Asianet Suvarna News Asianet Suvarna News

Gold Gift ಕೊಡುವಾಗ ಲಾಭ, ನಷ್ಟ ನೋಡಿಕೊಳ್ಳಿ

ಉಡುಗೊರೆ ವಿಷ್ಯ ಬಂದಾಗ ಬಂಗಾರವನ್ನು ದುಬಾರಿ ಸ್ಥಾನದಲ್ಲಿ ಇಡ್ತೇವೆ. ಅತ್ಯಂತ ಆಪ್ತರು ನೀಡುವ ಉಡುಗೊರೆ ಇದೆಂದು ಭಾವಿಸ್ತೇವೆ. ಚಿನ್ನ ಗಿಫ್ಟ್ ಸಿಕ್ಕಾಗ ಖುಷಿಯಾಗೋದು ಸಹಜ. ಆದ್ರೆ ಗಿಫ್ಟ್ ಕೊಟ್ಟೋರಿಗೆ ತೊಂದರೆ ಆಗ್ಬಾರದು ಅಂದ್ರೆ ಉಡುಗೊರೆ ನೀಡುವ ಮೊದಲು ಕೆಲ ಸಂಗತಿ ತಿಳಿದಿರಬೇಕು.
 

know about loss and profit of giving golden gifts
Author
Bangalore, First Published Jun 23, 2022, 3:48 PM IST

ಬಂಗಾರ (Gold) ಎಲ್ಲರಿಗೂ ಪ್ರಿಯವಾಗುವ ಧಾತು. ಭಾರತ (India) ದಲ್ಲಿ ಚಿನ್ನಕ್ಕೆ ವಿಶೇಷ ಸ್ಥಾನವಿದೆ. ಪುರಾತನ ಕಾಲದಿಂದಲೂ ಭಾರತದಲ್ಲಿ ಚಿನ್ನ ಸಂಗ್ರಹಿಸುವ ಪದ್ಧತಿಯಿದೆ. ಚಿನ್ನವನ್ನು ಆಪತ್ ಕಾಲದ ಬಂಧು ಎಂದೇ ಕರೆಯಲಾಗುತ್ತದೆ. ಅನೇಕ ಕಷ್ಟದ ಪರಿಸ್ಥಿತಿಗಳಲ್ಲಿ ಚಿನ್ನ ನಮ್ಮ ಸಹಾಯಕ್ಕೆ ಬರುತ್ತದೆ. ಚಿನ್ನವನ್ನು ಒಂದು ರೀತಿಯ ಉಳಿತಾಯ (Savings) ಎನ್ನಬಹುದು. ಭಾರತದಲ್ಲಿ ಆಭರಣ (Jewelry )ರೂಪದಲ್ಲಿ ಚಿನ್ನ ಸಂಗ್ರಹ ಮಾಡುವುದು ಹೆಚ್ಚು. ಸಾಮಾನ್ಯವಾಗಿ ಹುಟ್ಟುಹಬ್ಬ, ಮದುವೆ (Marriage) ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಉಡುಗೊರೆ ನೀಡುವ ಪದ್ಧತಿಯಿದೆ. ಆಪ್ತರು ಉಡುಗೊರೆ (Gift) ಯಾಗಿ ಬಂಗಾರವನ್ನು ಆಯ್ದುಕೊಳ್ತಾರೆ. ಐಷಾರಾಮಿ (Luxury) ಉಡುಗೊರೆ ನೀಡ್ಬೇಕು, ದುಬಾರಿ ಉಡುಗೊರೆ ನೀಡ್ಬೇಕು ಎನ್ನುವವ ಲಕ್ಷ್ಯ ಮೊದಲು ಹೋಗೋದು ಬಂಗಾರದ ಮೇಲೆ. ಬಂಗಾರದ ಆಭರಣಗಳು ಉಡುಗೊರೆ ರೂಪದಲ್ಲಿ ನಿಮಗೂ ಸಿಕ್ಕಿರಬಹುದು. ಅಥವಾ ನೀವು ಬಂಗಾರವನ್ನು ಉಡುಗೊರೆಯಾಗಿ ನೀಡಿರಬಹುದು. ಇನ್ಮುಂದೆ ಬಂಗಾರವನ್ನು ಉಡುಗೊರೆ ನೀಡುವು ಮೊದಲು ಕೆಲ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಿ. ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಬಂಗಾರದ ಉಡುಗೊರೆ ಬಗ್ಗೆಯೂ ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬಂಗಾರವನ್ನು ಉಡುಗೊರೆಯಾಗಿ ನೀಡುವುದ್ರಿಂದ ನಷ್ಟವೂ ಇದೆ, ಲಾಭವೂ ಇದೆ. ಇಂದು ನಾವು ಅದ್ರ ಬಗ್ಗೆ ನಿಮಗೆ ತಿಳಿಸ್ತೇವೆ.

ಬಂಗಾರ ಉಡುಗೊರೆ ನೀಡಿದ್ರೆ ಆಗುವ ಲಾಭ (Profit) : ಬಂಗಾರವೇ ಲಾಭ ಅಂದ್ಮೇಲೆ ಅದನ್ನು ಉಡುಗೊರೆ ರೂಪದಲ್ಲಿ ನೀಡಿದ್ರೆ ಲಾಭವಾಗ್ದೆ ಹೋಗುತ್ಯೇ ಎಂದು ನೀವು ಕೇಳ್ಬಹುದು. ಖಂಡಿತ. ಮನೆಯಲ್ಲಿ ಬಂಗಾರವಿದ್ದರೆ ಅದು ದೊಡ್ಡ ಸಂಪತ್ತು. ಬಂಗಾರವನ್ನು ನೀವು ಉಡುಗೊರೆ ರೂಪದಲ್ಲಿ ನೀಡಿದ್ರೆ ನಿಮಗೆ ಸಾಕಷ್ಟು ಲಾಭವಿದೆ. ಹಣವನ್ನು ದಾನ ಮಾಡಿದ್ರೆ ಅದ್ರ ಪುಣ್ಯ ಒಂದೇ ಬಾರಿ ಸಿಗುತ್ತದೆ. ಅದೇ ಬಂಗಾರ, ಭೂಮಿ ಹಾಗೂ ಕನ್ಯಾ ದಾನ ಮಾಡಿದ್ರೆ ಅದ್ರ ಪುಣ್ಯ ನಿಮಗೆ ಏಳು ಜನ್ಮದವರೆಗೂ ಸಿಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ನಿಮ್ಮ ಕೈಲಾಗುತ್ತೆ ಅನ್ನೋದಾದ್ರೆ, ಪುಣ್ಯ ಪ್ರಾಪ್ತಿಯಾಗ್ಬೇಕು ಅನ್ನೋದಾದ್ರೆ ನೀವು ಕೂಡ ಬಂಗಾರವನ್ನು ಉಡುಗೊರೆಯಾಗಿ ನೀಡಬಹುದು. 

ASTRO FOR FRUITS: ನವಗ್ರಹ ದೋಷ ತಪ್ಪಿಸಲು ಹಣ್ಣು ಸೇವಿಸಿ!

ಗುರು ಗ್ರಹದ (Jupiter Planet) ಶುಭ ಫಲ : ಚಿನ್ನವನ್ನು ದಾನ ಮಾಡುವ ಜನರ ಜೀವನದ ಮೇಲೆ ಗುರು ಗ್ರಹದ ಶುಭ ಪರಿಣಾಮಗಳು ಕಂಡುಬರುತ್ತವೆ. ಆದರೆ ಎಲ್ಲರೂ ಬಂಗಾರವನ್ನು ದಾನ ಮಾಡಲು ಆಗುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಚಿನ್ನವನ್ನು ದಾನ ಮಾಡಲು ಬಯಸಿದರೆ ನಿಮ್ಮ ಗುರು ಗ್ರಹದ ಸ್ಥಿತಿಯ ಬಗ್ಗೆ ನೀವು ಸರಿಯಾಗಿ ತಿಳಿದಿರಬೇಕು.  

ಈ ಸಂದರ್ಭದಲ್ಲಿ ಬಂಗಾರ ದಾನ ಮಾಡಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಮ್ಮ ಜಾತಕದಲ್ಲಿ ಗುರು ದುರ್ಬಲನಾಗಿದ್ದರೆ ಅಥವಾ ಗುರು ನಿಮಗೆ ಒಳ್ಳೆಯ ಫಲಿತಾಂಶವನ್ನು ನೀಡದೆ ಇದ್ರೆ ಆ ಸಂದರ್ಭದಲ್ಲಿ ನೀವು ಬಂಗಾರವನ್ನು ದಾನ ಮಾಡಬೇಕಾಗುತ್ತದೆ. ಗುರು ಗ್ರಹ ಬಲ ಪಡೆಯಬೇಕೆಂದ್ರೆ ನೀವು ಬಂಗಾರ,  ಧಾರ್ಮಿಕ ಪುಸ್ತಕಗಳು, ಹಳದಿ ಬಣ್ಣದ ಬಟ್ಟೆ, ಕುಂಕುಮ ಇತ್ಯಾದಿಗಳನ್ನು ಜನರಿಗೆ ದಾನ ಮಾಡಬೇಕು. ಇದ್ರಿಂದ ಒಳ್ಳೆಯ ಫಲಿತಾಂಶವನ್ನು ಕಾಣಬಹುದು.

Astrology Tips : ಚಪ್ಪಲಿ ಕಳ್ಕೊಂಡ್ರೆ ಚಿಂತೆ ಬೇಡ, ದುಡ್ಡು ಕೈ ಸೇರೋದು ಗ್ಯಾರಂಟಿ

ಬಂಗಾರ ದಾನ ಮಾಡಿದ್ರೆ ಆಗುವ ನಷ್ಟ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬಂಗಾರ ದಾನ ಮಾಡುವ ಮೊದಲು ನಿಮ್ಮ ಜಾತಕವನ್ನು ನೋಡಬೇಕು. ಯಾಕೆಂದ್ರೆ ನಿಮ್ಮ ಜಾತಕದಲ್ಲಿ ಈಗಾಗಲೇ ಗುರು ಪ್ರಬಲನಾಗಿದ್ದರೆ ಅಥವಾ ಶುಭ ಫಲಗಳನ್ನು ನಿಮಗೆ ನೀಡ್ತಿದ್ದರೆ ನೀವು ಬಂಗಾರವನ್ನು ದಾನ ಮಾಡಬಾರದು. ಈ ಸ್ಥಿತಿಯಲ್ಲಿ ಬಂಗಾರ ದಾನ ಮಾಡಿದ್ರೆ ನಿಮಗೆ ಹಾನಿಯಾಗುತ್ತದೆ. ಹಾಗೆಯೇ ಬಂಗಾರ ಧರಿಸುವ ಮೊದಲೂ ಗುರುವಿನ ಸ್ಥಾನವನ್ನು ನೋಡಬೇಕಾಗುತ್ತದೆ. 
 

Follow Us:
Download App:
  • android
  • ios