Asianet Suvarna News Asianet Suvarna News

ಮೇಷಕ್ಕೆ ಮೀನದ ಕಡೆ ಯಾಕಿಷ್ಟು ಆಕರ್ಷಣೆ? ಬೆಸ್ಟ್ ಜೋಡಿ ಆಗಬಹುದು ಈ ಎರಡು ರಾಶಿಗಳು!

ವಿರುದ್ಧವಾಗಿರೋದರ ನಡುವೆ ಆಕರ್ಷಣೆ ಜಾಸ್ತಿ. ಹಾಗೆನೇ ಅಗ್ನಿಯ ರಾಶಿಯಾದ ಮೇಷ ಮತ್ತು ನೀರಿನ ಗುಣ ಹೊಂದಿರುವ ಮೀನದ ನಡುವೆ ಆಕರ್ಷಣೆ ಹೆಚ್ಚು.

do you know Why Aries So Attracted To Pisces skr
Author
Bangalore, First Published Jul 16, 2022, 12:38 PM IST | Last Updated Jul 16, 2022, 12:38 PM IST

ಆಪೋಸಿಟ್ ಪೋಲ್ಸ್ ಅಟ್ರ್ಯಾಕ್ಟ್ ಈಚ್ ಅದರ್ ಅನ್ನೋ ಹಾಗೆ ಮೇಷ ಮತ್ತು ಮೀನದ ನಡುವಿನ ಆಕರ್ಷಣೆ. ಮಾರ್ಚ್ 21 ಮತ್ತು ಏಪ್ರಿಲ್ 20 ರ ನಡುವೆ ಜನಿಸಿದವರು ಮೇಷ ರಾಶಿಯವರು. ಅವರು ಕೋಪಿಷ್ಠರು, ಹಠಾತ್ ಪ್ರವೃತ್ತಿ ಅವರಲ್ಲಿ ಹೆಚ್ಚು. ಸ್ಪರ್ಧಾತ್ಮಕ ಮನೋಭಾವ ಉಳ್ಳವರು, ನಾಯಕ ಸ್ವಭಾವದವರು. ಬೆಂಕಿಯ ಚಿಹ್ನೆಯಾದ ಮೇಷವು ಜ್ಯೋತಿಷ್ಯದಲ್ಲಿ ಅತ್ಯಂತ ಸಿಹಿಯಾದ ರಾಶಿಚಕ್ರ ಎನಿಸಿದ ಮೀನಕ್ಕೆ ಆಕರ್ಷಿತರಾಗುತ್ತಾರೆ ಎಂದರೆ ಅಚ್ಚರಿ ಎನಿಸಬಹುದು. ಆದರೆ, ಈ ಎರಡು ರಾಶಿಗಳ ನಡುವಿನ ಹೊಂದಾಣಿಕೆ ಬಲು ಮುದ್ದಾಗಿರುತ್ತದೆ. ಇದಕ್ಕೆ ಕಾರಣವೂ ಇದೆ. 

ಫೆಬ್ರವರಿ 19ರಿಂದ ಮಾರ್ಚ್ 20ರ ನಡುವೆ ಜನಿಸಿದವರು ಮೀನ ರಾಶಿಗೆ ಸೇರುತ್ತಾರೆ. ಇವರು ಸೌಮ್ಯ ಸ್ವಭಾವದವರು, ಬುದ್ಧಿವಂತರಾದರೂ ಭಾವುಕತೆ ಹೆಚ್ಚು. ಸಹಾನುಭೂತಿ ಹೊಂದಿದವರು, ಜೊತೆಗೆ ನಂಬಿಕಸ್ಥರು. 

ಸಾಮಾನ್ಯ ಗ್ರಹಿಕೆಯಂತೆ ಮಂಗಳ-ಆಧಿಪತ್ಯದ ಮೇಷ ರಾಶಿ(Aries)ಯ ಬಲವಾದ ಮತ್ತು ಮೊಂಡುತನದ ವ್ಯಕ್ತಿತ್ವವು ಶುಕ್ರ-ಆಧಿಪತ್ಯದ ನೀರಿನ ಮತ್ತು ಸೂಕ್ಷ್ಮವಾದ ಮೀನ ರಾಶಿ(Pisces)ಯನ್ನು ಸುಲಭವಾಗಿ ಮುಳುಗಿಸಬೇಕು. ಮೇಷ ರಾಶಿಯನ್ನು ನಿಭಾಯಿಸಲು ಮೀನವು ತುಂಬಾ ದುರ್ಬಲವಾಗಿದೆ ಎಂದು ಒಬ್ಬರು ಭಾವಿಸಬಹುದು. ಆದರೆ ವಸ್ತುಸ್ಥಿತಿ ಹಾಗಿಲ್ಲ. 

ಮೇಷ - ಮೀನದ ಸ್ವಭಾವದ ವೈರುಧ್ಯ
ಮೇಷ ರಾಶಿಯವರಿಗೆ ಅವರು ಹಿಮ್ಮೆಟ್ಟಿಸುವ ಯಾರಾದಾದರೂ ಅಗತ್ಯವಿದೆ. ಮೇಷ ರಾಶಿಯು ಅವರಿಗೆ ಸವಾಲು ಹಾಕುವ, ವಾದಿಸುವ ಮತ್ತು ಕೀಟಲೆ ಮಾಡುವ ಚಿಹ್ನೆಯನ್ನು ಇಷ್ಟಪಡುತ್ತದೆ. ಮೇಷ ರಾಶಿಯವರು ನೇರ ನಡೆನುಡಿಯವರು. ಅವರು ತಮಗೆ ಬೇಕಾದುದನ್ನು ಪಡೆದೇ ಸಿದ್ಧರು. ಮತ್ತೊಂದೆಡೆ, ಮೀನ ರಾಶಿಯವರು ಟೀಕೆ ಮಾಡುವುದನ್ನು ದ್ವೇಷಿಸುತ್ತಾರೆ, ಮತ್ತು ಯಾವುದೇ ರೀತಿಯ ಕ್ರೌರ್ಯವನ್ನು ದ್ವೇಷಿಸುತ್ತಾರೆ. 

ಮೇಷ ರಾಶಿಯು ಖಂಡಿತವಾಗಿಯೂ ಉದ್ದೇಶಪೂರ್ವಕವಾಗಿ ಅಥವಾ ದ್ವೇಷಪೂರಿತ ಚಿಹ್ನೆಯಾಗಿಲ್ಲದಿದ್ದರೂ, ಅವರು ಸ್ವಭಾವತಃ ಕಠಿಣವಾಗಿರಬಹುದು ಮತ್ತು ಮೊಂಡುತನವನ್ನು ಹೊಂದಿರಬಹುದು. ಅನೇಕ ಮೇಷ ರಾಶಿಯ ಗುಣಲಕ್ಷಣಗಳು ಮೀನ ರಾಶಿಯ ಹೆಚ್ಚು ಸೂಕ್ಷ್ಮ ಅಗತ್ಯಗಳೊಂದಿಗೆ ಘರ್ಷಣೆಯನ್ನು ಹೊಂದಿವೆ: ಮೀನದವರು ರೊಮ್ಯಾಂಟಿಕ್ಸ್, ಕುರುಡಾಗಿ ನಿಷ್ಠಾವಂತರು ಮತ್ತು ಪ್ರಶ್ನಾತೀತವಾಗಿ ಕಾಳಜಿ ವಹಿಸುವರು.

