Asianet Suvarna News Asianet Suvarna News

Solar Eclipse 2022: ನಿಮ್ಮ ರಾಶಿ ಮೇಲೆ ಏನು ಪರಿಣಾಮ ಬೀರಲಿದೆ?

ಪ್ರಸಕ್ತ ವರ್ಷದ ಏಪ್ರಿಲ್ 30ರಂದು ಮೊದಲ ಸೂರ್ಯಗ್ರಹಣವಾಗಲಿದೆ. ಈ ಬಾರಿಯ ಸೂರ್ಯಗ್ರಹಣದ ಪರಿಣಾಮವು ಎಲ್ಲ ರಾಶಿಚಕ್ರದವರ ಮೇಲೆಯೂ ಬೀರಲಿದ್ದು, ಕೆಲವು ರಾಶಿಯವರಿಗೆ ಶುಭ ಸೂಚಕವಾಗಿದ್ದರೆ, ಮತ್ತೆ ಕೆಲವು ರಾಶಿಯವರಿಗೆ ಸಾಕಷ್ಟು ತೊಂದರೆಗಳನ್ನು ನೀಡಲಿದೆ. ಅವುಗಳ ಬಗ್ಗೆ ನೋಡೋಣ...

Know the effect of solar eclipse on your zodiac signs
Author
Bangalore, First Published Mar 23, 2022, 9:31 AM IST

ಪ್ರಸಕ್ತ ವರ್ಷದ ಮೊದಲ ಸೂರ್ಯಗ್ರಹಣವು (Solar Eclipse) ಏಪ್ರಿಲ್ 30ರಂದು ಕಾಣಿಸಿಕೊಳ್ಳಲಿದೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಸೂರ್ಯ ಗ್ರಹಣವು ಮಂಗಳಕರವೆಂದು ಪರಿಗಣಿಸಲಾಗಿಲ್ಲ. ಹಾಗಂತ ಎಲ್ಲರಿಗೂ ಕೆಟ್ಟದ್ದು ಮಾಡಲಿದೆ ಎಂದೂ ಸಹ ಹೇಳಲಾಗುವುದಿಲ್ಲ. ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದು ಸರಿ ಅಲ್ಲ. ಇರುವ 12 ರಾಶಿಗಳ ಮೇಲೂ ಸಹ ಸೂರ್ಯಗ್ರಹಣ ಪ್ರಭಾವ (Effect) ಬೀರಲಿದ್ದು, ಕೆಲವರಿಗೆ ಶುಭ ಫಲ ಸಿಕ್ಕರೆ, ಮತ್ತೆ ಕೆಲವರಿಗೆ ಅಶುಭ ಫಲ ಪ್ರಾಪ್ತವಾಗುತ್ತದೆ. 

ಸೂರ್ಯಗ್ರಹಣದ ಬಗ್ಗೆ ತಿಳಿಯೋಣ
ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರನು ಚಲಿಸುವಾಗ ಸೂರ್ಯಗ್ರಹಣ ಆಗುತ್ತದೆ. ಇನ್ನು ಸೂರ್ಯಗ್ರಹಣದ ಸಂದರ್ಭದಲ್ಲಿ ಚಂದ್ರನು ಸೂರ್ಯನನ್ನು ಭಾಗಶಃ ಆವರಿಸಿದರೆ ಅದನ್ನು ಭಾಗಶಃ ಸೂರ್ಯಗ್ರಹಣ ಎನ್ನುತ್ತೇವೆ. ಇನ್ನು ಚಂದ್ರನು (Moon) ಸೂರ್ಯನನ್ನು ಮಧ್ಯದ ಭಾಗದಲ್ಲಿ ಆವರಿಸಿಕೊಂಡಂತೆ ಕಂಡರೆ ಅದನ್ನು ಕಂಕಣ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ.

ಈ ಬಾರಿ ಏಪ್ರಿಲ್ 30ರಂದು ಕಾಣಿಸಿಕೊಳ್ಳುವ ಸೂರ್ಯಗ್ರಹಣವು ಮಧ್ಯಾಹ್ನ 12:15 ರಿಂದ 4:07 ರವರೆಗೆ ಇರಲಿದೆ. ಇದು ಭಾರತದಲ್ಲಿ ಗೋಚಾರವಾಗಿಲ್ಲವಾದರೂ ರಾಶಿಚಕ್ರಗಳ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ನೋಡೋಣ... 

ಮೇಷ ರಾಶಿ (Aries)
ಸೂರ್ಯಗ್ರಹಣದ ಸಮಯದಲ್ಲಿ, ಮೇಷ ರಾಶಿಯವರು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸೂರ್ಯಗ್ರಹಣದ ದಿನದಂದು, ಮೇಷ ರಾಶಿಯ ಜನರು ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಬಾರದು ಎಂದು ಸಲಹೆ ನೀಡಲಾಗುತ್ತದೆ. ಮಾತನಾಡುವಾಗ ಜಾಗರೂಕರಾಗಿರುವುದು ಉತ್ತಮ. 

ವೃಷಭ ರಾಶಿ (Taurus)
ಸೂರ್ಯಗ್ರಹಣದ ಸಮಯದಲ್ಲಿ ವೃಷಭ ರಾಶಿಯವರಿಗೆ ಆತ್ಮವಿಶ್ವಾಸವು ಕಡಿಮೆ ಆಗಲಿದೆ. ಹೀಗಾಗಿ ಈ ದಿನದಂದು ಅನಗತ್ಯ ಒತ್ತಡವನ್ನು ತೆಗೆದುಕೊಳ್ಳಬಾರದು. ಎಂಥದ್ದೇ ಸಮಸ್ಯೆ ಎದುರಾದರೂ ಶಾಂತವಾಗಿ ಪರಿಹರಿಸಿಕೊಳ್ಳಬೇಕು. 

ಮಿಥುನ ರಾಶಿ (Gemini)
ಮಿಥುನ ರಾಶಿಯವರು ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ಸಾಧ್ಯವಾದಷ್ಟು ನಿಲ್ಲಿಸಿದರೆ ಉತ್ತಮ. ಈ ದಿನದಂದು ಸುತ್ತಲೂ ಏನಾಗುತ್ತಿದೆ ಎಂಬುದರ ಬಗ್ಗೆ ನಿಗಾ ಇಟ್ಟುಕೊಳ್ಳಬೇಕು. ಜೊತೆಗೆ ಜಾಗ್ರತೆಯನ್ನೂ ಸಹ ವಹಿಸಿಕೊಳ್ಳಬೇಕಾಗುತ್ತದೆ. 

ಕರ್ಕಾಟಕ ರಾಶಿ (Cancer)
ಈ ರಾಶಿಚಕ್ರದವರಿಗೆ ಸೂರ್ಯಗ್ರಹಣವು ಶುಭಕಾರಕವಾಗಿದೆ. ಮದುವೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳೂ ಸಹ ಈ ಬಾರಿ ಪರಿಹಾರವಾಗಲಿದೆ. ಈ ಸಮಯದಲ್ಲಿ ಇವರ ಆರ್ಥಿಕ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ.

ಇದನ್ನು ಓದಿ: ಸಾಲ ಪಡೆಯುವಾಗ, ಕೊಡುವಾಗ ಈ ನಿಯಮ ಪಾಲಿಸ್ಲೇಬೇಕು!

ಸಿಂಹ ರಾಶಿ (Leo)
ಸಿಂಹ ರಾಶಿಯವರು ವ್ಯಾಪಾರಕ್ಕೆ ಸಂಬಂಧಿಸಿದ ವ್ಯಕ್ತಿಗಳಾಗಿದ್ದಾರೆ. ಇವರಿಗೆ ಈ ವೇಳೆ ವ್ಯಾಪಾರದಲ್ಲಿ ಉತ್ತಮ ಲಾಭವಾಗಲಿದೆ. ಆದರೆ, ಸೂರ್ಯಗ್ರಹಣದ ಸಮಯದಲ್ಲಿ ಯಾವುದೇ ರೀತಿಯ ಹೂಡಿಕೆಯನ್ನು ಮಾತ್ರ ಮಾಡಬಾರದು. 

ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರಿಗೆ ಸೂರ್ಯಗ್ರಹಣದ ಸಂದರ್ಭ ಉತ್ತಮವಾಗಿದ್ದು, ಯಶಸ್ಸನ್ನು ಪಡೆಯಲು ಸಾಕಷ್ಟು ಕಠಿಣ ಪರಿಶ್ರಮದ ಅಗತ್ಯವಿದೆ. ಆದರೆ, ಈ ಸಮಯದಲ್ಲಿ ಉದ್ಯೋಗಗಳನ್ನು ಬದಲಾಯಿಸಲು ಪ್ರಯತ್ನಿಸಬಾರದು. 

