Asianet Suvarna News Asianet Suvarna News

ಈ ರಾಶಿಗಳ ಜನರಲ್ಲಿ ಗುಟ್ಟನ್ನು ಶೇರ್ ಮಾಡಿಕೊಂಡ್ರೆ ಮುಗೀತು ಕತೆ! ಬಿಬಿಸಿ ರೀತಿ ಆಡ್ತಾರೆ!

ನಮ್ಮ ಜೀವನಕ್ಕೆ ಸಂಬಂಧಿಸಿದ್ದೋ, ಇತರರ ಕುರಿತಾದದ್ದೋ ಯಾವುದಾದರೂ ಗುಟ್ಟನ್ನು ಹಂಚಿಕೊಳ್ಳುವಾಗ ಹುಷಾರಾಗಿರಬೇಕು. ಏಕೆಂದರೆ, ಆ ಗುಟ್ಟುಗಳೇ ಮುಂದೊಮ್ಮೆ ನಮ್ಮನ್ನೇ ಸುತ್ತಿಕೊಳ್ಳಬಹುದು. ಗಾಸಿಪ್ ಅಪಾಯಕಾರಿಯಾಗುವುದೇ ಆಗ. ಅದನ್ನು ಹಂಚಿಕೊಳ್ಳುವ ಜನ ನಂಬಿಕೆಗೆ ಅರ್ಹವಾಗಿರಬೇಕು. ಕೆಲವು ರಾಶಿಯ ಜನರೊಂದಿಗೆ ಗುಟ್ಟನ್ನು ಹಂಚಿಕೊಳ್ಳುವುದು ಕ್ಷೇಮವಲ್ಲ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
 

Some zodiac signs do not trustworthy cant keep secrets withing themselves sum
Author
First Published Sep 20, 2023, 6:24 PM IST

ಈಗಷ್ಟೇ ಕೇಳಿದ ಯಾವುದೋ ಗಾಸಿಪ್, ಆಫೀಸ್ ಕ್ರಶ್, ಕಾಲೇಜಿನ ಗೆಳೆತನದ ಬಗ್ಗೆ ಯಾರೊಂದಿಗಾದರೂ ಹೇಳಿಕೊಳ್ಳಲೇ ಬೇಕು ಎನ್ನುವ ತುಡಿತ ಉಂಟಾದಾಗ ಸಾಮಾನ್ಯವಾಗಿ ಯಾರನ್ನು ಆರಿಸಿಕೊಳ್ತೀವಿ? ನಮ್ಮದೇ ಸ್ನೇಹಿತರ ಬಳಿ ಅವುಗಳನ್ನೆಲ್ಲ ಶೇರ್ ಮಾಡಿಕೊಳ್ತೀವಿ. ಆದರೆ, ಹೀಗೆ ಶೇರ್ ಮಾಡಿಕೊಂಡ ವಿಷಯಗಳೂ ಕೊನೆಗೊಮ್ಮೆ ಬೇರೆ ಬೇರೆ ತಿರುವುಗಳನ್ನು ಪಡೆದು ಮತ್ತೆ ನಿಮಗೇ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿರುತ್ತದೆ. ಏಕೆಂದರೆ, ನೀವು ನಂಬಿಕೆಗೆ ಅರ್ಹವಲ್ಲದ ಜನರೊಂದಿಗೆ ನಿಮ್ಮ ಗುಟ್ಟುಗಳನ್ನು ಹಂಚಿಕೊಂಡಿರುತ್ತೀರಿ. ಹಾಗಾಗದೇ ಇರಲು ನೀವು ಕೆಲವೇ ನಿರ್ದಿಷ್ಟ ಜನರೊಂದಿಗೆ ಮಾತ್ರ ಗುಟ್ಟುಗಳನ್ನು ಹೇಳಿಕೊಳ್ಳಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಲ್ಕು ರಾಶಿಗಳ ಜನರೊಂದಿಗೆ ಗುಟ್ಟು ಹೇಳಿಕೊಳ್ಳುವುದು ಸರಿಯಲ್ಲ. ಏಕೆಂದರೆ, ಅವರು ನಂಬಿಕೆಗೆ ಹೆಚ್ಚು ಅರ್ಹರಾಗಿರುವುದಿಲ್ಲ, ಅವರ ಬಳಿ ನೀವು ಹೇಳಿಕೊಂಡ ಗುಟ್ಟು ನಿಲ್ಲುವುದಿಲ್ಲ. ಹೀಗಾಗಿ, ನಿಮ್ಮ ಸ್ನೇಹ ಬಳಗದಲ್ಲಿ ಈ ರಾಶಿಗಳ ಜನ ಯಾರಾದರೂ ಇದ್ದರೆ ಅವರ ಬಳಿ ಹುಷಾರಾಗಿದ್ದುಬಿಡಿ.

