿಯುತ್ತೆ. ಕೆಲವು ವಿಶೇಷ ರಾಶಿಗಳಿವೆ. ಅದರಲ್ಲಿಯೂ ತುಲಾ ಮತ್ತು ವೃಷಭ ರಾಶಿಗಳಿಗೆ ಶುಕ್ರ ಅಧಿಪತಿ. ಈ ಎರಡು ರಾಶಿಗಳ ಹೆಣ್ಣು ಮಕ್ಕಳಿಗೆ ಹಾಗೂ ಅವರನ್ನು ಮದುವೆಯಾದವರಿಗೆ ಏನು ಫಲ? ನಾವು ಹೇಳುತ್ತೇವೆ ಕೇಳಿ.

ತುಲಾ (Libra)
ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಸಿಕ್ಕಾಪಟ್ಟೆ ಲಕ್ಕಿ. ಶುಕ್ರದೆಸೆ ಇರುತ್ತದೆ. ತುಲಾ ಲಗ್ನದಲ್ಲಿದ್ದು, ಖಂಡಿತವಾಗಿಯೂ ಅದೃಷ್ಟವಂತರಾಗಿರುತ್ತಾರೆ (Lucky). ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು (Baby Girls) ಬಡವನನ್ನೂ ಮದುವೆಯಾದರೂ ಅವರು ಜೀವನದಲ್ಲಿ ಹಂತಹಂತವಾಗಿ ಮೇಲೇರುತ್ತಾರೆ. ಅದೃಷ್ಟದಿಂದ ಶ್ರೀಮಂತರೂ (Rich) ಆಗುವ ಸಾಧ್ಯತೆ ಇರುತ್ತದೆ. ಅಂದರೆ ಆ ಹೆಣ್ಣಿನಿಂದಲೇ ಅವನು ಲಕ್ಕೇ ಬದಲಾಗುತ್ತೆ. ಬುದ್ಧೀವಂತರೂ (Intelligent) ಆಗಿರುವ ತುಲಾ ರಾಶಿ ಹೆಣ್ಣು ಮಕ್ಕಳು ಅಧ್ಯಯನದಿಂದ ಜ್ಞಾನ (Knowledge) ಗಳಿಸುತ್ತಾರೆ. ಧೈರ್ಯವಂತರು. ಸಾಹಸಪ್ರಿಯರು. ಜೊತೆಗೆ ವಾಹನಗಳ (Vehicles) ಜೊತೆಗೆ ಒಳ್ಳೆಯ ಸಂಬಂಧ ಇರುತ್ತದೆ. ಆಭರಣ ಪ್ರಿಯರು (Jewellery Lovers). ಒಳ್ಳೆಯ ರೂಪವೂ ಇವರದ್ದಾಗಿರುತ್ತದೆ. ಅದ್ಭುತ ಕಲಾವಿದರೂ ಆಗಿರುವ ಚಾನ್ಸ್ ಇರುತ್ತೆ. ಇದಕ್ಕೆ ಕಾರಣ ಶಕ್ತಿಶಾಲಿಯಾದ ಶುಕ್ರ ಗ್ರಹ. ಬಿಳಿ (White) ಬಣ್ಣದ ಈ ಶುಕ್ರ ಗ್ರಹ, ಕಲಾತ್ಮಕ (Artistic) ಹಾಗೂ ಧನಾತ್ಮಕತೆಯಿಂದ ಕೂಡಿರುತ್ತದೆ. ಈ ರಾಶಿಯ ಹೆಣ್ಣು ಮಕ್ಕಳ ರಾಶಿ ಲಗ್ನವೂ  ತುಲಾವಾಗಿದ್ದರೆ, ಅಧಿಪತಿ ಶುಕ್ರನಿದ್ದರೆ ಮದುವೆ ಆಗಿ ಹೋಗುವ ಮನೆಗೆ ಬೇಗ ಲಕ್ಷ್ಮಿ ಸೇರುತ್ತಾಳೆ. ಇವರ ಕಾಲ್ಗುಣದಿಂದ ಪತಿಯ ಮನೆ ಉತ್ತರೋತ್ತರ ಅಭಿವೃದ್ಧಿ ಪಡೆಯುತ್ತದೆ. 

ಅವಾಸ್ತವ, ಅತಿ ರೊಮ್ಯಾಂಟಿಕ್‌ ಪ್ರೀತಿಗಾಗಿ ಹಂಬಲಿಸೋ ಮಂದಿ ಇವ್ರು

ವೃಷಭ ರಾಶಿ (Taurus)
ವೃಷಭ ರಾಶಿ ಹಾಗೂ ಲಗ್ನದಲ್ಲಿ ಶುಕ್ರ ಗ್ರಹವನ್ನು ಹೊಂದಿರುವ ಹೆಣ್ಣು, ತಂದೆ (Father) ಹಾಗೂ ಗಂಡನ (Husband) ಮನೆಗೂ ಅದೃಷ್ಟ ತಂದು ಸುರಿಯುತ್ತಾರೆ. ಇವರು ಹುಟ್ಟಿದ ಕೂಡಲೇ ತಂದೆ ಮನೆಯಲ್ಲಿ ಹಣಕಾಸಿನ ಸಮೃದ್ಧಿ (Prosperity), ಆರೋಗ್ಯ ಕಾಣಬಹುದು. ಕುಟುಂಬದ ಎಲ್ಲರ ಆರೋಗ್ಯವೂ ವೃದ್ಧಿಸುತ್ತದೆ. ನಿಜಕ್ಕೂ ಇವರನ್ನು ಮದುವೆ ಮಾಡಿ ಕಳಿಸಿದರೆ ಲಕ್ಷ್ಮೀದೇವತೆಯನ್ನು ಮನೆಯಿಂದ ಆಚೆಗೆ ಕಳಿಸಿದಂತೆಯೇ.  ಹಾಗೇ, ಇಂಥವರನ್ನು ಮದುವೆಯಾಗುವವರು ಅದೃಷ್ಟವಂತರು. ಇವರ ಮನೆಗೆ ಸೇರಕ್ಕಿ ಒದ್ದು ಒಳಗೆ ಬಂದ ಕ್ಷಣದಿಂದಲೇ, ಆ ಮನೆಯಲ್ಲಿ ಧನಧಾನ್ಯ ತಾಂಡವವಾಡುತ್ತದೆ. ಉಣ್ಣಲು, ಉಡಲು ತೊಂದರೆಯಾಗೋಲ್ಲ. 

ಸುಮ್ಮಸುಮ್ಮನೆ ಇನ್ನೊಬ್ಬರ ತಂಟೆಗೆ ಹೋಗುವ ರಾಶಿಗಳು ತುಲಾ ಮತ್ತು ವೃಷಭವಲ್ಲ. ಆದರೆ, ತಮ್ಮ ತಂಟೆಗೆ ಬಂದವರನ್ನು ಸುಮ್ಮನೆ ಬಿಡುವುದೂ ಇಲ್ಲ. ತಮ್ಮ ಮುಷ್ಟಿಯಲ್ಲಿಯೇ ಪತಿಯರನ್ನು ಹಿಡಿದಿಟ್ಟುಕೊಂಡಿರುತ್ತಾರೆ. ಇವರ ಮುಖದಲ್ಲಿ ಒಂದು ತೇಜಸ್ಸು ಜೊತೆಗೆ ಲಕ್ಷ್ಮೀ ಕಳೆಯೂ ಕಾಮನ್. ಒಣಬೀಜ ಎಡಗೈಯಲ್ಲಿ ಬಿಸಾಡಿದರೂ ಅದು ಹುಟ್ಟಿ ಬೆಳೆದು ಫಲ ಕೊಡುತ್ತದೆ. ಇವರು ಕಾಲಿಟ್ಟ ಗಳಿಗೆ ಸಮೃದ್ಧಿ ತರೋದು ಗ್ಯಾರಂಟಿ. ಇವರನ್ನು ಗಂಡನಾದವನು ಚೆನ್ನಾಗಿ ನೋಡಿಕೊಂಡರೆ ಏಳ್ಗೆ ಕಾಣುತ್ತಾನೆ. ಕಡೆಗಣಿಸಿದರೆ ಅವನತಿಯೂ ಕಟ್ಟಿಟ್ಟ ಬುತ್ತಿ. 

ತಮಗೆ ದ್ರೋಹ ಬಗೆದವರ ಸೇಡು ತೀರಿಸಿಕೊಳ್ಳೋ ರಾಶಿಯವರಿವರು!

 

Libra and Taurus could bring luck to parents and husband

 

Latest Videos
Follow Us:
Download App:
  • android
  • ios