ಸಾಲ ಪಡೆಯುವಾಗ, ಕೊಡುವಾಗ ಈ ನಿಯಮ ಪಾಲಿಸ್ಲೇಬೇಕು!

ಯಾರಿಂದಲಾದರೂ ಸಾಲ ಪಡೆಯುವಾಗ ಅಥವಾ ಯಾರಿಗಾದರೂ ಸಾಲ ಕೊಡುವಾಗ ವಾರ ಹಾಗೂ ಆ ವ್ಯಕ್ತಿಯ ನಕ್ಷತ್ರ ಬಹಳ ಮುಖ್ಯವಾಗುತ್ತದೆ. ನೀವು ಇದನ್ನು ನಿರ್ಲಕ್ಷ್ಯ ವಹಿಸಿ ಕೊಟ್ಟಿರೆಂದಾದರೆ ಕೆಟ್ಟಂತೆಯೇ ಅರ್ಥ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಅನ್ವಯ ಸಾಲದ ವಿಷಯದಲ್ಲಿ ಈ ನೀತಿ ನಿಯಮಗಳನ್ನು ಅನುಸರಿಸಬೇಕಿದೆ. ಯಾವುದು ಎಂದು ತಿಳಿಯೋಣ...

Astrological formula while lending and receiving loans

ಹಿಂದೂ ಸಂಪ್ರದಾಯದ (Hindu Tradition) ಅನುಸಾರ ಪ್ರತಿಯೊಂದು ಘಟನೆಗೆ, ಸಂದರ್ಭಕ್ಕೆ ಕೆಲಸಗಳಿಗೆ ಅದರದ್ದೇ ಆದ ವಿಶೇಷ ಅರ್ಥ ಬರುತ್ತದೆ. ಯಾವುದೇ ಒಂದು ರೀತಿಯ ಶುಭ ಕಾರ್ಯ  ಮಾಡಬೇಕಾದಲ್ಲಿ ಅದಕ್ಕೊಂದು ನಿಯಮ ಎಂಬುದು ಇರುತ್ತದೆ. ಒಂದು ವೇಳೆ ಅದು ಸರಿಯಾಗದಿದ್ದಲ್ಲಿ ಅಶುಭ ಫಲ ಪ್ರಾಪ್ತಿ ಆಗುತ್ತದೆ ಎಂದು ಜ್ಯೋತಿಷ್ಯಶಾಸ್ತ್ರ (Astrology) ಹೇಳುತ್ತದೆ. ಹೀಗೆ ಅನೇಕ ಆಚರಣೆಗಳು, ಪದ್ಧತಿಗಳು ಸಹ ಬಹಳ ಹಿಂದಿನಿಂದಲೂ ರೂಢಿಯಲ್ಲಿ ಬಂದಿದೆ. ಆದರೆ ಕೆಲವಷ್ಟು ಬಿಟ್ಟುಹೋಗಿವೆ. 

ಇನ್ನು ಕೆಲವು ಸ್ನೇಹಕ್ಕೋ (Friendship), ಸಂಬಂಧಕ್ಕೋ (Relationship) ಕಟ್ಟುಬಿದ್ದು ಆಚರಣೆಗಳ ಗೋಜಿಗೆ ಹೋಗುವುದಿಲ್ಲ. ಆದರೆ, ಹಿಂದೂ ಸಂಪ್ರದಾಯದಂತೆ ಕೆಲವು ಆಶಯಗಳನ್ನು ಈಗಲೂ ಇಟ್ಟುಕೊಂಡರೆ ಉತ್ತಮ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಇದು ಆರ್ಥಿಕತೆಗೆ ಸಂಬಂಧಪಟ್ಟ ವಿಷಯದಲ್ಲೂ ಕೂಡ ಬಹಳ ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಅಗತ್ಯತೆಯನ್ನು ಹೊಂದಿದೆ. ಅಂದರೆ ನೀವು ಯಾರಿಗೋ ಒಬ್ಬರಿಗೆ ಸಾಲವನ್ನು ಕೊಡುವಾಗ ಅಥವಾ ಅವರಿಂದ ಪಡೆಯುವಾಗ ಕೆಲವೊಂದಿಷ್ಟು ನಿಯಮಗಳನ್ನು ಹೇಳಲಾಗಿದೆ. ಅವುಗಳನ್ನು ಸರಿಯಾಗಿ ಪಾಲಿಸಬೇಕಿದೆ ಎಂದು ಹೇಳುತ್ತದೆ ಜ್ಯೋತಿಷ್ಯ. 

