Navratri 2022 Day 5: ಭೂಲೋಕ ರಕ್ಷಕಿ ಲಲಿತಾ ಪರಮೇಶ್ವರಿಯ ಪೂಜಾ ವಿಧಿ, ವ್ರತ ಕತೆ
ನವರಾತ್ರಿಯ ಐದನೇ ದಿನವನ್ನು ಲಲಿತ ಪಂಚಮಿ ಎನ್ನಲಾಗುತ್ತದೆ. ಈ ದಿನ ಲಲಿತ ಪರಮೇಶ್ವರಿಯನ್ನು ಪೂಜಿಸಲಾಗುತ್ತದೆ. ಲಲಿತಾ ಪಂಚಮಿ ಯಾವಾಗ, ಹೇಗೆ ಪೂಜಿಸಬೇಕು, ವ್ರತಕತೆಯೇನು ಇಲ್ಲಿ ತಿಳಿಯಿರಿ..
ಶಾರದೀಯ ನವರಾತ್ರಿಯ ಐದನೇ ದಿನದಂದು ತಾಯಿ ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಈ ದಿನ ತಾಯಿ ಲಲಿತೆಯನ್ನು ಸತಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಲಲಿತಾ ಪಂಚಮಿ 2022ನ್ನು 30 ಸೆಪ್ಟೆಂಬರ್ 2022ರಂದು ಆಚರಿಸಲಾಗುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಈ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಧರ್ಮಗ್ರಂಥಗಳ ಪ್ರಕಾರ, ಮಾತಾ ಲಲಿತಾ ಹತ್ತು ಮಹಾವಿದ್ಯೆಗಳಲ್ಲಿ ಒಬ್ಬಳಾಗಿದ್ದಾಳೆ. ಆಕೆಯನ್ನು ಮಹಾತ್ರಿಪುರಸುಂದರಿ, ಷೋಡಶೀ, ಲಲಿತಾ, ಲೀಲಾವತಿ, ಲೀಲಾಮತಿ, ಲಲಿತಾಂಬಿಕಾ, ಲೀಲೇಶಿ, ಲೀಲೇಶ್ವರಿ, ಲಲಿತಗೌರಿ ಎಂದೂ ಕರೆಯುತ್ತಾರೆ. ಈ ವ್ರತದ ಮುಹೂರ್ತ ಮತ್ತು ಪೂಜಾ ವಿಧಾನ ಯಾವುದು ಎಂದು ತಿಳಿಯೋಣ.
ಲಲಿತಾ ಪಂಚಮಿ 2022 ಮುಹೂರ್ತ(Lalita Panchami 2022 Muhurat)
ಪಂಚಮಿ ತಿಥಿ ಪ್ರಾರಂಭ: 30 ಸೆಪ್ಟೆಂಬರ್ 2022, ಶುಕ್ರವಾರ ಮಧ್ಯಾಹ್ನ 12:08ರಿಂದ
ಪಂಚಮಿ ತಿಥಿ ಅಂತ್ಯ: 30 ಸೆಪ್ಟೆಂಬರ್ 2022 ರಾತ್ರಿ 10:34
ಲಲಿತಾ ಪಂಚಮಿ ಉಪವಾಸದ ದಿನಾಂಕ: 30 ಸೆಪ್ಟೆಂಬರ್ 2022, ಶುಕ್ರವಾರ
ಅಭಿಜೀತ್ ಮುಹೂರ್ತ: 11:53 ರಿಂದ 12:41 ರವರೆಗೆ
ದಸರಾ 2022: ವಿಜಯ ದಶಮಿ ಯಾವಾಗ? ಮುಹೂರ್ತ, ಪೂಜಾ ವಿಧಾನ ಇಲ್ಲಿದೆ..
ಲಲಿತಾ ಪಂಚಮಿ 2022 ಪೂಜಾ ವಿಧಿ(Worshipping method)
ಲಲಿತಾ ಮಾತೆಗೆ ಸಮರ್ಪಿತವಾದ ಈ ವ್ರತದ ದಿನದಂದು ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮತ್ತು ಧ್ಯಾನವನ್ನು ಮುಗಿಸಿ. ನಂತರ ದೇವಾಲಯದಲ್ಲಿ ಲಲಿತ ಪಂಚಮಿ ಉಪವಾಸದ ವ್ರತವನ್ನು ಮಾಡಿ. ಮೊದಲು ಗಣೇಶ, ಶಿವ ಮತ್ತು ಮಾತಾ ಪಾರ್ವತಿಯನ್ನು ಪೂಜಿಸಿ. ನಂತರ ತಾಯಿ ಅಶೋಕ ಸುಂದರಿಯನ್ನು ಪೂಜಿಸಿ. ಸಂತೋಷ ಮತ್ತು ಸಮೃದ್ಧಿಯ ಆಶೀರ್ವಾದಕ್ಕಾಗಿ ಆಕೆಯಲ್ಲಿ ಪ್ರಾರ್ಥಿಸಿ. ನಂತರ ತಾಯಿ ಲಲಿತಾ ಚಿತ್ರದ ಮುಂದೆ ಶುದ್ಧ ತುಪ್ಪದ ದೀಪವನ್ನು ಬೆಳಗಿಸಿ ಮತ್ತು ಲಲಿತಾ ಸಹಸ್ರಾವಳಿಯನ್ನು ಪಠಿಸಿ. ಪೂಜೆಯ ಸಮಯದಲ್ಲಿ, ನಿಮ್ಮ ಮುಖವು ಉತ್ತರ ದಿಕ್ಕಿನಲ್ಲಿರಬೇಕು ಎಂಬುದನ್ನು ನೆನಪಿನಲ್ಲಿಡಿ.
