Asianet Suvarna News Asianet Suvarna News

ತಮಗೆ ದ್ರೋಹ ಬಗೆದವರ ಸೇಡು ತೀರಿಸಿಕೊಳ್ಳೋ ರಾಶಿಯವರಿವರು!

ದ್ವೇಷಿಸುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಯಾರಾದರೂ ದ್ರೋಹ ಬಗೆದರೂ ಅವರ ಕುರಿತು ದ್ವೇಷದ ಭಾವನೆ ತಳೆಯಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಹಾಗೆಯೇ, ತಮಗೆ ನೋವು ನೀಡಿದವರನ್ನು ಮರೆಯಲು ಅವರ ತಪ್ಪನ್ನು ಮನ್ನಿಸಲು ಕೆಲವರಿಗೆ ಸಾಧ್ಯವೇ ಆಗುವುದಿಲ್ಲ. ಅಂತಹ ಜನರನ್ನು ಈ ನಾಲ್ಕು ರಾಶಿಗಳಲ್ಲಿ ನೋಡಬಹುದು.
 

Some zodiac signs want revenge for people who have harmed them
Author
Bangalore, First Published Aug 15, 2022, 2:30 PM IST

ಯಾರಾದರೂ ನಿಮಗೆ ನೋವು ನೀಡಿದಾಗ ಏನು ಮಾಡುತ್ತೀರಿ? ಆ ಕ್ಷಣ ಅದನ್ನು ಅನುಭವಿಸಿ, ಆ ಬಳಿಕ ಮರೆತು ಬಿಡುತ್ತೀರಾ? ಅಥವಾ ಅವರು ಮಾಡಿದ ಕೃತ್ಯವೇ ನಿಮ್ಮನ್ನು ಕಾಡುತ್ತಿರುತ್ತದೆಯೇ? ಕೆಲವು ಜನ ತಮಗೆ ನೋವು ನೀಡಿದವರನ್ನು ಬಹಳ ಸುಲಭವಾಗಿ ಮನ್ನಿಸಿ ಬಿಡುತ್ತಾರೆ. ನೋವು ನೀಡಿದ ಸನ್ನಿವೇಶವನ್ನೂ ಮರೆತು, ಮುಂದೆಯೂ ಅವರೊಂದಿಗೆ ಚೆನ್ನಾಗಿಯೇ ಇರುತ್ತಾರೆ. ಆದರೆ, ಕೆಲವರು ಹಾಗಲ್ಲ. ಅವರು ತಮಗೆ ನೋವು ನೀಡಿದವರನ್ನು ಎಂದಿಗೂ ಮರೆಯುವುದಿಲ್ಲ. ಹಾಗೂ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುತ್ತಾರೆ. ತಪ್ಪೆಂದು ಗೊತ್ತಿದ್ದರೂ ಅವರಿಗೆ ಈ ಗುಣ ಬಿಡಲು ಸಾಧ್ಯವಾಗುವುದಿಲ್ಲ. ಅವರದ್ದು ಎಷ್ಟೇ ಚಿಕ್ಕ ತಪ್ಪಾದರೂ ಅದನ್ನು ಮನ್ನಿಸಲು ಅವರ ಮನಸ್ಸು ಒಪ್ಪುವುದಿಲ್ಲ. ಇದು ಕೆಲವರ ಸ್ವಭಾವ. ಈ ಸ್ವಭಾವ ಸಾಮಾನ್ಯವಾಗಿ ನಾಲ್ಕು ರಾಶಿಗಳಲ್ಲಿ ಕಾಣಬಹುದು. ಈ ರಾಶಿಗಳ ಜನ ತಮಗೆ ನೋವು ನೀಡಿದವರನ್ನು ಮನ್ನಿಸುವುದು ಹಾಗಿರಲಿ, ಅವರ ಮೇಲೆ ಸಮಯ ಸಾಧಿಸಿ ಸೇಡು ತೀರಿಸಿಕೊಳ್ಳುತ್ತಾರೆ. ತಿರುಗಿ ನೋವನ್ನೇ ನೀಡುತ್ತಾರೆ ಎಂದಲ್ಲ, ಮಾತಿನಿಂದಲಾದರೂ ಜರಿದು ಸಮಾಧಾನ ಪಟ್ಟುಕೊಳ್ಳುತ್ತಾರೆ. ಹೀಗಾಗಿ, ಈ ರಾಶಿಗಳ ಜನರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಒಂದೊಮ್ಮೆ ನಿಮ್ಮಿಂದ ಅಕಸ್ಮಾತ್ತಾಗಿ ತಪ್ಪಾಗಿದ್ದರೂ ಅವರಿಗೆ ಅದರ ಪರಿವೆ ಇರುವುದಿಲ್ಲ. 

