Asianet Suvarna News Asianet Suvarna News

ಕೇತು ಸಂಕ್ರಮಣ: ಈ ನಾಲ್ಕು ರಾಶಿಯವರಿಗೆ ಭರ್ಜರಿ ಲಾಭ!

ಕೇತು ಸಂಕ್ರಮಣ ಬರುತ್ತಿದೆ. ಮನಸ್ಸಿಗೆ ಸಂಬಂಧಿಸಿದ ಈ ಗ್ರಹದ ಚಲನೆಯಿಂದ ಈ ನಾಲ್ಕು ರಾಶಿಗಳ ಅದೃಷ್ಟ ಖುಲಾಯಿಸಲಿದೆ.

Kethu sankramana effects
Author
First Published Mar 25, 2023, 1:08 PM IST

ಕೇತು ಗ್ರಹದ ಬಗ್ಗೆ ಅನೇಕರಿಗೆ ತಪ್ಪು ಕಲ್ಪನೆಗಳಿವೆ. ಹಲವರು ಇದೊಂದು ತೊಂದರೆ ಕೊಡುವ ಕ್ರೂರಗ್ರಹ, ಕೇತು ಲಗ್ನದಲ್ಲಿದ್ದರೆ ಒಳ್ಳೆಯದು ಮಾಡುವುದಿಲ್ಲ ಎಂದು ನಂಬಿದ್ದಾರೆ. ಆದರೆ ಕೇತುವು ಕೂಡಾ ಇತರ ಶುಭ ಗ್ರಹಗಳಂತೆ ಉತ್ತಮ ಫಲಗಳನ್ನೂ ನೀಡುತ್ತದೆ.

ತಲೆಯಿಲ್ಲದ ಈ ಅರ್ಧ ಗ್ರಹವನ್ನು ಛಾಯಾಗ್ರಹವೆಂದೂ ಕರೆಯಲಾಗುತ್ತದೆ. ಇದು ಅಗೋಚರವಾಗಿದೆ ಮತ್ತು ಬಾಹ್ಯಾಕಾಶದ ಕಾಸ್ಮಿಕ್ ವ್ಯವಸ್ಥೆಯಲ್ಲಿ ಕೇವಲ ಒಂದು ಬಿಂದುವಾಗಿದೆ. ಇದನ್ನು ಮೋಕ್ಷದ ಕಾರಕ ಎಂದೂ ಕರೆಯುತ್ತಾರೆ. ಇದು ಜನರನ್ನು ಆಧ್ಯಾತ್ಮಿಕತೆ, ವೈರಾಗ್ಯ ಮತ್ತು ಜ್ಞಾನೋದಯದ ಕಡೆಗೆ ತಳ್ಳುತ್ತದೆ ಮತ್ತು ಅದು ವ್ಯಕ್ತಿಯನ್ನು ಲೌಕಿಕ ಬಯಕೆಗಳ ಸರಪಳಿಯಿಂದ ಬಿಡುಗಡೆ ಮಾಡುತ್ತದೆ. ಆದರೆ ಕೇತುವು ದುಷ್ಟ ಗ್ರಹವಾಗಿದೆ, ಆದರೆ ಇದು ರಾಹುವಿನಷ್ಟು ದುಷ್ಟಗ್ರಹವಲ್ಲ.

