Asianet Suvarna News Asianet Suvarna News

Benefits Of Aarti: ನಾವೇಕೆ ದೇವರಿಗೆ ಆರತಿ ಮಾಡುತ್ತೇವೆ?

ಪೂಜೆ ಎಂದರೆ ಆರತಿ ಇಲ್ಲದೆ ಸಂಪೂರ್ಣವಾಗದು. ಆರತಿಯ ಬೆಳಕಿನಲ್ಲಿ ದೇವರನ್ನು ನೋಡುವುದೇ ಒಂದು ಅಭೂತಪೂರ್ವ ಅನುಭವ. ಇಷ್ಟಕ್ಕೂ ನಾವೇಕೆ ಆರತಿ ಮಾಡುತ್ತೇವೆ ಗೊತ್ತಾ? 

Know the benefits of performing Aarti skr
Author
Bangalore, First Published Feb 12, 2022, 10:06 AM IST | Last Updated Feb 12, 2022, 10:05 AM IST

ಕತ್ತಲ ಗರ್ಭಗುಡಿಯ ನಡುವೆ ನಿಂತ ದೇವರ ಮೂರ್ತಿಗೆ ದೀಪದ ಬೆಳಕಿನಲ್ಲಿ ಪ್ರಜ್ವಲಿಸುವುದನ್ನು ನೋಡುವುದೇ ಒಂದು ಮಹೋನ್ನತ ಭಾವ. ಅಂಥ ಆ ಪರಮಶಕ್ತಿಗೆ ಪೂಜೆ ಮಾಡಿ, ಚೆನ್ನಾಗಿ ಹೂವು, ಇನ್ನಿತರೆ ಆಭರಣಗಳಿಂದ ಅಲಂಕರಿಸಿ, ಕಡೆಗೆ ಆರತಿ ಬೆಳಗುವಾಗ ಕಾಣುತ್ತದಲ್ಲ, ಅದ್ಭುತ ರೂಪ.. ಕೇವಲ ಅದೊಂದು ಸಾಕು, ಚಂಚಲವಾದ ಮನಸ್ಸಿಗೆ ಶಾಂತಿ ನೀಡಲು. ಕೇವಲ ದೇವಸ್ಥಾನಗಳ(Temples)ಲ್ಲಲ್ಲ, ಮನೆಯಲ್ಲಿ ಸೇರಿದಂತೆ ದೇವರಿಗೆ ಎಲ್ಲಿಯೇ ಪೂಜೆಯೇ ಮಾಡಲಿ, ಅದು ಆರತಿ ಬೆಳಗದೆ ಸಂಪೂರ್ಣವಾಗದು. 

ನಾವೇಕೆ ಆರತಿ ಮಾಡುತ್ತೇವೆ?
ಒಂದು ವಾದದ ಪ್ರಕಾರ, ಸಾವಿರಾರು ವರ್ಷದ ಹಿಂದೆ ವಿದ್ಯುತ್ ವಿಷಯವೇ ತಿಳಿಯದಿದ್ದಾಗ ಗರ್ಭಗುಡಿಯ ಕತ್ತಲಲ್ಲಿ ಇರುವ ಮೂರ್ತಿಯನ್ನು ಭಕ್ತರಿಗೆ ತೋರಿಸಲು ಅರ್ಚಕರು ದೀಪವನ್ನು ದೇವರ ಮೂರ್ತಿಯ ಮುಖದ ಬಳಿ ಹಿಡಿಯುತ್ತಿದ್ದರು. ಕ್ರಮೇಣ ಅಭ್ಯಾಸವಾಗಿ ಮುಂದುವರಿಯಿತು ಎನ್ನಲಾಗುತ್ತದೆ. ಆದರೆ, ಮತ್ತೊಂದು ವಾದದ ಪ್ರಕಾರ, ನಾವು ಪೂಜೆಯಲ್ಲಿ ಬಳಸುವ ಅಗ್ನಿ(Fire), ಜಾಗಂಟೆ, ಶಂಖನಾದ, ಗಂಟೆ, ಆರತಿ(Arti) ಎಲ್ಲವೂ ಸುತ್ತಲಿನ ನೆಗೆಟಿವ್ ಎನರ್ಜಿ ಓಡಿಸಲು ಸಶಕ್ತವಾಗಿರುವವೇ ಆಗಿವೆ. ಹಾಗಾಗಿ, ಮನೆಯೊಳಗಿನ ಹಾಗೂ ಸುತ್ತಲಿನ ಪರಿಸರದಲ್ಲಿರುವ ನಕಾರಾತ್ಮಕ ಶಕ್ತಿ(Negative energy) ಓಡಿಸಿ, ಮನಸ್ಸನ್ನು ಸಕಾರಾತ್ಮಕವಾಗಿಡುವ ಸಲುವಾಗಿ ನಾವು ಆರತಿ ಬೆಳಗುತ್ತೇವೆ. ಇದೇ ಕಾರಣಕ್ಕೆ ವ್ಯಕ್ತಿಗೆ ದೃಷ್ಟಿ ತೆಗೆಯುವಾಗಲೂ ಆರತಿ ಬೆಳಗುವುದು ನೀವು ನೋಡಿರಬಹುದು. ಅವರ ಮೇಲೆ ಯಾರದೇ ಕೆಟ್ಟ ಯೋಚನೆಗಳು ಬಿದ್ದಿದ್ದರೂ ಅವೆಲ್ಲ ಹೋಗಲಿ ಎಂದು ಹಾಗೆ ಮಾಡುತ್ತೇವೆ. 

