Asianet Suvarna News Asianet Suvarna News

ಈ ಸಮಯದಲ್ಲಿ ತುಳಸಿಯನ್ನು ಮುಟ್ಟಿದರೆ ಮನೆಯಲ್ಲಿ ತಪ್ಪದು ಧನ ನಷ್ಟ..!

ತುಳಸಿ ಗಿಡದಲ್ಲಿ ಲಕ್ಷ್ಮೀ ದೇವಿ ನೆಲೆಸಿದ್ದಾಳೆ. ಅದಕ್ಕಾಗಿಯೇ ಪ್ರತಿ ಮನೆಯಲ್ಲೂ ತುಳಸಿ ಗಿಡವಿಟ್ಟು ಪೂಜಿಸಲಾಗುತ್ತದೆ. ಆದರೆ, ಈ ಸಮಯದಲ್ಲಿ ತುಳಸಿಯನ್ನು ಮುಟ್ಟಬಾರದು ಎಂಬುದು ನಿಮಗೆ ಗೊತ್ತಾ?

Tulsi Puja Tips Maa Lakshmi leaves the house if you touch tulsi at this time skr
Author
First Published Sep 11, 2022, 3:10 PM IST

ಹಿಂದೂ ಧರ್ಮವು ಪ್ರಾಣಿಪಕ್ಷಿಗಳಲ್ಲಿ, ಗಿಡಮರಗಳಲ್ಲಿ, ಹಿರಿಕಿರಿಯರಲ್ಲಿ- ಹೀಗೆ ಪ್ರಕೃತಿಯಲ್ಲಿರುವ ಎಲ್ಲದರಲ್ಲೂ ದೈವತ್ವ ಕಾಣುತ್ತದೆ. ಅಷ್ಟೇ ಅಲ್ಲ, ಹಲವಾರು ಈ ಸಹಜೀವಿಗಳನ್ನು ಪೂಜಿಸಲಾಗುತ್ತದೆ. ಅಂತೆಯೇ ಕೆಲವು ಮರಗಿಡಗಳನ್ನು ಕೂಡಾ ದೇವರ ರೂಪ ಎಂದು ಪೂಜಿಸುತ್ತೇವೆ. ಅಂಥ ಒಂದು ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದಿರುವ ಸಸ್ಯ ತುಳಸಿ. ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪೂಜ್ಯ ಸ್ಥಾನವಿದೆ. ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ನಂಬುತ್ತೇವೆ. ಹೀಗಾಗಿ, ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನಿಟ್ಟು ಬೆಳೆಸಿ ಪ್ರತಿ ದಿನ ಪೂಜಿಸಲಾಗುತ್ತದೆ. ತುಳಸಿ ಚೆನ್ನಾಗಿ ಹಬ್ಬಿದಷ್ಟೂ ಮನೆಯಲ್ಲಿ ಸುಖ, ಸಂತೋಷ, ಸಮೃದ್ಧಿ ಹಬ್ಬುವುದೆಂಬ ನಂಬಿಕೆ ಇದೆ. ಆದರೆ, ಹೀಗೆ ತುಳಸಿಯನ್ನು ಪೂಜಿಸುವಾಗ ಕೆಲ ನಿಯಮಗಳನ್ನು ಅನುಸರಿಸಬೇಕು. ಈ ನಿಯಮ ಮೀರಿದರೆ ಲಕ್ಷ್ಮೀಗೆ ಕೋಪ ಬರುತ್ತದೆ. 

ಯಾವಾಗ ಪೂಜಿಸಬೇಕು?(When to worship)
ತುಳಸಿ ಗಿಡವನ್ನು ಯಾವಾಗ ಪೂಜಿಸಬೇಕು ಮತ್ತು ಯಾವಾಗ ಪೂಜಿಸಬಾರದು ಎಂಬುದರ ಬಗ್ಗೆ ವಿಶೇಷ ಕಾಳಜಿ ವಹಿಸುವ ಅವಶ್ಯಕತೆಯಿದೆ. ಇಷ್ಟೇ ಅಲ್ಲ, ಶಾಸ್ತ್ರದಲ್ಲಿ ತುಳಸಿ ಗಿಡವನ್ನು ಮುಟ್ಟುವುದು ನಿಷಿದ್ಧ, ಮುರಿಯುವುದು ನಿಷಿದ್ಧ ಎಂದಾಗ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಯಾವ ದಿನಗಳಲ್ಲಿ ತುಳಸಿ ಗಿಡವನ್ನು ಮುಟ್ಟಬಾರದು ಎಂದು ತಿಳಿಯೋಣ.

