Vivah Muhurat 2023: ಜನವರಿ, ಫೆಬ್ರವರಿ, ಮಾರ್ಚ್‌ನ ವಿವಾಹ ಮುಹೂರ್ತ

ಶಾಸ್ತ್ರಗಳ ಪ್ರಕಾರ, ಮದುವೆಯ ಶುಭ ಸಮಯಕ್ಕೆ ಶುಕ್ರನ ಉದಯವು ಅವಶ್ಯಕವಾಗಿದೆ. ಪಂಚಾಂಗದ ಪ್ರಕಾರ ಮುಂದಿನ ವರ್ಷ ಮೊದಲ ಮೂರು ತಿಂಗಳು ಮದುವೆಗೆ ಶುಭ ಮುಹೂರ್ತ ಯಾವಾಗ ಎಂದು ತಿಳಿಯೋಣ.

Vivah Muhurat 2023 Date for the first quarter skr

ಹಿಂದೂ ಧರ್ಮದಲ್ಲಿ ಶುಭ ಕಾರ್ಯಗಳಲ್ಲಿ ಮುಹೂರ್ತಕ್ಕೆ ವಿಶೇಷ ಮಹತ್ವವಿದೆ. ಪೂಜೆ, ಮುಂಡನ, ಉಪನಯನ, ನಿಶ್ಚಿತಾರ್ಥ, ಮದುವೆ ಇತ್ಯಾದಿ ಶುಭ ಮುಹೂರ್ತವಿಲ್ಲದೆ ನಡೆಯುವುದಿಲ್ಲ. ಮದುವೆಯಲ್ಲಿ ವಿಶೇಷವಾಗಿ ಮುಹೂರ್ತವನ್ನು ಖಂಡಿತವಾಗಿ ನೋಡಲಾಗುತ್ತದೆ. ಶುಭ ಮುಹೂರ್ತದಲ್ಲಿ ಮಾಡಿದ ಮದುವೆ ಎಲ್ಲ ಏಳು ಬೀಳುಗಳ ನಡುವೆಯೂ ಶುಭ ರೀತಿಯಲ್ಲಿ ಸಾಗುತ್ತದೆ ಎಂಬ ನಂಬಿಕೆ ಇದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಮದುವೆಗೆ ಮುಹೂರ್ತವನ್ನು ಹುಡುಕುವ ಅಗತ್ಯವಿಲ್ಲದ ಕೆಲವು ದಿನಗಳು ಕೂಡಾ ಇವೆ, ಅವುಗಳನ್ನು ಅಭಿಜಿನ್ ಮುಹೂರ್ತ ಎಂದು ಕರೆಯಲಾಗುತ್ತದೆ. ಅಕ್ಷಯ ತೃತೀಯ (ವೈಶಾಖ ಶುಕ್ಲ ತೃತೀಯ), ದೇವುತಾನಿ ಏಕಾದಶಿ (ಕಾರ್ತಿಕ ಶುಕ್ಲ ಏಕಾದಶಿ), ವಸಂತ ಪಂಚಮಿ (ಮಾಘ ಶುಕ್ಲ ಪಂಚಮಿ) ಮತ್ತು ಭಾದ್ಲ್ಯ ನವಮಿ (ಆಷಾಢ ಶುಕ್ಲ ನವಮಿ) ಮಂಗಳಕರ ಕೆಲಸಗಳಿಗೆ ಮುಹೂರ್ತ ನೋಡಬೇಕಿಲ್ಲದ ಮಂಗಳಕರ ಸಮಯವೆಂದು ಪರಿಗಣಿಸಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಮದುವೆಯಂಥ ಪ್ರಮುಖ ಮತ್ತು ಮಂಗಳಕರ ಕೆಲಸಗಳಿಗೆ ಶುಕ್ರ ಗ್ರಹದ ಸ್ಥಾನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮದುವೆಯ ಶುಭ ಸಮಯಕ್ಕೆ ಶುಕ್ರ ನಕ್ಷತ್ರದ ಉದಯವು ಬಹಳ ಮುಖ್ಯವಾಗಿದೆ.

ಪಂಚಾಂಗದ ಪ್ರಕಾರ, 2022ರಲ್ಲಿ ಇನ್ನು ಉಳಿದಿರುವ ಒಂದೂವರೆ ತಿಂಗಳಲ್ಲಿ ಮದುವೆಗೆ ಕೆಲವೇ ಕೆಲವು ಮುಹೂರ್ತಗಳಿವೆ. ಆದರೆ 2023ರಲ್ಲಿ, ಜೂನ್ ವರೆಗೆ ಶೆಹನಾಯಿಗಳನ್ನು ಬಿರುಸಾಗಿ ನುಡಿಸಬಹುದು.  ಆದರೂ ಮಾರ್ಚ್ 15 ರಿಂದ (2023) ಶುಭ ಕಾರ್ಯಗಳಿಗೆ ಒಂದು ಬ್ರೇಕ್ ಬೀಳಲಿದೆ. ಪಂಚಾಂಗದ ಪ್ರಕಾರ ಮುಂದಿನ ವರ್ಷದ ಮೊದಲ ಮೂರು ತಿಂಗಳಲ್ಲಿ ಮದುವೆಗೆ ಶುಭ ಮುಹೂರ್ತ ಯಾವಾಗ ಎಂದು ತಿಳಿಯೋಣ.

12 ವರ್ಷಗಳ ಬಳಿಕ ನವಪಂಚಮ ರಾಜಯೋಗ; ಮೂರು ರಾಶಿಗಳಿಗೆ ಬಂಪರ್

ಜನವರಿ 2023 ಮದುವೆ ದಿನಾಂಕ(Vivah Muhurat 2023 January)
15 ಜನವರಿ 2023
16 ಜನವರಿ 2023
18 ಜನವರಿ 2023
19 ಜನವರಿ 2023
25 ಜನವರಿ 2023
26 ಜನವರಿ 2023
27 ಜನವರಿ 2023
30 ಜನವರಿ 2023
31 ಜನವರಿ 2023

ಫೆಬ್ರವರಿ 2023 ಮದುವೆಗೆ ಶುಭ ದಿನಾಂಕಗಳು(Marriage muhurat 2023 february)
6 ಫೆಬ್ರವರಿ 2023
7 ಫೆಬ್ರವರಿ 2023
8 ಫೆಬ್ರವರಿ 2023
9 ಫೆಬ್ರವರಿ 2023
10 ಫೆಬ್ರವರಿ 2023
12 ಫೆಬ್ರವರಿ 2023
13 ಫೆಬ್ರವರಿ 2023
14 ಫೆಬ್ರವರಿ 2023
15 ಫೆಬ್ರವರಿ 2023
17 ಫೆಬ್ರವರಿ 2023
22 ಫೆಬ್ರವರಿ 2023
23 ಫೆಬ್ರವರಿ 2023
28 ಫೆಬ್ರವರಿ 2023

Lucky zodiacs 2023: ಹೊಸ ವರ್ಷದ ಅತ್ಯಂತ ಅದೃಷ್ಟವಂತ ರಾಶಿಗಳಿವು!

ಮಾರ್ಚ್ 2023 ಮದುವೆ ಶುಭ ದಿನಾಂಕಗಳು (Marriage muhurat 2023 March)
ಮಾರ್ಚ್ 6, 2023
ಮಾರ್ಚ್ 9, 2023
11 ಮಾರ್ಚ್ 2023
ಮಾರ್ಚ್ 13, 2023

Latest Videos
Follow Us:
Download App:
  • android
  • ios