•    ಮಿಥುನ (Gemini)
ಅವಳಿ (Twins) ಜತೆಯಾಗಿರುವ ಮಿಥುನ ರಾಶಿಯ ಜನ ತಮ್ಮ ದ್ವಿಮುಖ (Duality) ಹಾಗೂ ಚುರುಕು ವಿನೋದಕ್ಕೆ (Wit) ಹೆಸರುವಾಸಿ. ಈ ಗುಣ ಇವರನ್ನು ಸಾಕಷ್ಟು ವರ್ಚಸ್ವಿಗಳನ್ನಾಗಿ ಮಾಡುತ್ತದೆ. ಎಲ್ಲದರ ಬಗೆಗೂ ಭಾರೀ ಕುತೂಹಲ (Curiosity) ಹೊಂದಿರುತ್ತಾರೆ. ಪಾರುಪತ್ಯ ಮಾಡುವುದು ಅಂತೀವಲ್ಲ, ಅದು ಸರಿಯಾಗಿ ಇವರಿಗೆ ಹೊಂದುತ್ತದೆ. ನೀವು ಇವರ ಬಳಿ ಏನಾದರೂ ಗುಟ್ಟು (Secret) ಹೇಳಿದರೆ, ಮುಗಿಯಿತು. ಎರಡನೇ ಯೋಚನೆಗೆ ಅವಕಾಶವಿಲ್ಲದಂತೆ ಬೇರೆಯವರ ಬಳಿ ಹೇಳಿಬಿಡುತ್ತಾರೆ. ಆದರೆ, ಇವರು ಉದ್ದೇಶಪೂರ್ವಕವಾಗಿ ನಿಮ್ಮ ಗುಟ್ಟನ್ನು ರಟ್ಟು ಮಾಡುವುದಿಲ್ಲ. ಇವರ ಮನಸ್ಸು ಸದಾಕಾಲ ಬೇರೆ ಬೇರೆ ವಿಚಾರಗಳಿಂದ ಕೂಡಿದ್ದು, ಜೇನು ಗುಂಯ್ (Buzz) ಗುಡುವಂತೆ ಇರುತ್ತದೆಯಾದ್ದರಿಂದ ಪರಿಣಾಮಗಳ ಬಗ್ಗೆ ಯೋಚನೆ ಮಾಡದೇ ಗುಟ್ಟನ್ನು ಹೊರಹಾಕಿಬಿಡುತ್ತಾರೆ. ಮಿಥುನ ರಾಶಿಯ ಜನರೊಂದಿಗೆ ಗುಟ್ಟು ಶೇರ್ (Share) ಮಾಡುವ ಮುನ್ನ ಆ ಸುದ್ದಿ ಬಹುಬೇಗ ಪ್ರಚಾರಕ್ಕೆ ತುತ್ತಾಗುವುದನ್ನು ಗಮನದಲ್ಲಿ ಇಟ್ಟುಕೊಳ್ಳಿ.

ಈ ರಾಶಿಯವರು ತುಂಬಾ ರೊಮ್ಯಾಂಟಿಕ್‌..! ನಿಮ್ಮದೂ ಇದೇ ರಾಶಿನಾ..?

•    ಧನು (Sagittarius) 
ಸಾಹಸಿ ಧೋರಣೆಯ ಧನು ರಾಶಿಯ ಜನ ಸಿಕ್ಕಾಪಟ್ಟೆ ಸ್ವತಂತ್ರ ಚೈತನ್ಯ (Free Spirit) ಹೊಂದಿರುತ್ತಾರೆ. ಯಾರ ಬಳಿಯಾದರೂ ಕತೆ ಹೇಳುವುದೆಂದರೆ ಇವರಿಗೆ ಭಾರೀ ಇಷ್ಟ. ಈ ಗುಣದಿಂದಾಗಿ ಬಹುಬೇಗ ಸ್ನೇಹ (Friend) ಗಳಿಸುತ್ತಾರೆ. ಆದರೆ, ಕತೆ ಹೇಳುವ ಭರದಲ್ಲಿ ಗುಟ್ಟು ಹೇಳಿಬಿಡುತ್ತಾರೆ. ನೀವು ವಿಶ್ವಾಸದಿಂದ ಹೇಳುವ ವಿಚಾರಗಳನ್ನು ಇವರು ಇನ್ನಷ್ಟು ರಂಗು ತುಂಬಿ ಮತ್ತೊಬ್ಬರ ಬಳಿ ಸಾರುತ್ತಾರೆ. ಹೆಚ್ಚಿನ ಸಮಸ್ಯೆ ಸೃಷ್ಟಿಸುವುದಿಲ್ಲವಾದರೂ ನಿಮ್ಮ ಕತೆಯನ್ನು ಇವರು ತಿರುಚಿ, ಬಹುದೊಡ್ಡ ಸರಣಿಯ ಮೂಲಕ ಹೇಳಬಲ್ಲರು. ನಿಮ್ಮ ಖಾಸಗಿ (Private) ವಿಚಾರಗಳನ್ನು ಧನು ರಾಶಿಯವರಲ್ಲಿ ಹಂಚಿಕೊಳ್ಳುವ ಮುನ್ನ ನಿಮ್ಮ ವಿವೇಚನೆಯನ್ನು ಪ್ರಶ್ನಿಸಿಕೊಳ್ಳಿ!

