Asianet Suvarna News Asianet Suvarna News

Jyotish Tips : ಸಂಜೆ ದೇವರ ಪೂಜೆ ವೇಳೆ ಮಾಡ್ಬೇಡಿ ಈ ತಪ್ಪು

ವಿಧಿ–ವಿಧಾನದ ಮೂಲಕ ಪೂಜೆ (Puja) ಮಾಡ್ಬೇಕು. ಪೂಜೆ ವೇಳೆ ಮನಸ್ಸಿನ (Mind) ಜೊತೆ ದೇಹವೂ (Body) ಶುದ್ಧವಾಗಿರಬೇಕು. ಅನೇಕರಿಗೆ ಪೂಜೆ ವಿಧಾನ ತಿಳಿದಿರುವುದಿಲ್ಲ. ಇದ್ರಿಂದ ತಪ್ಪಾಗಿ ಪೂಜೆ ಮಾಡಿ ದೇವರ (God) ಆಶೀರ್ವಾದಿಂದ ವಂಚಿತರಾಗ್ತಾರೆ. 
 

Morning Evening Puja Niyam
Author
Bangalore, First Published May 20, 2022, 1:39 PM IST

ಹಿಂದೂ ಧರ್ಮದಲ್ಲಿ ಪೂಜೆ (Worship), ಉಪವಾಸ, ದೇವರ (God) ಆರಾಧನೆಗೆ ವಿಶೇಷ ಮಹತ್ವ ನೀಡಲಾಗಿದೆ. ಬೆಳಗ್ಗೆ (Morning )ಮತ್ತು ಸಂಜೆ ಬಹುತೇಕ ಎಲ್ಲ ಮನೆಗಳಲ್ಲಿ ಪೂಜೆ ಸಲ್ಲಿಸಿ ದೇವರಿಗೆ ಆರತಿ ಮಾಡಲಾಗುತ್ತದೆ. ಮನೆಯಲ್ಲಿ ಹಾಗೂ ದೇವಾಲಯಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ದೀಪಗಳನ್ನು ಬೆಳಗಿಸಲಾಗುತ್ತದೆ. ಪೂಜೆಯ ಸಮಯ ಮತ್ತು ಸ್ಥಳದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಬೆಳಗಿನ ಪೂಜೆಗೆ ಹೇಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆಯೋ ಅದೇ ರೀತಿ ಸಂಜೆಯ ಪೂಜೆಗೂ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಹಾಗೆ ಸಂಜೆ (Evening) ಪೂಜೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಪೂಜೆ ಮಾಡುವಾಗ ಕೆಲ ನಿಯಮಗಳನ್ನು ತಿಳಿದುಕೊಳ್ಳಬೇಕು. ತಪ್ಪಾದ ಪೂಜೆ ಫಲ ನೀಡುವುದಿಲ್ಲ.

ಅನೇಕರು ಬೆಳಿಗ್ಗೆ ಹಾಗೂ ಸಂಜೆ ಪೂಜೆ ಮಾಡ್ಬೇಕೆಂಬ ಕಾರಣಕ್ಕೆ ಪೂಜೆ ಮಾಡ್ತಾರೆ. ಯಾವುದೇ ನಿಯಮ (Rule) ಗಳನ್ನು ಪಾಲಿಸುವುದಿಲ್ಲ. ಮತ್ತೆ ಕೆಲವರು ಬೆಳಿಗ್ಗೆ ಮಾಡಿದ ವಿಧಾನದಲ್ಲಿಯೇ ಸಂಜೆ ಪೂಜೆ ಮಾಡ್ತಾರೆ. ಅದು ಕೂಡ ಸರಿಯಲ್ಲ. ಶಾಸ್ತ್ರದಲ್ಲಿ ಪೂಜೆಗೆ ಅದರದೆ ಆದ ನಿಯಮವಿದೆ. ಸಂಜೆ ಹಾಗೂ ಬೆಳಿಗ್ಗೆ ಬೇರೆ ಬೇರೆ ರೀತಿಯಲ್ಲಿ ಪೂಜೆ ಮಾಡ್ಬೇಕಾಗುತ್ತದೆ. ಇಂದು ಸಂಜೆ ಪೂಜೆ ಹಾಗೂ ಬೆಳಿಗ್ಗೆ ಪೂಜೆ ಹೇಗಿರಬೇಕು ಹಾಗೆ ಸಂಜೆ ಯಾವ ಕೆಲಸವನ್ನು ಮಾಡಬಾರದು ಎಂಬುದನ್ನು ನಾವಿಂದು ಹೇಳ್ತೇವೆ.

