ಮೇಷ
ನೀವು ಸರಕಾರಿ ಉದ್ಯೋಗಿ ಆಗಿದ್ದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಇದರ ಬಳಿಕ‌ ನಿಮ್ಮ‌ ಕೆಲಸ ಕಾರ್ಯಗಳು ಹೆಚ್ಚಲಿವೆ. ಸ್ವಂತ ಉದ್ಯಮಿಗಳಿಗೆ ಆದಾಯ ಹೆಚ್ಚಲಿದೆ. ಕ್ಯಾಟರಿಂಗ್‌ ಉದ್ಯಮಕ್ಕೆ ಭವಿಷ್ಯ ಉಜ್ವಲವಾಗಿದೆ.

ವೃಷಭ
ನೀವು ಖಾಸಗಿ ಕಂಪನಿ ಉದ್ಯೋಗಿಗಳಾಗಿದ್ದರೆ ಸ್ವಲ್ಪ ಚಿಂತಿಸಬೇಕಾದ ಪ್ರಮೇಯ ಬರಲಿದೆ. ನಿಮ್ಮ ಎಫಿಶಿಯೆನ್ಸಿಗೆ ಸಾಣೆ ಹಿಡಿಯಬೇಕಾದೀತು. ಅಂಗಡಿ ಇರುವವರಿಗೆ ಲಾಭ ದುಪ್ಪಟ್ಟಾಗಲಿದೆ. ಸ್ವತ ಉದ್ಯಮಿಗಳಿಗೆ ಸೂಕ್ತ ಸಹಕಾರ ಸಿಗದೆ ಹೋದೀತು.

ಮಿಥುನ
ಶುಭಕಾರ್ಯಗಳಿಗೆ ಸಂಬಂಧಿಸಿದ ಉದ್ಯಮ ನಿಮ್ಮದಾಗಿದ್ದರೆ ತಾತ್ಕಾಲಿಕ ಹಿನ್ನಡೆ ಆದೀತು. ಬಂಧುಗಳು ನಿಮಗಿಂತ ಹೆಚ್ಚಿನ ಯಶಸ್ಸು ಸಾಧಿಸಿದರೆ ಕೊರಗಬೇಡಿ. ಜೂನ್‌ ನಂತರ ವಹಿವಾಟಿನಲ್ಲಿ ಸ್ವಲ್ಪ ಮುನ್ನಡೆ ಸಾಧಿಸಲಿದ್ದೀರಿ.

ಸುಖ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು 

ಕಟಕ
ಮಾಧ್ಯಮ ಕ್ಷೇತ್ರದಲ್ಲಿ ಇರುವವರು ತಮ್ಮ ಕೌಶಲಗಳಿಗೆ ಸಾಣೆ ಹಿಡಿಯಬೇಕಾದ ಕಾಲವಿದು. ಆದಾಯದಲ್ಲಿ ಕೊರತೆ ಇರದು. ಸರಕಾರಿ ಉದ್ಯೋಗಿಗಳಿಗೆ ಎಣಿಸಿದ ಭಡ್ತಿ ಸಿಗದೆ ಹೋಗಬಹುದು. ಪೊಲೀಸರಿಗೆ ಹೆಚ್ಚಿನ ಕೆಲಸ. ಉದ್ಯಮಿಗಳು ಹಣ ಹೂಡಬೇಕಾದೀತು.

ಸಿಂಹ
ನಿಮ್ಮದು ಪೊಲೀಸ್‌ ಮತ್ತಿತರ ಸುರಕ್ಷಾ ವಲಯದಲ್ಲಿ ಇರುವ ಕೆಲಸ ಆಗಿದ್ದರೆ, ನಿಮ್ಮ ಕಾರ್ಯಭಾರ ತುಸು ತಗ್ಗಬಹುದು. ಆದಾಯದಲ್ಲಿ ಕೊರತೆಯಿಲ್ಲ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಕಷ್ಟವಾಗಬಹುದು. ಸರಕಾರಿ ಉದ್ಯೋಗಗಳಿಗೆ ಭಡ್ತಿ ಆಗಲಿದೆ. 

ಕನ್ಯಾ
ಹೋಟೆಲ್ ಉದ್ಯಮಿಗಳಿಗೆ ಭರವಸೆ ಚಿಗುರುತ್ತದೆ. ಆದರೆ ವಲಯವನ್ನು ವಿಸ್ತರಿಸಿಕೊಳ್ಳಬೇಕಾದ ಅನಿವಾರ್ಯತೆ. ಧಾರ್ಮಿಕ ವಲಯದಲ್ಲಿ ಇರುವವರಿಗೆ ಹೆಚ್ಚಿನ ಅವಕಾಶಗಳು ತಾವಾಗಿ ಒಲಿದು ಬರಲಿವೆ. ದೇವಾಲಯಗಳು ತೆರೆದುಕೊಳ್ಳಲಿರುವುದರಿಂದ ಹೆಚ್ಚಿನ ಅವಕಾಶ.