•    ಸಿಂಹ (Leo)
ಎಲ್ಲರ ಕೇಂದ್ರಬಿಂದುವಾಗಲು (Centre point) ಸದಾ ತುಡಿಯುವ ಸಿಂಹ ರಾಶಿಯ ಜನ ವರ್ಚಸ್ಸನ್ನು (Charm) ಹೊಂದಿರುತ್ತಾರೆ. ಜನರನ್ನು ಸೆಳೆಯುತ್ತಾರೆ. ಹಾಗೆಯೇ ಇವರು ಸ್ವಲ್ಪ ಡ್ರಾಮಾ (Drama) ಮಾಡುವ, ಅತ್ಯುತ್ಸಾಹದ ಗುಣವನ್ನೂ ಹೊಂದಿರುತ್ತಾರೆ. ಈ ಗುಣದಿಂದಾಗಿ ಕೆಲವೊಮ್ಮೆ ತಮ್ಮ ಬದ್ಧತೆಯನ್ನು ಕಳೆದುಕೊಳ್ಳುತ್ತಾರೆ. ನೀವು ಹೇಳಿದ ವಿಚಾರವನ್ನು ಉತ್ಪ್ರೇಕ್ಷೆಯಿಂದ ವರ್ಣಿಸುತ್ತಾರೆ. ಇನ್ನೂ ರೋಮಾಂಚಕ ಅಂಶಗಳನ್ನು ಸೇರಿಸಿ ಜನರನ್ನು ತಮ್ಮತ್ತ ಸೆಳೆಯಲು, ಅವರ ಕೇಂದ್ರಬಿಂದುವಾಗಲು ಅವುಗಳನ್ನು ಬಳಸಿಕೊಂಡುಬಿಡುತ್ತಾರೆ.

ಈ ರಾಶಿಯವರಿಗೆ ಎಂತಹ ಆಪತ್ತು ಬಂದರೂ ಜಯಿಸುವ ಅಸಾಧಾರಣ ಧೈರ್ಯ

•    ಕುಂಭ (Aquarius)
ವಿಲಕ್ಷಣ ಎನಿಸುವ ಧೋರಣೆ ಹೊಂದಿರುವ ಕುಂಭ ರಾಶಿಯ ಜನರಲ್ಲಿ ಅನ್ವೇಷಣಾತ್ಮಕ (Innovative) ಬುದ್ಧಿ ಸದಾಕಾಲ ಜಾಗೃತವಾಗಿರುತ್ತದೆ. ಹೊಸ ಹೊಸ ಯೋಚನೆಗಳು ಇವರಲ್ಲಿರುತ್ತವೆ. ಯಾವುದೇ ವಿಚಾರವನ್ನು ನೋಡುವ ದೃಷ್ಟಿಕೋನ ವಿಭಿನ್ನವಾಗಿರುತ್ತದೆ. ಅದನ್ನು ವ್ಯಕ್ತಪಡಿಸುವ ಭರದಲ್ಲಿ ನಿಮ್ಮ ಗುಟ್ಟನ್ನೂ ಮತ್ತೊಬ್ಬರಲ್ಲಿ ಹೇಳಿಬಿಡುತ್ತಾರೆ.  ಉದ್ದೇಶಪೂರ್ವಕವಾಗಿ ಗುಟ್ಟನ್ನು ಬಹಿರಂಗಪಡಿಸುವುದಿಲ್ಲ. ಆದರೆ, ಅನಿರೀಕ್ಷಿತ ರೀತಿಯಲ್ಲಿ ಹೊರಹಾಕಿಬಿಡುತ್ತಾರೆ. 
 

Follow Us:
Download App:
  • android
  • ios