Asianet Suvarna News Asianet Suvarna News

ಕಿರಿಕಿರಿ: ರಾಶಿಗೆ ಅನುಗುಣವಾಗಿ ನಿಮ್ಮಲ್ಲಿರೋ ಮೂಲ ಸಮಸ್ಯೆ ತಿಳ್ಕೊಳಿ

ನಮ್ಮೆಲ್ಲರಲ್ಲೂ ಏನಾದರೊಂದು ಕೆಟ್ಟ ಅಭ್ಯಾಸ, ವರ್ತನೆಗಳು ಇದ್ದೇ ಇರುತ್ತವೆ. ಅವು ನಮ್ಮ ಪಾಲಿಗೆ ಸರಿ ಎನಿಸಬಹುದು, ಆದರೆ, ಬೇರೊಬ್ಬರಿಗೆ ಕಿರಿಕಿರಿ ಮೂಡಿಸುತ್ತವೆ. ನಿಮ್ಮ ರಾಶಿಗೆ ಅನುಗುಣವಾಗಿ ಎಂತಹ ಕಿರಿಕಿರಿ ಗುಣವನ್ನು ನೀವು ಹೊಂದಿದ್ದೀರಿ ಎಂದು ನೋಡಿಕೊಳ್ಳಿ.
 

Know about your irritating habit according to your zodiac sign sum
Author
First Published Sep 23, 2023, 4:16 PM IST

ಪ್ರತಿಯೊಬ್ಬರ ವ್ಯಕ್ತಿತ್ವದಲ್ಲೂ ಏನಾದರೊಂದು ಕೊರತೆ ಇದ್ದೇ ಇರುತ್ತದೆ. ಯಾರೂ ಪರಿಪೂರ್ಣರಲ್ಲ. ಎಲ್ಲ ಜನರಲ್ಲೂ ಮತ್ತೊಬ್ಬರಿಗೆ ಕಿರಿಕಿರಿ ಉಂಟುಮಾಡುವ ಕೆಲವು ಸ್ವಭಾವಗಳು ಇದ್ದೇ ಇರುತ್ತದೆ. ಅವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲ ರೀತಿಯ ಗುಣ ಸ್ವಭಾವಗಳನ್ನು ನಿರ್ಮಿಸುವಲ್ಲಿ ರಾಶಿಚಕ್ರಗಳ ಪ್ರಭಾವ ಅಧಿಕವಾಗಿರುತ್ತದೆ. ಹಾಗೆಯೇ, ಕೆಲವು ಕಿರಿಕಿರಿ ಎನಿಸುವ ಗುಣಗಳೂ ಸಹ ಆಯಾ ರಾಶಿಗಳಿಗೆ ನಿರ್ದಿಷ್ಟವಾಗಿರುತ್ತವೆ. ಒಂದೇ ರೀತಿಯ ಗುಣ ಕಂಡುಬರುವುದಿಲ್ಲ. ಜ್ಯೋತಿಷ್ಯದ ಶಾಸ್ತ್ರದ ಮೂಲಕ, ಯಾವ ರಾಶಿಯ ಜನರಲ್ಲಿ ಯಾವ ರೀತಿಯ ಕಿರಿಕಿರಿಯ ವರ್ತನೆ, ಸ್ವಭಾವಗಳು ಇರುತ್ತವೆ ಎನ್ನುವುದನ್ನು ಸಹ ಗುರುತಿಸಬಹುದು. 

•    ಮೇಷ (Aries)
ಬೆಂಕಿಯಂತಹ ಎನರ್ಜಿ (Energy), ದೃಢ ನಿರ್ಧಾರಕ್ಕೆ ಮೇಷ ರಾಶಿಯ ಜನ ಹೆಸರಾಗಿದ್ದಾರೆ. ಆದರೆ, ಇವರಿಗೆ ಚೂರೂ ಸಹ ತಾಳ್ಮೆ (Patience)ಯಿಲ್ಲ. ಯಾವುದಾದರೂ ವಿಚಾರದಲ್ಲಿ ಹಿಂದೆ ಮುಂದೆ ನೋಡದೆ ತಲೆ ತೂರಿಸುತ್ತಾರೆ. ಇವರ ಈ ಗುಣದಿಂದಾಗಿ ಇತರರು ಹೋರಾಟ (Struggle) ಮಾಡುತ್ತಿರಬೇಕಾಗುತ್ತದೆ. 

ಈ ರಾಶಿಗಳ ಜನರಲ್ಲಿ ಗುಟ್ಟನ್ನು ಶೇರ್ ಮಾಡಿಕೊಂಡ್ರೆ ಮುಗೀತು ಕತೆ! ಬಿಬಿಸಿ ರೀತಿ ಆಡ್ತಾರೆ!

•    ವೃಷಭ (Taurus)
ವೃಷಭ ರಾಶಿಯ ಜನ ನಂಬಿಕೆಗೆ ಅರ್ಹರು ಮತ್ತು ಸ್ಥಿರತೆಯುಳ್ಳವರು. ಆದರೆ, ಇವರ ಹಠಮಾರಿ (Stubborn) ಗುಣ ಮಾತ್ರ ಹುಚ್ಚುಹಿಡಿಸುವಂತದ್ದು. ಒಮ್ಮೆ ಒಂದು ವಿಚಾರದ ಬಗ್ಗೆ ನಿರ್ಧಾರ ಮಾಡಿದರೆ, ಅದನ್ನು ಬದಲಿಸಲು ಬಹುತೇಕ ಸಮಯಗಳಲ್ಲಿ ಅಸಾಧ್ಯ.

•    ಮಿಥುನ (Gemini)
ಜೀವಂತಿಕೆಯಿಂದ ಕೂಡಿರುವ ಮಿಥುನ ರಾಶಿಯ ಜನ ಉತ್ತಮ ಮಾತುಗಾರರು. ಆದರೆ, ಕೆಲವು ನಿರ್ಧಾರ ಕೈಗೊಳ್ಳಲು ಹೊಯ್ದಾಟ ಮಾಡಿಕೊಳ್ಳುತ್ತಾರೆ. ಪದೇ ಪದೆ ತಮ್ಮ ನಿಲುವನ್ನು ಬದಲಿಸಬಹುದು. ಇದರಿಂದಾಗಿ, ಇವರ ಸಮೀಪವರ್ತಿಗಳು ಕಿರಿಕಿರಿಗೆ (Irritate) ಒಳಗಾಗುತ್ತಾರೆ.

•    ಕರ್ಕಾಟಕ (Cancer)
ಕರ್ಕಾಟಕ ರಾಶಿಯ ಜನರಲ್ಲಿ ಪ್ರೀತಿ (Love), ಆರೈಕೆ ಮಾಡುವ ಗುಣ ಮೆಚ್ಚತಕ್ಕದ್ದು. ಆದರೆ, ಇವರ ಮನಸ್ಥಿತಿ ಆಗಾಗ ಏರಿಳಿತಕ್ಕೆ ಒಳಗಾಗುತ್ತದೆ. ಒಮ್ಮೆ ಇವರು ಖುಷಿಯಾಗಿದ್ದರೆ, ಮತ್ತೊಮ್ಮೆ ತಮ್ಮ ಮುಸುಕಿನೊಳಗೆ ಸೇರಿಕೊಂಡು ಬಿಡುತ್ತಾರೆ. ಈ ಮನಸ್ಥಿತಿ  ಬೇರೊಬ್ಬರಿಗೆ ಸಮಸ್ಯೆ ತಂದೊಡ್ಡುತ್ತದೆ. 

•    ಸಿಂಹ (Leo)
ಎಲ್ಲರ ಕೇಂದ್ರಬಿಂದುವಾಗಲು ಬಯಸುವ ಸಿಂಹ ರಾಶಿಯ ಜನ ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ಆದರೆ, ಸದಾಕಾಲ ಎಲ್ಲರ ಗಮನ ಸೆಳೆಯುವ ಇವರ ಬಯಕೆ ಸುಸ್ತು ಮಾಡುತ್ತದೆ. ಇವರಿಗೆ ನಿರಂತರವಾಗಿ ಮೆಚ್ಚುಗೆ ಬೇಕು. ಅದು ದೊರೆತಿಲ್ಲ ಎಂದಾದರೆ ಭಾರೀ ಕಿರಿಕಿರಿ ಮಾಡಿಕೊಂಡು ಮತ್ತೊಬ್ಬರಿಗೂ ಅದರ ಬಿಸಿ ತಾಗಿಸುತ್ತಾರೆ.

•    ಕನ್ಯಾ (Virgo)
ವಿಸ್ತೃತವಾಗಿ ಎಲ್ಲವನ್ನೂ ಪರಿಶೀಲಿಸುವ ಕನ್ಯಾ ರಾಶಿಯ ಜನ ಉತ್ತಮ ವೃತ್ತಿ ಮೌಲ್ಯ ಹೊಂದಿರುತ್ತಾರೆ. ಆದರೆ, ಎಲ್ಲ ಸಮಯದಲ್ಲೂ ಸಂಪೂರ್ಣತೆ (Perfection) ಬಯಸುವ ಇವರ ಗುಣ ಹಿಂಸೆ ನೀಡುವಂಥದ್ದು. ಅನಿರೀಕ್ಷಿತ ಸಲಹೆಗಳನ್ನು ನೀಡುವ ಮೂಲಕ ಕಿರಿಕಿರಿ ಮೂಡಿಸುತ್ತಾರೆ.

ಈ ರಾಶಿಗೆ ಆಳ, ಅಂತ್ಯವಿಲ್ಲದ ಸಂಬಂಧವೇ ಇಷ್ಟ, ಸ್ಟ್ರಾಂಗ್ ಬಾಂಡಿಂಗ್ ಇವರ ಸ್ಟ್ರೆಂಥ್!

•    ತುಲಾ (Libra)
ಸಾಮರಸ್ಯ ಬಯಸುವ ತುಲಾ ರಾಶಿಯ ಜನರಿಗೆ ಗಟ್ಟಿ ನಿರ್ಧಾರ (Decision) ಕೈಗೊಳ್ಳಲು ಸಾಧ್ಯವಿಲ್ಲ. ನಿರ್ಧಾರ ಕೈಗೊಳ್ಳಲು ಒದ್ದಾಡುವ ಇವರ ಗುಣ ಸಿಕ್ಕಾಪಟ್ಟೆ ಫ್ರಸ್ಟ್ರೇಟಿಂಗ್‌ (Frustrating) ಆಗಿರುತ್ತದೆ. ಎಲ್ಲ ಅವಕಾಶಗಳನ್ನೂ ಪರಿಶೀಲಿಸಿ ನೋಡುವ ಗುಣದಿಂದಾಗಿ ನಿರ್ಧಾರ ತೆಗೆದುಕೊಳ್ಳಲು ತೀರ ವಿಳಂಬ ಮಾಡುತ್ತಾರೆ.

•    ವೃಶ್ಚಿಕ (Scorpio)
ಅತ್ಯಂತ ತೀವ್ರತೆ ಹಾಗೂ ನಿಗೂಢತೆಯ ವೃಶ್ಚಿಕ ರಾಶಿಯ ಜನರ ಆಸಕ್ತಿ ವೈವಿಧ್ಯಪೂರ್ಣವಾಗಿರುತ್ತದೆ. ಆದರೆ, ಇವರ ತೀವ್ರತೆ ಸಮೀಪರ್ತಿಗಳನ್ನು ಬೆದರಿಸುವಂತಿರುತ್ತದೆ. ಯಾವುದೇ ವಿಚಾರದಲ್ಲಾದರೂ ಆಳವಾಗಿ ವಿಚಾರಣೆ ಮಾಡುವ ಗುಣದಿಂದಾಗಿ ಕೆಲವೊಮ್ಮೆ ಖಾಸಗಿ ಮಿತಿಯನ್ನೂ ದಾಟಿಬಿಡುತ್ತಾರೆ.

