Asianet Suvarna News Asianet Suvarna News

ಕೇತು ಗೋಚಾರ 2022: 2023ರವರೆಗೂ ಈ 3 ರಾಶಿಗಳಿಗೆ ಕಷ್ಟನಷ್ಟ

ತುಲಾ ರಾಶಿಯಲ್ಲಿ ಕೇತು ಗ್ರಹವಿದೆ. ಅದರಿಂದ ಮೂರು ರಾಶಿಚಕ್ರ ಚಿಹ್ನೆಗಳು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
 

Ketu in Libra big crisis on these 3 zodiac signs for the next 4 months skr
Author
First Published Sep 11, 2022, 5:17 PM IST

ಜ್ಯೋತಿಷ್ಯದ ಪ್ರಕಾರ, ಪ್ರತಿ ನಿಗದಿತ ಸಮಯದ ಮಧ್ಯಂತರದಲ್ಲಿ ಗ್ರಹಗಳ ರಾಶಿಚಕ್ರವು ಬದಲಾಗುತ್ತದೆ. ಅವರ ರಾಶಿಚಕ್ರದಲ್ಲಿನ ಈ ಬದಲಾವಣೆಯು ವಿವಿಧ ರಾಶಿಚಕ್ರ ಚಿಹ್ನೆಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಕೇತು ಗ್ರಹವು ಪ್ರಸ್ತುತ ತುಲಾರಾಶಿಯಲ್ಲಿ ಕುಳಿತಿದ್ದು 2023ರವರೆಗೆ ಅಲ್ಲಿಯೇ ಇರುತ್ತದೆ. 

ಜ್ಯೋತಿಷ್ಯದಲ್ಲಿ ಕೇತುವು ಪಾಪಗ್ರಹವೆನಿಸಿಕೊಂಡಿದೆ. ಅದಕ್ಕೆ ಭೌತಿಕ ಅಸ್ಥಿತ್ವವಿಲ್ಲವಾದರೂ ಅದು ಜಾತಕದಲ್ಲಿ ಕೆಟ್ಟ ಪರಿಸ್ಥಿತಿಯಲ್ಲಿದ್ದಾಗ ಸಾಕಷ್ಟು ಸಮಸ್ಯೆಗಳನ್ನೊಡ್ಡುತ್ತದೆ. ವ್ಯಕ್ತಿಯು ಕಷ್ಟದ ಹೊರೆಯನ್ನೇ ಹೊರಬೇಕಾಗುತ್ತದೆ. ಕೇತು ಗ್ರಹವು ಮಾನಸಿಕ ಗುಣ, ತರ್ಕ ಮತ್ತು ಕಲ್ಪನೆಗಳ ಕಾರಕ ಗ್ರಹ. ಸಧ್ಯ ತುಲಾ ರಾಶಿಯಲ್ಲಿ ಕೇತುವಿನ ಸಂಚಾರದಿಂದಾಗಿ 3 ರಾಶಿಚಕ್ರ ಚಿಹ್ನೆಗಳ ಮೇಲೆ ಬಿಕ್ಕಟ್ಟಿನ ಮೋಡವಿದೆ. ಈ ವರ್ಷದ ಅಂತ್ಯದ ವೇಳೆಗೆ, ಅವರು ಅನೇಕ ಕೆಟ್ಟ ಸುದ್ದಿಗಳನ್ನು ಕೇಳಬೇಕಾಗಬಹುದು. ಆ ರಾಶಿಚಕ್ರದ ಚಿಹ್ನೆಗಳು ಯಾವುವು ಎಂದು ತಿಳಿಯೋಣ.

ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು
ಮೀನ (pisces):
ಈ ರಾಶಿಯ ಜನರು ಮುಂದಿನ 4 ತಿಂಗಳಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅವರು ಚರ್ಮದ ಕಾಯಿಲೆ ಅಥವಾ ವೈರಲ್ ಸೋಂಕನ್ನು ಹೊಂದಿರಬಹುದು. ನಿಮ್ಮೊಂದಿಗೆ ಕೆಲವು ವಂಚನೆ ಇರಬಹುದು. ಆದ್ದರಿಂದ ಯಾರಿಗೂ ಸಾಲ ನೀಡುವುದನ್ನು ತಪ್ಪಿಸಿ. ಕೆಲಸದ ಸ್ಥಳದಲ್ಲಿ ನಷ್ಟ ಉಂಟಾಗಬಹುದು. ನಿಮ್ಮನ್ನು ಸಾಬೀತುಪಡಿಸಲು ನೀವು ಶ್ರಮಿಸಬೇಕು. ಅತಿಯಾದ ದುರಾಸೆಯನ್ನು ತಪ್ಪಿಸಿ ಮತ್ತು ನಿಮ್ಮಲ್ಲಿರುವುದರಲ್ಲಿ ಸಂತೋಷವಾಗಿರಲು ಪ್ರಯತ್ನಿಸಿ.

ಈ ಸಮಯದಲ್ಲಿ ತುಳಸಿಯನ್ನು ಮುಟ್ಟಿದರೆ ಮನೆಯಲ್ಲಿ ತಪ್ಪದು ಧನ ನಷ್ಟ..!

ಆಸ್ತಿಯಲ್ಲಿ ನಷ್ಟ ಉಂಟಾಗಬಹುದು
ಮಕರ(Capricorn):
ಈ ವರ್ಷದ ಅಂತ್ಯದ ವೇಳೆಗೆ ನೀವು ನ್ಯಾಯಾಲಯ-ಕೋರ್ಟ್ ವಿಚಾರಣೆಯನ್ನು ಎದುರಿಸಬೇಕಾಗಬಹುದು. ಆಸ್ತಿಯಲ್ಲಿ ಹೂಡಿಕೆ ಮಾಡುತ್ತೀರಿ. ಆದರೆ ಅದರಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ನಿಮ್ಮ ಸಹೋದ್ಯೋಗಿಗಳಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಭಾವನೆ ಇರುತ್ತದೆ. ಆದ್ದರಿಂದ ಸಂಯಮದಿಂದ ವರ್ತಿಸಿ ಮತ್ತು ಈ ಕಷ್ಟದ ಸಮಯವನ್ನು ಶಾಂತಿಯಿಂದ ಕಳೆಯಲು ಪ್ರಯತ್ನಿಸಿ. ವ್ಯಾಪಾರದಲ್ಲಿ ಹಣವನ್ನು ಹೂಡಿಕೆ ಮಾಡುತ್ತೀರಿ. ಆದರೆ ಅದು ಮುಳುಗುವ ಸಾಧ್ಯತೆಯಿದೆ. ಆದ್ದರಿಂದ ಹೆಚ್ಚು ಹಣವನ್ನು ಹೂಡಿಕೆ ಮಾಡುವುದನ್ನು ತಪ್ಪಿಸಿ.

ಗೃಹ ಕಲಹ ಎದುರಿಸುವಿರಿ
ತುಲಾ(Libra):
ಈ ರಾಶಿಯ ಜನರು ಮನೆಯಲ್ಲಿ ವೈಷಮ್ಯವನ್ನು ಎದುರಿಸಬೇಕಾಗುತ್ತದೆ. ಕುಟುಂಬ ಸದಸ್ಯರಲ್ಲಿ ಪರಸ್ಪರ ಕಲಹಗಳು ಹೆಚ್ಚಾಗುತ್ತವೆ ಮತ್ತು ಒಬ್ಬರನ್ನೊಬ್ಬರು ದೂಷಿಸುತ್ತಾರೆ. ಪ್ರೇಮ ಸಂಬಂಧಗಳಲ್ಲಿ ಪ್ರೀತಿ ಕಡಿಮೆಯಾಗುತ್ತದೆ ಮತ್ತು ದೂರವಾಗುವ ಪರಿಸ್ಥಿತಿ ಉಂಟಾಗುತ್ತದೆ. ಈ ಸಮಯದಲ್ಲಿ, ಜೀವನದಲ್ಲಿ ಹೊಸದನ್ನು ಮಾಡುವುದನ್ನು ತಪ್ಪಿಸಿ, ನೀವು ವೈಫಲ್ಯವನ್ನು ಎದುರಿಸಬಹುದು. ಮನೆಯಲ್ಲಿ ಹಣಕಾಸಿನ ಅಡಚಣೆಗಳು ಹೆಚ್ಚಾಗುತ್ತವೆ ಮತ್ತು ಹೊರಗಿನಿಂದ ಸಾಲವನ್ನು ತೆಗೆದುಕೊಳ್ಳಬೇಕಾಗುತ್ತದೆ.

Pitru Paksha 2022: ಪೂರ್ವಜರ ತೃಪ್ತಿಗಾಗಿ ಈ ಐದು ಜೀವಿಗಳಿಗೆ ನೀಡಲೇಬೇಕು ಆಹಾರ

ಪರಿಹಾರ
ಕೇತು ನೀಡುವ ಕಷ್ಟಕೋಟಲೆಗಳಿಂದ ತಪ್ಪಿಸಿಕೊಳ್ಳಲು ಕೇತು ಬೀಜ ಮಂತ್ರವನ್ನು ಈ ರಾಶಿಯವರು ಪ್ರತಿ ದಿನ ಹೇಳಬೇಕು. ಮಂತ್ರ ಹೀಗಿದೆ: 
'ಓಂ ಶ್ರಾಂ ಶ್ರೀಂ ಶ್ರೌಂ ಸಃ: ಕೇತವೇ ನಮಃ'

ಇದಲ್ಲದೆ, ಪ್ರತಿದಿನ ಗೋವಿಗೆ ಆಹಾರ ನೀಡಿ. ಎರಡು ಬಣ್ಣದ ಗೋವುಗಳಿಗೆ ಆಹಾರ ನೀಡಬೇಕು. ಜೊತೆಗೆ ಶ್ವಾನಕ್ಕೂ ಆಹಾರ ಹಾಕಬೇಕು. ಕೆಂಪು ಇರುವೆಗಳು ಕಂಡುಬಂದರೆ ಅವಕ್ಕೆ ಸಿಹಿ ಬೆಲ್ಲ ನೀಡಿ.

ಕೇತುದೋಷದಿಂದ ಮುಕ್ತರಾಗಲು ಅಂಗವಿಕಲರಿಗೆ ವಸ್ತ್ರಗಳನ್ನು ದಾನ ಮಾಡಬೇಕು. ಇದಲ್ಲದೆ, ಮುತ್ತೈದೆಯರಿಗೆ ಎಳ್ಳಿನ ಉಂಡೆಗಳನ್ನು ನೀಡುವುದು, ಎಳ್ಳಿನ ದಾನ ಮಾಡುವುದು ಕೂಡಾ ಉತ್ತಮವಾಗಿದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios