Gadag: ಸಾವರ್ಕರ್ ಇವರ ಆರಾಧ್ಯ ದೈವ: ಇವರ ಮನೆ ಹೆಸರೂ ವೀರ ಸಾವರ್ಕರ್!

ವೀರ ಸಾವರ್ಕರ್ ವರ್ಸಸ್ ಟಿಪ್ಪು ವಿವಾದ ರಾಜ್ಯಾದ್ಯಂತ ಬುಗಿಲೆದ್ದಿದೆ. ರಾಜಕೀಯ ಕೆಸರೆರಚಾಟದಲ್ಲಿ ಸಾವರ್ಕರ್ ಹೆಸರನ್ನು ವಿವಾದವನ್ನಾಗಿ ಮಾಡುತ್ತಿದ್ದರೆ ಮುದ್ರಣಾಕಾಶಿ ಗದಗನಲ್ಲಿ ಸಾವರ್ಕರ್ ಅವರ ಆರಾಧನೆ ಮಾಡಲಾಗುತ್ತಿದೆ. 

Rokhade Family In Gadag Is Worshipping Veer Savarkar gvd

ಗದಗ (ಆ.20): ವೀರ ಸಾವರ್ಕರ್ ವರ್ಸಸ್ ಟಿಪ್ಪು ವಿವಾದ ರಾಜ್ಯಾದ್ಯಂತ ಬುಗಿಲೆದ್ದಿದೆ. ರಾಜಕೀಯ ಕೆಸರೆರಚಾಟದಲ್ಲಿ ಸಾವರ್ಕರ್ ಹೆಸರನ್ನು ವಿವಾದವನ್ನಾಗಿ ಮಾಡುತ್ತಿದ್ದರೆ ಮುದ್ರಣಾಕಾಶಿ ಗದಗನಲ್ಲಿ ಸಾವರ್ಕರ್ ಅವರ ಆರಾಧನೆ ಮಾಡಲಾಗುತ್ತಿದೆ. ಮನಸಲ್ಲಿ ಅಷ್ಟೆ ಅಲ್ಲ, ಮನೆಯಲ್ಲೂ ಸಾವರ್ಕರ್ ಅವರ ಫೋಟೋ ಇಟ್ಟು ಅಭಿಮಾನ ಮೆರೆಯುತ್ತಿದ್ದಾರೆ. ಗದಗ ನಗರದ ಒಕ್ಕಲಗೇರಿ ಬಡಾವಣೆಯ ವಿಶ್ವನಾಥ ರೋಖಡೆ, ಮಹೇಶ ರೋಖಡೆ ಎಂಬುವವರು ತಮ್ಮ ಮನೆಗೆ ವೀರ ಸಾವರ್ಕರ್ ನಿಲಯ ಅಂತಾ ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲ ಮನೆಯ ದೇವರ ಕೋಣೆಯಲ್ಲೂ ಸಾವರ್ಕರ್ ಭಾವಚಿತ್ರವಿಟ್ಟು ನಿತ್ಯ ಪೂಜೆ ಸಲ್ಲಿಸ್ತಾರೆ. ಸ್ವಾತಂತ್ರ್ಯಕ್ಕಾಗಿ, ಹಿಂದೂಗಳನ್ನ ಒಗ್ಗೂಡಿಸಲು ಹಾಗೂ ದೇಶಕ್ಕಾಗಿ ಕಾಲಾಪಾನಿ ಸೆರೆಮನೆ ಅನುಭವಿಸಿದ್ದಾರೆ. 

ಅವರ ತತ್ವ ಸಿದ್ಧಾಂತಗಳು ಮಾದರಿಯಾಗಿವೆ. ಹೀಗಾಗಿ ಅವರು ನಮ್ಮ ದೈವ ಅಂತಾರೆ ರೋಖಡೆ ಕುಟುಂಬ. ಗದಗನ ರೋಖಡೆ ಕುಟುಂಬದವರು ಸಾವರ್ಕರ್ ಬಗ್ಗೆ ಇಂದು-ನಿನ್ನೆಯಿಂದ ಆರಾಧನೆ ಮಾಡ್ತಿಲ್ಲ. ಹತ್ತಾರು ವರ್ಷಗಳಿಂದ ಪೂಜ್ಯನೀಯ ಭಾವನೆಯಿಂದ ಸಾವರ್ಕರ್ ಅವರನ್ನ ದೇವ ಮಾನವನಂತೆ ಕಾಣ್ತಿದ್ದಾರೆ. ದೇವರನ್ನ ನೋಡಿಲ್ಲ, ಆದ್ರೆ ಅಪ್ರತಿಮ ಹೋರಾಟಗಾರ ಸಾವರ್ಕರ್ ಅವರಲ್ಲಿ ದೇವರನ್ನ ಕಾಣ್ತಿದಿವಿ ಅಂತಾರೆ ರೋಖಡೆ ಕುಟುಂಬಸ್ಥರು. ಮೂರು ವರ್ಷ ಹಿಂದೆ ರೋಖಡೆ ಕುಟುಂಬ ಮನೆ ನಿರ್ಮಿಸಿದೆ. ಮನೆಗೆ ಹೆಸರಿಡುವ ಪ್ರಸ್ತಾಪ ಬಂದಾಗ ಎಲ್ಲರೂ ಸೇರಿ‌ ಸಾವರ್ಕರ್ ಹೆಸರು ಇಡುವ ಇಂಗಿತ ವ್ಯಕ್ತಪಡಿಸಿದ್ರಂತೆ. ಹೀಗಾಗಿ ಒಮ್ಮತದಿಂದ ಎಲ್ಲರೂ ವೀರ ಸಾವರ್ಕರ್ ನಿಲಯ ಅಂತಾ ಮನೆಗೆ ನಾಮಕರಣ ಮಾಡಿದ್ರಂತೆ.