Pitru Paksha 2022: ಪೂರ್ವಜರ ತೃಪ್ತಿಗಾಗಿ ಈ ಐದು ಜೀವಿಗಳಿಗೆ ನೀಡಲೇಬೇಕು ಆಹಾರ

ಈ ಸಮಯದಲ್ಲಿ ತುಳಸಿಯನ್ನು ಮುಟ್ಟಬೇಡಿ(Do not touch Tulsi at this time)
ತುಳಸಿ ಗಿಡವನ್ನು ಪೂಜಿಸುವಾಗ ನಿಯಮಗಳನ್ನು ಪಾಲಿಸದಿದ್ದರೆ ತಾಯಿ ಲಕ್ಷ್ಮಿ ಕೋಪಗೊಂಡು ಮನೆಯಿಂದ ಹೊರಹೋಗುತ್ತಾಳೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಶಾಸ್ತ್ರಗಳ ಪ್ರಕಾರ ತುಳಸಿ ಗಿಡವನ್ನು ರಾತ್ರಿ ಅಥವಾ ಸೂರ್ಯಾಸ್ತದ ಸಮಯದಲ್ಲಿ ಮುಟ್ಟಬಾರದು. ತುಳಸಿ ಗಿಡವನ್ನು ರಾತ್ರಿಯಲ್ಲಿ ಮುಟ್ಟಿದರೆ ಧನಹಾನಿಯಾಗುತ್ತದೆ. ಇದಲ್ಲದೆ, ತುಳಸಿಗೆ ರಾತ್ರಿಯಲ್ಲಿ ನೀರನ್ನು ಅರ್ಪಿಸಬಾರದು.

ಈ ದಿನ ತುಳಸಿ ಗಿಡವನ್ನು ಮುಟ್ಟಬೇಡಿ(Do not touch Tulsi on this day)
ಭಾನುವಾರ ತುಳಸಿ ಗಿಡವನ್ನು ಮುಟ್ಟಬಾರದು ಎಂಬುದು ಧಾರ್ಮಿಕ ನಂಬಿಕೆ. ಅಷ್ಟೇ ಅಲ್ಲ, ಈ ದಿನ ತುಳಸಿ ಗಿಡಕ್ಕೆ ನೀರು ಹಾಕುವುದನ್ನು ಕೂಡ ನಿಷೇಧಿಸಲಾಗಿದೆ. ತುಳಸಿ ಮಾತೆ ವಿಷ್ಣುವಿಗಾಗಿ ಉಪವಾಸವನ್ನು ಭಾನುವಾರ ಆಚರಿಸಲಾಗುತ್ತಾಳೆ ಎಂದು ಹೇಳಲಾಗುತ್ತದೆ. ಅದೇ ಸಮಯದಲ್ಲಿ, ಏಕಾದಶಿಯಂದು ತುಳಸಿಗೆ ನೀರು ಕೊಡುವುದನ್ನು ನಿಷೇಧಿಸಲಾಗಿದೆ. ಈ ದಿನದಂದು ತಾಯಿ ತುಳಸಿಯು ವಿಷ್ಣುವಿಗಾಗಿ ನಿರ್ಜಲ ಉಪವಾಸವನ್ನು ಆಚರಿಸುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿನ ಅವರನ್ನು ಸ್ಪರ್ಶಿಸುವುದು ಮತ್ತು ನೀರು ನೀಡುವುದು ಅವರ ಉಪವಾಸವನ್ನು ಮುರಿಯುತ್ತದೆ ಮತ್ತು ಇದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ. ಲಕ್ಷ್ಮೀ ಕೋಪಗೊಂಡರೆ ಮನೆಯಲ್ಲಿ ಧನ ನಷ್ಟವಾಗುತ್ತದೆ. ಏಕೆಂದರೆ ಆಕೆ ಸಂಪತ್ತಿನ ಒಡತಿ. ಲಕ್ಷ್ಮೀ ಸಂತೋಷವಾಗಿದ್ದರಷ್ಟೇ ಮನೆಯಲ್ಲಿ ಸಕಲ ವೈಭೋಗ, ಸಪತ್ತು ತುಂಬಲು ಸಾಧ್ಯ.

ಮಕ್ಕಳಾಗುತ್ತಿಲ್ಲವೇ? ಇಲ್ಲಿವೆ ಸಂತಾನ ಸಿದ್ಧಿಗಾಗಿಯೇ ಪ್ರಸಿದ್ಧವಾದ ದೇವಾಲಯಗಳು..

ಸ್ನಾನ ಮಾಡದೇ ಮುಟ್ಟಬೇಡಿ
ದೇವರಿಗೆ ಭೋಗ ನೀಡುವಾಗ ತುಳಸಿಯೊಂದಿಗೆ ನೀಡಬೇಕೆಂಬ ನಿಯಮವಿದೆ. ಇಲ್ಲದಿದ್ದರೆ ನೈವೇದ್ಯ ಸಂಪೂರ್ಣವಾಗುವುದಿಲ್ಲ. ಹಾಗಂಥ ಪೂಜೆಗಾಗಿ ಸ್ನಾನಕ್ಕೂ ಮುಂಚೆಯೇ ತುಳಸಿ ಕೊಯ್ದಿಟ್ಟುಕೊಳ್ಳುವ ಅಭ್ಯಾಸ ಸರಿಯಲ್ಲ. ತುಳಸಿಯನ್ನು ಯಾವಾಗಲೂ ಸ್ನಾನದ ಬಳಿಕವೇ ಕೊಯ್ಯಬೇಕು ಮತ್ತು ಪೂಜೆಯಲ್ಲಿ ಬಳಸಬೇಕು. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios