Lunar Eclipse 2022: ಈ ಎರಡು ರಾಶಿಗಳ ಜನರು ಎಚ್ಚರ, ಕಟ್ಟೆಚ್ಚರ!

ಇನ್ನೊಂದು ವಾರದಲ್ಲಿ ವೈಶಾಖ ಪೂರ್ಣಿಮೆಯಂದು ಚಂದ್ರಗ್ರಹಣವು ವೃಶ್ಚಿಕ ರಾಶಿಯಲ್ಲಿ ಸಂಭವಿಸುತ್ತದೆ. ಇದು ಯಾವ ರಾಶಿ ಮತ್ತು ನಕ್ಷತ್ರದವರಿಗೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ.

Know which zodiac sign will be affected by Chandra Grahan skr

2022 ರ ಮೊದಲ ಚಂದ್ರಗ್ರಹಣ(lunar eclipse)ವು ಬುದ್ಧ ಪೂರ್ಣಿಮೆ(Vaishakh Purnima)ಯಂದು ವೃಶ್ಚಿಕ ರಾಶಿಯಲ್ಲಿ ಸಂಭವಿಸುತ್ತಿದೆ. ಅಂದರೆ  ಸೋಮವಾರ, ಮೇ 16 ರಂದು ನಡೆಯಲಿದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿರಲಿದೆ. ಇದರ ಗೋಚರತೆ ಭಾರತದಲ್ಲಿ ಇರುವುದಿಲ್ಲ. ಹಾಗಾಗಿ ಸೂತಕದ ಸಮಯವೂ ಅನ್ವಯವಾಗುವುದಿಲ್ಲ. ಈ ಕಾರಣದಿಂದ ವೈಶಾಖ ಪೂರ್ಣಿಮಾವನ್ನು ಆಚರಿಸಬಹುದು. ಹುಣ್ಣಿಮೆಯ ದಿನದ ಸ್ನಾನ, ದಾನಗಳಿಗೆ ವಿಶೇಷ ಮಹತ್ವವಿದೆ. 

ನಾಲ್ಕು ಗ್ರಹಣಗಳು
ಇನ್ನು ಗ್ರಹಣದ ವಿಚಾರಕ್ಕೆ ಮರಳೋಣ. ಈ ವರ್ಷ ಒಟ್ಟು ನಾಲ್ಕು ಗ್ರಹಣಗಳು, ಎರಡು ಚಂದ್ರಗ್ರಹಣಗಳು ಮತ್ತು ಎರಡು ಸೂರ್ಯಗ್ರಹಣ(solar eclipse)ಗಳು ಇವೆ. ಅದರಲ್ಲಾಗಲೇ ಒಂದು ಸೂರ್ಯಗ್ರಹಣ ಕಳೆದಿದೆ. ಮೇ 16 ರಂದು ಚಂದ್ರಗ್ರಹಣವಾಗುತ್ತದೆ. ನಂತರ, ಅಕ್ಟೋಬರ್ 25, 2022 ರಂದು, ಸ್ವಾತಿ ನಕ್ಷತ್ರ ಮತ್ತು ತುಲಾ ರಾಶಿಯಲ್ಲಿ ಸೂರ್ಯಗ್ರಹಣವು ಸಂಜೆ 4:23 ಕ್ಕೆ ಪ್ರಾರಂಭವಾಗುತ್ತದೆ. ಈ ಗ್ರಹಣ ಸಂಜೆ 6:25ಕ್ಕೆ ಕೊನೆಗೊಳ್ಳಲಿದೆ. ಈ ಗ್ರಹಣ ದೇಶದ ವಿವಿಧೆಡೆ ಗೋಚರಿಸಲಿದೆ. ನವೆಂಬರ್ 8, 2022 ರಂದು, ಭರಣಿ ನಕ್ಷತ್ರ ಮತ್ತು ಮೇಷ ರಾಶಿಯಲ್ಲಿ ಖಂಡಗ್ರಾಸ ಚಂದ್ರಗ್ರಹಣ ಸಂಭವಿಸುತ್ತದೆ. ಇದು ಭಾರತದಲ್ಲೂ ಗೋಚರಿಸಲಿದೆ. ಅಂದರೆ ಈ ವರ್ಷ ಎರಡು ಗ್ರಹಣಗಳು ಗೋಚರಿಸುತ್ತವೆ ಮತ್ತು ಎರಡು ಗ್ರಹಣಗಳು ಗೋಚರಿಸುವುದಿಲ್ಲ.

ಗ್ರಹಣವೆಂಬುದು ಬಹಳ ದೊಡ್ಡ ಬದಲಾವಣೆ. ಇದು ಪ್ರತಿ ಚರಾಚರದ ಮೇಲೆ ಪರಿಣಾಮ ಬೀರುತ್ತದೆ. ಆ ಲೆಕ್ಕದಲ್ಲಿ ಕೆಲವೊಂದು ರಾಶಿ ಹಾಗೂ ನಕ್ಷತ್ರಗಳ ಮೇಲೆ ಗ್ರಹಣದ ಪರಿಣಾಮ ಹೆಚ್ಚು. ಈ ಗ್ರಹಣದಿಂದ ಯಾವ ರಾಶಿ ಮತ್ತು ರಾಶಿಯ ಜನರು ಹೆಚ್ಚು ಪ್ರಭಾವಿತರಾಗುತ್ತಾರೆ ಎಂದು ತಿಳಿಯೋಣ. 

ಮಿಥುನ(Gemini): ಚಂದ್ರಗ್ರಹಣವು ಈ ರಾಶಿಚಕ್ರದ ಜನರಿಗೆ ತೊಂದರೆಯನ್ನುಂಟುಮಾಡುತ್ತದೆ. ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಈ ಸಂದರ್ಭದಲ್ಲಿ ಪ್ರತಿ ಕೆಲಸದಲ್ಲಿ ಜಾಗರೂಕರಾಗಿರಿ. ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಹಸ ಬೇಡ. ಇದಲ್ಲದೆ, ಯಾವುದಾದರೂ ವಸ್ತು ಹಾನಿಯ ಬಲವಾದ ಸಾಧ್ಯತೆಯಿದೆ. ಪ್ರಯಾಣದಲ್ಲಿ ಅಡೆತಡೆಗಳು ಎದುರಾಗಬಹುದು. ಯಾವುದೇ ಕೆಲಸದಲ್ಲಿ ಆತುರ ಪಡಬೇಡಿ. ಈ ಸಮಯದಲ್ಲಿ, ಯಾರನ್ನೂ ಕುರುಡಾಗಿ ನಂಬಲು ಹೋಗಬೇಡಿ. ಅದರಿಂದ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗಬಹುದು. 

Silver Benefits: ಬೆಳ್ಳಿ ಬಳಸಿ, ಜೀವನ ಜಗಮಗಿಸಿ

ವೃಶ್ಚಿಕ(Scorpio): ಗ್ರಹಣದ ಸಮಯದಲ್ಲಿ ಚಂದ್ರನು ವೃಶ್ಚಿಕ ರಾಶಿಯಲ್ಲಿಯೇ ಸಂಚಾರ ಮಾಡುತ್ತಾನೆ. ಇದರಿಂದಾಗಿ ವೃಶ್ಚಿಕ ರಾಶಿಯ ಜನರು ಗ್ರಹಣದಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. ಈ ರಾಶಿಯ ಜನರು ಗ್ರಹಣ ಸಂದರ್ಭದಲ್ಲಿ ಎಲ್ಲ ವಿಷಯಗಳಲ್ಲೂ ಜಾಗರೂಕರಾಗಿರಬೇಕು. ಯಾವುದೇ ಕೆಲಸದಲ್ಲಿ ಆತುರವು ನಿಮಗೆ ದೊಡ್ಡ ಹೊಡೆತ ಕೊಡಬಹುದು. ಕೆಲಸದ ಸ್ಥಳದಲ್ಲಿ ನೀವು ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಬಾಸ್ ಜೊತೆ ಕೆಲವು ರೀತಿಯ ವಾದಗಳು ಇರಬಹುದು. ಕೆಲಸ ಕಳೆದುಕೊಳ್ಳುವ ಅಪಾಯವಿರುತ್ತದೆ. ಆದ್ದರಿಂದ ಎಚ್ಚರದಿಂದಿರಿ. ವಿದ್ಯಾರ್ಥಿಗಳಿಗೆ ಕೂಡಾ ಇದು ಪರೀಕ್ಷಾ ಕಾಲ.  ತಿಂಗಳ ಕಾಲ ಚಂದ್ರ ಸಮಸ್ಯೆಯನ್ನುಂಟು ಮಾಡಬಹುದು. 

ಕ್ರಿಸ್ಟೋಫರ್ ಕೋಲಂಬಸ್‌ಗೆ ವರವಾದ ಚಂದ್ರಗ್ರಹಣ!

ವಿಶಾಖ ನಕ್ಷತ್ರ(Vishaka): ಈ ನಕ್ಷತ್ರದಲ್ಲಿ ಜನಿಸಿದವರಿಗೆ ಈ ಚಂದ್ರಗ್ರಹಣವು ತೊಂದರೆಯನ್ನುಂಟು ಮಾಡುತ್ತದೆ. ನೀವು ಎಲ್ಲದರಲ್ಲೂ ಜಾಗರೂಕರಾಗಿರಬೇಕು. ಯಾವುದೇ ರೀತಿಯ ವಾದದಿಂದ ದೂರವಿರಿ. ಯಾರಿಂದಾದರೂ ಮೋಸ ಹೋಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಎಚ್ಚರದಿಂದಿರಿ. ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios