Asianet Suvarna News Asianet Suvarna News

ಯಶ್‌, ರಿಷಬ್‌, ರಕ್ಷಿತ್, ಸುದೀಪ್....‌ ಕನ್ನಡದ ತಾರೆಯರ ಈ ವರ್ಷದ ಚೈನೀಸ್‌ ಭವಿಷ್ಯವಿದು!

ನಮ್ಮ ಕನ್ನಡದ ಹಲವು ಸ್ಟಾರ್‌ಗಳ ಹೊಸ ಫಿಲಂಗಳು ಈ ವರ್ಷ (2023) ಬಿಡುಗಡೆಯಾಗಲಿವೆ. ಆದರೆ ಯಾರ ಭವಿಷ್ಯ ಏನು? ಚೈನೀಸ್‌ ವರ್ಷ ಭವಿಷ್ಯ ಇದರ ಬಗ್ಗೆ ಏನು ಹೇಳುತ್ತೆ?

 

Kannada stars yearly horoscope
Author
First Published Jan 11, 2023, 12:51 PM IST

ನಮ್ಮಲ್ಲಿ ಜನವರಿ 1ಕ್ಕೆ ಹೊಸ ವರ್ಷ (ಪಾಶ್ಚಾತ್ಯ ಮಾದರಿಯಲ್ಲಿ) ಶುರುವಾದರೆ, ಚೀನಾದಲ್ಲಿ ಜನವರಿ 25ಕ್ಕೆ ಚೈನೀಸ್ ವರ್ಷ ಶುರು. ಈ ವರ್ಷ ʼRabbit yearʼ ಅರ್ಥಾತ್ ʼಮೊಲ ವರ್ಷ.' ಹಾಗಾಗಿ ಈ ವರ್ಷ ಹುಟ್ಟಿದವರೆಲ್ಲ ಮೊಲದ ರಾಶಿಯವರು. ಬುಧ ಗ್ರಹ ಎಲ್ಲಿದೆ ಎಂಬುದರ ಮೇಲೆ ಆಯಾ ವರ್ಷದ ರಾಶಿ ನಿರ್ಧಾರ ಆಗುತ್ತೆ. ಒಟ್ಟು ಹನ್ನೆರಡು ರಾಶಿಗಳಿದ್ದು, ಅವು ರಿಪೀಟ್ ಆಗ್ತಾ ಇರ್ತವೆ. ಆ ಹನ್ನೆರಡು ರಾಶಿಗಳು- ಇಲಿ, ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಆಡು, ಮಂಗ, ಹುಂಜ, ನಾಯಿ, ಹಂದಿ. ಹಾಗಾದರೆ, ನಮ್ಮ ಯಾವ ಹೀರೋ ಯಾವ ವರ್ಷಕ್ಕೆ ಸೇರಿದವರು, ಅವರ ಈ ವರ್ಷದ ಭವಿಷ್ಯ ಏನು? ತಿಳಿಯೋಣ.

ಯಶ್‌
ಯಶ್‌ 1986ರಲ್ಲಿ ಹುಟ್ಟಿದವರು. ಇವರು ʼಹುಲಿ ವರ್ಷʼ (tiger year) ದವರು. ತಮ್ಮ ಕೆರಿಯರ್‌ಗೆ ಮಿತಿಗೂ ಮೀರಿದ ಶಕ್ತಿ ಸಾಮರ್ಥ್ಯಗಳನ್ನು ತುಂಬುವುದು ಇವರ ಸ್ವಭಾವ. ಈ ವರ್ಷ ಇವರಿಗೆ ಕೆಲಸವೇ ಹೆಚ್ಚು. ಹಿಂದಿನ ಜನಪ್ರಿಯತೆಯೇ ಸಾಕಷ್ಟಿದೆ. ಇವರ ಮುಂದಿನ ಪ್ರಾಜೆಕ್ಟ್‌ಗಳು 2024ಕ್ಕೆ ಶೆಡ್ಯೂಲ್‌ ಆಗಿವೆ. ಕೆಜಿಎಫ್‌-3 ಹಾಗೂ ʼಯಶ್-‌ 19ʼ ಮುಂದಿನ ವರ್ಷಕ್ಕಿವೆ. ಆದರೆ ಅವಕಾಶಗಳನ್ನು ಹೊಂಚಿ ಕುಳಿತು ಬೇಟೆಯಾಡುವ ಹುಲಿಯ ಗುಣ ಇವರದಾದುದರಿಂದ, ಒಂದು ವರ್ಷ ಕಾದರೂ ಭರ್ಜರಿ ಬೇಟೆಯನ್ನೇ ಈ ಹುಲಿ ಹೊಡೆಯಲಿದೆ ಎಂದುಕೊಳ್ಳಬೇಕು.

