ಸಂಗಾತಿ ಬೇಕು ಬೇಡ ಗೊತ್ತು ಮಾಡ್ಕೊಂಡು ಖುಷಿ ಪಡಿಸೋ ರಾಶಿಗಳಿವು
ಪ್ರತಿಯೊಂದು ರಾಶಿಗಳ ವರ್ತನೆ ಒಂದೊಂದು ರೀತಿ ಇರುತ್ತೆ. ಕೆಲವರಂತೂ ಹಾಸಿಗೆ ಮೇಲೆ ಹುಲಿಯಂತೆ ವರ್ತಿಸಿದರೆ, ಹೊರ ಜಗತ್ತಿಗೆ ಇಲಿಯಾಗಿರುತ್ತಾರೆ. ಮತ್ತ ಕೆಲವರದ್ದು ವೈಸಾವರ್ಸಾ. ಆದರೆ ಈ ನಾಲ್ಕು ರಾಶಿಗಳವರ ವರ್ತನೆ ಮಾತ್ರ ವಿಭಿನ್ನ. ಹೇಗಿರುತ್ತೆ?
ಲೈಂಗಿಕತೆ ಬಗ್ಗೆ ಏನೇ ಮಡಿವಂತಿಕೆ ಇದ್ದರೂ ಮದ್ವೆಯಾಗೋ ಉದ್ದೇಶವೇ ಆರೋಗ್ಯಕರ ದೈಹಿಕ ಸಂಬಂಧ ಹೊಂದುವುದು ಹಾಗೂ ವಂಶವನ್ನು ಮುಂದುವರಿಸುವುದು. ಆದರೆ, ಸುಖಾ ಸುಮ್ಮನೆ ಎಲ್ಲರೂ ಈ ವಿಷ್ಯ ಮಾತನಾಡಿದರೆ ಸಾಕು, ಥೂ, ಗಲೀಜು, ಅಸಹ್ಯ ಅಂತ ಮೂಗು ಮುರಿದು ಒಳಗೊಳಗೆ ದೈಹಿಕ ಸುಖಕ್ಕಾಗಿ ಹಾತೊರೆಯುತ್ತಾರೆ. ಅಷ್ಟೇ ಅಲ್ಲ ಚಂದದ ಹುಡಗನೋ, ಹುಡುಗಿಯೋ ಕಂಡರೆ ಜೊಲ್ಲು ಸುರಿಸುತ್ತಾರೆ. ಸಂಭಾವಿತರಂತೆ ಪೋಸ್ ಕೊಟ್ಟ ಕೂಡಲೇ ಅವರೇನೂ ಹಾಗಿರುವುದಿಲ್ಲ. ಮನಸ್ಸು ಹುಳ್ ಹುಳಿಯೇ. ಆದರೆ, ಕೆಲವರು ಮಾತ್ರ ಹಾಸಿಗೆ ಮೇಲಿದ್ದರೆ ಹುಲಿಯಂತೆ ಘರ್ಜಿಸುತ್ತಾರೆ. ಮತ್ತೆ ಕೆಲವರು ಡಲ್ ಆಗುತ್ತಾರೆ. ಅದರಲ್ಲಿಯೂ ವೃಷಭ, ಸಿಂಹ, ಮಿಥುನ ರಾಶಿಯವರು ಈ ವಿಷ್ಯದಲ್ಲಿ ಇತರೆ ರಾಶಿಯವರಿಗಿಂತ ಮೇಲು. ಹೇಗೆ? ಇವರು ಹಾಸಿಗೆ ಮೇಲೆ ಹೇಗೆ ವರ್ತಿಸುತ್ತಾರೆ?