ಈ ರಾಶಿಯ ಜನರು ಸಿಕ್ಕಾಪಟ್ಟೆ ಹಾರ್ಡ್‌ವರ್ಕರ್ಸ್

ಬೆಳಗಿನ ಪೂಜೆ : ದೇವರ ಪೂಜೆ ಮಾಡುವವರು ನಿತ್ಯ ಕರ್ಮವನ್ನು ಮುಗಿಸಿ, ಸ್ನಾನ ಮಾಡಿ, ದೇವರ ಪೂಜೆಯನ್ನು ಮಾಡುತ್ತಾರೆ. ದೇವರ ಪೂಜೆ ವೇಳೆ ದೇವರಿಗೆ ಸ್ನಾನ ಮಾಡಿ, ದೇವರಿಗೆ ಹಾಕಿರುವ ಹೂಗಳನ್ನು ತೆಗೆದು, ಹೊಸ ಹೂ ಹಾಕಿ, ಆರತಿ ಬೆಳಗಿ, ಧೂಪ – ದೀಪ ಹಚ್ಚಿ ಪೂಜೆ ಮಾಡ್ತಾರೆ. ಮಂತ್ರ ಪಠಣ ಮಾಡ್ತಾರೆ. ಹಾಗೆ ಪೂಜೆ ಮಾಡುವ ವೇಳೆ ಗಂಟೆ ತೂಕುತ್ತಾರೆ. ಹಾಗೆಯೇ ಬೆಳಿಗ್ಗೆ ಪೂಜೆ ವೇಳೆ ಶಂಖ (Conch) ಊದುತ್ತಾರೆ. ಶಂಖದ ಧ್ವನಿ ನಕಾರಾತ್ಮಕ (Negative) ಶಕ್ತಿ ಹೋಗಲಾಡಿಸುವ ಗುಣ ಹೊಂದಿದೆ. ಜಾಗಟೆ ಕೂಡ ನಕಾರಾತ್ಮಕ ಶಕ್ತಿ ಜೊತೆ ಕ್ರಿಮಿಕೀಟಗಳನ್ನು ನಾಶ ಮಾಡುತ್ತದೆ. 

ಸಂಜೆ ಪೂಜೆ :  ಮೊದಲೇ ಹೇಳಿದಂತೆ ಸಂಜೆ ಪೂಜೆ ಹಾಗೂ ಬೆಳಗಿನ ಪೂಜೆ ಎರಡಕ್ಕೂ ವ್ಯತ್ಯಾಸವಿದೆ. ಸಂಜೆ ಮಾಡುವ ಪೂಜೆಯ ಸಮಯದಲ್ಲಿ ಕೆಲವು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಮನೆ ಅಥವಾ ದೇವಸ್ಥಾನ (Temple) ದಲ್ಲಿ ಸೂರ್ಯಾಸ್ತದ ನಂತರ ಪೂಜೆ ಮಾಡುವಾಗ ಶಂಖ ಊದಬಾರದು. ಹಾಗೆ ಗಂಟೆಯನ್ನು ಬಾರಿಸಬಾರದು  ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಸೂರ್ಯಾಸ್ತದ ನಂತರ ದೇವತೆಗಳು ನಿದ್ರೆಗೆ ಹೋಗುತ್ತಾರೆ ಎಂಬ ನಂಬಿಕೆಯಿದೆ. ಈ ವೇಳೆ ಶಂಖ ಊದಿದರೆ ಅಥವಾ ಗಂಟೆ ಬಾರಿಸಿದ್ರೆ ದೇವಾನುದೇವತೆಗಳು ಏಳುತ್ತಾರೆ. ಅವರನ್ನು ಎಬ್ಬಿಸುವುದು ಸರಿಯಲ್ಲ ಎಂದು ನಂಬಲಾಗಿದೆ. ಅದಕ್ಕಾಗಿಯೇ ಸೂರ್ಯಾಸ್ತದ ನಂತರ ಪೂಜೆಯಲ್ಲಿ ಗಂಟೆ ಮತ್ತು ಶಂಖವನ್ನು ಊದಬೇಡಿ ಎಂಬುದನ್ನು ನೆನಪಿನಲ್ಲಿಡಿ.

ವಿಷ್ಣು ಮತ್ತು ಕೃಷ್ಣನ ಪೂಜೆಯಲ್ಲಿ ತುಳಸಿ ಎಲೆಗಳನ್ನು ವಿಶೇಷವಾಗಿ ಬಳಸಲಾಗುತ್ತದೆ ಎಂದು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ರಾತ್ರಿ ಪೂಜೆ ಮಾಡಬೇಕಾದರೆ ತುಳಸಿ ಎಲೆಯನ್ನು ಕೀಳಬಾರದು. ಮಧ್ಯಾಹ್ನದ ನಂತ್ರ ತುಳಸಿ ಎಲೆಗಳನ್ನು ಕೀಳುವುದು ಒಳ್ಳೆಯದಲ್ಲ.

ಜ್ಯೇಷ್ಠ ಮಾಸದ ಶ್ರೇಷ್ಠ ವಿಶೇಷತೆಗಳು, ಸೂರ್ಯ ಕೃಪೆಗೆ ಹೀಗೆ ಮಾಡಿ

ಇದಲ್ಲದೆ ಗ್ರಂಥಗಳಲ್ಲಿ, ಸೂರ್ಯ ದೇವರನ್ನು ಪೂಜಿಸಲು ದಿನದ ಸಮಯವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹಗಲಿನಲ್ಲಿ ಯಾವುದೇ ದೇವತೆಯ ಆರಾಧನೆಯಲ್ಲಿ, ಸೂರ್ಯ ದೇವರ ಆವಾಹನೆ ಮತ್ತು ಆರಾಧನೆಯನ್ನು ಅತ್ಯಗತ್ಯವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಈ ವಿಷಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ರಾತ್ರಿ ಪೂಜೆ ಸಂದರ್ಭದಲ್ಲಿ ಮರೆತರೂ  ಸೂರ್ಯನ ಪೂಜೆ ಮಾಡ್ಬಾರದು.

Follow Us:
Download App:
  • android
  • ios