ಈ 3 ರಾಶಿಗಳಿಗೆ ಜುಲೈನಲ್ಲಿ ಕುಬೇರನ ಕೃಪೆ - ಧನಲಾಭ

ಜುಲೈ ತಿಂಗಳು ಎಲ್ಲ ರಾಶಿಯವರಿಗೂ ಶುಭಾಶುಭ ಫಲಗಳನ್ನು ನೀಡುತ್ತದೆ. ಅದರಲ್ಲೂ 3 ರಾಶಿಯವರಿಗೆ ಮಾತ್ರ ಕುಬೇರನ ಕೃಪೆ ಪ್ರಾಪ್ತವಾಗಲಿದ್ದು, ಹೆಚ್ಚಿನ ಧನ ಲಾಭವಾಗುತ್ತದೆ. ಹಾಗಾಗಿ ಆ ಮೂರು ರಾಶಿಗಳು ಯಾವುವು ಎಂಬುದರ ಬಗ್ಗೆ ತಿಳಿಯೋಣ...

In July these 3 zodiac sign people get more benefit from lord Kubera

ಜುಲೈ (July ) ತಿಂಗಳಿನಲ್ಲಿ (Month ) ಅನೇಕ ರಾಶಿಗಳು (Zodiac sign ) ಪರಿವರ್ತನೆ ಹೊಂದುತ್ತವೆ. ಇದೇ ತಿಂಗಳಿನಲ್ಲಿ ಸೂರ್ಯನು (Sun ) ಕರ್ಕಾಟಕ (Cancer) ರಾಶಿಯನ್ನು ಪ್ರವೇಶಿಸುತ್ತಾನೆ. ಅಷ್ಟೇ ಅಲ್ಲದೆ ಬುಧ (Mercury ), ಶುಕ್ರ (Venus) ಗ್ರಹಗಳಂತಹ ಉಚ್ಚ ಗ್ರಹಗಳು ಸಹ ತಮ್ಮ ಸ್ಥಾನವನ್ನು ಬದಲಿಸುತ್ತವೆ. ಇದರ ಪರಿಣಾಮವಾಗಿ ಜುಲೈ ತಿಂಗಳಿನಲ್ಲಿ ಅನೇಕ ರಾಶಿಗಳಿಗೆ (Zodiac sign) ಶುಭ ಮತ್ತು ಅಶುಭ ಫಲಗಳು ಪ್ರಾಪ್ತವಾಗುತ್ತವೆ. ಆದರೆ ಮುಖ್ಯವಾಗಿ ಕೆಲವು ರಾಶಿಗೆ ಹೆಚ್ಚಿನ ಧನ (Money) ಲಾಭವಾಗುವ (Benefit) ಯೋಗವಿದೆ. ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ...

ಬುಧ ಗ್ರಹವು 68 ದಿನದ ನಂತರ ಅಂದರೆ ಜುಲೈ ಎರಡಕ್ಕೆ ಮಿಥುನ (Gemini) ರಾಶಿಗೆ ಪರಿವರ್ತನೆ ಹೊಂದಲಿದೆ. ಅಷ್ಟೇ ಅಲ್ಲದೆ ಜುಲೈ 16ಕ್ಕೆ ಸೂರ್ಯ ಗ್ರಹವು  ಕರ್ಕಾಟಕ ರಾಶಿಗೆ ಪ್ರವೇಶಿಸುತ್ತದೆ. ಶುಕ್ರ ಮತ್ತು ಮಂಗಳ (Mars) ಗ್ರಹಗಳು ಸಹ ಇದೇ ತಿಂಗಳಿನಲ್ಲಿ ರಾಶಿ ಪರಿವರ್ತನೆ ಹೊಂದುತ್ತವೆ. ಇದರ ಪರಿಣಾಮವು ಈ ಮೂರು ರಾಶಿಯವರಿಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ. 

ಸಿಂಹ ರಾಶಿ (Leo)
ಜ್ಯೋತಿಷ್ಯ ಶಾಸ್ತ್ರದಲ್ಲಿ ಸಿಂಹ ರಾಶಿಯವರಿಗೆ ಈ ಸಮಯವು ತುಂಬಾ ಅನುಕೂಲಕರವಾಗಿದೆ (Helpful). ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಲಾಭ ದೊರಕುತ್ತದೆ. ಉನ್ನತ ಪದವಿಯನ್ನು ಪಡೆಯುವ ಯೋಗವೂ ಸಹ ಇದೆ. ಈ ಅವಧಿಯಲ್ಲಿ ಅರ್ಧಕ್ಕೆ ನಿಂತ ಕಾರ್ಯಗಳು ಸಹ ಪೂರ್ಣಗೊಳ್ಳತ್ತವೆ. ಉದ್ಯೋಗದಲ್ಲಿ (Job ) ಉತ್ತಮ ಶ್ರದ್ಧೆ  ತೋರಿಸುವುದಲ್ಲದೆ, ಇತರ ಕಡೆಗಳಿಂದಲೂ ಉತ್ತಮ ಉದ್ಯೋಗ ಅವಕಾಶಗಳು (Opportunities ) ಬರುತ್ತವೆ. ವಿದೇಶದಲ್ಲಿ (Foreign) ಉದ್ಯೋಗ ಬಯಸುತ್ತಿದ್ದರೆ ಅದು ಸಹ ಕೈಗೂಡುತ್ತದೆ. ವ್ಯಾಪಾರದಲ್ಲಿ (Business) ಲಾಭ ಸಿಗಲಿದೆ. ಹಾಗಾಗಿ ಈ ರಾಶಿಯವರಿಗೆ ಉದ್ಯೋಗ, ವ್ಯಾಪಾರ ಮತ್ತು  ಕಾರ್ಯಕ್ಷೇತ್ರಗಳಲ್ಲಿ ಸಫಲತೆ (Success) ದೊರಕುತ್ತದೆ.

