Pitru Paksha 2022: ಪೂರ್ವಜರ ತೃಪ್ತಿಗಾಗಿ ಈ ಐದು ಜೀವಿಗಳಿಗೆ ನೀಡಲೇಬೇಕು ಆಹಾರ
ಪಿತೃಪಕ್ಷದ ಸಮಯದಲ್ಲಿ ಈ 5 ಜೀವಿಗಳಿಗೆ ಆಹಾರವನ್ನು ನೀಡಲಾಗುತ್ತದೆ. ಇದರಿಂದ ಪೂರ್ವಜರ ಆತ್ಮವು ತೃಪ್ತಿಗೊಳ್ಳುತ್ತದೆ ಮತ್ತು ನಿಮಗೆ ಅವರಿಂದ ಬಹಳಷ್ಟು ಆಶೀರ್ವಾದಗಳು ಸಿಗುತ್ತವೆ.
ಪಿತೃ ಪಕ್ಷದ 15 ದಿನಗಳನ್ನು ಪೂರ್ವಜರಿಗೆ ಸಮರ್ಪಿಸಲಾಗುತ್ತದೆ. ಈ ಸಮಯದಲ್ಲಿ, ಪೂರ್ವಜರಿಗೆ ಪಿಂಡದಾನ, ತರ್ಪಣ ಮತ್ತು ಶ್ರಾದ್ಧವನ್ನು ಮಾಡಲಾಗುತ್ತದೆ. ಪಿತೃ ಪಕ್ಷದ ಸಮಯದಲ್ಲಿ ಕೆಲವು ಜೀವಿಗಳ ಮೂಲಕ ಪೂರ್ವಜರು ಭೂಮಿಗೆ ಬರುತ್ತಾರೆ ಎಂಬುದು ಧಾರ್ಮಿಕ ನಂಬಿಕೆ. ಅವರು ಪ್ರಾಣಿಗಳ ಮಾಧ್ಯಮದ ಮೂಲಕ ಮಾತ್ರ ಆಹಾರವನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ, ಪಿತೃ ಪಕ್ಷದ ಸಮಯದಲ್ಲಿ, ಪೂರ್ವಜರಿಗೆ ಆಹಾರ ನೀಡುವ ಕೈಂಕರ್ಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ಸಮಯದಲ್ಲಿ ಈ ಪ್ರಾಣಿಗಳು, ಕೀಟ, ಪಕ್ಷಿಗಳಿಗೆ ಆಹಾರವನ್ನು ಖಂಡಿತವಾಗಿ ನೀಡಲಾಗುತ್ತದೆ. ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 10 ರಿಂದ ಸೆಪ್ಟೆಂಬರ್ 25, 2022 ರವರೆಗೆ ಇರಲಿದೆ. ಪಿತೃಪಕ್ಷದ ಸಮಯದಲ್ಲಿ ಯಾವ 5 ಜೀವಿಗಳಿಗೆ ಆಹಾರವನ್ನು ನೀಡುವುದರಿಂದ ಪೂರ್ವಜರ ಆತ್ಮಗಳು ಸಂತೃಪ್ತವಾಗುತ್ತವೆ ಎಂದು ತಿಳಿಯೋಣ.
ಈ 5 ಜೀವಿಗಳಿಗೆ ಆಹಾರ ನೀಡಿ
ಪೌರಾಣಿಕ ನಂಬಿಕೆಗಳ ಪ್ರಕಾರ, ಪಿತೃ ಪಕ್ಷದಲ್ಲಿ, ಪೂರ್ವಜರಿಗೆ ಅರ್ಪಿಸಿದ ಆಹಾರವನ್ನು ಐದು ಭಾಗಗಳನ್ನು ಮಾಡಿ ಐದು ಜೀವಿಗಳಿಗೆ ನೀಡಬೇಕು. ಆಗ ಮಾತ್ರ ಅವರ ಆತ್ಮಗಳು ತೃಪ್ತಿ ಹೊಂದುತ್ತವೆ. ಈ ಐದು ಭಾಗಗಳನ್ನು ಹಸು(cow), ನಾಯಿ, ಇರುವೆ, ಕಾಗೆ(crow) ಮತ್ತು ದೇವತೆಗಳ ಹೆಸರಿನಲ್ಲಿ ಪ್ರತ್ಯೇಕಿಸಲಾಗಿದೆ.
ಪಿತೃಪಕ್ಷದ 16 ದಿನಗಳು ಯಾವ ರಾಶಿಗೆ ಲಾಭಕಾರಿಯಾಗಿವೆ?
ಹೌದು, ಪಿತೃ ಪಕ್ಷ(Pitru Paksha)ದಲ್ಲಿ, ಶ್ರಾದ್ಧದಲ್ಲಿ ಊಟಕ್ಕೆ ಮೊದಲು ಐದು ಆಹಾರದ ಭಾಗಗಳನ್ನು ತೆಗೆದುಕೊಳ್ಳಲಾಗುತ್ತದೆ. ಆಹಾರದ ಈ ಭಾಗವನ್ನು ಹಸು, ನಾಯಿ, ಇರುವೆ ಮತ್ತು ದೇವತೆಗಳಿಗೆ ಎಲೆಗಳ ಮೇಲೆ ತೆಗೆದುಕೊಳ್ಳಲಾಗುತ್ತದೆ. ಅದೇ ಸಮಯದಲ್ಲಿ, ಕಾಗೆಗಾಗಿ ತೆಗೆದುಕೊಂಡ ಆಹಾರದ ಭಾಗವನ್ನು ನೆಲದ ಮೇಲೆ ಇಡಲಾಗುತ್ತದೆ. ಇದರ ನಂತರ, ಈ ಜೀವಿಗಳ ಮೂಲಕ ತಮ್ಮ ಆಹಾರ(food)ವನ್ನು ತೆಗೆದುಕೊಳ್ಳಲು ಬರುವಂತೆ ಪೂರ್ವಜರನ್ನು ಪ್ರಾರ್ಥಿಸಲಾಗುತ್ತದೆ.
ಶ್ರಾದ್ಧದ ಸಮಯದಲ್ಲಿ, ಪಂಚಬಲಿಗಾಗಿ ಮೊದಲ ಭೋಗ್ ಅನ್ನು ಹಸುವಿಗೆ ಅರ್ಪಿಸಲಾಗುತ್ತದೆ. ಇದನ್ನು ಗೋಬಲಿ ಎನ್ನುತ್ತಾರೆ.
ನಾಯಿಗಾಗಿ ಎರಡನೇ ಆಹಾರದ ಭಾಗ ತೆಗೆಯಲಾಗುತ್ತದೆ, ಇದನ್ನು ನಾಯಿ ತ್ಯಾಗ ಎಂದು ಕರೆಯಲಾಗುತ್ತದೆ.
ಮೂರನೆಯ ಭೋಗವನ್ನು ಕಾಗೆಗಳಿಗೆ ತೆಗೆಯುತ್ತಾರೆ. ಇದನ್ನು ಕಾಕ ಬಲಿ ಎನ್ನುತ್ತಾರೆ.
ನಾಲ್ಕನೆಯ ಭೋಗ ದೇವತೆಗೆ ಸೇರಿದ್ದು, ಇದನ್ನು ದೇವ ಬಲಿ ಎಂದು ಕರೆಯಲಾಗುತ್ತದೆ. ಇರುವೆಗಳಿಗೆ ಐದನೇ ಪಿಪಿಲಿಕಾಡಿ ಬಲಿ ನೀಡಲಾಗುತ್ತದೆ.
ಪಿತೃ ಪಕ್ಷ 2022: 15 ದಿನ ತಪ್ಪಿಯೂ ಈ ಕೆಲಸ ಮಾಡ್ಬೇಡಿ..
ಪಂಚಬಲಿಗೂ ಪಂಚಭೂತಕ್ಕೂ ಸಂಬಂಧ
ಧಾರ್ಮಿಕ ನಂಬಿಕೆಯ ಪ್ರಕಾರ, ಈ ಐದು ಭಾಗಗಳ ಆಹಾರವನ್ನು ನೀಡುವ ವಿಧಾನವನ್ನು ಪಂಚ ಬಲಿ(Pancha bali) ಎಂದು ಕರೆಯಲಾಗುತ್ತದೆ. ಪಂಚ ಬಲಿಯಿಲ್ಲದೆ ಶ್ರಾದ್ಧ ಕರ್ಮವನ್ನು ಪೂರ್ಣವೆಂದು ಪರಿಗಣಿಸಲಾಗುವುದಿಲ್ಲ. ಶ್ರಾದ್ಧ ಪಕ್ಷದಲ್ಲಿ ಆಹಾರದಲ್ಲಿ ಪಾಲ್ಗೊಳ್ಳುವ ಈ ಐದು ಜೀವಿಗಳಿಗೆ ವಿಶೇಷ ಮಹತ್ವವಿದೆ. ಇವುಗಳಲ್ಲಿ ನಾಯಿ ನೀರಿನ ಅಂಶ, ಇರುವೆ ಬೆಂಕಿಯ ಅಂಶ, ಕಾಗೆ ವಾಯು ಅಂಶ, ಹಸು ಭೂಮಿಯ ಅಂಶ ಮತ್ತು ದೇವತೆ ಆಕಾಶ ಅಂಶವನ್ನು ಸಂಕೇತಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ, ಈ 5 ಜೀವಿಗಳಿಗೆ ಆಹಾರವನ್ನು ನೀಡುವ ಮೂಲಕ, ಪಂಚಭೂತಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲಾಗುತ್ತದೆ. ಪೌರಾಣಿಕ ನಂಬಿಕೆಯ ಪ್ರಕಾರ, ಪಿತೃಪಕ್ಷದ ಅವಧಿಯಲ್ಲಿ ಈ ಜೀವಿಗಳಿಗೆ ಆಹಾರವನ್ನು ನೀಡುವುದರಿಂದ ಪಿತೃ ದೋಷವನ್ನು ಸಹ ತೊಡೆದುಹಾಕಬಹುದು.