Veer Savarkar ಕತೆ ಹೇಳುವ ‘ಕೊಪ್ಪಳ ಕಾ ರಾಜಾ’

ನಗರದ ಶಾರದಾ ಚಿತ್ರಮಂದಿರದ ಬಳಿ ಕೊಪ್ಪಳ ಕಾ ರಾಜಾ ಗೆಳೆಯರ ಬಳಗ ಸ್ಥಾಪಿಸಿರುವ ‘ಕೊಪ್ಪಳ ಕಾ ರಾಜಾ’ ಗಣೇಶ ಮೂರ್ತಿಯ ದರ್ಶನದ ಜತೆಗೆ ವಿನಾಯಕ ದಾಮೋದರ ಸಾವರ್ಕರ್‌ ಜೀವನ ಕಥೆ ಅನಾವರಣವಾಗುತ್ತದೆ. ಇಡೀ ಪೆಂಡಾಲ್‌ ಸಾವರ್ಕರಮಯವಾಗಿದೆ

Koppala Ka Raja geleyar balaga tells the story of Veer Savarkar

ವರದಿ: ಸೋಮರಡ್ಡಿ ಅಳವಂಡಿ

ಕೊಪ್ಪಳ (ಸೆ.2) : ನಗರದ ಶಾರದಾ ಚಿತ್ರಮಂದಿರದ ಬಳಿ ಕೊಪ್ಪಳ ಕಾ ರಾಜಾ ಗೆಳೆಯರ ಬಳಗ ಸ್ಥಾಪಿಸಿರುವ ‘ಕೊಪ್ಪಳ ಕಾ ರಾಜಾ’ ಗಣೇಶ ಮೂರ್ತಿಯ ದರ್ಶನದ ಜತೆಗೆ ವಿನಾಯಕ ದಾಮೋದರ ಸಾವರ್ಕರ್‌ ಜೀವನ ಕಥೆ ಅನಾವರಣವಾಗುತ್ತದೆ. ಇಡೀ ಪೆಂಡಾಲ್‌ ಸಾವರ್ಕರಮಯವಾಗಿದೆ. ಅವರ ಜೀವನ ಪ್ರಾರಂಭದಿಂದ ಹಿಡಿದು ಅಂಡಮಾನ್‌ ಜೈಲಿನಲ್ಲಿ ಅನುಭವಿಸಿದ ಯಾತನೆ ಕಣ್ಮುಂದೆಯೇ ಬರುವಂತಿವೆ ಅಲ್ಲಿರುವ ಒಕ್ಕಣಿಕೆಗಳು. ಸುಮಾರು ಅರ್ಧ ಕಿಮೀ ಪೆಂಡಾಲ್‌ ಹಾಕಿದ್ದಾರೆ. ಅದರಲ್ಲೂ ಪೆಂಡಾಲ್‌ ಪ್ರತಿ ಕಂಬಕ್ಕೂ ವೀರ್‌ ಸಾರ್ವಕರ್‌ ಫೋಟೋ ಮತ್ತು ಅವರ ಜೀವನದ ಮಹತ್ವದ ಘಟನೆಗಳನ್ನು ದಾಖಲಿಸಿದ್ದಾರೆ. ಅವರ ಜೀವನ ಪ್ರಾರಂಭದಿಂದ ಹಿಡಿದು ಸ್ವಾತಂತ್ರ್ಯಕ್ಕಾಗಿ ಹೋರಾಡಿತ ಪರಿ, ಜೈಲಲ್ಲಿ ಅನುಭವಿಸಿದ ಯಾತನೆ, ದೇಶದ ಏಕತೆಗಾಗಿ ಮಾಡಿದ ಶಪಥ, ದೇಶದ ಏಕತೆಗಾಗಿ ನೀಡಿದ ಕೊಡುಗೆಗಳು ಸೇರಿದಂತೆ ಎಲ್ಲವನ್ನು ಅಚ್ಚುಕಟ್ಟಾಗಿ ಬರೆದು ವಿವರಿಸಿದ್ದಾರೆ. ಅದಕ್ಕೆ ಪೂರಕ ಚಿತ್ರಗಳನ್ನು ನೀಡಿದ್ದರಿಂದ ಮತ್ತಷ್ಟುಆಕರ್ಷವಾಗಿದೆ.

Gadag: ಸಾವರ್ಕರ್ ಇವರ ಆರಾಧ್ಯ ದೈವ: ಇವರ ಮನೆ ಹೆಸರೂ ವೀರ ಸಾವರ್ಕರ್!

