Asianet Suvarna News Asianet Suvarna News

ಮನುಷ್ಯರ ಪಾಪಪುಣ್ಯಗಳ ರೆಕಾರ್ಡ್ ಇಡುವ ಚಿತ್ರಗುಪ್ತ ಯಾರು?

ಯಮಲೋಕದಲ್ಲಿ ಒಂದೊಂದು ಜೀವಗಳು ಹೋದಂತೆಲ್ಲ ಅವರ ಬದುಕಿನ ಪಾಪಪುಣ್ಯಗಳ ಲೆಕ್ಕವನ್ನು ಯಮನಿಗೆ ಓದಿ ಹೇಳುವವನು ಚಿತ್ರಗುಪ್ತ. ಇಷ್ಟಕ್ಕೂ ಯಾರು ಈ ಚಿತ್ರಗುಪ್ತ? ಎಲ್ಲರ ಪಾಪ ಪುಣ್ಯಗಳ ಖಾತೆ ಈತನಿಗೆ ಹೇಗೆ ಸಿಗುತ್ತೆ?

Who is Chitragupta what is his story skr
Author
Bangalore, First Published Jun 20, 2022, 3:09 PM IST

ಭೂಮಿಯಲ್ಲಿರುವ ಪ್ರತಿ ಜೀವಿಯ ಪ್ರತಿಯೊಂದು ಪಾಪ ಪುಣ್ಯಗಳ ಖಾತೆಯನ್ನು ದಾಖಲಿಸುತ್ತಾ, ಅವರು ಮರಣ ಹೊಂದಿದಾಗ ಸ್ವರ್ಗಕ್ಕೆ ಹೋಗಬೇಕೋ, ನರಕಕ್ಕೋ ಎಂದು ನಿರ್ಧರಿಸಲು ಯಮಧರ್ಮನಿಗೆ ಸಹಾಯ ಮಾಡುವುದು ಚಿತ್ರಗುಪ್ತ(Chitragupta). ಸಾಮಾನ್ಯವಾಗಿ ಚಲನಚಿತ್ರಗಳಲ್ಲಿ ಚಿತ್ರಗುಪ್ತನನ್ನು ಕಾಮಿಡಿ ಪಾತ್ರಧಾರಿಯಂತೆ ತೋರಿಸುತ್ತಾರೆ. ಆದರೆ ನಿಜವಾಗಿಯೂ ಚಿತ್ರಗುಪ್ತ ಅಸಾಮಾನ್ಯ ಪ್ರತಿಭೆ. ಇಲ್ಲದಿದ್ದರೆ ಕೋಟಿ ಕೋಟಿ ಚರಾಚರಗಳ ಜೀವನದ ಪ್ರತಿ ಕರ್ಮಗಳನ್ನು ಲೆಕ್ಕ ಇಡುವುದು ಸಾಮಾನ್ಯರಿಂದಲಂತೂ ಸಾಧ್ಯವಿಲ್ಲ. ಅವನ ಈ ಕೆಲಸದ ಕಾರಣದಿಂದ ಆತನಿಗೆ ಬುಕ್ ಕೀಪರ್(book keeper) ಎನ್ನಲಾಗುತ್ತದೆ. 

ಚಿತ್ರಗುಪ್ತನು ಹಿಂದೂ ದೇವತೆಯಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯ ಸಾಧಕ-ಬಾಧಕಗಳನ್ನು ತೂಗು ಹಾಕಿ ಆತ ಸ್ವರ್ಗ(heaven)ದಲ್ಲಿ ಸ್ಥಾನ ಪಡೆಯಲು ಅರ್ಹರೇ ಅಥವಾ ನೇರವಾಗಿ ನರಕ(hell)ಕ್ಕೆ ಹೋಗುತ್ತಾರೆಯೇ ಎಂದು ನಿರ್ಧರಿಸುವ ಕೆಲಸ ಮಾಡುತ್ತಾರೆ. ಹಿಂದೂ ಪುರಾಣಗಳು 'ಕರ್ಮ'ದ ಪಾತ್ರವನ್ನು ಬಲವಾಗಿ ಪ್ರತಿಪಾದಿಸುವುದರಿಂದ, ಅದನ್ನೆಲ್ಲ ಲೆಕ್ಕವಿಡುವವನು ಚಿತ್ರಗುಪ್ತ. ಎಲ್ಲಾ ಜೀವಿಗಳ ದಾಖಲೆಯನ್ನು ಸೃಷ್ಟಿಸಿ, ಮರಣಾ ನಂತರ  ಅವರ ಭವಿಷ್ಯವನ್ನು ನಿರ್ಧರಿಸುವ ಮಹತ್ತರ ಪಾತ್ರವನ್ನು ಚಿತ್ರಗುಪ್ತನು ನಿಖರವಾಗಿ ನಡೆಸಿಕೊಂಡು ಬರುತ್ತಾನೆ. 

ಯಾರು ಈ ಚಿತ್ರಗುಪ್ತ?
ಚಿತ್ರಗುಪ್ತನು ಸೃಷ್ಟಕರ್ತ ಬ್ರಹ್ಮ(Lord Brahma)ನ ಮಗನಾಗಿದ್ದಾನೆ. ಬ್ರಹ್ಮನು ಸೃಷ್ಟಿಯ ಆರಂಭದಲ್ಲಿ ಸತ್ತವರ ದಾಖಲೆಗಳನ್ನು ನಿರ್ವಹಿಸುವ ಕೆಲಸವನ್ನು ಸಾವಿನ ದೇವರಾದ ಯಮಧರ್ಮ(YamaDharma)ರಾಯನಿಗೆ ವಹಿಸಿದನು. ಆದರೆ, ಯಮನಿಗೆ ಈ ಅಂಕಿಸಂಕಿಗಳು ಗೊಂದಲ ಹುಟ್ಟಿಸತೊಡಗಿದವು. ಗೊಂದಲದಿಂದ ಯಮನು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲಾರಂಭಿಸಿದನು. ಒಳ್ಳೆಯವರೂ ನರಕ ಅನುಭವಿಸುವಂತಾಗುತ್ತದೆ. ಹೀಗಾಗಿ  ಈ ಕೆಲಸವನ್ನು ತಾನು ಒಪ್ಪಿಸಬಹುದಾದ ಒಬ್ಬ ಸಮರ್ಥ ಸಹಾಯಕನನ್ನು ಒದಗಿಸುವಂತೆ ಅವನು ಬ್ರಹ್ಮನನ್ನು ಯಥಾವತ್ತಾಗಿ ಬೇಡಿಕೊಂಡನು.

Vastu Shastra 2022: ಮನೆಯಿಂದ ಹೊರಗೆ ಕಾಲಿಟ್ಟ ಕೂಡಲೇ ಈ ವಸ್ತುಗಳು ಕಾಣಿಸಿದರೆ ಶುಭ ಶಕುನ!

ಆಗ ಬ್ರಹ್ಮನು ಈ ವಿಷಯದ ಪ್ರಾಮುಖ್ಯತೆಯನ್ನು ಅರಿತುಕೊಂಡನು ಮತ್ತು ಬ್ರಹ್ಮಾಂಡದ ವ್ಯವಹಾರಗಳನ್ನು ತಾತ್ಕಾಲಿಕವಾಗಿ ನಿರ್ವಹಿಸುವ ಕಾರ್ಯವನ್ನು ಸೂರ್ಯನಿಗೆ ವಹಿಸಿ ತಾನು ತಪಸ್ಸಿಗೆ ಕುಳಿತನು. 11,000 ವರ್ಷಗಳ ಆಳವಾದ ಧ್ಯಾನದ ನಂತರ, ಚಿತ್ರಗುಪ್ತನು ಅಂತಿಮವಾಗಿ ಬ್ರಹ್ಮನ ಮನಸ್ಸು ಮತ್ತು ದೇಹದಿಂದ ಹೊರಹೊಮ್ಮಿದನು. ಕೈಯಲ್ಲಿ ಪೆನ್ನು ಮತ್ತು ಕಾಗದದೊಂದಿಗೆ ಚಿತ್ರಗುಪ್ತ ಕಾಣಿಸಿಕೊಂಡನು. ಅವನು ರಹಸ್ಯವಾಗಿ ಜನಿಸಿದ ಕಾರಣ, ಅವನಿಗೆ ಚಿತ್ರಗುಪ್ತ (ಗುಪ್ತ ಚಿತ್ರ) ಎಂದು ಹೆಸರಿಸಲಾಯಿತು. ಅವನ ಜಾಗರೂಕ ಕಣ್ಣಿನಿಂದ ಏನೂ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಮೊದಲ ಬಾರಿ ಅಕ್ಷರಗಳನ್ನು ಬಳಸಿದ ಕೀರ್ತಿಯೂ ಚಿತ್ರಗುಪ್ತನಿಗೆ ಸಲ್ಲುತ್ತದೆ. ಎರಡು ವಿವಾಹವಾದ ಚಿತ್ರಗುಪ್ತನಿಗೆ ದಕ್ಷಿಣ ನಂದಿನಿ ಮತ್ತು ಎರವತಿ ಶೋಭಾವತಿ ಎಂಬ ಪತ್ನಿಯರಿದ್ದಾರೆ. ಒಟ್ಟು 12 ಮಕ್ಕಳಿದ್ದಾರೆ. 

