ಪಡುಬಿದ್ರಿಯ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಸಾಂಪ್ರದಾಯಿಕ ಕಟ್ಟದಪ್ಪ ಸೇವೆ!

ದೇವರಲ್ಲಿ ಭಕ್ತಿ ನಿವೇದಿಸಲು ಅನೇಕ ಮಾರ್ಗಗಳಿವೆ, ನಾನಾ ರೀತಿಯ ಸೇವೆಗಳ ಮೂಲಕ ಭಕ್ತಿಯನ್ನು ಸಮರ್ಪಿಸುವುದು ಸಂಪ್ರದಾಯ. ಹಾಗಾಗಿ ಪ್ರತ್ಯೇಕ ದೇವಾಲಯಗಳಲ್ಲಿ ವಿಭಿನ್ನ ಬಗೆಯ ಹರಕೆಗಳನ್ನು ನೀಡುವ ಪರಿಪಾಠವಿದೆ.

kattadappa seve for padubidri mahalingeshwara ganapati temple at udupi gvd

ಉಡುಪಿ (ಆ.12): ದೇವರಲ್ಲಿ ಭಕ್ತಿ ನಿವೇದಿಸಲು ಅನೇಕ ಮಾರ್ಗಗಳಿವೆ, ನಾನಾ ರೀತಿಯ ಸೇವೆಗಳ ಮೂಲಕ ಭಕ್ತಿಯನ್ನು ಸಮರ್ಪಿಸುವುದು ಸಂಪ್ರದಾಯ. ಹಾಗಾಗಿ ಪ್ರತ್ಯೇಕ ದೇವಾಲಯಗಳಲ್ಲಿ ವಿಭಿನ್ನ ಬಗೆಯ ಹರಕೆಗಳನ್ನು ನೀಡುವ ಪರಿಪಾಠವಿದೆ. ಉಡುಪಿ ಜಿಲ್ಲೆ ಪಡುಬಿದ್ರೆಯ ಗಣಪತಿ ದೇವಸ್ಥಾನದಲ್ಲಿ ಇಂತಹ ಅಪರೂಪದ ಸೇವೆಯನ್ನು ಕಟ್ಟದಪ್ಪ ಸೇವೆ ಎಂದು ಕರೆಯುತ್ತಾರೆ. ಇತಿಹಾಸ ಪ್ರಸಿದ್ಧ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಶುಕ್ರವಾರ ಮತ್ತು ಶನಿವಾರ ವಾರ್ಷಿಕ ಕಟ್ಟದಪ್ಪ ಸೇವೆ ನಡೆಯಿತು. 

ಪಡುಬಿದ್ರಿ ಗಣಪತಿಯು ಕಟ್ಟದಪ್ಪ ಪ್ರಿಯನಾಗಿದ್ದು, ಈ ಬಾರಿ ಶುಕ್ರವಾರ ಮತ್ತು ಶನಿವಾರ ಸಾರ್ವಜನಿಕ ಅಪ್ಪಸೇವೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದರು. ಪುರಾತನ ಕಾಲದಲ್ಲಿ ಮಳೆಗಾಲದ ಸಂದರ್ಭ ಪಡುಬಿದ್ರಿ ಕಾಮಿನಿ ಹೊಳೆಯ ನೀರನ್ನು ಒಡ್ಡು ಕಟ್ಟಿ ಕೃಷಿ ಚಟುವಟಿಕೆಗೆ ಬಳಸುತ್ತಿದ್ದರು. ಅಧಿಕ ಮಳೆ ಸಂದರ್ಭ ಕಟ್ಟಿದ ಒಡ್ಡು ಪದೇ ಪದೆ ಕುಸಿಯುತ್ತಿತ್ತು. ಇದನ್ನು ಉಳಿಸಲು ರೈತಾಪಿ ಜನರು ಸಾಮೂಹಿಕವಾಗಿ ಗ್ರಾಮ ದೇವಳಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ, ಕಟ್ಟದಪ್ಪ ಸೇವೆ ಸಲ್ಲಿಸಿದರಂತೆ. ಆ ಬಳಿಕ ಕಟ್ಟ ನಿಂತಿತು ಎನ್ನುವುದು ಪ್ರಚಲಿತದಲ್ಲಿದೆ. 

