7 ವರ್ಷ ನಡೆಯಲಿದೆ ಕೇತು ಮಹಾದಶಾ; ಪರಿಣಾಮ, ಪರಿಹಾರವೇನು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೇತು ಗ್ರಹದ ಮಹಾದಶಾ 7 ವರ್ಷಗಳವರೆಗೆ ಇರುತ್ತದೆ. ಜೀವನದ ಮೇಲೆ ಅದರ ಪರಿಣಾಮ ಮತ್ತು ಅದರ ಪರಿಹಾರಗಳನ್ನು ತಿಳಿಯೋಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳ ಅಂತರದಶ ಮತ್ತು ಮಹಾದಶಾ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಹಾದು ಹೋಗುತ್ತದೆ.ಇಂದು ಕೇತು ಗ್ರಹದ ಪರಿಣಾಮದ ಬಗ್ಗೆ ತಿಳಿಯೋಣ. ಜ್ಯೋತಿಷ್ಯದಲ್ಲಿ, ಕೇತು ಗ್ರಹವನ್ನು ದೋಷಪೂರಿತ ಗ್ರಹ ಎಂದು ಕರೆಯಲಾಗುತ್ತದೆ. ಹಾಗಂಥ ಕೇತು ಗ್ರಹವು ಯಾವಾಗಲೂ ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ ಎಂದಲ್ಲ. ವಾಸ್ತವವಾಗಿ, ಜಾತಕದಲ್ಲಿ ಕೇತು ಯಾವ ಸ್ಥಾನದಲ್ಲಿ ಮತ್ತು ಯಾವ ಗ್ರಹದೊಂದಿಗೆ ನೆಲೆಸಿದ್ದಾನೆ ಎಂಬುದನ್ನು ತಿಳಿಯುವುದು ಮುಖ್ಯವಾಗಿದೆ. ಅದರಂತೆ ಅವನು ತನ್ನ ಮಹಾದಶಾದಲ್ಲಿ ಫಲ ನೀಡುತ್ತಾನೆ.
ಜೀವನದಲ್ಲಿ ಕೇತು ಗ್ರಹದ ಮಹಾದಶಾ ಪ್ರಭಾವ(Ketu mahadasha Effect)
ಜಾತಕದಲ್ಲಿ ಕೇತು ಗ್ರಹವು ಶುಭವಾಗಿದ್ದರೆ
ವೈದಿಕ ಜ್ಯೋತಿಯಲ್ಲಿ, ಕೇತು ಗ್ರಹವನ್ನು ಆಧ್ಯಾತ್ಮಿಕತೆ, ಶಾಂತತೆ, ಮೋಕ್ಷ, ತಾಂತ್ರಿಕ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗಿದೆ. ವ್ಯಕ್ತಿಯ ಜಾತಕದಲ್ಲಿ ಕೇತುವು ತೃತೀಯ, ಪಂಚಮ, ಆರನೇ, ಒಂಬತ್ತನೇ ಮತ್ತು ಹನ್ನೆರಡನೇ ಸ್ಥಾನದಲ್ಲಿದ್ದರೆ, ಆ ವ್ಯಕ್ತಿಯು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾನೆ. ಮತ್ತೊಂದೆಡೆ, ಕೇತುವು ಗುರು ಗ್ರಹದೊಂದಿಗೆ ಸಂಯೋಗವನ್ನು ರಚಿಸಿದರೆ, ಜಾತಕದಲ್ಲಿ ರಾಜಯೋಗವು ರೂಪುಗೊಳ್ಳುತ್ತದೆ. ಕೇತು ವ್ಯಕ್ತಿಯನ್ನು ಆಧ್ಯಾತ್ಮಿಕತೆಯ ಕಡೆಗೆ ಕರೆದೊಯ್ಯುತ್ತಾನೆ. ಇದರೊಂದಿಗೆ, ಕೇತು ಗ್ರಹವು ಹತ್ತನೇ ಮನೆಯಲ್ಲಿ ಸ್ಥಿತವಾಗಿದ್ದರೆ, ವ್ಯಕ್ತಿಯು ಜ್ಯೋತಿಷ್ಯ(Astrology)ದಲ್ಲಿ ಉತ್ತಮ ಹೆಸರನ್ನು ಗಳಿಸುತ್ತಾನೆ. ಆದ್ದರಿಂದ, ಅಂಥ ಸಮಯದಲ್ಲಿ ಕೇತು ಗ್ರಹದ ಮಹಾದಶಾ ನಡೆಯುತ್ತಿದ್ದರೆ, ಆಗ ವ್ಯಕ್ತಿಯು ಶುಭ ಫಲಿತಾಂಶಗಳನ್ನು ಹೊಂದುತ್ತಾನೆ.
ಮನೆಯ ನೆಮ್ಮದಿ ನಾಶವಾಗಿದೆಯೇ? ಈ Astro remedies ಟ್ರೈ ಮಾಡಿ
ಜಾತಕದಲ್ಲಿ ಕೇತು ಗ್ರಹವು ಅಶುಭವಾಗಿದ್ದರೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕ(Horoscope)ದಲ್ಲಿ ಕೇತು ಗ್ರಹವು ಬಾಧಿತವಾಗಿದ್ದರೆ, ವ್ಯಕ್ತಿಯು ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದ್ದಕ್ಕಿದ್ದಂತೆ ಒಂದು ಅಥವಾ ಇನ್ನೊಂದು ಅಡಚಣೆಯು ವ್ಯಕ್ತಿಯ ಮುಂದೆ ಬರುತ್ತಲೇ ಇರುತ್ತದೆ. ಒಬ್ಬ ವ್ಯಕ್ತಿಯು ಯಾವುದೇ ಕೆಲಸಕ್ಕೆ ನಿರ್ಧಾರ ತೆಗೆದುಕೊಂಡರೆ, ಅವನು ಅದರಲ್ಲಿ ವೈಫಲ್ಯವನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತದೆ. ಮತ್ತೊಂದೆಡೆ, ಕೇತು ಗ್ರಹದಿಂದ ಕಾಲಸರ್ಪ ದೋಷವನ್ನು ಸೃಷ್ಟಿಯಾಗಿದ್ದರೆ, ವ್ಯಕ್ತಿಯು ಅದೃಷ್ಟದ ಬೆಂಬಲವನ್ನು ಪಡೆಯುವುದಿಲ್ಲ ಮತ್ತು ಅವನು ತನ್ನ ಜೀವನದುದ್ದಕ್ಕೂ ಹೋರಾಡುತ್ತಾನೆ. ಮತ್ತೊಂದೆಡೆ, ಕೇತು ಗ್ರಹದ ಮಹಾದಶಾ ನಡೆಯುತ್ತಿದ್ದರೆ, ವ್ಯಕ್ತಿಯು ಅಶುಭ ಫಲಿತಾಂಶಗಳನ್ನು ಪಡೆಯುತ್ತಾನೆ.
ಈ ಕ್ರಮಗಳನ್ನು ಮಾಡಿ(Remedies)
- ಜಾತಕದಲ್ಲಿ ಕೇತು ಗ್ರಹವು ಅಶುಭವಾಗಿದ್ದರೆ, ಕಪ್ಪು ಬಣ್ಣದ ಹಸುವನ್ನು ದಾನ ಮಾಡಿ.
- ಕೇತು ಗ್ರಹದ ದುಷ್ಪರಿಣಾಮಗಳನ್ನು ತೊಡೆದುಹಾಕಲು ಬಡವರಿಗೆ, ಅಸಹಾಯಕರಿಗೆ, ಅಂಗವಿಕಲರಿಗೆ ಆಹಾರ, ಹಣ ಇತ್ಯಾದಿಗಳನ್ನು ದಾನ ಮಾಡಿ.
- ಎಣ್ಣೆಯಿಂದ ಹೊದಿಸಿದ ಬ್ರೆಡ್ ಅನ್ನು ನಾಯಿಗಳಿಗೆ ತಿನ್ನಿಸಿ. ಹೀಗೆ ಮಾಡುವುದರಿಂದ ಕೇತುವಿನ ಅಶುಭ ಪರಿಣಾಮಗಳಿಂದ ಮುಕ್ತಿ ಪಡೆಯಬಹುದು.
- ಕೇತು ಗ್ರಹದ 'ಓಂ ಕೇ ಕೇತುವೇ ನಮಃ' ಎಂಬ ಬೀಜ ಮಂತ್ರವನ್ನು ಪಠಿಸಿ.• ಬಡವರಿಗೆ ಮೂಲಭೂತ ಅವಶ್ಯಕತೆಯ ಹೊದಿಕೆಗಳು ಮತ್ತು ಇತರ ವಸ್ತುಗಳನ್ನು ದಾನ ಮಾಡಿ.
- ಅನಾಥ ಮತ್ತು ವೃದ್ಧಾಪ್ಯದ ಜನರ ಸೇವೆ ಮಾಡಿ.
- ಹಳದಿ ಅಥವಾ ಬಿಳಿ ಬಣ್ಣವನ್ನು ಹೆಚ್ಚಾಗಿ ಧರಿಸಿ.
- ದೇವಸ್ಥಾನದಲ್ಲಿ ಅಥವಾ ಬೀದಿಯಲ್ಲಿರುವ ಬಡವರಿಗೆ ಸಾಸಿವೆಯನ್ನು ದಾನ ಮಾಡಿ.
- ಪ್ರತಿದಿನ ಗಣಪತಿಗೆ ಪ್ರಾರ್ಥನೆ ಸಲ್ಲಿಸಿ.
- ತಜ್ಞರ ಸಲಹೆ ಪಡೆದು ಬೆಕ್ಕಿನ ಕಣ್ಣಿನ ರತ್ನ ಧರಿಸಿ.
Vivah Muhurat 2023: ಜನವರಿ, ಫೆಬ್ರವರಿ, ಮಾರ್ಚ್‌ನ ವಿವಾಹ ಮುಹೂರ್ತ
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.