ಇದನ್ನು ಓದಿ: ಕನಸಲ್ಲಿ ಪೂರ್ವಜರು ಕಂಡರೆ ಅದಕ್ಕೇನು ಅರ್ಥ ಗೊತ್ತಾ..?

ಧನು ರಾಶಿ (Sagittarus)
ಈ ರಾಶಿಯ ವ್ಯಕ್ತಿಗಳಿಗೆ ಆರ್ಥಿಕ (Economic) ದೃಷ್ಟಿಯಿಂದ ಈ ಅವಧಿಯು ಅತ್ಯಂತ ಲಾಭಕಾರಿಯಾಗಿದೆ. ಅವಧಿಯಲ್ಲಿ ಧನು ರಾಶಿಯವರಿಗೆ ಕುಬೇರ (Lord kubera) ದೇವರ ಕೃಪೆ ಸಹ ಪ್ರಾಪ್ತವಾಗಲಿದೆ. ಅಷ್ಟೆ ಅಲ್ಲದೆ ಧನಾಗಮನಕ್ಕೆ ಹಲವಾರು ಮಾರ್ಗಗಳು ತೆರೆದುಕೊಳ್ಳುತ್ತವೆ. ಭೂಮಿ (Land) ಆಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಲಾಭ ಆಗುತ್ತದೆ. ಮನೆ ಖರೀದಿ ಬಗ್ಗೆ ಆಲೋಚಿಸುತ್ತಿದ್ದರೆ ಈ ಅವಧಿ ಉತ್ತಮವಾಗಿದೆ. ಅಷ್ಟೇ ಅಲ್ಲದೆ ಉಳಿತಾಯ (Saving) ಮಾಡವಲ್ಲಿ ಸಹ ಸಫಲತೆಯನ್ನು ಕಾಣುತ್ತೀರಿ.

ಇದನ್ನು ಓದಿ: ಈ 4 ರಾಶಿಯವರಿಗೆ ಶಿವನ ಕೃಪೆ ಸದಾ ಇರಲಿದೆ!

ಮಿಥುನ ರಾಶಿ (Gemini)
ಈ ರಾಶಿಯ ವ್ಯಕ್ತಿಗಳಿಗೆ ಸಹ ಜುಲೈ ತಿಂಗಳು ಅತ್ಯಂತ ಶುಭ ಫಲವನ್ನು (Good luck) ನೀಡುತ್ತದೆ. ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಗೌರವ ಪ್ರತಿಷ್ಠೆಗಳು ಲಭ್ಯವಾಗುತ್ತವೆ. ಈ ಅವಧಿಯಲ್ಲಿ ದೊಡ್ಡ ಜವಾಬ್ದಾರಿಯೊಂದು (Responsibility) ಈ ರಾಶಿಯವರ ಹೆಗಲೇರಲಿದೆ. ವ್ಯಾಪಾರವನ್ನು ವಿಸ್ತರಿಸುವ (Expand) ಬಗ್ಗೆ ಆಲೋಚಿಸುತ್ತಿದ್ದರೆ ಈ ಸಮಯ ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವವರು ಹೆಚ್ಚಿನ ವೇತನ (Salary) ಸಿಗುವ ನಿರೀಕ್ಷೆ ಇದೆ. ಹೊಸ ಉದ್ಯೋಗವನ್ನು ಅರಸುತ್ತಿರುವವರಿಗೆ ಅವಕಾಶಗಳು ಒದಗಿ ಬರುತ್ತವೆ. ಪಿತ್ರಾರ್ಜಿತ ಆಸ್ತಿಯಲ್ಲಿ ಲಾಭ ಬರುವ ಸಾಧ್ಯತೆ ಸಹ ಇದೆ. ಮನೆ (Property) ತೆಗೆದುಕೊಳ್ಳುವ ಬಗ್ಗೆ ಆಲೋಚಿಸುತ್ತಿದ್ದರೆ ಈ ಸಮಯವು ಅತ್ಯಂತ ಅನುಕೂಲವಾಗಿದೆ ಮತ್ತು ಅಂದುಕೊಂಡ ಕಾರ್ಯದಲ್ಲಿ ಸಫಲತೆ ಸಿಗುತ್ತದೆ.

Latest Videos
Follow Us:
Download App:
  • android
  • ios