ಸಾಂಸ್ಕೃತಿಕ ಕಾರ್ಯಕ್ರಮ: ‘ಕೊಪ್ಪಳ ಕಾ ರಾಜಾ’ ಗಣೇಶ ಮೂರ್ತಿ ಬಳಿ ವೀರ್‌ ಸಾರ್ವಕರ್‌ ವೇದಿಕೆ ಮಾಡಲಾಗಿದ್ದು, 9 ದಿನಗಳ ಕಾಲವೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಗಣೇಶ ಮೂರ್ತಿಗೆ ಬೆಳ್ಳಿ ಪಾದುಕೆ ಮತ್ತು ಹಸ್ತವನ್ನು ಭಕ್ತರೊಬ್ಬರು ಈ ಕಾಣಿಕೆ ನೀಡಿದ್ದಾರೆ.

ಎಲ್ಲೆಡೆ ಸಾವರ್ಕರ್‌ ಭಾವಚಿತ್ರ: ಹಿಂದೂಪರ ಸಂಘಟನೆಗಳು ಕರೆ ನೀಡಿದಂತೆ ಕೊಪ್ಪಳದ ಅನೇಕ ಗಣೇಶ ಮೂರ್ತಿ ಸ್ಥಾಪಿಸಿರುವ ಪೆಂಡಾಲ್‌ನಲ್ಲಿ ವೀರ್‌ ಸಾವರ್ಕರ್‌ ಫೋಟೋಗಳನ್ನು ಹಾಕಿದ್ದಾರೆ. ಕೆಲವರು ಸಾವರ್ಕರ್‌ ಫೋಟೋ ಮಾತ್ರ ಹಾಕಿದ್ದರೆ ಇನ್ನು ಕೆಲವರು ಬಾಲಗಂಗಾಧರ ತಿಲಕ ಮತ್ತು ವೀರ್‌ ಸಾವರ್ಕರ್‌ ಫೋಟೊಗಳನ್ನು ಅಳವಡಿಸಿದ್ದಾರೆ.

ಗಡಿಯಾರಕಂಬದ ಬಳಿ ವಿನಾಯಕ ಮಿತ್ರಮಂಡಳಿ ಸ್ಥಾಪಿಸಿರುವ ಗಣೇಶ ಮೂರ್ತಿಯ ಪೆಂಡಾಲ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರೆಲ್ಲರ ಫೋಟೋ ಹಾಕಿದ್ದಾರೆ. ಈ ಮೂಲಕ ಗಣೇಶ ಮೂರ್ತಿಯ ಸ್ಥಾಪನೆ ಕೇವಲ ಹಿಂದೂ ಧರ್ಮದ ಪ್ರತೀಕವಲ್ಲ. ದೇಶದ ಸ್ವಾತಂತ್ರ್ಯ ಹೋರಾಟದ ಕಿಚ್ಚಿನ ಪ್ರತೀಕ ಎಂಬುದನ್ನು ಸಾರುವ ಪ್ರಯತ್ನ ಮಾಡಲಾಗಿದೆ. ಹಿಂದೂ ಮಹಾಗಣಪತಿ ಸ್ಥಾಪನೆಯಲ್ಲಿಯೂ ವೀರ್‌ ಸಾವರ್ಕರ್‌ ಫೋಟೋ ರಾರಾಜಿಸುತ್ತಿದೆ. ಗೊತ್ತಾ ವಿನಾಯಕ ದಾಮೋದರ ಸಾವರ್ಕರ್ ಬದುಕಿನ ಸತ್ಯ ಕಥೆ? ಭಾಗ-2

ಗಣೇಶ ಮೂರ್ತಿಯ ದರ್ಶನಕ್ಕೆ ಬರುವ ಭಕ್ತರು ವೀರ್‌ ಸಾವರ್ಕರ್‌ ಅವರ ಹೋರಾಟವನ್ನು ತಿಳಿದುಕೊಳ್ಳಬೇಕು ಎನ್ನುವ ಕಾರಣಕ್ಕಾಗಿಯೇ ಪೆಂಡಾಲ್‌ನ ಪ್ರತಿ ಕಂಬದ ಮೂಲಕ ಅವರ ಜೀವನ ಮತ್ತು ಹೋರಾಟದ ದರ್ಶನ ಮಾಡಿಸಲಾಗಿದೆ.

ಉಮೇಶ ಕುರುಡೇಕರ್‌ ಅಧ್ಯಕ್ಷರು, ಕೊಪ್ಪಳ ಕಾ ರಾಜ್‌ ಗೆಳೆಯರ ಬಳಗ

Latest Videos
Follow Us:
Download App:
  • android
  • ios