ಇದನ್ನು ಓದಿ: Planet prediction: ಈ ಗ್ರಹಗಳ ಸಾಥ್‌ ಇಲ್ಲಾಂದ್ರೆ ಬೇಗ ಮದುವೆ ಆಗಲ್ಲ..!

ಜೀವನದಲ್ಲಿ  ಕೆಲವೊಮ್ಮೆ ಎಲ್ಲರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಹಣವನ್ನು ಸಾಲ ಪಡೆಯುವ ಪರಿಸ್ಥಿತಿಯನ್ನು ಎದುರಿಸಿರುತ್ತಾರೆ. ಹಲವು ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ ಪಡೆದ ಸಾಲವನ್ನು ಬಹುಬೇಗ ತೀರಿಸಿಬಿಡಲಾಗುತ್ತದೆ. ಇಲ್ಲವೇ ಕೊಟ್ಟ ಸಾಲವೂ ಸಹ ಸಮಯಕ್ಕಿಂತ (Time) ಮುಂಚೆಯೇ ಸಿಗಲಿದೆ. ಆದರೆ, ಕೆಲವೊಮ್ಮೆ ಕೆಲವು ಸಾಲವು ತುಂಬಾ ಸಮಸ್ಯೆಯನ್ನು ತಂದೊಡ್ಡಿ ಬಿಡುತ್ತದೆ. ಕೊಟ್ಟ ಸಾಲವು ವಾಪಸ್ ಬರುವುದಿಲ್ಲ. ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಪಡೆಯಲು ಸಹ ಆಗುವುದಿಲ್ಲ. ಹೀಗಾಗಿ ಯಾವುದೇ ವ್ಯಕ್ತಿಗೆ ಸಾಲವನ್ನು ನೀಡುವಾಗ ಅಥವಾ ಅವರಿಂದ ಪಡೆಯುವಾಗ ಈ ವಿಷಯಗಳನ್ನು ಪರಿಗಣಿಸಿ. 

ಈ ನಕ್ಷತ್ರದವರಲ್ಲಿ (Star) ಸಾಲ ಪಡೆಯಲೇಬೇಡಿ..!
ಜ್ಯೋತಿಷ್ಯ ಶಾಸ್ತ್ರವನ್ನು ಕೆಲವರು ನಿರ್ಲಕ್ಷಿಸುತ್ತಾರೆ. ಕೆಲವು ಕೆಲಸಗಳನ್ನು ಕೆಲವು ನೀತಿಗಳನ್ವಯ ಮಾಡಲೇಬಾರದು. ಆದರೂ ಮಾಡಿಕೊಂಡು ಸಮಸ್ಯೆಗಳಿಗೆ (Problem) ಸಿಲುಕಿಬಿಡುತ್ತಾರೆ. ಸಾಲ ನೀಡಲು ಮತ್ತು ಪಡೆಯಲು ಕೆಲವು ನಕ್ಷತ್ರದವರ ಜೊತೆಗೆ ವ್ಯವಹಾರ ನಡೆಸಲೇಬಾರದು ಎಂದು ಹೇಳಲಾಗಿದೆ. ಪಂಚಾಂಗದ ಪ್ರಕಾರ, ಹಸ್ತ (Hasta) ನಕ್ಷತ್ರದವರಲ್ಲಿ ತೆಗೆದುಕೊಂಡ ಸಾಲವನ್ನು ಮರು ಪಾವತಿಸುವುದು ತುಂಬಾ ಕಷ್ಟ. ಅಂತೆಯೇ, ಮೂಲ (Moola), ಆದ್ರ (Adra), ಜ್ಯೇಷ್ಠ (Jyesta), ವಿಶಾಖ (Vishakha), ಕೃತ್ತಿಕಾ (Kruttika), ಉತ್ತರ ಫಾಲ್ಗುಣಿ (Uttara Phalguni), ಉತ್ತರಾಷಾಢ (Uttarashada), ಉತ್ತರ ಭಾದ್ರಪದ (Uttara Badrapada) ಮತ್ತು ರೋಹಿಣಿ (Rohini) ಮುಂತಾದ ನಕ್ಷತ್ರಗಳಲ್ಲಿ ಸಾಲವನ್ನು ತೆಗೆದುಕೊಳ್ಳುವುದನ್ನು ಮತ್ತು ನೀಡುವುದನ್ನು ತಪ್ಪಿಸಿಕೊಂಡರೆ ಬಹಳ ಉತ್ತಮ ಎಂದು ಜ್ಯೋತಿಷ್ಯ ಹೇಳುತ್ತದೆ. 

ಈ ದಿನದಂದು (Day) ಬೇಡ ಸಾಲದ ಸಹವಾಸ
ಕೆಲವು ನಕ್ಷತ್ರಗಳಲ್ಲಿ ಸಾಲವನ್ನು ತೆಗೆದುಕೊಳ್ಳುವುದು ಮತ್ತು ಕೊಡುವುದು ತೊಂದರೆಗೆ ಹೇಗೆ ಕಾರಣವಾಗುತ್ತದೆಯೋ..?  ಹಾಗೇಯೇ ವಾರದ (Week) ಕೆಲವು ದಿನಗಳನ್ನು ಸಹ ಸಾಲದ ವಿಷಯಕ್ಕೆ ಶುಭ ಮತ್ತು ಅಶುಭವೆಂದು ಪರಿಗಣಿಸಲಾಗುತ್ತದೆ. ಅಂದರೆ ಯಾರಿಂದಲಾದರೂ ಸಾಲ ಪಡೆಯಬೇಕೆಂದರೆ ಮಂಗಳವಾರ ಪಡೆಯುವುದು ಬಹಳ ಪ್ರಾಶಸ್ತ್ಯವಾದ ದಿನವಾಗಿದೆ. ಕಾರಣ, ಈ ದಿನದಂದು ತೆಗೆದುಕೊಂಡ ಸಾಲವು ಶೀಘ್ರದಲ್ಲೇ ತೀರಿಸುವ ಸಾಮರ್ಥ್ಯ (Capacity) ನಿಮಗೆ ಸಿಗುತ್ತದೆ. ಇನ್ನು ಬುಧವಾರ ಯಾರೂ ಹಣವನ್ನು ಸಾಲವಾಗಿ ನೀಡಬಾರದು. ಈ ದಿನ ನೀಡಿದ ಸಾಲ ಮರಳಿ ಪಡೆಯುವುದಿಲ್ಲ ಎಂಬ ನಂಬಿಕೆ ಇದೆ. 

ಇದನ್ನು ಓದಿ: ಮಕ್ಕಳ ಓದಿನ ಪ್ರಗತಿಗೆ Vastu Tips

ಸಾಲ ಮುಕ್ತರಾಗಲು ಹೀಗೆ ಮಾಡಿ

ಕೆಲವೊಮ್ಮೆ ಏನೇ ಮಾಡಿದರು ಮಾಡಿದ ಸಾಲವನ್ನು (Loan) ತೀರಿಸಲಾಗದು. ಸಾಲ ತೀರಿಸಬೇಕು ಎಂದು ಹಣವನ್ನು ಕೂಡಿಸಿಕೊಂಡರೂ ಆ ಸಮಯಕ್ಕೆ ಇನ್ನಾವುದಾದರೂ ತೊಂದರೆಗಳು ಎದುರಾಗಿ ಖರ್ಚಾಗಿಬಿಡುತ್ತದೆ. ಇಂತಹ ಸಂದರ್ಭದಲ್ಲಿ ಋಣ ಮುಕ್ತರಾಗಬೇಕು ಎಂದರೆ ಪ್ರತಿ ಮಂಗಳವಾರ (Tuesday) ಪೂರ್ಣ ನಂಬಿಕೆಯಿಂದ "ಋಣಮುಕ್ತ ಮಂಗಳ ಸ್ತೋತ್ರ"ವನ್ನು ಪಠಿಸಬೇಕು. ಆಂಜನೇಯನಿಗೆ ಪೂಜೆಗೆ ಸಂಬಂಧಿಸಿದ ಈ ಪರಿಹಾರವನ್ನು ಮಾಡುವುದರಿಂದ ಬಹುಬೇಗ ಸಾಲದಿಂದ ಮುಕ್ತಿ ಹೊಂದಬಹುದು.

Latest Videos
Follow Us:
Download App:
  • android
  • ios