Birth Date and Food: ಹುಟ್ಟಿದ ದಿನಕ್ಕೂ ಆಹಾರಕ್ಕೂ ಇದೆ ನಂಟು

ಮನೆಯಲ್ಲಿ ಅಥವಾ ಪೂಜಾ ಸ್ಥಳದಲ್ಲಿ ತುಪ್ಪ(Ghee), ಕರ್ಪೂರ(Camphor), ಗಂಧ, ಹತ್ತಿಯೊಂದಿಗೆ ಆರತಿಯನ್ನು ಮಾಡಿದಾಗ ಅದರ ಸುವಾಸನೆ ಸುತ್ತಲೂ ತುಂಬುತ್ತದೆ. ಅದರಿಂದ ನಮ್ಮ ಮನಸ್ಸು ಪ್ರಫುಲ್ಲಿತವಾಗುತ್ತದೆ. ಬೆಳಗ್ಗೆ ಬೇಗ ಪೂಜೆ ಮುಗಿಸುವುದರಿಂದ ಇಡೀ ದಿನ ಮನದಲ್ಲಿ ಆ ಉತ್ಸಾಹ ಉಳಿಯುತ್ತದೆ. ಕೇವಲ ಸುವಾಸನೆಯಲ್ಲ, ಶಂಖ, ಗಂಟೆಯ ನಾದವೂ ಮೆದುಳಿನಲ್ಲಿ ಧನಾತ್ಮಕ ತರಂಗಗಳನ್ನೇಳಿಸುತ್ತದೆ. ಮನಸ್ಸಿನಲ್ಲಿ ಶಕ್ತಿ ಸಂಚಯವಾಗುತ್ತದೆ. ಕಡೆಯಲ್ಲಿ ಪ್ರಾರ್ಥಿಸುವಾಗ ದೇವರ ಮೇಲೆ ನಮ್ಮೆಲ್ಲ ಕಷ್ಟಗಳ ಭಾರವನ್ನು ಹಾಕುತ್ತೇವೆ. ಆತ ಎಲ್ಲವನ್ನೂ ಸರಿ ಮಾಡುತ್ತಾನೆಂಬ ನಂಬಿಕೆ ಕೂಡಾ ಮನಸ್ಸನ್ನು ಹಗುರಾಗಿಸುತ್ತದೆ. 

ಆಧ್ಯಾತ್ಮಿಕ(Spiritual)ವಾಗಿ ಆರತಿಯ ಹೊಗೆಯಲ್ಲಿ ದೇವರ ಆಶೀರ್ವಾದ ನಮ್ಮನ್ನು ತಲುಪುತ್ತದೆ ಎಂದು ನಂಬಲಾಗುತ್ತದೆ. ಇನ್ನು ಆರೋಗ್ಯದ ವಿಷಯಕ್ಕೆ ಬಂದರೆ ಕರ್ಪೂರ ಹಾಗೂ ತುಪ್ಪದ ಹೊಗೆ ದೇಹಕ್ಕೆ ಹೋಗುವುದರಿಂದ ಸಾಕಷ್ಟು ಲಾಭಗಳಿವೆ. 

ಎಂಟು ಮಂದಿ ಚಿರಂಜೀವಿಗಳನ್ನು ನಿತ್ಯ ಸ್ಮರಿಸಿದರೆ ದೀರ್ಘಾಯುಷ್ಯ!