•    ವೃಷಭ (Taurus)
ವೃಷಭ ರಾಶಿಯ ಜನ ದೀರ್ಘಕಾಲದವರೆಗೆ ಸೇಡು (Revenge) ಇಟ್ಟುಕೊಳ್ಳುತ್ತಾರೆ. ತಮಗೆ ನೋವು (Pain) ನೀಡಿದವರ ಬಗ್ಗೆ ಕರುಣೆ, ದಯೆ (Merciful), ಸಹಾನುಭೂತಿ ತೋರುವುದಿಲ್ಲ. ತಪ್ಪು (Wrong) ಮಾಡುವುದನ್ನು ಇವರು ಎಂದಿಗೂ ಸಹಿಸುವುದಿಲ್ಲ. ತಪ್ಪಾಗಿರುವುದು ಕಂಡುಬಂದರೆ ಕೂಗಾಡುತ್ತಾರೆ. ಹಾಗೆಂದು ವೃಷಭ ರಾಶಿಯವರಿಗೆ ತಾಳ್ಮೆಯೇ ಇಲ್ಲವೆಂದಲ್ಲ. ಒಂದು ಹಂತದವರೆಗೂ ತಪ್ಪುಗಳನ್ನು ಸಹಿಸಿಕೊಳ್ಳುತ್ತಾರೆ. ಆದರೆ, ಒಂದು ಹಂತ ಮೀರಿದರೆ ನಿಮ್ಮ ಖುಷಿಯನ್ನು ನಿರ್ದಯವಾಗಿ ಹಾಳು ಮಾಡುತ್ತಾರೆ. ನೀವು ಹೇಗೆ ತಪ್ಪಾಗಿ ವರ್ತನೆ (Behave) ಮಾಡಿದ್ದೀರಿ ಎನ್ನುವುದನ್ನು ನಿಮಗೆ ಮನದಟ್ಟು ಮಾಡಿಕೊಡದ ಹೊರತು ಇವರಿಗೆ ಸಮಾಧಾನ ಇರುವುದಿಲ್ಲ. ಈ ವಿಚಾರದಲ್ಲಿ ಇವರು ಭಾರೀ ಗಟ್ಟಿ ಜನ.

•    ಕರ್ಕಾಟಕ (Cancer)
ಯಾವುದೇ ವಿಚಾರವನ್ನು ಸುಲಭವಾಗಿ ಮರೆತುಬಿಡುವುದು ಈ ರಾಶಿಯ ಜನರಿಗೆ ಸಾಧ್ಯವಿಲ್ಲ. ಸಿಡಿದು ಸ್ಫೋಟವಾಗುವವರೆಗೂ ತಮ್ಮೆದೆಯಲ್ಲಿ ದ್ವೇಷವನ್ನು (Hatred) ಬಚ್ಚಿಟ್ಟುಕೊಳ್ಳುತ್ತಾರೆ. ಕೆಲವು ಜನರ ಬಗ್ಗೆ ಇವರಿಗೆ ಕೊಂಚವೂ ಒಲವಿರುವುದಿಲ್ಲ. ಅವರನ್ನು ಮನದಲ್ಲೇ ದ್ವೇಷಿಸುತ್ತಾರೆ. ನೋವು (Hurt) ನೀಡಿದ ಘಟನೆಯನ್ನು ಕರ್ಕಾಟಕ ರಾಶಿಯವರು ಎಂದಿಗೂ ಮರೆಯುವುದಿಲ್ಲ. ಕೆಲವು ನೆನಪುಗಳನ್ನು ಬೇಕೆಂದೇ ಹೊರಗೆ ತೋರ್ಪಡಿಸಿಕೊಳ್ಳದೆ ಇರಬಹುದು. ಒಂದೊಮ್ಮೆ ಇವರು ದ್ವೇಷ ಮಾಡಲು ಮುಂದಾದರೆ, ತಮ್ಮ ಎಲ್ಲ ಸಾಮರ್ಥ್ಯವನ್ನೂ ಅದಕ್ಕಾಗಿ ವಿನಿಯೋಗಿಸುತ್ತಾರೆ. ಎಷ್ಟೆಂದರೆ, ತಮ್ಮ ಕೆಟ್ಟ ನೆನಪುಗಳು ಸಂಪೂರ್ಣವಾಗಿ ಮರೆಯಾಗುವವರೆಗೂ ಮತ್ತೊಬ್ಬರ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ. 

