ವಿರುಷ್ಕಾ, ಝುಕರ್‌ಬರ್ಗ್, ಸ್ಟೀವ್ ಜಾಬ್ಸ್.. ವಿಶ್ವದ ದಿಗ್ಗಜರೆಲ್ಲ ಗುರು ಎನ್ನುವ ಬಾಬಾ ನೀಮ್ ಕರೋಲಿ ಯಾರು?
ಇತ್ತೀಚೆಗಷ್ಟೇ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ದಂಪತಿ ತಮ್ಮ ಮಗಳು ವಾಮಿಕಾಳೊಂದಿಗೆ ವೃಂದಾವನದ ಕೈಂಚಿಯಲ್ಲಿರುವ ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ನೀಡಿದರು. ಈ ಬಾಬಾ ನೀಮ್ ಕರೋಲಿ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ವೃಂದಾವನದ ಈ ಆಶ್ರಮಕ್ಕೆ ಹೋಗುತ್ತಾರೆ, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಕೂಡಾ ಈ ಆಶ್ರಮಕ್ಕೆ ಬಂದಿದ್ದಾರೆ, ಆ್ಯಪಲ್ ಸಂಸ್ಥೆಯ ಸ್ಟೀವ್ ಜಾಬ್ಸ್‌ಗೆ ಕೂಡಾ ಈ ಆಶ್ರಮದಲ್ಲಿ ಪ್ರೇರಣೆ ದೊರಕುತ್ತದೆ, ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಕೂಡಾ ಈ ಆಶ್ರಮದ ಬಗ್ಗೆ ಆಕರ್ಷಣೆ ಹೊಂದಿದ್ದಾರೆ...
ಇಂಥ ವಿಶ್ವ ದಿಗ್ಗಜರನ್ನೆಲ್ಲ ಸೆಳೆಯುವ ಈ ಆಶ್ರಮ ಯಾವುದು, ಈ ಆಶ್ರಮದಲ್ಲಿರುವ ಶಕ್ತಿ ಎಂಥದ್ದು ಕೇಳಿದರೆ ಇಷ್ಟು ದಿನವಾದರೂ ನೀಮ್ ಕರೋಲಿ ಬಾಬಾ ಬಗ್ಗೆ ತಿಳಿಯದ್ದಕ್ಕೆ ಪಶ್ಚಾತ್ತಾಪ ಪಡುತ್ತೀರಿ.
ಹೌದು, ಬಾಬಾ ನೀಮ್ ಕರೋಲಿ ಎಂಬ ಶಕ್ತಿಯೇ ಈ ಜನಪ್ರಿಯ ಸೆಲೆಬ್ರಿಟಿಗಳನ್ನೆಲ್ಲ ವೃಂದಾವನಕ್ಕೆ ಎಳೆ ತರುತ್ತಿರುವುದು.
ಇತ್ತೀಚೆಗಷ್ಟೇ ಮಥುರಾದ ವೃಂದಾವನದಲ್ಲಿರುವ ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಪುತ್ರಿ ವಾಮಿಕಾ ಜೊತೆಗೆ ಭೇಟಿ ನೀಡಿ ಸುಮಾರು ಒಂದು ಗಂಟೆಗಳ ಕಾಲ ಅಲ್ಲಿ ಕಳೆದರು. ಬಾಬಾ ಸಮಾಧಿಯ ದರ್ಶನ ಮಾಡಿ ಅಲ್ಲಿಯೇ ಇದ್ದ ಗುಡಿಸಲಿನಲ್ಲಿ ಧ್ಯಾನ ಮಾಡಿದರು. ಅಲ್ಲಿಂದ ಮಾ ಆನಂದಮಯಿ ಆಶ್ರಮಕ್ಕೆ ಹೊರಡುವ ಮೊದಲು ಅವರು ಫೋಟೋಗಳನ್ನು ತೆಗೆದುಕೊಂಡರಲ್ಲದೆ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದರು. ಶರ್ಮಾ ಕುಟುಂಬವು ನೀಮ್ ಕರೋಲಿ ಬಾಬಾ ಅವರ ಅನುಯಾಯಿ ಎಂದು ವರದಿಯಾಗಿದೆ.
ಜ.10ರಂದು ಅಂಗಾರಕ ಸಂಕಷ್ಟಿ ಚತುರ್ಥಿ, ವ್ರತ ಆಚರಣೆ ಹೇಗೆ, ಪ್ರಯೋಜನವೇನು?
ಅವರ ಈ ಭೇಟಿಯ ಬಳಿಕ ಬಾಬಾ ನೀಮ್ ಕರೋಲಿ ಕುರಿತು ಜನರಲ್ಲಿ ಕುತೂಹಲ ಹೆಚ್ಚಾಗಿದೆ. ಬಾಬಾ ಕುರಿತು ವಿಷಯಗಳನ್ನು ಬಿಡಿಸುತ್ತಾ ಹೋದಂತೆಲ್ಲ ಅವರಿಗೆ ಕೇವಲ ಶರ್ಮಾ ಕುಟುಂಬವಷ್ಟೇ ಅಲ್ಲ ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್ ಮತ್ತು ಜೂಲಿಯಾ ರಾಬರ್ಟ್ಸ್ ಸಹ ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ನೀಡಿದ್ದರು ಎಂಬ ವಿಷಯ ಹೊರ ಬಿದ್ದಿದೆ. ಇಷ್ಟಕ್ಕೂ ಈ ಬಾಬಾ ನೀಮ್ ಕರೋಲಿ ಯಾರು?
ಬಾಬಾ ನೀಮ್ ಕರೋಲಿ
ನೀಬ್ ಕರೋರಿ ಬಾಬಾ ಎಂದೂ ಕರೆಯಲ್ಪಡುವ ಹಿಂದೂ ಗುರುವನ್ನು ಅವರ ಅನುಯಾಯಿಗಳು ಮಹಾರಾಜ್ ಜಿ ಎನ್ನುತ್ತಾರೆ. ಅವರು ಆಂಜನೇಯನ ಭಕ್ತರಾಗಿದ್ದರು. ಭಕ್ತಿ ಯೋಗದ ಪ್ರವೀಣರಾಗಿದ್ದ ಬಾಬಾ, ಇತರರನ್ನು ಅಸಹಾಯಕರ ಸೇವೆ ಮಾಡಲು ಪ್ರೇರೇಪಿಸುತ್ತಿದ್ದರು. ಇತರರಿಗೆ ಸೇವೆ ಸಲ್ಲಿಸುವುದು ದೇವರಿಗೆ ಬೇಷರತ್ತಾದ ಭಕ್ತಿಯ ಅತ್ಯುತ್ತಮ ರೂಪವೆಂದು ಪರಿಗಣಿಸಿದರು. ಅವರು 1960 ಮತ್ತು 70ರ ದಶಕಗಳಲ್ಲಿ ಭಾರತಕ್ಕೆ ಪ್ರಯಾಣಿಸಿದ ಹಲವಾರು ಅಮೇರಿಕನ್ನರ ಆಧ್ಯಾತ್ಮಿಕ ಗುರುಗಳಾಗಿ ಹೆಸರುವಾಸಿಯಾಗಿದ್ದರು. ಬಾಬಾ ನೀಮ್ ಕರೋಲಿ ಅವರು ಸೆಪ್ಟೆಂಬರ್ 11, 1973 ರಂದು ವೃಂದಾವನದ ಆಸ್ಪತ್ರೆಯಲ್ಲಿ ಮಧುಮೇಹ ಕೋಮಾಕ್ಕೆ ಜಾರಿದ ನಂತರ ನಿಧನರಾದರು.