ತುಲಾ
ನೀವು ವೈದ್ಯಕೀಯ ಸೇವೆಯಲ್ಲಿರುವವರಾಗಿದ್ದರೆ ನಿಮ್ಮ ಒತ್ತಡ ಇನ್ನೂ ಹೆಚ್ಚಲಿದೆ. ಈಗಾಗಲೇ ಸಾಕಷ್ಟು ಕೆಲಸದಿಂಧ ಬಳಲಿರುತ್ತೀರಿ. ಕುಟುಂಬಕ್ಕೆ ಹೆಚ್ಚಿನ ಗಮನ ಕೊಡಲು ಆಗದೆ ಹೋಗಬಹುದು. ಆದರೆ ಸೇವೆಯೇ ದೇವರು ಎಂದು ಭಾವಿಸುವಿರಿ. ನಿಮಗೂ ಆರೋಗ್ಯ ಸಮಸ್ಯೆ ಎದುರಾಗಬಹುದು.

ವಿಷ್ಣುವನ್ನು ಪ್ರಸನ್ನಗೊಳಿಸುವ ಪವಿತ್ರ ವೈಶಾಖ ಮಾಸ 

ವೃಶ್ಚಿಕ
ನೀವು ಕೃಷಿಕರಾಗಿದ್ದರೆ ಈಗ ಕೈತುಂಭ ಕೆಲಸ ಇರಲಿದೆ. ಕಳೆದ ಮೂರು ತಿಂಗಳು ನಿಮ್ಮ ಕೃಷಿಗೆ ಸಾಕಷ್ಟು ಹೊಡೆತ ಕೊಟ್ಟಿರಬಹುದು. ಈಗ ಅದನ್ನ ಮರೆತು ಮುಂದಿನ ಕೆಲಸ ಮಾಡಲು ಸುಸಮಯ. ಕೃಷಿ ಸಂಬಂಧಿತ ಉದ್ಯಮಿಗಳಿಗೆ ಶ್ರೇಯಸ್ಸು ಉಂಟಾಗಲಿದೆ.

ಧನು
ಕೆಲಸವಿಲ್ಲದ ಕಾರ್ಮಿಕರಿಗೆ ಕೈತುಂಬ ಕೆಲಸ ಸಿಗಲಿದೆ. ದೂರ ಪ್ರದೇಶಗಳಿಗೆ ಹೋಗಬೇಕಾದೀತು. ಕುಟುಂಬವನ್ನು ಬಿಟ್ಟು ಹೋಗಬೇಕಾದೀತು. ಆದರೆ ಹೊಸ ಕೆಲಸದಲ್ಲಿ ಉಜ್ವಲ ಭವಿಷ್ಯ ಇದೆ. ಮುದ್ರಕರಿಗೆ ಹೊಸ ಕೆಲಸಗಳು ಹುಡುಕಿಕೊಂಡು ಬರಬಹುದು.

ಮಕರ
ಸಣ್ಣಪುಟ್ಟ ದೈನಂದಿನ ಕೆಲಸ ಮಾಡಿ ಬದುಕು ಸಾಗಿಸುವವರಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಬಹುದು. ರಿಯಾಲ್ಟಿ ಕ್ಷೇತ್ರದವರಿಗೆ ಕೆಲಸಗಳು ಹೆಚ್ಚಲಿವೆ. ಕೆಲಸ ಹೆಚ್ಚಾದರೂ ಆದಾಯ ಸ್ವಲ್ಪ ದೂರದಲ್ಲೇ ಇದೆ. ಕಾಯಬೇಕಾದೀತು. ಕೆಲಸದ ಸ್ಥಳದಲ್ಲಿ ಗಾಯವಾಗುವ ಸಾಧ್ಯತೆಯಿದೆ.

ಕುಂಭ
ನೀವು ಬ್ಯಾಂಕ್ ಉದ್ಯೋಗಿಗಳಾಗಿದ್ದರೆ ಕೆಲಸ ಹಾಗೂ ಆದಾಯ ಎರಡೂ ಹೆಚ್ಚಾಗಬಹುದು. ಭಡ್ತಿ ದೊರೆಯಬಹುದು, ಬಹುದಿನಗಳಿಂದ ಬಾಕಿಯಿದ್ದ ಪ್ರಮೋಶನ್‌ ಆದೀತು. ವಂಚನೆಗಳ ಬಗ್ಗೆ ಹುಷಾರಾಗಿರಿ. ಹೋಟೆಲ್‌ ಉದ್ಯಮಿಗಳಿಗೆ ಶ್ರೇಯಸ್ಸಿದೆ.

ಮೀನ
ಕೃಷಿ, ಪಶುಸಾಕಣೆ, ಮೀನುಗಾರಿಕೆ ಮುಂತಾದ ಕೆಲಸಗಳಲ್ಲಿ ಇರುವವರಿಗೆ ಇದು ತಮ್ಮ ತಾಕತ್ತನ್ನು ಪಣಕ್ಕೆ ಇಡುವಂಥ ಕಾಲ. ಹಳೆಯ ಆದಾಯ ಕೈ ಬಿಟ್ಟು ಹೋಗಿರಬಹುದು, ಆದರೆ ಹೊಸ ಕೆಲಸಗಳನ್ನು ಕೈ ಬಿಡುವುದು ಸರಿಯಲ್ಲ. ನಿಮ್ಮ ಶ್ರದ್ಧೆ ನಿಮ್ಮನ್ನು ಕಾಪಾಡಲಿದೆ.