ತುಲಾ ರಾಶಿ (Libra)
ತುಲಾ ರಾಶಿಯವರಿಗೆ ಸೂರ್ಯಗ್ರಹಣವು ನಕಾರಾತ್ಮಕ ಪರಿಣಾಮವನ್ನು ಬೀರಲಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಜೊತೆಗೆ ಕಾನೂನಾತ್ಮಕ ಸಂದಿಗ್ಧತೆಯನ್ನು ಸಹ ಎದುರಿಸಬಹುದಾಗಿದೆ. ಅಲ್ಲದೆ, ವಿವಾದಗಳಿಂದ ದೂರವಿರುವುದು ಒಳಿತು. 

ವೃಶ್ಚಿಕ ರಾಶಿ (Scorpio)
ಸೂರ್ಯಗ್ರಹಣದಿಂದಾಗಿ ಈ ರಾಶಿಯವರು ಉದ್ಯೋಗ ಮತ್ತು ವ್ಯವಹಾರದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಅಹಂಕಾರ ಒಳ್ಳೆಯದಲ್ಲ. ತಾಳ್ಮೆಯಿಂದ, ನಾಜೂಕಾಗಿ ವರ್ತಿಸಿದಲ್ಲಿ ಇದರಿಂದ ಪಾರಾಗಬಹುದು.

ಧನು ರಾಶಿ (Sagittarius)
ಸೂರ್ಯಗ್ರಹಣದ ಸಮಯದಲ್ಲಿ ಧನು ರಾಶಿಯ ಜನರ ಆರೋಗ್ಯವು ಉತ್ತಮವಾಗಿರುತ್ತದೆ. ಅಲ್ಲದೆ, ಶತ್ರುಗಳ ಮೇಲೆ ವಿಜಯವನ್ನು ಪಡೆಯುವ ಸಾಧ್ಯತೆಗಳು ಹೆಚ್ಚಿದೆ. 

ಮಕರ ರಾಶಿ (Capricorn)
ಗ್ರಹಣದ ಸಮಯದಲ್ಲಿ ಮಕರ ರಾಶಿಯ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ. ಈ ಸಮಯದಲ್ಲಿ ಜೂಜಾಟ ಮತ್ತು ಬೆಟ್ಟಿಂಗ್‌ನಂತಹದ್ದಕ್ಕೆ ಹೋಗಬಾರದು. 

ಕುಂಭ ರಾಶಿ (Aquarius)
ಸೂರ್ಯಗ್ರಹಣದ ಸಮಯದಲ್ಲಿ ಕುಂಭ ರಾಶಿಯವರು ಹೂಡಿಕೆಯಲ್ಲಿ ನಷ್ಟವಾಗಲಿದೆ.  ಕೌಟುಂಬಿಕ ಕಲಹಗಳ ಬಗ್ಗೆ ಎಚ್ಚರ ವಹಿಸಬೇಕು. ಅಲ್ಲದೆ, ಪ್ರಯಾಣ ಮಾಡುವಾಗ ಎಚ್ಚರ ವಹಿಸಬೇಕಿದೆ. ಕಾರಣ, ಅಪಘಾತದ ಸಂಭವವಿದೆ. 

ಇದನ್ನು ಓದಿ: ರಾಹು, ಕೇತು, ಶನಿಯ ಕ್ರೂರ ದೃಷ್ಟಿಯನ್ನು ತಣಿಸಲು ಹೀಗ್ಮಾಡಿ..

ಮೀನ ರಾಶಿ (Pisces)
ಈ ಸೂರ್ಯಗ್ರಹಣವು ಮೀನ ರಾಶಿಯವರಿಗೆ ಶುಭಕಾರಕವಾಗಿದೆ. ಈ ಹಿಂದೆ ಮಾಡಿದ ಹೂಡಿಕೆಗಳಿಂದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ಸಮಾಜದಲ್ಲಿ ಗೌರವ, ಪ್ರತಿಷ್ಠೆಗಳು ಸಹ ಹೆಚ್ಚಾಗಲಿದೆ. 

Follow Us:
Download App:
  • android
  • ios