Makar Sankranti 2023: ಸೂರ್ಯನಂತೆ ಹೊಳೆವ 4 ರಾಶಿಗಳ ಅದೃಷ್ಟ
ಝುಕರ್‌ಬರ್ಗ್‌ಗೆ ಬಾಬಾ ಬಗ್ಗೆ ತಿಳಿಸಿದ್ದ ಸ್ಟೀವ್ ಜಾಬ್ಸ್!
ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಕೂಡ ಬಾಬಾ ನೀಮ್ ಕರೋಲಿಯಿಂದ ಪ್ರೇರಿತರಾಗಿದ್ದರು ಮತ್ತು ನೀಮ್ ಕರೋಲಿ ಬಾಬಾ ಅವರನ್ನು ಭೇಟಿ ಮಾಡಲು ಆಶ್ರಮಕ್ಕೆ ಭೇಟಿ ನೀಡಿದ್ದರು. ಆದರೆD<d'jndneins ಬಾಬಾ ನೀಮ್ ಕರೋಲಿ ಅವರು ಸಾವನ್ನಪ್ಪಿದ್ದರಿಂದ ಜಾಬ್ಸ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಆದರೂ ಕೂಡಾ ಜಾಬ್ಸ್ ಬಾಬಾರಿಂದ ಸಾಕಷ್ಟು ಪ್ರೇರೇಪಿತರಾಗಿದ್ದರು. 2015ರಲ್ಲಿ ಫೇಸ್‌ಬುಕ್ ಕಠಿಣ ಹಂತದಲ್ಲಿದ್ದಾಗ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್‌ಗೆ ವೃಂದಾವನದ ಕೈಂಚಿಯಲ್ಲಿರುವ ಬಾಬಾ ಕರೋಲಿ ಆಶ್ರಮಕ್ಕೆ ಭೇಟಿ ನೀಡುವಂತೆ ಸ್ಟೀವ್ ಜಾಬ್ಸ್ ಸೂಚಿಸಿದ್ದರು. ಈ ಸಂದರ್ಭದಲ್ಲಿ ಒಂದು ದಿನಕ್ಕಾಗಿ ಇಲ್ಲಿಗೆ ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಬಂದ ಝುಕರ್‌ಬರ್ಗ್ ಎರಡು ದಿನ ಕಳೆದರು.
ಇದಲ್ಲದೆ, ಜೂಲಿಯಾ ರಾಬರ್ಟ್ಸ್ ಕೂಡ ನೀಮ್ ಕರೋಲಿ ಬಾಬಾರಿಂದ ಪ್ರಭಾವಿತಳಾಗಿ ಹಿಂದೂ ಧರ್ಮಕ್ಕೆ ಆಕರ್ಷಿತಳಾಗಿದ್ದಾಳೆ ಎಂದು ಹೇಳಲಾಗುತ್ತದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಶಿಫ್ ಖರೇಷಿ, 'ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್, ಜೂಲಿಯಾ ರಾಬರ್ಟ್ಸ್ ಮತ್ತು ಈ ಪ್ರಪಂಚದ ಅನೇಕ ಸಾಧಕರನ್ನು ಪ್ರೇರೇಪಿಸಿದ ಭಾರತೀಯ ಅತೀಂದ್ರಿಯ ಸಾಧಕ ಬಾಬಾ ನೀಮ್ ಕರೋಲಿ. ಬಹಳ ಹಿಂದೆಯೇ ನಿಧನರಾದ ನಂತರವೂ,ಪ್ರೇರೇಪಣೆ ಮುಂದುವರೆಸಿದ್ದಾರೆ. ನೀವು ಭಾರತೀಯರಾಗಿದ್ದರೆ ಮತ್ತು ಬಾಬಾ ಬಗ್ಗೆ ಗೊತ್ತಿಲ್ಲದಿದ್ದರೆ ಅದು ತುಂಬಾ ದುರದೃಷ್ಟಕರ ' ಎಂದಿದ್ದಾರೆ.