ವೃಷಭ (Taurus)
ಹಾಸಿಗೆ ಮೇಲೆ ಸಿಕ್ಕಾಪಟ್ಟೆ ವಿಶ್ವಾಸ ತೋರಿಸೋ ರಾಶಿ ಇದು. ಬರೀ ತಮ್ಮ ಮೇಲೆ ಮಾತ್ರವಲ್ಲ, ಸಂಗಾತಿಯ ವಿಶ್ವಾಸ ಹೆಚ್ಚಿಸುವಲ್ಲಿಯೂ ಇವರು ಪರಿಣಿತರು. ಸೆಕ್ಸ್ ವಿಚಾರದಲ್ಲಿ ವಿಪರೀತ ಕ್ಯೂರಿಯಾಸಿಟಿ ಇರೋ ಈ ರಾಶಿಯವರು ವಿವಿಧ ಪ್ರಯೋಗಳನ್ನು ಮಾಡಿ ಸೈ ಎನಿಸಿಕೊಳ್ಳುತ್ತಾರೆ. ತಾವು ಖುಷಿ ಪಡುವ ಜೊತೆಗೆ ನಮ್ಮ ಸಂಗಾತಿಯನ್ನೂ ಬೇಕಾದಂತೆ ಖುಷಿ ಪಡಿಸುತ್ತಾರೆ. ಮಾತು ಕಡಿಮೆ. ಕೆಲಸ ಜಾಸ್ತಿ ಎನ್ನುವ ಸ್ವಭಾವದವರು. ಸಂಗಾತಿ ಬಗ್ಗೆ ಹತ್ತು ಹಲವು ಅನುಮಾನಗಳಿದ್ದರೂ, ಬೆಡ್ ರೂಮಿನಲ್ಲಿ ಮಾತ್ರ ಎಂಥದ್ದೇ ಸನ್ನಿವೇಶ ಬಂದರೂ ಚಾಣಾಕ್ಷರಂತೆ ಪರಿಸ್ಥಿತಿ ನಿಭಾಯಿಸುವುದರಲ್ಲಿ ನಿಸ್ಸೀಮರು ಇವರು.
ಸಿಂಹ (Leo)
ಹೆಸರಿಗೆ ತಕ್ಕಂತೆ ಈ ರಾಶಿಯವರು ಸದಾ ಸಿಂಹದಂತೆ ಘರ್ಜಿಸುತ್ತಿರುತ್ತಾರೆ. ಆ ವಿಷಯದಲ್ಲಿಯೂ ಹೊರತಲ್ಲ. ಸಂಗಾತಿಗೆ ಕಮಿಟೆಡ್ ಆಗಿರುವುದರಲ್ಲಿ ಅನುಮಾನವೇ ಇಲ್ಲ. ಅಕಸ್ಮಾತ್ ಎಕ್ಟ್ ಟ್ರಾ ಮ್ಯಾರಿಟಲ್ ಅಫೇರ್ ಅಂತ ತುಸು ಜಾರಿದರೂ ಅಲ್ಲಿ ನೆಮ್ಮದಿ ಕಾಣೋದು ಈ ರಾಶಿಯವರಿಗೆ ಸಾಧ್ಯವೇ ಇಲ್ಲ. ಅದಕ್ಕೆ ಸಾಮಾನ್ಯವಾಗಿ ಸಂಗಾತಿಗೆ ನಿಷ್ಠರಾಗಿರುತ್ತಾರೆ ಈ ರಾಶಿಯವರು. ಬೆಡ್ ಮೇಲೆ ಎಂಜಾಯ್ ಮಾಡೋದು ಇವರಿಗೆ ಎಲ್ಲಿಲ್ಲದ ಥ್ರಿಲ್ ಕೊಡುತ್ತೆ. ಸಂಗಾತಿಯೊಂದಿಗೆ ಒಳ್ಳೇ ಟೈಮ್ ಪಾಸ್ ಮಾಡೋದು ಇವರಿಗೆ ಇಷ್ಟ. ನೋಡಲೂ ಕಟ್ಟಮಸ್ತಾಗಿ ಚಂದ ಇರೋ ಇವರು ತಮ್ಮ ಸ್ವಭಾವದಲ್ಲಿಯೇ ಯಾರನ್ನೂ ಬೇಕಾದರೂ ಮೋಡಿ ಮಾಡುತ್ತಾರೆ. ಆದರೆ, ತಮ್ಮನ್ನು ಸದಾ ಎಲ್ಲ ವಿಷಯಗಳನ್ನು ವಿಶೇಷವೆಂದೇ ಟ್ರೀಟ್ ಮಾಡಬೇಕೆಂದು ಬಯಸುವ ಗುಣ ಇವರದ್ದು.