•    ಧನು (Sagittarius)
ಸಾಹಸಿ ಧೋರಣೆಯ ಧನು ರಾಶಿಯ ಜನರಿಗೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಸದಾಕಾಲ ಹೊಸ ಅನುಭವಗಳಿಗೆ ತುಡಿಯುವ ಕಾರಣದಿಂದ ರೆಸ್ಟ್‌ ಲೆಸ್‌ (Rest Less) ಆಗಿರುತ್ತಾರೆ. ಹೊಸದನ್ನೇನೋ ಮಾಡಲು ಹೊರಟು ತಮ್ಮ ಯೋಜನೆಗಳಂತೆ ನಡೆದುಕೊಳ್ಳಲು ವಿಫಲರಾಗುತ್ತಾರೆ.

•    ಮಕರ (Capricorn)
ಮಕರ ರಾಶಿಯ ಜನ ಜವಾಬ್ದಾರಿಯುತ ವ್ಯಕ್ತಿತ್ವ ಹೊಂದಿರುತ್ತಾರೆ. ಆದರೆ, ಇವರು ಸಿಕ್ಕಾಪಟ್ಟೆ ವರ್ಕೋಹಾಲಿಕ್ (Workoholic).‌ ಇದು ಯಾವ ಮಟ್ಟದಲ್ಲಿರುತ್ತದೆ ಎಂದರೆ, ಖಾಸಗಿ ಜೀವನ, ಸಂಬಂಧಗಳನ್ನೂ ನಿರ್ಲಕ್ಷಿಸುವಷ್ಟು. ತಮ್ಮ ವೃತ್ತಿಗೆ ಅಪಾರ ಆದ್ಯತೆ ನೀಡುತ್ತಾರೆ.

•    ಕುಂಭ (Aquarius)
ಅತ್ಯಪೂರ್ವ ದೃಷ್ಟಿಕೋನವುಳ್ಳ ಕುಂಭ ರಾಶಿಯ ಜನ ವಿಲಕ್ಷಣವಾಗಿರುತ್ತಾರೆ. ಈ ಗುಣವೇ ಇವರನ್ನು ಪ್ರತ್ಯೇಕವಾಗಿರಿಸುತ್ತದೆ. ಇವರ ಅಸಾಂಪ್ರದಾಯಿಕ ವಿಚಾರಧಾರೆಗಳು ವಾಸ್ತವತೆಯಿಂದ ದೂರವಾಗಿವೆ ಎನಿಸಬಹುದು.

•    ಮೀನ (Pisces)
ಕಲ್ಪನಾಶಕ್ತಿ, ಎಲ್ಲರನ್ನೂ ಪ್ರೀತಿಸುವ ಶಕ್ತಿ ಹೊಂದಿರುವ ಮೀನ ರಾಶಿಯ ಜನ ನೈಜ ಜೀವನದಿಂದ ಸಾಗಿ ಕನಸುಗಳಲ್ಲೇ ಮುಳುಗಿಬಿಡುತ್ತಾರೆ. ಇದರಿಂದಾಗಿ ವಾಸ್ತವ ಜೀವನದಿಂದ ವಿಮುಖರಾಗಿದ್ದಾರೆ ಎನಿಸುತ್ತದೆ. ಸಿಕ್ಕಾಪಟ್ಟೆ ಕಿರಿಕಿರಿ ಮೂಡಿಸುತ್ತದೆ. 
 

Follow Us:
Download App:
  • android
  • ios