ಹಲವು ರೀತಿಯ ಆರತಿಗಳಿವೆ. ಕೆಲವರು ಒಂದೇ ಜೋಡಿ ಬತ್ತಿ ಇಟ್ಟುಕೊಂಡರೆ, ಮತ್ತೆ ಕೆಲವರು ಐದು ಜೊತೆ ಬತ್ತಿ ಹಚ್ಚಿ ಬೆಳಗುತ್ತಾರೆ. ಯಾವಾಗಲೂ ಬತ್ತಿಯನ್ನು ಎರಡನ್ನು ಜೋಡಿಸಿಯೇ ಒಂದಾಗಿಸಬೇಕು. ಯಾವ ಆರತಿಯಿಂದ ಏನೆಲ್ಲ ಲಾಭಗಳಿವೆ ನೋಡೋಣ. 
ಏಕಾರತಿ‌‌ ಮಾಡುವುದರಿಂದ ಪೂಜೆಯ ಪೂರ್ಣ ಫಲ ದೊರೆಯುತ್ತದೆ. 
ದ್ವಿ ಆರತಿ ಮಾಡುವುದರಿಂದ ದಾಂಪತ್ಯ ಸುಖ ಫಲ ದೊರೆಯುತ್ತದೆ.
ತ್ರಯ ಆರತಿ ಮಾಡುವುದರಿಂದ ಕುಟುಂಬದ ಅಭಿವೃದ್ಧಿಯುಂಟಾಗುತ್ತದೆ.
ಪಂಚಾರತಿ ಮಾಡುವುದರಿಂದ ಪರಿಸರದಲ್ಲಿ ಸಸ್ಯವೃದ್ದಿ ಆಗುತ್ತದೆ.
ನವ ಆರತಿ ಮಾಡುವುದರಿಂದ ವರ್ಷವಿಡೀ ವೃದ್ದಿ ಫಲ ದೊರೆಯುತ್ತದೆ.
ಏಕಾದಶಾರತಿ ಮಾಡುವುದರಿಂದ ಮಹಾಲಕ್ಷ್ಮಿ ಸುಪ್ರೀತಳಾಗುತ್ತಾಳೆ.
ದ್ವಾದಶಾರತಿ ಮಾಡುವುದರಿಂದ ಸುಖ ನೆಮ್ಮದಿಯುಂಟಾಗುತ್ತದೆ.
ಷೋಡಶಾರತಿ ಮಾಡುವುದರಿಂದ ವಿಶೇಷ ಧನಲಾಭ(Monetary gain)ವುಂಟಾಗುತ್ತದೆ.
ಏಕವಿಂಶತಿ ಅಂದರೆ ಇಪ್ಪತ್ತೊಂದು ಆರತಿ ಮಾಡುವುದರಿಂದ ರಾಜ್ಯಲಾಭ ದೊರೆಯುತ್ತದೆ.
ಚತುರ್ವಿಂಶತಿ ಆರತಿ ಅಂದರೆ ಇಪ್ಪತ್ನಾಲ್ಕು ಆರತಿ ಉತ್ತಮ ಮಳೆ ಬೆಳೆ ಉಂಟಾಗುತ್ತದೆ.
ನಕ್ಷತ್ರ ಆರತಿ ಅಂದರೆ ಇಪ್ಪತ್ತೇಳು ಆರತಿಯಾಗಿದೆ.  ಸಕಲ ದೇವತೆಗಳು ಅನುಗ್ರಹಿಸುತ್ತಾರೆ.
ನಾಗ ಆರತಿ ಮಾಡುವುದರಿಂದ ಉತ್ತಮ ಸಂತಾನ ವೃದ್ಧಿಯಾಗುತ್ತದೆ.
ಕೂರ್ಮ ಆರತಿ ಮಾಡುವುದರಿಂದ ಧೈರ್ಯ ಸ್ತೈರ್ಯ ಧೃಡತೆವುಂಟಾಗಿ ಭಗವಂತನ ಪೂರ್ಣಾನುಗ್ರಹವಾಗುತ್ತದೆ.
ಅಷ್ಟೋತ್ತರ ಶತದೀಪ ಅಂದರೆ ನೂರೆಂಟು ಆರತಿ ಮಾಡುವುದರಿಂದ ಲಕ್ಷ್ಮೀ ನಾರಾಯಣರ ಸಂಪೂರ್ಣ ಕೃಪಾಕಟಾಕ್ಷ ಉಂಟಾಗುತ್ತದೆ.
 

Latest Videos
Follow Us:
Download App:
  • android
  • ios