ಜ್ಯೋತಿಷಿಗಳ ಪ್ರಕಾರ, ಕೇತುವು ರಾಹುವಿನ ಅರ್ಧ ಭಾಗದ ಭಾಗವಾಗಿದೆ, ಇದು ಕೇತುವನ್ನು ಎಲ್ಲಾ ಅಂಶಗಳಲ್ಲಿ ರಾಹುವಿನಂತೆ ಏಕೆ ಪರಿಗಣಿಸಲಾಗುತ್ತದೆ ಎಂಬುದನ್ನು ವಿವರಿಸುತ್ತದೆ. ಮತ್ತೊಂದೆಡೆ, ರಾಹು ಹೊಂದಿರುವ ಎಲ್ಲಾ ಅರ್ಹತೆ ಮತ್ತು ದೋಷಗಳನ್ನುಕೇತುವಿನ ಗುಣಗಳೆಂದು ಪರಿಗಣಿಸಲಾಗುತ್ತದೆ. ಕೇತುವು ಕಾರ್ಯಕರ್ತ ಆಸ್ತಿಯೊಂದಿಗೆ ಗೀಳನ್ನು ಹೊಂದುವ ಪ್ರವೃತ್ತಿಯನ್ನು ಸಹಿಸಿಕೊಳ್ಳುತ್ತಾನೆ ಮತ್ತು ನೀಚ ಸ್ವಭಾವದವನು. ಕೇತುವು ಎರಡು ಮನಸ್ಸು ಮತ್ತು ಮೊಂಡುತನದ ಸ್ವಭಾವದ ಗ್ರಹವಾಗಿದೆ ಆದರೆ ಅನುಕೂಲಕರವಾದ ಸಾಗಣೆಯಲ್ಲಿ, ಕೇತು ಇತರ ದಯಾ ಗ್ರಹಗಳಿಗಿಂತ ಹೆಚ್ಚು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಕೇತು ಗ್ರಹ ಧನಾತ್ಮಕವಾಗಿದ್ದರೆ ವ್ಯವಹಾರಗಳನ್ನು ನಡೆಸುವವರಿಗೆ ಉತ್ತಮ ಅದೃಷ್ಟ ಮತ್ತು ಸಂಪತ್ತು ಲಭಿಸುತ್ತದೆ. ಕೇತುವು ವ್ಯಕ್ತಿಯನ್ನು ಪ್ರಾಮಾಣಿಕ ಪ್ರೇಮಿಯನ್ನಾಗಿ ಮಾಡುತ್ತದೆ.

Ayodhya Ram Mandir: ವಿವಾದದಿಂದ ನಿರ್ಮಾಣದವರೆಗೆ- ನೀವು ತಿಳಿಯಬೇಕಾದ್ದು..

ಸದ್ಯಕ್ಕೀಗ ಕೇತು ಸಂಕ್ರಮಣ ಆಗಿರುವ ಕಾರಣ ನಾಲ್ಕು ರಾಶಿಗಳಿಗೆ ಭಲೇ ಅದೃಷ್ಟ ಖುಲಾಯಿಸಲಿದೆ. ಜ್ಯೋತಿಷ್ಯದ ಪ್ರಕಾರ ಕೇತು ಮನಸ್ಸಿಗೆ ಸಂಬಂಧಿಸಿದ ಗ್ರಹ ಎನ್ನಲಾಗುತ್ತದೆ. ಕೇತು ಹಾಗೂ ಚಂದ್ರನಿಗೆ ಸಹ ಸಂಬಂಧವಿದೆ. ಜಾತಕದಲ್ಲಿ ಚಂದ್ರ ದುರ್ಬಲನಾಗಿದ್ದರೆ, ಕೇತು ಅವರ ಮೇಲೆ ದುಷ್ಪರಿಣಾಮ ಬೀರುತ್ತಾನೆ. ಹಾಗಾಗಿ ಅವರ ಜೀವನದಲ್ಲಿ ಅನೇಕ ಕಷ್ಟಗಳು ಎದುರಾಗುತ್ತವೆ. ಕೇತುವೂ ಶನಿಯಂತೆ ನಿಧಾನವಾಗಿ ಚಲಿಸುತ್ತದೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬರಲು ಒಂದೂವರೆ ವರ್ಷ ಬೇಕು. ಕೇತು ಈ ವರ್ಷ ಅಕ್ಟೋಬರ್ 30 ರಂದು ತುಲಾ ರಾಶಿಗೆ ಪ್ರವೇಶಿಸುತ್ತಾನೆ. ಕೇತು ಸಂಕ್ರಮಣದಿಂದಾಗಿ ನಾಲ್ಕು ರಾಶಿಯವರಿಗೆ ಒಳ್ಳೆಯ ದಿನಗಳು ಬರಲಿವೆ.

ವೃಷಭ (Taurus)
ಈ ರಾಶಿಯವರಿಗೆ ಸಂಪತ್ತು ಒದಗಿ ಬರಲಿದೆ. ಅದೃಷ್ಟ ಖುಲಾಯಿಸಲಿದೆ. ವ್ಯಾಪಾರ ವೃದ್ಧಿಯಾಗಲಿದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವುದರಿಂದ ಹೆಚ್ಚಿನ ಪ್ರಯೋಜನಗಳು ಸಿಗುತ್ತದೆ. ಬಹುಕಾಲದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೆ ಅದರಿಂದ ಮುಕ್ತಿ ಸಿಗುತ್ತದೆ. ಸಂಬಂಧಗಳು ಸುಧಾರಿಸುತ್ತವೆ. ಹೀಗೆ ಬಂದ ಹಣವನ್ನು ಸದ್ವಿನಿಯೋಗ ಮಾಡಿದರೆ ಭವಿಷ್ಯದಲ್ಲಿ ಪ್ರಯೋಜನಕ್ಕೆ ಬರಲಿದೆ.

ಸಿಂಹ ರಾಶಿ (Leo)
ಸದಾ ಪ್ಲಾನಿಂಗ್‌ನಲ್ಲಿ ಮುಂದಿರುವ ಈ ರಾಶಿಯವರ ಹೊಸ ಪ್ಲಾನ್‌ಗಳು ಹೆಚ್ಚು ವರ್ಕೌಟ್(Workout) ಆಗಲಿವೆ. ಸಿಂಹ ರಾಶಿಯವರಿಗೆ ಕೇತು ಸಂಕ್ರಮಣದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕುಟುಂಬದ ಸದಸ್ಯರೊಂದಿಗಿನ ಸಂಬಂಧಗಳು ಗಟ್ಟಿಯಾಗುತ್ತದೆ. ಕೊಟ್ಟಿದ್ದ ಸಾಲ ನಿಮಗೆ ಮರಳಿ ಸಿಗಲಿದೆ. ಆರ್ಥಿಕವಾಗಿ ಲಾಭ ಸಿಗಲಿದೆ. ವ್ಯಾಪಾರದಲ್ಲಿ ಲಾಭ ಬರಲಿದೆ.

ನಿಜವಾಗುತ್ತೆಯೇ ಸೌರ ಚಂಡಮಾರುತದ ಬಗ್ಗೆ ಬಾಬಾ ವಾಂಗಾ ಭಯಾನಕ ಭವಿಷ್ಯ? ಬರ್ತಾರಾ ಏಲಿಯನ್ಸ್?

ಧನು ರಾಶಿ (Sagittarius)
ಬಹು ಕಾಲದಿಂದ ಸಂಕಷ್ಟದಲ್ಲಿದ್ದ ನಿಮಗೀಗ ಶುಭ, ಅದೃಷ್ಟ ಒಟ್ಟೊಟ್ಟಿಗೆ ಬರಲಿದೆ. ಕೇತು ಸಂಕ್ರಮಣವು ನಿಮಗೆ ತುಂಬಾ ಶುಭಕರವಾಗಿರುತ್ತದೆ. ಧನು ರಾಶಿಯವರಿಗೆ ಈ ಸಮಯ ವರದಾನವಿದ್ದಂತೆ. ದೀರ್ಘಕಾಲದ ಕಾಯಿಲೆಗಳಿಂದ ಮುಕ್ತರಾಗುವ ಸಮಯ ಇದು. ವೃತ್ತಿ (Proffession) ಮತ್ತು ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ವ್ಯಾಪಾರ ಮತ್ತಷ್ಟು ವಿಸ್ತಾರಗೊಳ್ಳಲಿದೆ.

ಮಕರ (Scorpion)
ಕೇತುವಿನ ಸಂಚಾರವು ಮಕರ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಉದ್ಯೋಗದಲ್ಲಿದ್ದರೆ, ಸಂಬಳ (Salary) ಹೆಚ್ಚಾಗುವ ಸಾಧ್ಯತೆ ಇದೆ. ಬಡ್ತಿ ಬರಬಹುದು. ವ್ಯಾಪಾರ ಮಾಡುವವರಿಗೆ ಲಾಭ ಬರಲಿದೆ. ಆರ್ಥಿಕ ಪ್ರಗತಿ ಆಗಲಿದೆ. ನೀವಂದುಕೊಂಡ ಯೋಜನೆಗಳಲ್ಲಿ ಹಣ (Money) ಹೂಡಲೂ ಇದು ಸಕಾಲ.

Follow Us:
Download App:
  • android
  • ios