ರಕ್ಷಿತ್‌ ಶೆಟ್ಟಿ
ಇವರು ಜನಿಸಿದ್ದು 1983ರಲ್ಲಿ. ಇದು ʼಹಂದಿ ವರ್ಷʼ (pig year). ಇವರು ಬೇಟೆಯಾಡುವ ಗುಣದವರಲ್ಲ, ಇದ್ದುದರಲ್ಲಿ ತೃಪ್ತಿ ಪಡುತ್ತಾರೆ. ಕೈಯಲ್ಲಿರುವ ಕೆಲಸಗಳಿಗೇ ಹೆಚ್ಚಿನ ಪ್ರಯತ್ನ ಹಾಕುತ್ತಾರೆ. ಈ ವರ್ಷದ ʼಚಾರ್ಲಿ- 777ʼ ಯಶಸ್ಸು ಬೆನ್ನಿಗಿದೆ. 2023ರಲ್ಲಿ ಇವರ ಬಹುನಿರೀಕ್ಷಿತ ʼರಿಚರ್ಡ್‌ ಆಂಟನಿʼ ಹಾಗೂ ʼಸಪ್ತಸಾಗರದಾಚೆಯೆಲ್ಲೋʼ ತೆರೆಗೆ ಬರಲಿವೆ. ಇವು ಖಂಡಿತವಾಗಿಯೂ ಮಿಂಚಿನಂತಹ ಕೋರೈಸುವ ಯಶಸ್ಸನ್ನು ರಕ್ಷಿತ್‌ಗೆ ತಂದುಕೊಡಲಿವೆ. ಜನಪ್ರಿಯತೆ ಹಾಗೂ ಯಶಸ್ಸಿನ ಮಳೆಯಲ್ಲಿ ಇವರು ಆನಂದಿಸುತ್ತಾರೆ.

ಈ ದಿಕ್ಕಲ್ಲೆಲ್ಲಾ ಔಷಧಿಯನ್ನಿಟ್ಟರೆ ಆರೋಗ್ಯಕ್ಕೆ ಕುತ್ತು ತಪ್ಪೋಲ್ಲ

ರಿಷಬ್‌ ಶೆಟ್ಟಿ
ಕಾಂತಾರದ (Kantara) ಯಶಸ್ಸಿನಿಂದ ದೇಶವಿದೇಶಗಳಲ್ಲಿ ಕಂಗೊಳಿಸುತ್ತಿರುವ ರಿಷಬ್‌ ಶೆಟ್ಟಿಯವರ ಜನ್ಮ ವರ್ಷ ಕೂಡ 1983. ಇದು ಹಂದಿಯ ವರ್ಷ (pig year). ಇದು ದೊಡ್ಡ ಯಶಸ್ಸಿನ ಬಳಿಕ ಸ್ವಲ್ಪ ರಿಲ್ಯಾಕ್ಸಿಂಗ್‌ ಮಾಡುವ ಸಮಯ (Relaxing Time). ಆದರೆ ಹಂದಿ ವರ್ಷವದರು ಸುಮ್ಮನಿರುವವರಲ್ಲ. ಅವರ ನಿರ್ದೇಶನದ ʼರುದ್ರಪ್ರಯಾಗʼ ʼಬ್ಯಾಚುಲರ್‌ ಪಾರ್ಟಿʼ ʼಬೆಲ್‌ ಬಾಟಮ್‌ 2' ಮುಂತಾದವು ಬರಬಹುದು. ಕಾಂತಾರದ ಯಶಸ್ಸನ್ನು ಮತ್ತೊಮ್ಮೆ ಸರಿಗಟ್ಟಲು ಸಾಧ್ಯವಿಲ್ಲವಾದರೂ, ಈ ಸಿನಿಮಾಗಳಲ್ಲಿ ಒಂದು ಭರ್ಜರಿ ಹಿಟ್‌ ಆಗಲಿದೆ.

ಕಿಚ್ಚ ಸುದೀಪ್
ಇವರ ಜನ್ಮವರ್ಷ 1973. ಇದು `ಎತ್ತಿನ ವರ್ಷ' (Ox year). ಇವರು ಎತ್ತಿನಂತೆ ಯಾವುದೇ ಪರಿಶ್ರಮಕ್ಕೂ ಅಳುಕದೆ ಗಂಭೀರ ಮತ್ತು ತಾಳ್ಮೆಯಿಂದ ಕೆಲಸ ಮಾಡುವವರು. ಮೈ ಹುಡಿ ಮಾಡಿಕೊಂಡು ದುಡಿಯುವವರು. ಅಷ್ಟೇ ಪ್ರಮಾಣದ ಯಶಸ್ಸನ್ನೂ ಪಡೆಯುತ್ತಾರೆ. ಕಿಚ್ಚ ಸುದೀಪ್‌ ಅವರು ʼವಿಕ್ರಾಂತ್‌ ರೋಣʼಕ್ಕಾಗಿ ಮೈ ಹುರಿಗಟ್ಟಿಸಿದ್ದನ್ನು ನೀವೇ ನೋಡಿರಬಹುದು. 'ಕಬ್ಜʼ ಮತ್ತು ʼಬಿಲ್ಲಾ ರಂಗʼ ಈ ವರ್ಷ ಬರಲಿವೆ ಎಂದು ನಿರೀಕ್ಷಿಸಲಾಗಿದೆ. ಎರಡೂ ಸುದೀಪ್‌ ನಿರೀಕ್ಷಿಸದಂಥ ಸಕ್ಸಸ್‌ ಮತ್ತು ಕಲೆಕ್ಷನ್‌ ತಂದುಕೊಡಲಿವೆ. ಇನ್ನೂ ಎರಡು ಫಿಲಂಗಳಿಗೆ ದುಡಿಯಬೇಕಾದೀತಾದರೂ ಅವು ಈ ವರ್ಷ ಬರಲಾರವು.

ಉಪೇಂದ್ರ
ಇವರು ಹುಟ್ಟಿದ ವರ್ಷ 1968. ಇದು ʼಮಂಗನ ವರ್ಷʼ (monkey year). ಇವರ ಮುಂದೆ ಸಾಕಷ್ಟು ಪ್ರಾಜೆಕ್ಟ್‌ಗಳು ಇರುತ್ತವಾದರೂ ಯಾವುದೇ ಒಂದಕ್ಕೆ ಅಂಟಿಕೊಳ್ಳದೆ ಚಂಚಲವಾಗಿ ಓಡಾಡುತ್ತಾ ಇರುತ್ತಾರೆ. ಎಲ್ಲದಕ್ಕೂ ಸಮಯ ಹೊಂದಿಸಿಕೊಳ್ಳುವುದೇ ಕಷ್ಟವಾಗಬಹುದು. ಇವರ ʼಕಬ್ಜʼ ಮತ್ತು ʼಯುಐʼ ಈ ವರ್ಷ ಖಂಡಿತವಾಗಿಯೂ ಸೂಪರ್‌ ಹಿಟ್‌ ಆಗಲಿದ್ದು, ಉಪೇಂದ್ರ ಈ ವರ್ಷದ ಸ್ಟಾರ್ ಎನಿಸಿಕೊಳ್ಳಲಿದ್ದಾರೆ. ಇನ್ನೂ ಮೂರು ಚಿತ್ರಕ್ಕಾಗಿ ಸಮಯ ಹಾಕಿ ದುಡಿಯಲಿದ್ದಾರೆ.

ಶಿವರಾಜ್‌ಕುಮಾರ್
ಶಿವಣ್ಣನ ಹುಟ್ಟಿದ ವರ್ಷ 1962. ಇದು ಹುಲಿ ವರ್ಷ. ಹುಲಿ ಬೇಟೆಗಾಗಿ ಹೊಂಚು ಹಾಕುವಂತೆ, ಶಿವಣ್ಣ ಕೂಡ ಈ ವರ್ಷವಿಡೀ ಹಲವು ಫಿಲಂಗಳಿಗೆ ಕಷ್ಟಪಟ್ಟು ಕೆಲಸ ಮಾಡಲಿದ್ದಾರೆ. ಈ ಕೆಲಸದ ಕೊನೆಯಲ್ಲಿ ದೊಡ್ಡದೊಂದು ಬೇಟೆಗೆ ತಕ್ಕ ಭರ್ಜರಿ ಭೋಜನ ಅವರಿಗೆ ಸಿಗಲಿದೆ. ಕನ್ನಡದ ಜನತೆಯ ಪ್ರೀತಿಯನ್ನು ತುಂಬಾ ಗಳಿಸಿರುವ ಅವರ ಹಲವು ಚಿತ್ರಗಳು ಈ ವರ್ಷ ಬರಬಹುದು. ಈ ವರ್ಷ ಶಿವಣ್ಣನ ಎಲ್ಲಾ ಡೇಟ್ಸ್‌ಗಳೂ ಬುಕ್‌ ಆಗಿವೆ. ಈ ದುಡಿಮೆ ಪ್ರತಿಫಲವೂ ಚೆನ್ನಾಗಿಯೇ ಇದ್ದೀತು.

ದಾಂಪತ್ಯದಲ್ಲಿ ಸುಖ ಇಲ್ಲವೇ? ಶುಕ್ರವಾರ ಈ ಪೂಜೆ ಮಾಡಿ, ನೆಮ್ಮದಿ ಕಾಣ್ಬಹುದು ನೋಡಿ

Follow Us:
Download App:
  • android
  • ios