ಮತ್ತೊಂದು ಕತೆಯ ಪ್ರಕಾರ, ಚಿತ್ರಗುಪ್ತನೆಂಬ ಪ್ರತ್ಯೇಕ ವ್ಯಕ್ತಿ ಇಲ್ಲ. ಆತ ಪ್ರತಿಯೊಬ್ಬರ ಸುಪ್ತಪ್ರಜ್ಞೆಯಲ್ಲಿರುವ ತಮ್ಮ ಕರ್ಮಗಳ ಸಾಧಕಬಾಧಕಗಳ ಚಿತ್ರವೇ ಆಗಿದ್ದಾನೆ. ಅದು ನೇರ ನಮ್ಮ ಪ್ರಜ್ಞೆಗೆ ಬಾರದೆ, ಅಜ್ಞಾತವಾಗಿ ಸುಪ್ತವಾಗಿ ನಮ್ಮ ಬದುಕಿನ ಪ್ರತಿ ಕ್ರಿಯೆಯನ್ನೂ ಹಿಡಿದಿಡುವುದರಿಂದ ಅದನ್ನು ಚಿತ್ರಗುಪ್ತ ಎನ್ನಲಾಗುತ್ತದೆ ಎಂಬ ವಿವರಣೆ ಇದೆ. 

ಚಿತ್ರಗುಪ್ತ ದೇವಾಲಯಗಳು(Temples of Chitragupta)
ಭಾರತದಲ್ಲಿನ ಹಲವಾರು ದೇವಾಲಯಗಳು ಚಿತ್ರಗುಪ್ತನಿಗೆ ಸಮರ್ಪಿತವಾಗಿವೆ. ಅವುಗಳಲ್ಲಿ ಗಮನಾರ್ಹವಾದವು ತಮಿಳುನಾಡಿನ ಕಾಂಚೀಪುರಂ, ಆಂಧ್ರಪ್ರದೇಶದ ಹೈದರಾಬಾದ್ ಮತ್ತು ರಾಜಸ್ಥಾನದ ಉದಯಪುರದಲ್ಲಿವೆ. ಚಿತ್ರಗುಪ್ತನಿಗೆ ಅರ್ಪಿತವಾದ ಇನ್ನೂ ಮೂರು ದೇವಾಲಯಗಳು ಬಿಹಾರದಲ್ಲಿ ಹಾಜಿಪುರ, ರಕ್ಸಾಲ್ ಮತ್ತು ಮುಝಾಫರ್‌ಪುರ ಜಿಲ್ಲೆಗಳಲ್ಲಿವೆ.

ಪಾದರಕ್ಷೆ ಬಿಡುವುದಕ್ಕೂ ಉಂಟು ಗ್ರಹ ದೋಷದ ನಂಟು!

ಚಿತ್ರಗುಪ್ತನು ಆಡಳಿತ ಮತ್ತು ದಾಖಲೆಗಳನ್ನು ಇಟ್ಟುಕೊಳ್ಳುವ ಕಲೆಯಲ್ಲಿ ಕೌಶಲಗಳೊಂದಿಗೆ ಜನಿಸಿದನು. ಇದು ದೇವರು ಮತ್ತು ಮಾನವರಲ್ಲಿ ಅವನ ಪ್ರತಿಷ್ಠೆಯನ್ನು ಹೆಚ್ಚಿಸಿತು ಮತ್ತು ಅವನನ್ನು ಮಾನವ ಕರ್ಮದ ದಾಖಲೆಗಳ ನಿಪುಣ ಪಾಲಕ ಎಂದು ಎಲ್ಲರೂ ಒಪ್ಪಿಕೊಂಡರು. ಅವನು ತನ್ನ ಭಕ್ತರಿಗೆ ಜ್ಞಾನ, ಬುದ್ಧಿವಂತಿಕೆ ಮತ್ತು ವಿಶ್ಲೇಷಣಾತ್ಮಕ ಮನಸ್ಸನ್ನು ಅನುಗ್ರಹಿಸುತ್ತಾನ., ಇದು ಇಂದಿಗೂ ಫಲಪ್ರದ ಜೀವನವನ್ನು ನಡೆಸಲು ಅವಶ್ಯಕವಾಗಿದೆ. ಅವರ ಎಲ್ಲ ಬೋಧನೆಗಳು ಹೆಚ್ಚು ಪ್ರಸ್ತುತವಾಗಿವೆ, ವಿಶೇಷವಾಗಿ ಆಧುನಿಕ ಜಗತ್ತಿನಲ್ಲಿ ವ್ಯಕ್ತಿಯ ಆಡಳಿತ ಮತ್ತು ನಿರ್ವಹಣಾ ಕೌಶಲ್ಯಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.

Follow Us:
Download App:
  • android
  • ios