ಮಾಂಗಲ್ಯ ತೆೆಗೆಯೋದು ಪತಿಗೆ ನೀಡೋ ಮಾನಸಿಕ ಕ್ರೌರ್ಯ: ಮದ್ರಾಸ್ ಹೈ ಕೋರ್ಟ್

ಸೂಪರ್ ಜೋಡಿ(best match)
ಆದರೂ, ಈ ಘರ್ಷಣೆಗಳ ಹೊರತಾಗಿಯೂ, ಮೇಷ ರಾಶಿಯು ಮೀನ ರಾಶಿಯಿಂದ ದೂರವಿರಲು ಸಾಧ್ಯವಿಲ್ಲ. ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯವರು ಮೀನ ರಾಶಿಯತ್ತ ಆಕರ್ಷಿತರಾಗಲು ಕೆಲವು ಕಾರಣಗಳು ಇಲ್ಲಿವೆ:
ಮೇಷ ರಾಶಿಯು ನಾಯಕನಾಗಲು ಇಷ್ಟಪಡುತ್ತದೆ. ಜೊತೆಗೇ, ಮೇಷ ರಾಶಿಯು ದುರ್ಬಲತೆಯನ್ನು ವಿರೋಧಿಸಲು ಸಾಧ್ಯವಿಲ್ಲ. ಅವರು ಬಲವಾದ ಭಾವನೆಯನ್ನು ಪ್ರೀತಿಸುತ್ತಾರೆ; ಭಾವುಕ, ಭಯಗ್ರಸ್ಥ ಮೀನದೆದುರಿಗೆ ತಮ್ಮ ಶೌರ್ಯವನ್ನು ಪ್ರದರ್ಶಿಸಲು, ಧೈರ್ಯಶಾಲಿತನ ತೋರಲು ಸದಾ ಸಿದ್ಧವಿರುತ್ತಾರೆ. ಇದು ಮೀನದವರಿಗೂ ಇಷ್ಟವಾಗುತ್ತದೆ. ಅವರು ಮೇಷದವರ ಜೊತೆಗೆ ಸುರಕ್ಷಿತ ಭಾವನೆ ಅನುಭವಿಸುತ್ತಾರೆ. ಮೇಷದವರ ಅಭದ್ರತೆಯನ್ನು ಮುಚ್ಚಿಕೊಳ್ಳಲು ಮೀನದ ಪಾಲುದಾರರ ಭದ್ರತಾ ಹೊದಿಕೆಯಂತೆ ವರ್ತಿಸುತ್ತಾರೆ. ಅವರು ತಮ್ಮ ಪಾಲುದಾರರ ಪೂರೈಕೆದಾರರಾಗಲು ಬಯಸುತ್ತಾರೆ.

ಹೀಗಿರುವಾಗ ಮೀನ ರಾಶಿಯವರು ಸ್ವಲ್ಪ ಹೆಚ್ಚು ಮುಗ್ಧ, ಸ್ವಲ್ಪ ಹೆಚ್ಚು ನಿಷ್ಕಪಟ, ಸ್ವಲ್ಪ ಆದರ್ಶವಾದಿ ಮತ್ತು ಸ್ವಲ್ಪ ಹೆಚ್ಚು ನಂಬಿಕಸ್ಥರು. ಅವರು ಇತರ ರಾಶಿ ಚಿಹ್ನೆಗಳಿಗಿಂತ ಹೆಚ್ಚಾಗಿ ತಮ್ಮನ್ನು ಬಲಿಪಶುವಾಗಿ ಕಂಡುಕೊಳ್ಳುತ್ತಾರೆ. ಮೇಷದವರ ರಕ್ಷಣಾತ್ಮಕತೆ ಇವರಿಗೆ ಬಲ ಕೊಡುತ್ತದೆ. 

ಮೇಷ ರಾಶಿಯವರು ಮೀನ ರಾಶಿಯವರಿಗೆ ಸಮಸ್ಯೆಗಳನ್ನು ಪರಿಹರಿಸಲು ಇಷ್ಟಪಡುತ್ತಾರೆ. ಅವರ ಪ್ರೀತಿ, ಗಮನ ಮತ್ತು ಕಾಳಜಿ ಮೊದಲೇ ರೊಮ್ಯಾಂಟಿಕ್ ಆದ ಮೀನಕ್ಕೆ ಹೀರೋ ಜೊತೆಗಿರುವ ಹೀರೋಯಿನ್ ಫೀಲಿಂಗ್ ನೀಡುತ್ತದೆ. ಮೇಷ ರಾಶಿಯು ಮೀನ ರಾಶಿಯನ್ನು ಅವರ ಹೆಚ್ಚು ಸೂಕ್ಷ್ಮ ಭಾವುಕತೆಯ ಅಪಾಯದಿಂದ ರಕ್ಷಿಸುತ್ತದೆ.