ಮಿಥುನ (Gemini)
ಫರ್ಮ್ ಮೈಂಡ್ ಇಲ್ಲದಂತೆಯೇ ಹೆಚ್ಚಾಗಿ ವ್ಯವಹರಿಸುವ ಇವರು ಹಾಸಿಗೆ ವಿಷ್ಯದಲ್ಲಿ ಮಾತ್ರ ವೆರಿ ಫರ್ಮ್. ಖುಷಿಗೋಸ್ಕರ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಹೆಂಡತಿಯನ್ನೂ ಸಮಾನವಾಗಿ ಕಾಣುತ್ತಾರೆ. ಅವರಿಗೆ ಬೇಜಾರು ಆಗದಂತೆ ನೋಡಿಕೊಳ್ಳೋದು ಇವರಿಗೆ ಗೊತ್ತು. ಹೊಸ ಹೊಸ ಟಿಕ್ನಿಕ್ ಕಂಡು ಕೊಂಡು ಎಂಜಾಯ್ ಮಾಡುತ್ತಾರೆ. ತುಂಬಾ ಸ್ನೇಹಮಯಿಯಾಗಿರುವ ಇವರು ಜೊತೆಗೆ ಇರೋರನ್ನು ಬಲಿಪಶುವನ್ನಾಗಿ ಮಾಡುವ ಸ್ವಭಾವದವರಲ್ಲ.
ಮೀನ (Pisces)
ಸೂಕ್ಷ್ಮ ಮನಸ್ಸಿನ ಇವರು ಭಾವನೆಗಳಿಗೆ ಹೆಚ್ಚು ಗಮನ ಕೊಡುತ್ತಾರೆ. ಜೊತೆಗಿರೋರಿಗೆ ಸದಾ ಕಂಫರ್ಟೇಬಲ್ ಝೋನ್ ಕ್ರಿಯೇಟ್ ಮಾಡಿ ಕೊಡಲು ಮುಂದಾಗುತ್ತಾರೆ. ಸಂಗಾತಿ ಭಾವನೆಗಳಿಗೆ ಅತೀವ ಬೆಲೆ ಕೊಡೋ ಇವರು, ಅವರಿಗೆ ಮುಂದುವರಿಯಲು ಅನುವು ಮಾಡಿಕೊಡುತ್ತಾರೆ. ತಾಳ್ಮೆ ಹೆಚ್ಚು. ಕೆಲವು ನಡೆಗಳು ಸಂಗಾತಿಯನ್ನೂ ಅಚ್ಚರಿಗೊಳಿಸುವಂತೆ ಇರುತ್ತದೆ. ಒಟ್ಟಿನಲ್ಲಿ ಸಂಗಾತಿಯನ್ನು ತೃಪ್ತಿ ಪಡಿಸುವ ಸಕಲ ಮಾರ್ಗವೂ ಇವರಿಗೆ ಕರಾತಲಮಲಕ. ಜೊತೆಗಾತಿ ಯಾವತ್ತೂ ಖುಷಿಯಾಗಿರುವಂತೆ ನೋಡಿಕೊಳ್ಳುವ ಇವರು, ಹಾಸಿಗೆ ಮೇಲಂತೂ ನಿರಾಶೆ ಆಗದಂತೆ ನೋಡಿಕೊಳ್ಳುವುದರಲ್ಲಿ ನಿಸ್ಸೀಮರು.
ವಿ.ಸೂ: ಇಲ್ಲ ನೀಡಿರುವ ಮಾಹಿತಿ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯವಾಗಬಹುದು. ಜಾಲತಾಣದಲ್ಲಿ ಸಿಗುವ ಮಾಹಿತಿಯನ್ನಾಧರಿಸಿ ಈ ಲೇಖನ ಬರೆಯಲಾಗಿದೆ.