ಮದುವೆ ನಿಶ್ಚಯವಾಗಿದ್ದ ಹುಡುಗಿ ತನಗಿಂತ ದೊಡ್ಡವಳು: ಮನನೊಂದ ಯುವಕ ಆತ್ಮಹತ್ಯೆ!

ಅಂದಿನಿಂದ ವರ್ಷಂಪ್ರತಿ ತುಳುವರ ಆಟಿ ತಿಂಗಳಲ್ಲಿ ರೈತಾಪಿ ಜನರು ಕಟ್ಟದಪ್ಪ ಸೇವೆ ಸಲ್ಲಿಸುತ್ತಾ ಬಂದಿದ್ದು ಇಂದು ಸಾಮೂಹಿಕ ನೆಲೆಯಲ್ಲಿ ಸಹ ಸ್ರಾರು ಭಕ್ತರು ಸೇವೆ ಸಲ್ಲಿಸುವ ಮೂಲಕ ಕಟ್ಟದಪ್ಪ ಜಗತ್ಪಸಿದ್ಧಿ ಪಡೆದಿದೆ. ಈ ಬಾರಿ ಸುಮಾರು 80 ಮುಡಿ ತಯಾರಿ ಅಕ್ಕಿಯ ಕಟ್ಟದಪ್ಪ ಶ್ರೀ ಮಹಾಗಣಪತಿಗೆ ಸಮರ್ಪಿತವಾಗಲಿದೆ. ಈ 80 ಮುಡಿ ಅಕ್ಕಿಯ ಹುಡಿಗೆ  180 ಕೆಜಿ ಅರಳು, ಸುಮಾರು 700 ಕೆಜಿ ಬಾಳೆಹಣ್ಣು, ಸುಮಾರು 2000 ತೆಂಗಿನ ಕಾಯಿ, 10 ಕೆಜಿ ಏಲಕ್ಕಿ, ಎರಡೂವರೆ ಟನ್ ಬೆಲ್ಲ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಲಾಗಿತ್ತು. 

ತಲಪಾಡಿ: ಎಸ್‌ಡಿಪಿಐ ಬೆಂಬಲಿಸಿದ ಬಿಜೆಪಿಗನ 'ಆತ್ಮಹತ್ಯೆ' ಮಾತು: ಆಡಿಯೋ ವೈರಲ್!

ಮುಂಜಾನೆಯೇ ಈ ಎಲ್ಲ ತಯಾರಿಗಳೂ ನಡೆದು ಬೆಳಗ್ಗಿನಿಂದ ಸಂಜೆವರೆಗೂ ಸುಮಾರು 60 ಡಬ್ಬಿ ಎಣ್ಣೆಯನ್ನು ಪೇರಿಸಿ ದೊಡ್ಡ ಬಾಣಲೆಗಳಲ್ಲಿ ಕಾಯಿಸಿಕೊಳ್ಳುತ್ತಾ ಸುಮಾರು 1.50 ಲಕ್ಷದಷ್ಟು ಕಟ್ಟದಪ್ಪಗಳನ್ನು ಬಾಣಸಿಗರು ತಯಾರಿಸುತ್ತಾರೆ. ಮುಖ್ಯ ಬಾಣಸಿಗರಾಗಿ ಪಡುಬಿದ್ರಿಯ ಯೋಗೀಶ್ ರಾವ್ ಅವರಿದ್ದು, ವಿವಿಧೆಡೆಯ ಬಾಣಸಿಗರು ಈ ಕಟ್ಟದಪ್ಪ ತಯಾರಿಸಲು ಸಹಕರಿಸಿದ್ದರು. ಈ ಸಂದರ್ಭ ದೇಗುಲದ ಅನುವಂಶೀಯ ಮೊಕ್ತೇಸರರಾದ ಶ್ರೀ ರತ್ನಾಕರ ರಾಜ್‌ ಕಿನ್ನಕ್ಕ ಬಳ್ಳಾಲ್‌, ರವೀಂದ್ರ ಭಟ್‌ರವರು ಸಮರ್ಪಕ ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios