Asianet Suvarna News Asianet Suvarna News

ಜ್ಯೇಷ್ಠ, ಮೂಲಾ, ಪೂರ್ವಾಷಾಢ, ಉತ್ತರಾಷಾಢ ನಕ್ಷತ್ರದಲ್ಲಿ ಜನಿಸಿದವರ ಗುಣ ಹೇಗೆ ಗೊತ್ತಾ?

ಗ್ರಹ, ನಕ್ಷತ್ರ ಮತ್ತು ರಾಶಿಗಳಿಗೆ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಿನ ಮಹತ್ವವಿದೆ. ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ ನಕ್ಷತ್ರಗಳಿಂದ ವ್ಯಕ್ತಿಯ ಸ್ವಭಾವ ಮತ್ತು ಗುಣಗಳನ್ನು ತಿಳಿಯಬಹುದಾಗಿದೆ. ಇಲ್ಲಿ ನಾವು ಜ್ಯೇಷ್ಠ, ಮೂಲಾ, ಪೂರ್ವಷಾಢಾ ಮತ್ತು ಉತ್ತರಷಾಢಾ ನಕ್ಷತ್ರಗಳ ಬಗ್ಗೆ ತಿಳಿಯೋಣ....

Jyeshta Moola Purvashada and Uttarashada zodiac sign born people characters
Author
Bangalore, First Published Sep 30, 2021, 8:16 PM IST

ವೈದಿಕ ಜ್ಯೋತಿಷ್ಯಶಾಸ್ತ್ರದಲ್ಲಿ (Vedic astrology) ನಕ್ಷತ್ರಗಳಿಗೆ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಲಾಗಿದೆ. ನಕ್ಷತ್ರಗಳ (Star) ಆಧಾರದ ಮೇಲೆ ವ್ಯಕ್ತಿಯ ಗುಣ ಸ್ವಭಾವ (Nature) ಮತ್ತು ವ್ಯಕ್ತಿತ್ವಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು (Horoscope ) ಸಿದ್ಧಪಡಿಸುವಾಗ ಸಹ ನಕ್ಷತ್ರ ಅತ್ಯಂತ ಮುಖ್ಯವಾಗುತ್ತದೆ. ಹಾಗಾಗಿ ಪ್ರತಿ ನಕ್ಷತ್ರಗಳಿಗೆ ಅವುಗಳದ್ದೇ ಆದ ಸ್ವಭಾವಗಳು ಇರುತ್ತವೆ. ಅದಕ್ಕೆ ತಕ್ಕಂತೆ ವ್ಯಕ್ತಿಯಲ್ಲಿ ಸ್ವಭಾವ ರೂಪುಗೊಳ್ಳುತ್ತದೆ.

ಜೇಷ್ಠ, ಮೂಲಾ, ಪೂರ್ವಷಾಢಾ ಮತ್ತು ಉತ್ತರಷಾಢಾ ನಕ್ಷತ್ರದವರ ಗುಣ ಸ್ವಭಾವಗಳ ಬಗ್ಗೆ ತಿಳಿಯೋಣ..

ಜ್ಯೇಷ್ಠ ನಕ್ಷತ್ರ 
ನಕ್ಷತ್ರಗಳ ಕೂಟದಲ್ಲಿ ಜ್ಯೇಷ್ಠ ನಕ್ಷತ್ರವು ಹದಿನೆಂಟನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಬುಧ ಗ್ರಹವಾಗಿದೆ. ಗಂಡ ಮೂಲ ನಕ್ಷತ್ರದ ಪಟ್ಟಿಯಲ್ಲಿ ಸೇರಿರುವ ಜ್ಯೇಷ್ಠ ನಕ್ಷತ್ರವನ್ನು ಅಶುಭ ನಕ್ಷತ್ರವೆಂದು ಕರೆಯುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳ ಮನಸ್ಥಿತಿ ಕ್ಷಣಕ್ಷಣಕ್ಕೂ ಏರುಪೇರಾಗುತ್ತಿರುತ್ತದೆ. ಅಷ್ಟೇ ಅಲ್ಲದೆ ಸಣ್ಣಪುಟ್ಟ ವಿಷಯಗಳಿಗೂ ಜಗಳವಾಡಲು ಸಿದ್ಧವಾಗಿಯೇ ಇರುತ್ತಾರೆ. ಸ್ವತಂತ್ರರಾಗಿ ಇರಲು ಇಷ್ಟಪಡುವ ಈ ನಕ್ಷತ್ರದ ವ್ಯಕ್ತಿಗಳು, ನಿಯಮ ಮತ್ತು ಕಟ್ಟಲೆಗಳ ಚೌಕಟ್ಟಿನಲ್ಲಿ ಜೀವನವನ್ನು ಸಾಗಿಸುವುದಿಲ್ಲ. ಎಲ್ಲ ವಿಷಯಗಳಲ್ಲೂ ತಮ್ಮ ಮಾತೇ ನಡೆಯಬೇಕೆಂಬ ಇಚ್ಛೆ ಜ್ಯೇಷ್ಠ ನಕ್ಷತ್ರದಲ್ಲಿ ಜನಿಸಿದವರಿಗೆ ಇರುತ್ತದೆ. 

ಇದನ್ನು ಓದಿ: ಈ ರಾಶಿಗಳ ಪೋಷಕ-ಮಕ್ಕಳಿಗೇ ಬರೀ ಜಗಳವಂತೆ!

ಮೂಲಾ ನಕ್ಷತ್ರ 
ಇಪ್ಪತ್ತೇಳು ನಕ್ಷತ್ರಗಳಲ್ಲಿ ಮೂಲಾ ನಕ್ಷತ್ರವು ಹತ್ತೊಂಭತ್ತನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಕೇತು ಗ್ರಹವಾಗಿದೆ. ಮೂಲಾ ನಕ್ಷತ್ರವನ್ನು ಸಹ ಗಂಡ ಮೂಲ ನಕ್ಷತ್ರದ ಪಟ್ಟಿಗೆ ಸೇರಿಸಲಾಗಿದೆ.  ಹಾಗಾಗಿ ಈ ನಕ್ಷತ್ರವನ್ನು ಎಲ್ಲಕ್ಕಿಂತ ಅಶುಭ ನಕ್ಷತ್ರವೆಂದು ಕರೆಯಲಾಗುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರ ಕುಟುಂಬದವರಿಗೆ ಸಹ ನಕ್ಷತ್ರ ದೋಷ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಅದಕ್ಕೆ ಪರಿಹಾರವಾಗಿ ಶಾಂತಿ ಮತ್ತು ಹೋಮ ಹವನಗಳನ್ನು ಮಾಡಿಸಬಹುದಾಗಿದೆ. ಈ ನಕ್ಷತ್ರಕ್ಕೆ ಅನೇಕ ಉತ್ತಮ ವಿಶೇಷ ಗುಣಗಳಿವೆ. ಮೂಲಾ ನಕ್ಷತ್ರದಲ್ಲಿ ಜನಿಸಿದವರು ಅತ್ಯಂತ ಬುದ್ಧಿವಂತರಾಗಿರುತ್ತಾರೆ. ಅಷ್ಟೇ ಅಲ್ಲದೆ ಪ್ರಾಮಾಣಿಕತೆ, ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯುತ ನಡವಳಿಕೆ ಈ ನಕ್ಷತ್ರದಲ್ಲಿ ಜನಿಸಿದವರ ಸ್ವಭಾವ ಆಗಿರುತ್ತದೆ. ಶಾಸ್ತ್ರದಲ್ಲಿ ಮೂಲಾನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳನ್ನು ವಿದ್ವಾಂಸರಾಗಬಹುದೆಂದು ಸಹ ಹೇಳುತ್ತಾರೆ.  

ಇದನ್ನು ಓದಿ: ಈ ನಾಲ್ಕು ರಾಶಿಯವರು ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿಗಳು!
 

