Asianet Suvarna News Asianet Suvarna News

ನಿಮಗೆ ಈ ಭಾಗಗಳಲ್ಲಿ ಮಚ್ಚೆ ಇದ್ದರೆ ಒಲಿಯುತ್ತೆ ಅದೃಷ್ಟ!

ಶರೀರದ ಮೇಲಿರುವ ಮಚ್ಚೆಯು ವ್ಯಕ್ತಿಯ ಗುಣ ಸ್ವಭಾವ ಮತ್ತು ಭವಿಷ್ಯದ ವಿಷಯಗಳನ್ನು ಸೂಚಿಸುವ ಒಂದು ಬಗೆಯ ಸಂಕೇತವಾಗಿದೆ. ಜನ್ಮಜಾತವಾಗಿರುವ ಮಚ್ಚೆಯು ಭಾಗ್ಯವನ್ನು ಮತ್ತು ವ್ಯಕ್ತಿಯ ಚಾರಿತ್ಯ್ರವನ್ನು ಹೇಳುತ್ತದೆ. ಜ್ಯೋತಿಷ್ಯದ ಪ್ರಕಾರ ಶರೀರದ ಮೇಲಿರುವ ಮಚ್ಚೆಯು ಯಾವ ಮಹತ್ವವನ್ನು ಹೊಂದಿರುತ್ತದೆ ಮತ್ತು ಆ ವ್ಯಕ್ತಿಯ ಕೇಡಿಗೆ ಮೈ ಮೇಲಿನ ಆ ಒಂದು ಚುಕ್ಕೆಯೇ ಕಪ್ಪು ಚುಕ್ಕೆಯಾಗುತ್ತದೆ ಎಂಬುದನ್ನು ಅರಿಯೋಣ ಬನ್ನಿ.

Know your fortune by Mole astrology
Author
Bangalore, First Published Apr 17, 2020, 4:39 PM IST

ಮೈಮೇಲಿನ ಒಂದೇ ಒಂದು ಮಚ್ಚೆ ಏನೆಲ್ಲ ಹೇಳುತ್ತದೆ ಎಂಬುದು ಬಹುತೇಕರಿಗೆ ಗೊತ್ತೇ ಇರುವುದಿಲ್ಲ. ಇಲ್ಲಿ ನಿಮ್ಮ ಅದೃಷ್ಟವೂ ಅಡಗಿರಬಹುದು. ಇಲ್ಲವೇ ಒಂದೇ ಮಚ್ಚೆ ಕಪ್ಪು ಚುಕ್ಕಿಯಾಗಿ ಕಾಡಲೂಬಹುದು. ಆದರೆ, ಯಾವ ಜಾಗದಲ್ಲಿ ಮಚ್ಚೆಗಳಿದ್ದರೆ ಒಳ್ಳೆಯದು ಹಾಗೂ ಕೆಟ್ಟದ್ದು ಎಂಬುದನ್ನು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. 

ಹಸ್ತ ರೇಖೆಯ ಶಾಸ್ತ್ರದಲ್ಲಿ ವ್ಯಕ್ತಿಯ ಶರೀರದ ಮೇಲಿರುವ ಮಚ್ಚೆಯನ್ನು ನೋಡಿ ಭವಿಷ್ಯವನ್ನು ಹೇಳಬಹುದೆಂದು ಉಲ್ಲೇಖಿಸಲಾಗಿದೆ. ಶರೀರದ ಯಾವ ಭಾಗದಲ್ಲಿರುವ ಮಚ್ಚೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯಬಹುದಾಗಿದೆ. 

ಇದನ್ನೂ ಓದಿ: ಸುಖ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು

ಹಣೆಯ ಮೇಲಿರುವ ಮಚ್ಚೆ
ಹಣೆಯ ಮಧ್ಯಭಾಗದಲ್ಲಿ ಮಚ್ಚೆಯಿದ್ದರೆ ಅಂಥವರು ತುಂಬಾ ಅದೃಷ್ಟವಂತರು. ಇವರು ಮಾಡುವ ಎಲ್ಲ ಕೆಲಸಗಳಿಗೂ ಅದೃಷ್ಟ ಜೊತೆಗಿರುತ್ತದೆ. ಪ್ರತಿ ಕ್ಷೇತ್ರದಲ್ಲಿಯೂ ಯಶಸ್ಸನ್ನು ಕಾಣುತ್ತಾರೆ. ಅದೃಷ್ಟ ದೇವತೆ ಮತ್ತು ಲಕ್ಷ್ಮೀದೇವಿಯ ಆಶೀರ್ವಾದವೂ ಇವರ ಬಳಿ ಸದಾ ಇರುತ್ತದೆ. ಹಣೆಯ ಬಲ ಅಥವಾ ಎಡಭಾಗದಲ್ಲಿರುವ ಮಚ್ಚೆ ಧನ ಸಮೃದ್ಧಿಯ ಸಂಕೇತ. ಇವರು ಹೆಚ್ಚು ಹಣವನ್ನು ಸಂಪಾದಿಸುತ್ತಾರೆ. ಐಷಾರಾಮಿ ಜೀವನವನ್ನು ಬಯಸುತ್ತಾರೆ. ಹೆಚ್ಚು ಧನವ್ಯಯ ಮಾಡುವ ಕಾರಣ ಇವರ ಹತ್ತಿರ ದುಡ್ಡು ನಿಲ್ಲುವುದಿಲ್ಲ.

ಹುಬ್ಬಿನ ಮೇಲಿರುವ ಮಚ್ಚೆ
ಹುಬ್ಬುಗಳ ಮಧ್ಯದಲ್ಲಿರುವ ಮಚ್ಚೆಯು ನಾಯಕತ್ವದ ಗುಣಗಳನ್ನು ಹೇಳುತ್ತದೆ. ಇಂಥವರು ಖ್ಯಾತಿಯನ್ನು ಪಡೆಯುವುದಲ್ಲದೇ ಆರ್ಥಿಕ ಸಮೃದ್ಧಿಯನ್ನು ಹೊಂದಿರುತ್ತಾರೆ. ಹುಬ್ಬಿನ ಎಡಭಾಗದಲ್ಲಿ ಮಚ್ಚೆ ಇದ್ದವರು ಹೇಡಿತನವನ್ನು ತೋರುತ್ತಾರೆ. ವ್ಯವಹಾರದಲ್ಲಿ ಹೆಚ್ಚು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹುಬ್ಬಿನ ಬಲಭಾಗದಲ್ಲಿರುವ ಮಚ್ಚೆಯು ಸಂತೋಷ ಮತ್ತು ಸುಖ ವೈವಾಹಿಕ ಜೀವನ ಹಾಗೂ ಆರೋಗ್ಯವಂತ ಮಕ್ಕಳನ್ನು ಸೂಚಿಸುತ್ತದೆ.

ಕಣ್ಣು, ಕಿವಿಯಲ್ಲಿನ ಮಚ್ಚೆ
ಬಲಗಣ್ಣಿನಲ್ಲಿ ಮಚ್ಚೆ ಇದ್ದರೆ ಅವರು ಪ್ರಾಮಾಣಿಕರಾಗಿರುತ್ತಾರೆ. ಹೆಚ್ಚು ಪರಿಶ್ರಮವನ್ನು ಪಡುತ್ತಾರೆ ಮತ್ತು ವಿಶ್ವಾಸಕ್ಕೆ ಅರ್ಹರಾಗಿರುತ್ತಾರೆ. ಎಡಗಣ್ಣಿನಲ್ಲಿ ಮಚ್ಚೆ ಇದ್ದರೆ ನಿರಾಶಾವಾದಿ ಮನೋಭಾವವನ್ನು ಹೊಂದಿರುತ್ತಾರೆ. ಕಿವಿಯ ಯಾವುದೇ ಭಾಗದಲ್ಲಿರುವ ಮಚ್ಚೆಯು ಐಷಾರಾಮಿ ಜೀವನವನ್ನು ಸೂಚಿಸುತ್ತದೆ.

ಇದನ್ನೂ ಓದಿ: ವಿಷ್ಣುವನ್ನು ಪ್ರಸನ್ನಗೊಳಿಸುವ ಪವಿತ್ರ ವೈಶಾಖ ಮಾಸ

ತುಟಿಯ ಮಚ್ಚೆ
ಮಹಿಳೆ ಅಥವಾ ಪುರುಷನ ತುಟಿಯ ಮೇಲಿನ ಬಲಭಾಗದಲ್ಲಿ ಮಚ್ಚೆ ಇದ್ದರೆ ಅಂಥವರ ದಾಂಪತ್ಯ ಜೀವನ ಸುಖವಾಗಿರುತ್ತದೆ. ಈ ಸ್ಥಾನದಲ್ಲಿರುವ ಮಚ್ಚೆ ವೈವಾಹಿಕ ಜೀವನದಲ್ಲಿ ಒಬ್ಬನ್ನೊಬ್ಬರು ಅರ್ಥಮಾಡಿಕೊಂಡು ಸುಖದಿಂದ ಸಂಸಾರ ನಡೆಸುವ ಸಂಕೇತವನ್ನು ತಿಳಿಸುತ್ತದೆ. ಕೆಳಗಿನ ತುಟಿಯಲ್ಲಿ ಮಚ್ಚೆ ಇದ್ದವರು ಆಹಾರದ ಬಗ್ಗೆ ಹೆಚ್ಚು ಒಲವನ್ನು ಹೊಂದಿರುತ್ತಾರೆ. ಪುರುಷ ಅಥವಾ ಮಹಿಳೆಯ ತುಟಿಯ ಎಡಭಾಗದಲ್ಲಿ ಮಚ್ಚೆ ಇದ್ದರೆ ಅದನ್ನು ಅಶುಭವೆಂದು ಹೇಳಲಾಗುತ್ತದೆ. ಇಂಥವರು ವೈವಾಹಿಕ ಜೀವನದಲ್ಲಿ ಕೆಲ ಸಂಕಷ್ಟಗಳನ್ನು ಎದುರಿಸ ಬೇಕಾಗುತ್ತದೆ ಎಂದು ನಂಬಲಾಗುತ್ತದೆ. 

ನಾಲಿಗೆಯ ಮೇಲಿರುವ ಮಚ್ಚೆ
ನಾಲಿಗೆಯ ಮೇಲಿರುವ ಮಚ್ಚೆಯು ಶಿಕ್ಷಣದಲ್ಲಿನ ತೊಂದರೆ ಮತ್ತು ವಾಕ್ ಸಂಬಂಧಿತ ಸಮಸ್ಯೆಯ ಸಂಕೇತವಾಗಿದೆ. ನಾಲಿಗೆಯ ತುದಿಯಲ್ಲಿರುವ ಮಚ್ಚೆಯು ರಾಜತಾಂತ್ರಿಕತೆ ಮತ್ತು ಕೌಶಲ್ಯವುಳ್ಳವರಾಗಿರುತ್ತಾರೆ.

ಗಲ್ಲದ ಮಚ್ಚೆ
ಗಲ್ಲದ ಮೇಲಿರುವ ಮಚ್ಚೆ ಇರುವವರು ಪ್ರಯಾಣವನ್ನು ಇಚ್ಚೆ ಪಡುತ್ತಾರೆ. ಹೆಚ್ಚೆಚ್ಚು ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಬಲಭಾಗದಲ್ಲಿದ್ದರೆ ತಾರ್ಕಿಕವಾಗಿ ಉತ್ತರಿಸುವ ಸ್ವಭಾವವನ್ನು ಹೊಂದಿರುತ್ತಾರೆ. ಎಡಭಾಗದಲ್ಲಿದ್ದರೆ ಪ್ರಾಮಾಣಿಕರಾಗಿರುತ್ತಾರೆ.

