Asianet Suvarna News Asianet Suvarna News

ಮಹಿಳೆಯರು ಅಪ್ಪಿತಪ್ಪಿಯೂ ಈ ದಿನ ತಲೆ ಸ್ನಾನ ಮಾಡ್ಬಾರ್ದು

ನಮ್ಮ ಹಿಂದೂ ಧರ್ಮಗ್ರಂಥದಲ್ಲಿ ಯಶಸ್ಸಿನ ಗುಟ್ಟನ್ನು ಹೇಳಿದ್ದಾರೆ. ಅನೇಕ ಬಾರಿ ನಾವು ಎಷ್ಟೇ ದುಡಿದ್ರೂ ನಮ್ಮ ಕೈಗೆ ಹಣ ಸಿಗೋದಿಲ್ಲ. ಅದಕ್ಕೆ ನಾವು ಮಾಡುವ ಕೆಲ ತಪ್ಪುಗಳು ಕಾರಣವಾಗಿರುತ್ತದೆ. ಅದ್ರಲ್ಲಿ ಮಹಿಳೆ ಮಾಡುವ ತಲೆ ಸ್ನಾನದ ದಿನ ಕೂಡ ಒಂದು ಅಂದ್ರೆ ನೀವು ನಂಬ್ಲೇಬೇಕು.
 

Ladies Hair Wash Myths and when they should take bath
Author
Bangalore, First Published Jul 28, 2022, 3:00 PM IST | Last Updated Jul 28, 2022, 3:00 PM IST

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಕುಟುಂಬದ ಸಂತೋಷ ಮತ್ತು ಸಮೃದ್ಧಿಯು ಮನೆಯ ಲಕ್ಷ್ಮಿಯನ್ನು ಅವಲಂಬಿಸಿದೆ.  ಅಂದರೆ ಮನೆಯಲ್ಲಿರುವ ಗೃಹಿಣಿಯನ್ನು ಅವಲಂಬಿಸಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ದೇವತೆಗಳು ತಮ್ಮ ಅಕ್ಕ-ತಂಗಿಯನ್ನು ತಮ್ಮ ಶಕ್ತಿ ಎಂದು ಪರಿಗಣಿಸುತ್ತಾರೆ. ಹಿಂದೂ ಧರ್ಮದಲ್ಲಿ, ಮಹಿಳೆಯನ್ನು ಅನ್ನಪೂರ್ಣೆ, ಲಕ್ಷ್ಮಿ ಮತ್ತು ಸಮೃದ್ಧಿ ತರುವವಳು ಎಂದು ಪರಿಗಣಿಸಲಾಗುತ್ತದೆ.  ಮನೆ ಸದಸ್ಯರು ಹಾಗೂ ಕುಟುಂಬಸ್ಥರ ಅಭಿವೃದ್ಧಿಗೆ ಮಹಿಳೆಯರು ಹಿಂದೂ ಧರ್ಮದ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ. ಮಹಿಳೆ ಧರ್ಮ ಗ್ರಂಥದ ಕೆಲ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲನೆ ಮಾಡಿದ್ರೆ ಎಲ್ಲವೂ ಮಂಗಳಕರವಾಗುತ್ತದೆ. ಒಂದ್ವೇಳೆ ಮಹಿಳೆ ನಿರ್ಲಕ್ಷ್ಯ ಮಾಡಿದ್ರೆ ಕುಟುಂಬದ ಆರ್ಥಿಕ ಸ್ಥಿತಿ ಹದಗೆಡುತ್ತದೆ ಎಂದು ಗ್ರಂಥಗಳಲ್ಲಿ ಹೇಳಲಾಗಿದೆ. ಯಾವ ದಿನ ಉಪವಾಸ ಮಾಡಬೇಕು, ಯಾವ ಸಮಯದಲ್ಲಿ ಆಹಾರ ಸೇವನೆ ಮಾಡಬೇಕು ಎಂಬುದರಿಂದ ಹಿಡಿದು ಮಹಿಳೆ ಯಾವ ದಿನ ತಲೆ ಸ್ನಾನ ಮಾಡಬೇಕು ಎನ್ನುವವರೆಗೆ ಧರ್ಮ ಗ್ರಂಥದಲ್ಲಿ ಅನೇಕ ಸಂಗತಿಯನ್ನು ಹೇಳಲಾಗಿದೆ. ನಾವಿಂದು  ಮಹಿಳೆಯರು ಯಾವ ದಿನ ತಮ್ಮ ಕೂದಲನ್ನು ತೊಳೆಯಬೇಕು ಮತ್ತು ಯಾವ ದಿನ ತಮ್ಮ ಕೂದಲನ್ನು ತೊಳೆಯಬಾರದು ಎಂಬುದನ್ನು ಹೇಳ್ತೇವೆ.  

