Asianet Suvarna News Asianet Suvarna News

ಶಿರಡಿ ದೇವಾಲಯಕ್ಕೆ 2022ರಲ್ಲಿ 400 ಕೋಟಿ ಆದಾಯ! ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಿವು..

ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ ಅತಿ ಶ್ರೀಮಂತವಾದ 10 ದೇವಾಲಯಗಳ ಪಟ್ಟಿ ಇಲ್ಲಿದೆ..

know which are Indias 10 richest temples skr
Author
First Published Jan 8, 2023, 3:09 PM IST

ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚು ದೇವಾಲಯಗಳಿವೆ. ಈ ದೇವಾಲಯಗಳು ಪ್ರತಿ ವರ್ಷ ಕೋಟಿಗಟ್ಟಲೆ ದೇಣಿಗೆಯನ್ನು ಪಡೆಯುತ್ತವೆ. ಲಕ್ಷಗಟ್ಟಲೆ ಭಕ್ತರು ಯಾವುದೇ ಇಚ್ಛೆಯ ನೆರವೇರಿಕೆಗಾಗಿ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಕಳೆದ ವರ್ಷ ಶಿರಡಿಯ ಸಾಯಿ ಮಂದಿರದಲ್ಲಿ ಬರೋಬ್ಬರಿ 400 ಕೋಟಿ ರೂ. ದೇಣಿಗೆ ಬಂದಿದೆ. ತಿರುಪತಿ ಬಾಲಾಜಿ ದೇವಸ್ಥಾನಕ್ಕೆ 650 ಕೋಟಿ ರೂ. ದೇಣಿಗೆ ಬಂದಿದೆ. ಇದರಲ್ಲಿ ಹಣದ ಹೊರತಾಗಿ ವಜ್ರ-ಚಿನ್ನ ಮತ್ತು ಬೆಳ್ಳಿಯ ಆಭರಣಗಳೂ ಸೇರಿವೆ. ದೇಶದ ಶ್ರೀಮಂತ 10 ದೇವಾಲಯಗಳ(Richest temples of India) ಪಟ್ಟಿ ಇಲ್ಲಿದೆ. 

ಪದ್ಮನಾಭಸ್ವಾಮಿ ದೇವಸ್ಥಾನ
ಪದ್ಮನಾಭಸ್ವಾಮಿ ದೇವಾಲಯವನ್ನು ದೇಶದ ಅತ್ಯಂತ ಶ್ರೀಮಂತ ದೇವಾಲಯ ಎಂದು ಕರೆಯಲಾಗುತ್ತದೆ. ಇದು ಕೇರಳದ ತಿರುವನಂತಪುರಂನಲ್ಲಿದೆ. ತಿರುವಾಂಕೂರಿನ ಹಿಂದಿನ ರಾಜಮನೆತನದವರು ಈ ದೇವಾಲಯವನ್ನು ನೋಡಿಕೊಳ್ಳುತ್ತಾರೆ. ಇದರ ಸಂಪತ್ತುಗಳಲ್ಲಿ ವಜ್ರಗಳು, ಚಿನ್ನದ ಆಭರಣಗಳು ಮತ್ತು ಚಿನ್ನದ ಶಿಲ್ಪಗಳು ಸೇರಿವೆ. ವರದಿಯೊಂದರ ಪ್ರಕಾರ, ಒಟ್ಟು 20 ಬಿಲಿಯನ್ ಡಾಲರ್ ಅಂದರೆ 1 ಲಕ್ಷದ 65 ಸಾವಿರ ಕೋಟಿ ರೂ. ಬೆಲೆಯ ಸಂಪತ್ತನ್ನು ದೇವಸ್ಥಾನದ 6 ಕಮಾನುಗಳಲ್ಲಿ ಬೀಗ ಹಾಕಲಾಗಿದೆ ಎಂದು ಅಂದಾಜಿಸಲಾಗಿದೆ. 2021ರಲ್ಲಿ ಈ ದೇವಾಲಯದ ಕಾಣಿಕೆ ಪೆಟ್ಟಿಗೆಯಲ್ಲಿ 833 ಕೋಟಿ ರೂ. ಬಂದಿತ್ತು.
 
ತಿರುಪತಿ ಬಾಲಾಜಿ ದೇವಸ್ಥಾನ
ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶದ ತಿರುಪತಿ ದೇವಸ್ಥಾನ ಎರಡನೇ ಸ್ಥಾನದಲ್ಲಿದೆ. ಭಾರತದ ವೈಷ್ಣವ ಪಂಥದ ದೇವಾಲಯವಾದ ತಿರುಪತಿಯು ದೇಣಿಗೆಯ ವಿಷಯದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ದೇವಾಲಯವಾಗಿದೆ. ಈ ದೇವಾಲಯದ ವಾಸ್ತುಶೈಲಿ ನೋಡಲು ಯೋಗ್ಯವಾಗಿದೆ. ಇಲ್ಲಿ ಪ್ರತಿ ವರ್ಷ ಸುಮಾರು 650 ಕೋಟಿ ರೂಪಾಯಿಯಷ್ಟು ದೇಣಿಗೆ ಬರುತ್ತದೆ. ದಿನಂಪ್ರತಿ ಸುಮಾರು 6-8 ಕೋಟಿ ರೂ. ಹಣ ಕಾಣಿಕೆಯಾಗಿ ಇಲ್ಲಿ ಸಂಗ್ರಹವಾಗುತ್ತದೆ.
 
ವೈಷ್ಣೋ ದೇವಿ ದೇವಸ್ಥಾನ
ಜಮ್ಮುವಿನ ವೈಷ್ಣೋದೇವಿ ದೇವಸ್ಥಾನದ ಹೆಸರು ದೇಶದ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ದೇವಸ್ಥಾನ ಪ್ರತಿ ವರ್ಷ ಸುಮಾರು ₹ 500 ಕೋಟಿಯ ಕೊಡುಗೆಯನ್ನು ಪಡೆಯುತ್ತದೆ.

Makar Sankranti 2023: ಇಂದು ಗಂಗಾಸ್ನಾನ ಮಾಡಿದರೆ 1000 ಗೋದಾನ ಮಾಡಿದ ಫಲ

ಶಿರಡಿ ಸಾಯಿಬಾಬಾ ದೇವಸ್ಥಾನ
ಶಿರಡಿ ಸಾಯಿಬಾಬಾ ದೇವಾಲಯವು ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ವರದಿಗಳ ಪ್ರಕಾರ, ದೇವಾಲಯದಲ್ಲಿ 380 ಕೆಜಿ ಚಿನ್ನ, 4,428 ಕೆಜಿ ಬೆಳ್ಳಿ ಇದೆ. ಬ್ಯಾಂಕ್ ಖಾತೆಗಳಲ್ಲಿ ಸುಮಾರು 1,800 ಕೋಟಿ ರೂ. ಇದೆ. 2021ರವರೆಗೆ ಇಲ್ಲಿಗೆ ಪ್ರತಿ ವರ್ಷ ಸುಮಾರು 350 ಕೋಟಿ ದೇಣಿಗೆ ಬರುತ್ತಿತ್ತು. ಇದು 2022ರ ಅಂತ್ಯದ ವೇಳೆಗೆ 400 ಕೋಟಿಗಿಂತ ಹೆಚ್ಚಾಗಿದೆ.
 
ಶಬರಿಮಲೆ ಅಯ್ಯಪ್ಪ ದೇವಸ್ಥಾನ, ಕೇರಳ
ದೇಶದ ಶ್ರೀಮಂತ ದೇವಾಲಯಗಳ ಪಟ್ಟಿಯಲ್ಲಿ ಶಬರಿಮಲೆ ಅಯ್ಯಪ್ಪ ದೇವಾಲಯವೂ ಸೇರಿದೆ. ಆಡಳಿತದ ಪ್ರಕಾರ, ಈ ದೇವಾಲಯವು ವಾರ್ಷಿಕ ಸುಮಾರು 230 ಕೋಟಿ ರೂ. ದೇಣಿಗೆ ಪಡೆಯುತ್ತದೆ.

ಇಂದು ಪುಷ್ಯ ನಕ್ಷತ್ರ; ಚಿನ್ನ ಖರೀದಿಸಿದ್ರೆ ನಿಮ್ಮ ಸಂಪತ್ತು ದುಪ್ಪಟ್ಟಾಗುತ್ತೆ..
 
ಸಿದ್ಧಿವಿನಾಯಕ ದೇವಸ್ಥಾನ

ಮುಂಬೈನ ಸಿದ್ಧಿವಿನಾಯಕ ದೇವಾಲಯವು ಅತ್ಯಂತ ಪ್ರಸಿದ್ಧವಾದ ಗಣೇಶನ ದೇವಾಲಯವಾಗಿದೆ. ಪ್ರತಿ ವರ್ಷ ಚಿತ್ರರಂಗದ ಗಣ್ಯರಿಂದ ಹಿಡಿದು ಸಾಮಾನ್ಯ ಜನರು ಇಲ್ಲಿಗೆ ಬರುತ್ತಾರೆ. ವರದಿಗಳನ್ನು ನಂಬುವುದಾದರೆ, ಇಲ್ಲಿ ಪ್ರತಿ ವರ್ಷ ಸುಮಾರು 125 ಕೋಟಿ ರೂ. ಕಾಣಿಕೆ ಸಂಗ್ರಹವಾಗುತ್ತದೆ. ಈ ಕಾರಣದಿಂದಾಗಿ ಇದು ದೇಶದ 10 ಶ್ರೀಮಂತ ದೇವಾಲಯಗಳಲ್ಲಿ ಸೇರಿದೆ.

ನಂತರದ ಸ್ಥಾನಗಳಲ್ಲಿ ಮಧುರೈ ಮೀನಾಕ್ಷಿ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ, ಪುರಿ ಜಗನ್ನಾಥ ದೇವಾಲಯ, ಗುಜರಾತ್‌ನ ಸೋಮನಾಥ ದೇವಾಲಯಗಳು ಸೇರಿವೆ. 

Follow Us:
Download App:
  • android
  • ios