ಪ್ರಣಯ ಜೀವನ(romantic life)
ಮೇಷ ರಾಶಿಯು ಪ್ರಣಯದಲ್ಲೂ ತಾವೇ ಮೇಲುಗೈ ಸಾಧಿಸಲು ಇಷ್ಟ ಪಡುತ್ತಾರೆ. ಮೀನದವರಿಗೆ ಕೂಡಾ ಅದೇ ಇಷ್ಟ. ತಮ್ಮನ್ನು ಪ್ರೀತಿಸುವವರಿಗೆ ಸಂಪೂರ್ಣ ಸ್ವಾಧೀನಕ್ಕೆ ಸಿಲುಕಿ ಸಂತಸ ಪಡುತ್ತಾರೆ. 

ಮೀನ ರಾಶಿಯವರು ಸಂತೋಷದಿಂದ ಮೇಷ ರಾಶಿಯವರಿಗೆ ತಮ್ಮ ಮೇಲೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡುತ್ತಾರೆ. ಅವರು ಸ್ವಪ್ನಶೀಲರು, ಭಾವೋದ್ರಿಕ್ತ ವ್ಯಕ್ತಿಯನ್ನು ಪ್ರೀತಿಸುತ್ತಾರೆ. ಅವರು ಬಹಳ ಸುಲಭವಾಗಿ ಒಲಿಸಿಕೊಳ್ಳುತ್ತಾರೆ ಮತ್ತು ದೊಡ್ಡ ಪ್ರಣಯ ಸನ್ನೆಗಳಿಂದ ಗೆಲ್ಲುತ್ತಾರೆ.

ಬಾಲಿವುಡ್ ತಾರೆಯರ Zodiac compatibility ಹೇಗಿದೆ ನೋಡಿ!

ಇನ್ನು ಮೀನ ರಾಶಿಯವರದು ಕೇಳುವ ಅಭ್ಯಾಸ. ಮೇಷದವರಿಗೆ ಹೇಳುವ ಅಭ್ಯಾಸ. ಈ ಗುಣಗಳು ಒಂದಕ್ಕೊಂದು ಹೊಂದಿಕೊಂಡು ಹೋಗುತ್ತವೆ. ಮೇಷ ರಾಶಿಯವರಿಗೆ ಭಾವನಾತ್ಮಕ ಬುದ್ಧಿವಂತಿಕೆ ಕಡಿಮೆ. ಆದರೆ, ಮೀನದವರಲ್ಲಿ ಇದು ಹೆಚ್ಚು. ಈ ಗುಣ ಕೂಡಾ ಬ್ಯಾಲೆನ್ಸ್ ಆಗುತ್ತದೆ. ಮೀನದ ಮೀನಿನ ಸೂಕ್ಷ್ಮ ಮತ್ತು ನೀರಿನ ಸ್ವಭಾವವು ಉರಿಯುತ್ತಿರುವ ಮತ್ತು ಭಾವೋದ್ರಿಕ್ತ ಮೇಷ ರಾಶಿಗೆ ನಂಬಲಾಗದಷ್ಟು ಆಧಾರವಾಗುತ್ತದೆ. ಅದಕ್ಕಾಗಿಯೇ ಮೀನ ಪ್ರೀತಿಯ, ಉದಾರ ಮತ್ತು ಸೌಮ್ಯ ಸ್ವಭಾವವು ಅವರಿಗೆ ನಂಬಲಾಗದಷ್ಟು ಆಕರ್ಷಕವಾಗಿದೆ.

Latest Videos
Follow Us:
Download App:
  • android
  • ios