ಧರ್ಮಗ್ರಂಥಗಳ ಪ್ರಕಾರ, ಶುಕ್ರವಾರ (Friday) ದಂದು ಕೂದಲನ್ನು ತೊಳೆಯುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಶುಕ್ರವಾರವು ಲಕ್ಷ್ಮಿ (Lakshmi ) ದೇವಿಯ ದಿನವಾಗಿದೆ. ಆದ್ದರಿಂದ ಮಹಿಳೆಯರು ಈ ದಿನ ತಮ್ಮ ಕೂದಲನ್ನು ಸ್ವಚ್ಛಗೊಳಿಸಬೇಕು. ಈ ದಿನದಂದು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿ, ಮಹಿಳೆ ತಲೆ ಸ್ನಾನ ಮಾಡಿದ್ರೆ ತುಂಬಾ ಸಂತೋಷಪಡುತ್ತಾಳೆ. ಅವಳ ಕೃಪೆ ನಮ್ಮ ಮೇಲಿರುತ್ತದೆ. ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಮತ್ತೊಂದೆಡೆ  ಗಂಡು ಮಗುವಿನ ತಾಯಿಯಾಗಿರುವವರು ಹಾಗೂ ಗಂಡು ಮಗು ಬೇಕು ಎನ್ನುವವರು, ಶುಕ್ರವಾರ ಅಗತ್ಯವಾಗಿ ತಲೆ ಸ್ನಾನ ಮಾಡಬೇಕು.  

ಇನ್ನು ಯಾವ ದಿನ ಮಹಿಳೆ ಅಥವಾ ಹುಡುಗಿಯಾದವಳು ತಲೆ ಸ್ನಾನ ಮಾಡಬಾರದು ಎಂಬ ವಿಷ್ಯಕ್ಕೆ ಬಂದ್ರೆ  ಅದರಲ್ಲಿ ಭಿನ್ನತೆಯಿದೆ. ವಿವಾಹಿತರು ಹಾಗೂ ಅವಿವಾಹಿತರು ಬೇರೆ ಬೇರೆ ದಿನ ತಲೆ ಸ್ನಾನ ಮಾಡಬಾರದು ಎಂದು ಧರ್ಮಗ್ರಂಥದಲ್ಲಿ ಹೇಳಲಾಗಿದೆ. 

ಮುದ್ದಾದ ಮಗು ಬೇಕಾ? ಗರ್ಭಿಣಿಯರು ಫಾಲೋ ಮಾಡಬೇಕಾದ ವಾಸ್ತು ಟಿಪ್ಸ್

ಮದುವೆಯಾಗದ ಹುಡುಗಿಯರು ಬುಧವಾರ ಮರೆತೂ ತಲೆ ಸ್ನಾನ ಮಾಡಬಾರದು. ಅದರಲ್ಲೂ ಕಿರಿಯ ಸಹೋದರರನ್ನು ಹೊಂದಿರುವ ಹುಡುಗಿಯರು ಬುಧವಾರದಂದು ಅಪ್ಪಿತಪ್ಪಿಯೂ ತಲೆ ಸ್ನಾನ ಮಾಡಬಾರದು. ಬುಧವಾರದಂದು ಹುಡುಗಿ ತಲೆ ಸ್ನಾನ ಮಾಡಿದ್ರೆ ಆಕೆ ಸಹೋದರನಿಗೆ ಕಷ್ಟಗಳು ಎದುರಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.   

ಜ್ಯೋತಿಷ್ಯದ ಪ್ರಕಾರ, ಯಾವುದೇ ಶುಭ ಮುಹೂರ್ತ ಅಥವಾ ಶುಭ ಹಬ್ಬದಂದು, ವಿಶೇಷವಾಗಿ ಹುಣ್ಣಿಮೆ, ಏಕಾದಶಿ ಮತ್ತು ಅಮವಾಸ್ಯೆಯ ದಿನದಂದು ಕೂದಲನ್ನು ಸ್ವಚ್ಛಗೊಳಿಸಬಾರದು. ಹಾಗೆಯೇ ಕೂದಲನ್ನು ಕತ್ತರಿಸಬಾರದು. 

ಒಂದು ವೇಳೆ ಉಪವಾಸ ಆಚರಣೆಯಲ್ಲಿದ್ದರೆ ಆ ದಿನ ಕೂಡ ತಲೆ ಸ್ನಾನ ಮಾಡಬಾರದು. ಸೋಮವಾರ ಉಪವಾಸ ಮಾಡುತ್ತಿದ್ದರೆ ಅನೇಕರು ಅದೇ ದಿನ ಸ್ನಾನ ಮಾಡಿ ಶುದ್ಧವಾಗ್ತಾರೆ. ಆದ್ರೆ ಅದು ತಪ್ಪು. ಹಿಂದಿನ ದಿನವೇ ತಲೆ ಸ್ನಾನ ಮಾಡಿ ಶುದ್ಧರಾಗಬೇಕು. ಉಪವಾಸದ ದಿನ ಕೂದಲು ಕತ್ತರಿಸುವುದು ಅನಿವಾರ್ಯವಾದ್ರೆ ಹಸಿ ಹಾಲನ್ನು ತಲೆಗೆ ಹಾಕಿ ನಂತ್ರ ಸ್ನಾನ ಮಾಡಬೇಕು.

Raksha Bandhan: ಸಹೋದರನಿಗೆ ಕಟ್ಟಬೇಕು ರಾಖಿ, ಆದ್ರೆ ಇಂಥದ್ದಲ್ಲ

ಇದಲ್ಲದೇ ಗುರುವಾರದಂದು ಮದುವೆಯಾದ ಹೆಂಗಸರು ಕೂದಲು  ಸ್ವಚ್ಛಗೊಳಿಸಬಾರದು. ಹೆಂಗಸರು ಮಾತ್ರವಲ್ಲ ಪುರುಷರು ಕೂಡ ಗುರುವಾರ ತಲೆ ಸ್ನಾನ ಮಾಡಬಾರದು. ಇದು ಹಣಕಾಸಿನ ಸಮಸ್ಯೆಗೆ ಕಾರಣವಾಗುತ್ತದೆ. ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತದೆ.  

ಇನ್ನು ಶನಿವಾರವನ್ನು ಶನಿ ದೇವರಿಗೆ ಮೀಸಲಿಡಲಾಗಿದೆ. ಈ ದಿನ  ಕೂದಲಿಗೆ ಎಣ್ಣೆಯನ್ನು ಹಚ್ಚಬಾರದು. ಹಾಗೆ ಕೂದಲನ್ನು ಸ್ವಚ್ಛಗೊಳಿಸಬಾರದು. ಹೀಗೆ ಮಾಡಿದ್ರೆ ಶನಿಯ ವಕ್ರದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ. 
 

Latest Videos
Follow Us:
Download App:
  • android
  • ios