Jyeshta Moola Purvashada and Uttarashada zodiac sign born people characters



ಪೂರ್ವಾಷಾಢ ನಕ್ಷತ್ರ
ನಕ್ಷತ್ರಗಳ ಕೂಟದಲ್ಲಿ ಪೂರ್ವಾಷಾಡ ನಕ್ಷತ್ರ ಇಪ್ಪತ್ತನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಶುಕ್ರಗ್ರಹವಾಗಿದೆ. ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಅತ್ಯಂತ ಪ್ರಾಮಾಣಿಕರಾಗಿರುತ್ತಾರೆ. ಸದಾ ಸಂತೋಷದಿಂದ ಇರುವ ಈ ವ್ಯಕ್ತಿಗಳು ಯಾವುದೇ ವಿಷಯಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಶುಕ್ರಗ್ರಹ ಅಧಿಪತಿಯಾಗಿರುವ ಕಾರಣ ಈ ವ್ಯಕ್ತಿಗಳಿಗೆ ಕಲೆ ಮತ್ತು ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಹಾಗಾಗಿ ಈ ವ್ಯಕ್ತಿಗಳು ನಟನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬಹುದು. ಪೂರ್ವಾಷಾಢ ನಕ್ಷತ್ರದಲ್ಲಿ ಜನಿಸಿದವರು ಸ್ನೇಹಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಸ್ನೇಹವನ್ನು ಜೀವನ ಪರ್ಯಂತ ಉಳಿಸಿಕೊಳ್ಳುವ ಸ್ವಭಾವ ಈ ವ್ಯಕ್ತಿಗಳದ್ದಾಗಿರುತ್ತದೆ. ಅಷ್ಟೇ ಅಲ್ಲದೆ ಉತ್ತಮ ವ್ಯಕ್ತಿತ್ವವನ್ನು ಹೊಂದಿರುವ ಈ ವ್ಯಕ್ತಿಗಳ ಆದರ್ಶ ಸಂಗಾತಿಯಾಗುತ್ತಾರೆ ಎಂದು ಸಹ ಹೇಳಲಾಗುತ್ತದೆ. 

ಇದನ್ನು ಓದಿ: ಈ ಮೂರು ರಾಶಿಯವರ ನಡೆ ಊಹಿಸೋಕೇ ಆಗಲ್ವಂತೆ..!

ಉತ್ತರಾಷಾಢ ನಕ್ಷತ್ರ 
ಇಪ್ಪತ್ತೇಳು ನಕ್ಷತ್ರಗಳಲ್ಲಿ ಉತ್ತರಾಷಾಢಾ ನಕ್ಷತ್ರವು ಇಪ್ಪತ್ತೊಂದನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಸೂರ್ಯಗ್ರಹ ಆಗಿದೆ. ಈ ನಕ್ಷತ್ರದಲ್ಲಿ ಜನಿಸಿದವರು ಆಶಾವಾದಿಗಳು ಮತ್ತು ಸದಾ ಖುಷಿಯಿಂದ ಇರುವವರು ಆಗಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಉದ್ಯೋಗ ಮತ್ತು ವ್ಯಾಪಾರ ಎರಡೂ ಕ್ಷೇತ್ರದಲ್ಲೂ ಉತ್ತಮ ಯಶಸ್ಸನ್ನು ಕಾಣುತ್ತಾರೆ. ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳುವ ಈ ವ್ಯಕ್ತಿಗಳು, ಅವರ ಸಹಾಯಕ್ಕೆ ಸದಾ ಸಿದ್ಧರಿರುತ್ತಾರೆ. ಹಾಗಾಗಿ ಉತ್ತರಾಷಾಢ ನಕ್ಷತ್ರದವರ ಈ ಸ್ವಭಾವದ ಕಾರಣದಿಂದ ಅಗತ್ಯವಿರುವ ಸಂದರ್ಭದಲ್ಲಿ ಇವರಿಗೆ ಸ್ನೇಹಿತರಿಂದಲೂ ಸಹಾಯ ಮತ್ತು ಸಹಕಾರ ದೊರಕುತ್ತದೆ. ಅಷ್ಟೇ ಅಲ್ಲದೆ ಈ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚಿನ ಸಂಪತ್ತನ್ನು ಹೊಂದಿರುತ್ತಾರೆ.

Follow Us:
Download App:
  • android
  • ios