ಲಲಿತಾ ಪಂಚಮಿ ವ್ರತ ಕಥೆ(Lalita Panchami vrat katha)
ದಂತಕಥೆಯ ಪ್ರಕಾರ, ಒಮ್ಮೆ ರಾಜ ದಕ್ಷ ಪ್ರಜಾಪತಿ ನೈಮಿಷಾರಣ್ಯಕ್ಕೆ ಆಗಮಿಸಿದಾಗ, ಎಲ್ಲರೂ ಅವನನ್ನು ಸ್ವಾಗತಿಸಲು ಎದ್ದರು. ಆದರೆ ಶಿವನು ಎದ್ದೇಳಲಿಲ್ಲ. ರಾಜ ದಕ್ಷನಿಗೆ ಈ ಬಗ್ಗೆ ಬೇಸರವಾಯಿತು. ಆತ ಅದನ್ನು ತನ್ನ ಅವಮಾನವೆಂದು ಪರಿಗಣಿಸಿದ. ತದನಂತರದಲ್ಲೊಮ್ಮೆ ದಕ್ಷನು ತನ್ನ ನಿವಾಸದಲ್ಲಿ ಯಾಗವನ್ನು ಆಯೋಜಿಸಿದನು, ಆಗ ಅವನು ದೇವಾನುದೇವತೆಗಳಿಗೆ ಆಹ್ವಾನಿಸಿದರೂ ಶಿವನಿಗೆ ಮಾತ್ರ ಆಹ್ವಾನವನ್ನು ಕಳುಹಿಸಲಿಲ್ಲ. ಈ ವಿಷಯ ತಿಳಿದ ಶಿವನ ಪತ್ನಿ ಸತಿ ತನ್ನನ್ನು ಕರೆಯದಿದ್ದರೂ ತವರಲ್ಲವೇ ಎಂದು ಅಪ್ಪನ ಮನೆಗೆ ಅನುಮತಿಯಿಲ್ಲದೆ ಹೋಗಿದ್ದಳು. ತನ್ನ ತಂದೆಯ ಮನೆಯನ್ನು ತಲುಪಿದ ನಂತರ, ಅಲ್ಲಿ ಆಕೆಯ ತಂದೆ ದಕ್ಷನು ಶಿವನನ್ನು ಇನ್ನಿಲ್ಲದಂತೆ ಅವಮಾನಿಸಿ ಮಾತನಾಡುತ್ತಾನೆ. ಇದನ್ನು ಕೇಳಿ ದುಃಖಿತಳಾದ ಸತಿ ಯಾಗದ ಅಗ್ನಿಗೆ ಹಾರಿ ಪ್ರಾಣ ತ್ಯಾಗ ಮಾಡುತ್ತಾಳೆ.
Navratri 2022 day 4: ತಾಯಿ ಕೂಷ್ಮಾಂಡಾ ಪೂಜೆಯಿಂದ ವಯಸ್ಸು, ಕೀರ್ತಿ, ಆರೋಗ್ಯ ಪ್ರಾಪ್ತಿ
ಈ ವಿಷಯ ತಿಳಿದ ಶಿವನು ತಕ್ಷಣವೇ ಅಲ್ಲಿಗೆ ತಲುಪಿ ಸತಿಯ ಮೃತದೇಹವನ್ನು ಹೆಗಲ ಮೇಲೆ ಇಟ್ಟುಕೊಂಡು ಶೋಕಿಸುತ್ತಾ ಅಲ್ಲಿ ಇಲ್ಲಿ ಅಲೆದಾಡತೊಡಗಿದನು. ಅದರ ನಂತರ ಭಗವಾನ್ ವಿಷ್ಣುವು ಶಿವನ ಈ ಸ್ಥಿತಿಯನ್ನು ನೋಡಿ, ಸತಿಯ ದೇಹವನ್ನು ತನ್ನ ಚಕ್ರದಿಂದ ಬೇಧಿಸಿದನು. ತನ್ನ ಹೃದಯದಲ್ಲಿ ಶಿವನನ್ನು ಹಿಡಿದಿದ್ದರಿಂದ ಅವಳು ಲಲಿತಾ ಎಂದು ಕರೆಯಲ್ಪಟ್ಟಳು.
ಬ್ರಹ್ಮನು ಬಿಟ್ಟುಹೋದ ಚಕ್ರವು ಭೂಮಿಯನ್ನು ನಾಶಮಾಡಲು ಪ್ರಾರಂಭಿಸಿದಾಗ ತಾಯಿ ಲಲಿತೆಯ ಜನನವು ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಭೂಮಿ ಮುಳುಗಲು ಆರಂಭವಾದಾಗ ಋಷಿಗಳೆಲ್ಲರೂ ನರಳುತ್ತಾರೆ ಮತ್ತು ರಕ್ಷಣೆ ಕೋರಿ ತಾಯಿ ಲಲಿತಾ ದೇವಿಯನ್ನು ಪೂಜಿಸುತ್ತಾರೆ. ಪರಿಣಾಮವಾಗಿ ಲಲಿತಾ ದೇವಿಯು ಆ ಚಕ್ರವನ್ನು ತನ್ನ ಕೈಯಲ್ಲಿ ಹಿಡಿದು ಭೂಮಿಗೆ ಹೊಸ ಜೀವ ನೀಡುತ್ತಾಳೆ.