ತಲಪಾಡಿ: ಎಸ್‌ಡಿಪಿಐ ಬೆಂಬಲಿಸಿದ ಬಿಜೆಪಿಗನ 'ಆತ್ಮಹತ್ಯೆ' ಮಾತು: ಆಡಿಯೋ ವೈರಲ್!
ತಲಪಾಡಿ ಗ್ರಾ.ಪಂ ಎಸ್ಡಿಪಿಐ-ಬಿಜೆಪಿ ದೋಸ್ತಿ ಸ್ಟೋರಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗ್ರಾ.ಪಂ ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಎಸ್ಡಿಪಿಐಗೆ ಮತ ಚಲಾಯಿಸಿದ ಬಳಿಕ ಬಿಜೆಪಿ ಬೆಂಬಲಿತ ಸದಸ್ಯ ಅತ್ಮಹತ್ಯೆಗೆ ಮುಂದಾಗಿದ್ರಾ ಎಂಬ ಆಡಿಯೋವೊಂದು ಸಂಚಲನ ಸೃಷ್ಟಿಸಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು (ಆ.12): ತಲಪಾಡಿ ಗ್ರಾ.ಪಂ ಎಸ್ಡಿಪಿಐ-ಬಿಜೆಪಿ ದೋಸ್ತಿ ಸ್ಟೋರಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗ್ರಾ.ಪಂ ಅಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಎಸ್ಡಿಪಿಐಗೆ ಮತ ಚಲಾಯಿಸಿದ ಬಳಿಕ ಬಿಜೆಪಿ ಬೆಂಬಲಿತ ಸದಸ್ಯ ಅತ್ಮಹತ್ಯೆಗೆ ಮುಂದಾಗಿದ್ರಾ ಎಂಬ ಆಡಿಯೋವೊಂದು ಸಂಚಲನ ಸೃಷ್ಟಿಸಿದೆ. ಸದ್ಯ ವೈರಲ್ ಆಗಿರೋ ಆಡಿಯೋದಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ಆತ್ಮಹತ್ಯೆ ಪರಿಸ್ಥಿತಿ ಬಂದಿತ್ತು ಅಂತ ಹೇಳಿರೋದು ಭಾರೀ ಕುತೂಹಲ ಮೂಡಿಸಿದೆ.
ಎಸ್ಡಿಪಿಐ ಪರ ಅಡ್ಡ ಮತದಾನ ಮಾಡಿದ ಬಿಜೆಪಿ ಬೆಂಬಲಿತ ಸದಸ್ಯ ಸ್ಪೋಟಕ ಹೇಳಿಕೆ ನೀಡಿದ್ದು, ಮಂಗಳೂರು ಬಿಜೆಪಿ ಮುಖಂಡನ ಜೊತೆಗಿನ ಫೋನ್ ಆಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಜೊತೆ ಎಸ್ಡಿಪಿಐ ಪರ ಅಡ್ಡ ಮತದಾನ ಮಾಡಿದ ಮಹಮ್ಮದ್ ಸಂಭಾಷಣೆಯ ಆಡಿಯೋ ಲಭ್ಯವಾಗಿದೆ. ಯಾರದ್ದಾದ್ರೂ ಬೆದರಿಕೆಗೆ ಮಣಿದು ಎಸ್ಡಿಪಿಐಗೆ ಮತ ಹಾಕಿದ್ರಾ ಮುಸ್ಲಿಂ ಬಿಜೆಪಿ ಸದಸ್ಯ ಎಂಬ ಅನುಮಾನ ಮೂಡಿದೆ.
ಮೈಸೂರು ಅರಸರಿಗೂ ಬೇಬಿಬೆಟ್ಟಕ್ಕೂ ಅವಿನಾಭಾವ ಸಂಬಂಧ: ಯದುವೀರ್ ಒಡೆಯರ್
ಎಸ್ಡಿಪಿಐಗೆ ಮತ ಹಾಕಿದ ಬಗ್ಗೆ ಬಿಜೆಪಿ ಅಧ್ಯಕ್ಷರ ಬಳಿ ಕ್ಷಮೆ ಯಾಚನೆ ಮಾಡಿದ ಮುಹಮ್ಮದ್, 'ಸಾರ್ ನಾನು ಗೊಂದಲದಿಂದ ಹಾಕಿ ಆಗಿದೆ, ದೇವರಾಣೆ ಅದು ಹೇಗೆ ಆಯ್ತು ಅನ್ನೋದು ಗೊತ್ತಿಲ್ಲ, ಇದರಿಂದ ಪಶ್ಚಾತ್ತಾಪ ಆಗಿದೆ. ಸಾರ್ ದಯವಿಟ್ಟು ನನ್ನನ್ನ ಕ್ಷಮಿಸಿ..ನಾನು ಪಕ್ಷದ ಮೇಲೆ ಅಭಿಮಾನ ಇಟ್ಟವ. ನಾನು ಯಾವತ್ತೂ ಪಕ್ಷಕ್ಕೆ ದ್ರೋಹ ಮಾಡಿಲ್ಲ ಸಾರ್...ದಯವಿಟ್ಟು ಕ್ಷಮಿಸಿ. ಸಾರ್ ನನ್ನಿಂದ ತಪ್ಪಾಗಿದೆ. ಏನಾಗಿದೆ ಅಂತ ಗೊತ್ತಾಗ್ತಾ ಇಲ್ಲ ಸಾರ್. ಸತ್ಯ ಹೇಳ್ತಾ ಇದೀನಿ. ನಾನು ನಿನ್ನೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಆ ಮೇಲೆ ಬಿಪಿಯಾದ ಕಾರಣ ನನ್ನ ಮಕ್ಕಳು ಆಸ್ಪತ್ರೆಗೆ ದಾಖಲಿಸಿದ್ರು. ನನಗೆ ಬಿಜೆಪಿ ಅಂದ್ರೆ ಅಭಿಮಾನ ಇದೆ. ನಾನು ಯಾವತ್ತೂ ಬಿಡಲ್ಲ ಎಂದು ತುಳುವಿನಲ್ಲಿ ಗೋಗರೆದ ಆಡಿಯೋ ಸಂಭಾಷಣೆ ಲಭ್ಯವಾಗಿದೆ.
ಬಿಜೆಪಿ ಕ್ಷೇತ್ರಾಧ್ಯಕ್ಷ ಹಾಗೂ ಉಚ್ಛಾಟಿತ ಬಿಜೆಪಿಗನ ಆಡಿಯೋದಲ್ಲೇನಿದೆ?
ಬಿಜೆಪಿ ಅಧ್ಯಕ್ಷ: ನಿನ್ನೆಯ ಚುನಾವಣೆಯಲ್ಲಿ ನೀವು ಏನು ಮಾಡಿದ್ರಿ ಸತ್ಯ ಹೇಳಿ?
ಮಹಮ್ಮದ್, ಬಿಜೆಪಿ ಸದಸ್ಯ: ಸಾರ್ ನಾನು ಗೊಂದಲದಿಂದ ಹಾಕಿ ಆಗಿದೆ. ದೇವರಾಣೆ ಅದು ಹೇಗೆ ಆಯ್ತು ಅನ್ನೋದು ಗೊತ್ತಿಲ್ಲ. ಇದರಿಂದ ಪಶ್ಚಾತ್ತಾಪ ಆಗಿ, ಬಿಪಿಯಿಂದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದೆ. ನನ್ನಿಂದ ತಪ್ಪಾಗಿದೆ ಸಾರ್, ಏನಾಗಿದೆ ಗೊತ್ತಾಗಿಲ್ಲ. ದೇವರಾಣೆ ಸುಳ್ಳು ಹೇಳ್ತಿಲ್ಲ.
ಬಿಜೆಪಿ ಅಧ್ಯಕ್ಷ: ಪಕ್ಷದ ಮಾನ ಮರ್ಯಾದೆ ತೆಗೆದ್ರಲ್ಲ ನೀವು...ಇದಕ್ಕೆ ಯಾರು ಜವಾಬ್ದಾರಿ?
ಮಹಮ್ಮದ್, ಬಿಜೆಪಿ ಸದಸ್ಯ: ಸಾರ್ ದಯವಿಟ್ಟು ನನ್ನನ್ನ ಕ್ಷಮಿಸಿ..ನಾನು ಪಕ್ಷದ ಮೇಲೆ ಅಭಿಮಾನ ಇಟ್ಟವ. ನಾನು ಯಾವತ್ತೂ ಪಕ್ಷಕ್ಕೆ ದ್ರೋಹ ಮಾಡಿಲ್ಲ ಸಾರ್...ದಯವಿಟ್ಟು ಕ್ಷಮಿಸಿ
ಬಿಜೆಪಿ ಅಧ್ಯಕ್ಷ: ಎಸ್ಡಿಪಿಐಗೆ ಮತ ಹಾಕಿ ಮಾನ ಮರ್ಯಾದೆ ಹೋದ ಮೇಲೆ ಕ್ಷಮೆ ಯಾಕೆ? ನಮ್ಮ ಪಕ್ಷದ ಸಿದ್ದಾಂತ ಹಾಗೂ ಇನ್ನೊಂದು ಪಕ್ಷದ ಸಿದ್ದಾಂತಕ್ಕೆ ವ್ಯತ್ಯಾಸ ಇಲ್ವಾ? ಅದನ್ನ ನೀವು ತಿಳಿಬೇಕಲ್ವಾ?
ಮಹಮ್ಮದ್, ಬಿಜೆಪಿ ಸದಸ್ಯ: ನನ್ನ ತಪ್ಪಾಗಿದೆ ಸಾರ್. ದಯವಿಟ್ಟು ನನ್ನ ತಪ್ಪಿಗೆ ಕ್ಷಮೆ ಕೊಡಿ ಸಾರ್
ಬಿಜೆಪಿ ಅಧ್ಯಕ್ಷ: ನಿಮ್ಮ ಹೇಳಿಕೆ ಬಗ್ಗೆ ಜಿಲ್ಲಾಧ್ಯಕ್ಷರ ಜೊತೆ ಮಾತನಾಡಿ ಶಿಸ್ತು ಕ್ರಮ ತೆಗೋತಿವಿ. ಪಕ್ಷದ ಮರ್ಯಾದೆಗಿಂತ ಬೇರೆ ಯಾವುದೂ ದೊಡ್ಡದಲ್ಲ. ನಿಮಗೆ ಪಕ್ಷದ ಗೌರವದ ಬಗ್ಗೆ ಗೊತ್ತಿರಬೇಕಿತ್ತು
ಮಹಮ್ಮದ್, ಬಿಜೆಪಿ ಸದಸ್ಯ: ಸಾರ್ ನನ್ನಿಂದ ತಪ್ಪಾಗಿದೆ. ಏನಾಗಿದೆ ಅಂತ ಗೊತ್ತಾಗ್ತಾ ಇಲ್ಲ ಸಾರ್. ಸತ್ಯ ಹೇಳ್ತಾ ಇದೀನಿ. ನಾನು ನಿನ್ನೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಆ ಮೇಲೆ ಬಿಪಿಯಾದ ಕಾರಣ ನನ್ನ ಮಕ್ಕಳು ಆಸ್ಪತ್ರೆಗೆ ದಾಖಲಿಸಿದ್ರು. ನನಗೆ ಬಿಜೆಪಿ ಅಂದ್ರೆ ಅಭಿಮಾನ ಇದೆ. ನಾನು ಯಾವತ್ತೂ ಬಿಡಲ್ಲ
ಬಿಜೆಪಿ ಅಧ್ಯಕ್ಷ: ಸರಿ ಬಿಡಿ. ನಾನು ಇನ್ನು ಈ ಬಗ್ಗೆ ನಿಮ್ಮತ್ರ ಮಾತನಾಡಲ್ಲ.
ಸದ್ಯ ಇಬ್ಬರು ಸದಸ್ಯರ ಉಚ್ಛಾಟಿಸಿರೋ ಬಿಜೆಪಿ!: ಬಿಜೆಪಿ ಬೆಂಬಲಿತರಿಂದ ಎಸ್ ಡಿಪಿಐ ಜೊತೆ ಒಪ್ಪಂದ ವಿಚಾರ ಸಂಬಂಧಿಸಿ ತಲಪಾಡಿ ಗ್ರಾ.ಪಂನ ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರಿಗೆ ಪಕ್ಷದಿಂದ ಗೇಟ್ ಪಾಸ್ ನೀಡಲಾಗಿದೆ. ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಆದೇಶ ಮಾಡಿದ್ದು, ಜಿಲ್ಲಾಧ್ಯಕ್ಷರ ಸೂಚನೆ ಹಿನ್ನೆಲೆ ಕಿಕ್ ಔಟ್ ಮಾಡಲಾಗಿದೆ. ಎಸ್‌ಡಿಪಿಐ ಜೊತೆಗೆ ಒಳಪ್ಪಂದ ಮಾಡಿಕೊಂಡ ಸದಸ್ಯರಿಬ್ಬರ ಉಚ್ಛಾಟನೆ ಮಾಡಲಾಗಿದೆ.
Chikkaballapur: ಮಾರುಕಟ್ಟೆಯಲ್ಲಿ ಟೊಮೆಟೋ ದರ ಭಾರೀ ಕುಸಿತ: ಬೆಳೆಗಾರರಲ್ಲಿ ತೀವ್ರ ನಿರಾಸೆ
ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ತಲಪಾಡಿ ಗ್ರಾ.ಪಂನ ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದವರನ್ನ ಪಕ್ಷದಿಂದ ಮುಂದಿನ ಆರು ವರ್ಷಗಳ ಕಾಲ ಪಕ್ಷಕ್ಕೆ ಬರದಂತೆ ನಿರ್ಭಂಧಿಸಲಾಗಿದೆ. ಮಹಮ್ಮದ್ ಫಯಾಝ್ ಮತ್ತು ಮಹಮ್ಮದ್ ಎಂಬ ಬಿಜೆಪಿ ಬೆಂಬಲಿತರ ಉಚ್ಛಾಟನೆ. ಬಿಜೆಪಿ ಬೆಂಬಲಿತರಾಗಿದ್ದ ಇಬ್ಬರು ಸದಸ್ಯರು ಅಡ್ಡಮತದಾನ ಮಾಡಿ ಎಸ್ ಡಿಪಿಐ ಗೆಲುವಿಗೆ ಕಾರಣರಾಗಿದ್ದರು. ತಲಪಾಡಿ ಗ್ರಾ.ಪಂ ಆಡಳಿತದಲ್ಲಿ ಒಟ್ಟು 24 ವಾರ್ಡುಗಳಿತ್ತು. ಇದರಲ್ಲಿ 13 ಬಿಜೆಪಿ ಬೆಂಬಲಿತ ಸದಸ್ಯರು, 10 ಎಸ್ ಡಿಪಿಐ ಬೆಂಬಲಿತ ಸದಸ್ಯರು ಹಾಗೂ ಓರ್ವ ಕಾಂಗ್ರೆಸ್ ಸದಸ್ಯರಿದ್ದರು.
ಕಾಂಗ್ರೆಸ್ ಬೆಂಬಲಿತ ವೈಭವ್ ವೈ. ಶೆಟ್ಟಿ ಮತ್ತು ಎಸ್ ಡಿಪಿಐ ಬೆಂಬಲಿತ ಹಬೀಬಾ ಡಿ.ಬಿ ಗೈರಾಗಿದ್ದರು. ಹೀಗಾಗಿ ಬಹುಮತದ ಕಾರಣ ಬಿಜೆಪಿ ಸದಸ್ಯ ಸತ್ಯರಾಜ್ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರು ಬಿಜೆಪಿ ಬೆಂಬಲಿತರಿಂದ ಎಸ್ ಡಿಪಿಐಗೆ ಬೆಂಬಲ ಸೂಚಿಸಿದ ಕಾರಣ ಎಸ್ಡಿಪಿಐ ಇಸ್ಮಾಯಿಲ್ ಮತ್ತು ಬಿಜೆಪಿ ಸತ್ಯರಾಜ್ ನಡುವೆ ಸಮಬಲ ಇತ್ತು. ಕೊನೆಗೆ ಚೀಟಿ ಎತ್ತುವ ಮೂಲಕ ಎಸ್ಡಿಪಿಐನ ಇಸ್ಮಾಯಿಲ್ ಅಧ್ಯಕ್ಷಗಾದಿ ಒಲಿದಿದೆ. ಸ್ವಂತ ಪಕ್ಷದವರೇ ಎಸ್ಡಿಪಿಐ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಾಗಿದೆ. ಎಸ್ಡಿಪಿಐ ಜೊತೆ ಸ್ವಂತ ಪಕ್ಷದ ಸದಸ್ಯರ ಒಳ ಒಪ್ಪಂದದಿಂದ ಬಿಜೆಪಿಗೆ ಸೋಲಾಗಿತ್ತು.