ಚಾಣಕ್ಯ ನೀತಿ: ಈ ವಿಷಯಗಳು ರಟ್ಟಾದರೆ ನಿಮ್ಮ ಗೌರವ ಮಣ್ಣುಪಾಲು..!
ಆಚಾರ್ಯ ಚಾಣಕ್ಯರು ಬರೆದ ನೀತಿ ಶಾಸ್ತ್ರದಲ್ಲಿ ಜೀವನದಲ್ಲಿ ನಾವು ಹೇಗೆ ಇರಬೇಕೆಂಬುದನ್ನು ಉಲ್ಲೇಖಿಸಲಾಗಿದೆ. ಚಾಣಕ್ಯ ನೀತಿ ಮನುಷ್ಯನಿಗೆ ಪ್ರತಿ ಹಂತದಲ್ಲೂ ಸಹಾಯ ಮಾಡುತ್ತದೆ. ಆಚಾರ್ಯ ಚಾಣಕ್ಯರು ಕೆಲವು ವಿಷಯಗಳನ್ನು ಯಾರಿಗೂ ಹೇಳಬೇಡಿ ಎಂದು ಹೇಳಿದ್ದಾರೆ.
ಆಚಾರ್ಯ ಚಾಣಕ್ಯರು ಬರೆದ ನೀತಿ ಶಾಸ್ತ್ರದಲ್ಲಿ ಜೀವನದಲ್ಲಿ ನಾವು ಹೇಗೆ ಇರಬೇಕೆಂಬುದನ್ನು ಉಲ್ಲೇಖಿಸಲಾಗಿದೆ. ಚಾಣಕ್ಯ ನೀತಿ ಮನುಷ್ಯನಿಗೆ ಪ್ರತಿ ಹಂತದಲ್ಲೂ ಸಹಾಯ ಮಾಡುತ್ತದೆ. ಆಚಾರ್ಯ ಚಾಣಕ್ಯರು ಕೆಲವು ವಿಷಯಗಳನ್ನು ಯಾರಿಗೂ ಹೇಳಬೇಡಿ ಎಂದು ಹೇಳಿದ್ದಾರೆ. ಈ ಕುರಿತು ಇಲ್ಲಿದೆ ಡೀಟೇಲ್ಸ್.
ಚಾಣಕ್ಯ ನೀತಿಯಲ್ಲಿ ನಾವು ಜೀವನವನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಹಲವಾರು ವಿಚಾರಗಳನ್ನು ತಿಳಿಸಲಾಗಿದೆ. ಅವುಗಳನ್ನು ಅನುಸರಿಸದಿರುವುದು ನಾವು ತೊಂದರೆಗಳಿಂದ ಪಾರಾಗಬಹುದು. ಚಾಣಕ್ಯನು ನಾವು ಜೀವನದಲ್ಲಿ ಕೆಲವು ಗುಟ್ಟುಗಳನ್ನು ಇತರರಿಗೆ ತಿಳಿಸಬಾರದು ಎಂದು ಹೇಳಿದ್ದಾರೆ. ಕೆಲವು ವಿಷಯಗಳು ರಟ್ಟಾದರೆ ನಿಮ್ಮಗೌರವಕ್ಕೆ ಧಕ್ಕೆ ಬರುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ. ಈ ಕುರಿತು ಇಲ್ಲಿದೆ ಮಾಹಿತಿ.
ದಂಪತಿ ಕಲಹ
ವೈವಾಹಿಕ ಜೀವನದಲ್ಲಿ ಕಷ್ಟ-ಸುಖ, ಸರಸ-ವಿರಸ ಸಾಮಾನ್ಯ. ದಾಂಪತ್ಯದಲ್ಲಿ ಜಗಳವಾಡುವುದು, ರಾಜಿಯಾಗುವುದು ಎಲ್ಲವೂ ಇದ್ದಿದ್ದೆ. ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂಬಂತೆ ಇದು ಎಲ್ಲಾ ಸಂಸಾರದಲ್ಲಿಯೂ ಇರುತ್ತದೆ. ಆದರೆ ಗಂಡ-ಹೆಂಡತಿ ಜಗಳವಾದರೆ ಅಥವಾ ನಿಮ್ಮಿಬ್ಬರ ವೈಯಕ್ತಿಕ ವಿಷಯಗಳಿದ್ದರೆ ಅದನ್ನು ಯಾರಿಗೂ ಹೇಳಬೇಡಿ ಎಂದು ಚಾಣಕ್ಯರು ಹೇಳಿದ್ದಾರೆ. ನಿಮ್ಮ ಆಪ್ತ ಸ್ನೇಹಿತರ ಬಳಿಯೂ ಈ ವಿಷಯಗಳನ್ನು ಹೇಳಬಾರದು. ಇದು ಅಪಪ್ರಚಾರಕ್ಕೆ ಕಾರಣವಾಗಿ, ಇಬ್ಬರ ಗೌರವ ಹಾಳಾಗುತ್ತದೆ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.
ವೃಶ್ಚಿಕ-ವೃಶ್ಚಿಕ ರಾಶಿ ಹೊಂದಾಣಿಕೆ: ಇವರ ಮಧ್ಯ ಡಿವೋರ್ಸ್ ಆಗುವುದಿಲ್ಲ..!
ಸಂಪಾದನೆ ಮತ್ತು ದಾನ
ನಮ್ಮ ಸಂಪಾದನೆಯ ಬಗ್ಗೆ ಇತರರಿಗೆ ಹೇಳಬಾರದು ಚಾಣಕ್ಯರು ತಿಳಿಸಿದ್ದಾರೆ. ಹಣವು ಅನೇಕ ರೀತಿಯ ತೊಂದರೆಗಳಿಂದ ಪಾರಾಗಲು ಸಹಾಯಕವಾಗುತ್ತದೆ. ನಿಮ್ಮ ಬಳಿ ಸಾಕಷ್ಟು ಹಣವಿದ್ದು, ಈ ವಿಷಯವನ್ನು ಬೇರೆಯವರಿಗೆ ಹೇಳಿದರೆ, ಇದರಿಂದ ಗೊತ್ತಿಲ್ಲದೆ ತೊಂದರೆ ಸಾಧ್ಯತೆಯಿದೆ ಎಂದು ಚಾಣಕ್ಯ ತಿಳಿಸಿದ್ದಾರೆ. ಹಾಗೂ ನೀವು ಯಾರಿಗಾದರೂ ದಾನ ಮಾಡಿದರೆ ಕೂಡ ಯಾರಿಗೂ ಹೇಳಬಾರದು. ಯಾಕೆಂದರೆ ಅದರ ಫಲ ನಿಮಗೆ ಸಿಗುವುದಿಲ್ಲ ಎಂದು ಚಾಣಕ್ಯ ನೀತಿಯಲ್ಲಿ ತಿಳಿಸಲಾಗಿದೆ.
ದೌರ್ಬಲ್ಯ
ನಿಮ್ಮ ದೌರ್ಬಲ್ಯದ ಬಗ್ಗೆ ಬೇರೆಯವರಿಗೆ ತಿಳಿದಿರಬಾರದು. ನಿಮ್ಮ ದೌರ್ಬಲ್ಯದ ಬಗ್ಗೆ ಯಾರಾದರೂ ತಿಳಿದುಕೊಂಡರೆ, ಅವರು ನಿಮ್ಮ ವಿರುದ್ಧ ಪಿತೂರಿ ನಡೆಸುವ ಸಾಧ್ಯತೆ ಇದೆ ಎಂದು ಚಾಣಕ್ಯರು ತಿಳಿಸಿದ್ದಾರೆ. ದೌರ್ಬಲ್ಯ ತಿಳಿದುಕೊಂಡರೆ ಶತ್ರುಗಳು ಸಹ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು. ಹಾಗಾಗಿ ನಿಮ್ಮ ದೌರ್ಬಲ್ಯಗಳನ್ನು ಯಾರಿಗೂ ಹೇಳಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ.
Shravana 2023: ಶ್ರಾವಣ ಮಾಸದಲ್ಲಿ ಶಿವನನ್ನು ಮೆಚ್ಚಿಸಲು ಏನು ಮಾಡಬೇಕು?
ಅವಮಾನ
ನಿಮಗೆ ಯಾರಾದರು ಅವಮಾನಿಸಿದರೆ ಅದನ್ನು ಯಾರಿಗೂ ಹೇಳಬೇಡಿ. ಅದರಲ್ಲಿಯೂ ಪುರುಷರು ಯಾವಾಗಲೂ ನೆನಪಿನಲ್ಲಿಡಬೇಕಾದ ವಿಚಾರವೆಂದರೆ ಅಪ್ಪಿತಪ್ಪಿಯೂ ಅವರು ತಮಗಾದ ಅವಮಾನವಾದ ಬಗ್ಗೆ ಪತ್ನಿಯ ಬಳಿ ತಿಳಿಸಬಾರದು. ಒಂದು ವೇಳೆ ತಿಳಿಸಿದರೆ ಆಕೆ ಅವರನ್ನು ಪದೇ ಪದೇ ನಿಂದಿಸಬಹುದು ಎಂದು ಚಾಣಕ್ಯರು ತಿಳಿಸಿದ್ದಾರೆ. ನಿಮ್ಮ ಅವಮಾನದ ಬಗ್ಗೆ ಇತರರಿಗೆ ಹೇಳುವುದು ನಿಮ್ಮ ಉಳಿದ ಗೌರವವನ್ನು ಸಹ ನಾಶಪಡಿಸುತ್ತದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