•    ಸಿಂಹ (Leo)
ಸಿಂಹ ರಾಶಿಯವರು ಸ್ವಲ್ಪ ಹೆಚ್ಚು ಪ್ರಮಾಣದಲ್ಲೇ ಇತರರನ್ನು ಮನ್ನಿಸುವ ಗುಣ ಹೊಂದಿರುತ್ತಾರೆ. ಹಾಗೂ ನೋವುಗಳನ್ನು ಮುಂದಕ್ಕೆ ಒಯ್ಯುವುದಿಲ್ಲ. ಆದರೆ, ಇವರಿಗೆ ನೀವು ನಿಜವಾಗಿಯೂ ನೋವು ನೀಡಿದರೆ ಖಂಡಿತವಾಗಿ ಪ್ರತೀಕಾರ (Vengeance) ತೀರಿಸಿಕೊಳ್ಳಲು ಮುಂದಾಗುತ್ತಾರೆ. ನೀವು ಅವರೊಂದಿಗೆ ಹೇಗೆ ವರ್ತನೆ ಮಾಡಿದ್ದೀರೋ ಹಾಗಿರುತ್ತಾರೆ ಈ ರಾಶಿಯ ಜನ. ನೀವು ಇವರೊಂದಿಗೆ ಬದ್ಧತೆಯಿಂದ ಇದ್ದರೆ ಇವರೂ ಹಾಗೆಯೇ ಇರುತ್ತಾರೆ, ಒಂದೊಮ್ಮೆ ನೀವು ಮೋಸ ಮಾಡಿದರೆ ಇವರೂ ಮಾಡುತ್ತಾರೆ. ಒಂದೊಮ್ಮೆ ನೀವು ಇವರನ್ನು “ಟೇಕನ್ ಫಾರ್ ಗ್ರ್ಯಾಂಟೆಡ್’ (Taken for Granted) ಥರ ಟ್ರೀಟ್ ಮಾಡಿದರೆ ಎಂದಿಗೂ ನಿಮ್ಮೊಂದಿಗೆ ರಾಜಿಯಾಗುವುದಿಲ್ಲ. 

•    ವೃಶ್ಚಿಕ (Scorpio)
ದ್ವೇಷವನ್ನು ಮುಂದುವರಿಸುವ ಗುಣ ಹೊಂದಿರುವ ವೃಶ್ಚಿಕ ರಾಶಿಯವರು ಅದನ್ನು ಬಹಳ ನಿಧಾನವಾಗಿ ಮರೆಯಬಲ್ಲರು. ತಮಗೆ ದ್ರೋಹ (Betray) ಅಥವಾ ನಕಲಿತನ (Dupe) ತೋರುವುದನ್ನು ದ್ವೇಷಿಸುವ ಇವರು ಒಂದೊಮ್ಮೆ ತಾವು ಇದಕ್ಕೆ ತುತ್ತಾಗುವುದು ತಿಳಿದುಬಂದರೆ ಜೀವನವಿಡೀ ನಿಮ್ಮನ್ನು ದ್ವೇಷಿಸಬಲ್ಲರು. ಅದಕ್ಕಾಗಿ ನಿಮ್ಮನ್ನು ಜವಾಬ್ದಾರಿಯನ್ನಾಗಿಸಬಲ್ಲರು. ನೀವು ಪಶ್ಚಾತ್ತಾಪ (Regret) ಪಡುವಂತೆ ಮಾಡಬಲ್ಲರು. 

  

Follow Us:
Download App:
  • android
  • ios