ಅಪ್ಪು ಕುಟುಂಬಸ್ಥರೇ ನನ್ನ ಮಗುವಿಗೆ ಹೆಸರಿಡಬೇಕು : ಗದಗದಿಂದ ಅಭಿಮಾನಿಯ ವಿಶಿಷ್ಟ ಬಯಕೆ!

ಶ್ರೀರಾಮ ಸೇನೆಯಿಂದ ನಾನೂ ಸಾವರ್ಕರ್ ಅಭಿಯಾನ: ಮತ್ತೊಂದ್ಕಡೆ ಶ್ರೀರಾಸೇನೆ ಆಟೋ ಸೇನಾ ಸಂಘದಿಂದ ಸುಮಾರು 90 ಆಟೋಗಳಲ್ಲಿ ವೀರ ಸಾವರ್ಕರ್ ಭಾವಚಿತ್ರ ಅಂಟಿಸಲಾಗಿದೆ. ಈ ಮೂಲಕ ಅವರ ಜೀವನ ಸಾಧನೆ, ಅವರ ತತ್ವ ಸಿದ್ದಾಂತಗಳು, ಕಾಲಾಪಾನಿ ಶಿಕ್ಷೆ ಹಾಗೂ ಅವರ ಹೋರಾಟದ ಬದುಕನ್ನು ಜನಮನಗಳಲ್ಲಿ ಮೂಡಿಸುತ್ತಿದ್ದಾರೆ. ಅಪ್ಪಟ ದೇಶ ಪ್ರೇಮಿಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳಬೇಡಿ ಎಂಬ ಖಡಕ್ ಸಂದೇಶವನ್ನೂ ರಾಮಸೇನೆ ನೀಡ್ತಿದೆ. ಆಟೋ ಚಾಲಕರು ಸ್ವಯಂ ಪ್ರೇರಣೆಯಿಂದ ತಮ್ಮ ತಮ್ಮ ಆಟೋಗಳಿಗೆ ಸಾವರ್ಕರ್ ಭಾವಚಿತ್ರ ಹಾಕಿಕೊಂಡಿದ್ದಾರೆ. 

ಗದಗ: ಕುಡಿದು ಕಿರಿಕ್ ಮಾಡ್ತಿದ್ದ ತಂದೆಯನ್ನೇ ಬರ್ಬರವಾಗಿ ಕೊಂದ ಮಗ

ಇನ್ನು ಮುಂದೆ ವೀರ ಸಾವರ್ಕರ್ ಯಾರು, ಎಂಬುದನ್ನು ಪರಿಚಯಿಸಲು ಆಟೋಗಳಿಗೆ ಭಾವಚಿತ್ರ ಅಂಟಿಸಿ ಪರಿಚಯಿಸುವ ಕೆಲಸ ಮಾಡ್ತಿದ್ದೇವೆ ಅಂತಿದ್ದಾರೆ ಶ್ರೀರಾಮಸೇನೆಯ ವಿಭಾಗೀಯ ಸಂಚಾಲಕ ರಾಜು ಖಾನಪ್ಪನವರ್. ರಾಜ್ಯದಲ್ಲಿ ಸಾವರ್ಕರ್ ವರ್ಸಸ್ ಟಿಪ್ಪು ವಿವಾದ ಜೋರಾಗಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್, ಸಾವರ್ಕರರನ್ನು ತೇಜೋವಧೆ ಮಾಡ್ತಿದ್ರೆ, ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ. ಹಿಂದೂ ಸಂಘಟನೆ ಕಾರ್ಯಕರ್ತರು, ಗದಗ ಶ್ರೀರಾಮ ಸೇನೆ ಕಾರ್ಯಕರ್ತರು ಸಾವರ್ಕರರ ಮೇಲಿನ ಪ್ರೀತಿ ತೋರುತ್ತಿದ್ದಾರೆ. ಗದಗನ ಹಿಂದೂ ಸಂಘಟನೆ ಕಾರ್ಯಕರ್ತರು ವಿಶೇಷ ರೀತಿಯಲ್ಲಿ ನಾನೂ ಸಾವರ್ಕರ್ ಎಂಬ ಅಭಿಯಾನ ಶುರುವಾಗಿದೆ.

Latest Videos
Follow Us:
Download App:
  • android
  • ios