ಮೇ 3ರ ನಂತರ ಯಾರ ಭವಿಷ್ಯ ಹೇಗಿರುತ್ತೆ?

ಕುತ್ತಿಗೆಯ ಮಚ್ಚೆ
ಕುತ್ತಿಗೆಯ ಮುಂಭಾಗದಲ್ಲಿ ಮಚ್ಚೆ ಇದ್ದರೆ ಅಂಥವರು ಅದೃಷ್ಟವಂತರಾಗಿರುತ್ತಾರೆ. ಉತ್ತಮ ಧ್ವನಿ ಮತ್ತು ಕಲಾತ್ಮಕ ಸ್ವಭಾವವನ್ನು ಹೊಂದಿರುತ್ತಾರೆ. ಹಿಂಭಾಗದಲ್ಲಿದ್ದರೆ ಆಕ್ರಮಣಕಾರಿ ಮನೋಭಾವದವರಾಗಿರುತ್ತಾರೆ.

ಎದೆಯಲ್ಲಿರುವ ಮಚ್ಚೆ
ಎದೆಯ ಎಡಭಾಗದಲ್ಲಿ ಮಚ್ಚೆ ಇದ್ದವರಿಗೆ ಹೃದಯ ಸಂಬಂಧಿ ರೋಗಗಳು ಬಾಧಿಸುವ ಸಾಧ್ಯತೆ ಇರುತ್ತದೆ. ಇಂಥವರ ವಿವಾಹ ವಿಳಂಬವಾಗುವುದು. ಇವರು ಕಾಮಾಸಕ್ತರಾಗಿರುತ್ತಾರೆ. ಎದೆಯ ಬಲಭಾಗದಲ್ಲಿದ್ದರೆ ಅಂಥವರು ಶ್ರೀಮಂತರಾಗಿರುತ್ತಾರೆ.

ಹೊಕ್ಕುಳಲ್ಲಿರುವ ಮಚ್ಚೆ
ಮಹಿಳೆಯ ಹೊಕ್ಕಳಿನ ಸುತ್ತ ಇರುವ ಮಚ್ಚೆಯು ವೈವಾಹಿಕ ಜೀವನದ ಸುಖ ಮತ್ತು ಉತ್ತಮ ಸಂತಾನವನ್ನು ಸೂಚಿಸುತ್ತದೆ. ಪುರುಷನ ಹೊಕ್ಕುಳಿನ ಎಡಭಾಗದಲ್ಲಿ ಮಚ್ಚೆ ಇದ್ದರೆ ಅಂಥವರು ಸುಖ, ಸಮೃದ್ಧಿ ಮತ್ತು ಕೀರ್ತಿಯನ್ನು ಪಡೆಯುತ್ತಾರೆ.

ಮೊಣಕಾಲಿನ ಹಾಗೂ ಪಾದದ ಮೇಲೆ ಮಚ್ಚೆ
ಎಡಗಡೆ ಇರುವ ಮಚ್ಚೆಯು ಧೈರ್ಯ ಮತ್ತು ಸಾಹಸದ ಮತ್ತು ಐಷಾರಾಮಿ ಜೀವನವನ್ನು ಸೂಚಿಸುತ್ತದೆ. ಬಲಭಾಗದಲ್ಲಿದ್ದರೆ ಪ್ರಾಮಾಣಿಕ ಮತ್ತು ಸ್ನೇಹ ಜೀವಿಯಾಗಿರುತ್ತಾರೆ. ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಬಲ ಪಾದದ ಮೇಲೆ ಮಚ್ಚೆ ಇದ್ದವರು ಉತ್ತಮ ಸಂಗಾತಿಯನ್ನು ಪಡೆಯುತ್ತಾರೆ ಮತ್ತು ತೃಪ್ತಿದಾಯಕ ಜೀವನವನ್ನು ನಡೆಸುತ್ತಾರೆ. ಕಾಲಿನಲ್ಲಿ ಮಚ್ಚೆ ಇದ್ದರೆ ಯಾವ ಕೆಲಸವನ್ನು ಯೋಚಿಸದೆಯೆ ಮಾಡುವ ಸ್ವಭಾವದವರಾಗಿರುತ್ತಾರೆ. ಇದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಕಾರಾತ್ಮಕ ಮನೋಭಾವ ಉಳ್ಳವರಾಗಿರುತ್ತಾರೆ.

ಇದನ್ನೂ ಓದಿ: ಬ್ರಹ್ಮಚಾರಿ ಹನುಮಂತನ ಮಡದಿ ಬಗ್ಗೆ ನಿಮಗೆಷ್ಟು ಗೊತ್ತು?

ಕೈ ಮತ್ತು ಕಾಲ್ಬೆರಳ ಮೇಲಿರುವ ಮಚ್ಚೆ
ಕೈ ಬೆರಳುಗಳಲ್ಲಿರುವ ಮಚ್ಚೆಯನ್ನು ಹೊಂದಿದ್ದವರು ಅದೃಷ್ಟಹೀನರೆಂದು ಹೇಳಲಾಗುತ್ತದೆ. ಆದರೆ ಅಂಗುಷ್ಠದ ಕೆಳಭಾಗದಲ್ಲಿ ಶುಕ್ರ ಪರ್ವತದಲ್ಲಿ ಮಚ್ಚೆ ಇದ್ದರೆ ಅಂಥವರು ಜೀವನದಲ್ಲಿ ಹೆಚ್ಚು ಹಣವನ್ನು ಸಂಪಾದಿಸುವುದರ ಜೊತೆಗೆ ಯಶಸ್ಸನ್ನು ಪಡೆಯುತ್ತಾರೆ. ಕಾಲ್ಬೆರಳಲ್ಲಿರುವ ಮಚ್ಚೆಯು ಅತೃಪ್ತ ವೈವಾಹಿಕ ಜೀವನವನ್ನು ಸೂಚಿಸುತ್ತದೆ. 

ಹೊಟ್ಟೆಯಲ್ಲಿರುವ ಮತ್ತು ಬೆನ್ನಿನಲ್ಲಿರುವ ಮಚ್ಚೆಯ ಸಂಕೇತ
ಹೊಟ್ಟೆಯ ಬಲಭಾಗದಲ್ಲಿರುವ ಮಚ್ಚೆಯು ಧಮಸಂಪತ್ತನ್ನು ಸೂಚಿಸುತ್ತದೆ. ಆದರೆ ಮಹಿಳೆಯರ ದೌರ್ಬಲ್ಯವನ್ನು ಹೊಂದಿರುತ್ತಾರೆ. ಬೆನ್ನುಹುರಿಯಲ್ಲಿರುವ ಮಚ್ಚೆಯು ಯಶಸ್ಸು, ನಾಯಕತ್ವ ಮತ್ತು ಪ್ರಖ್ಯಾತಿಯನ್ನು ಸೂಚಿಸುತ್ತಿದ್ದರೆ, ಬೆನ್ನಿನ ಬಲಭಾಗದ ಮಚ್ಚೆಯು ಉತ್ತಮ ಆರೋಗ್ಯವನ್ನು ಹೊಂದಿರುತ್ತದೆ. ಎಡಭಾಗಕ್ಕಿದ್ದರೆ ಅಂಥವರು ರಾಜತಾಂತ್ರಿಕ ಮನೋಭಾವವನ್ನು ಹೊಂದಿರುತ್ತಾರೆ.

Follow Us:
Download App:
  • android
  • ios